ಅಪಘಾತ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 11-04-2013 ರಂದು 15-30 ಗಂಟೆಗೆ ಮಂಗಳೂರು ತಾಲೂಕಿನ ಪಡುಪೆರಾರ್ ಗ್ರಾಮದ ಅಂಬಿಕಾ ನಗರ ಎಂಬಲ್ಲಿ ಬಜಪೆ -ಕೈಕಂಬ ಡಾಮಾರು ರಸ್ತೆಯಲ್ಲಿ ಬಜಪೆ ಕಡೆಯಿಂದ ಕಾರು ನಂ: ಕೆಎ 19 ಝಡ್ 691 ರ ಚಾಲಕ ಈ ಪ್ರಕರಣದ ಫಿರ್ಯಾದಿದಾರರು ತನ್ನ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವರ ಹಿಂದಿನಿಂದ ಅಂದರೆ ಬಜಪೆ ಕಡೆಯಿಂದ ಮಾರುತಿ ವೇಗನರ್ ಕಾರು ನಂ: ಕೆಎ 19 ಎಂಸಿ 4017 ರ ಚಾಲಕ ಕಾರನ್ನು ಬಹಳ ದುಡುಕುತನ ಮತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಉದಾರರ ಕಾರಿನ ಹಿಂದಿನ ಬಲ ಬದಿಗೆ ಡಿಕ್ಕಿ ಹೊಡೆದ ಕಾರಣ ಫಿರ್ಯಾದಿದಾರರ ಕಾರು ರಸ್ತೆಯ ಎಡ ಬದಿಗೆ ಸರಿದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ಮುರಿದು ನಷ್ಟ ಆದುದಲ್ಲದೇ ಫಿರ್ಯಾದಾರರ ಕಾರಿಗೆ ಕೂಡಾ ಜಖಂ ಆಗಿದ್ದು, ಡಿಕ್ಕಿ ಹೊಡೆದ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಕೈಕಂಬ ಕಡೆಗೆ ಹೋದಾಗ ಫಿರ್ಯಾದಿದಾರರು ಅದನ್ನು ಹಿಂಬಾಲಿಸಿ ಹೋಗಿ ಕೈಕಂಬ ಪೇಟೆಯಲ್ಲಿ ನಿಲ್ಲಿಸಿ ಕೇಳಿದಾಗ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಫಿರ್ಯಾದಿದಾರರಿಗೆ ಕೈಯಿಂದ ಹೊಡೆದು ನೋವುಂಟು ಮಾಡಿ ಅಲ್ಲಿಂದ ಕಾರಿನಲ್ಲಿ ಹೋಗಿರುವುದು ಎಂಬುದಾಗಿ ಎಸ್.ಹೆಚ್. ಅಬ್ದುಲ್ ಖಾದತ್ 40 ವರ್ಷ, ತಂದೆ: ಬಿ.ಹೆಚ್. ಹಮ್ಮಬ್ಬ, ವಾಸ: ಕೆ.ಬಿ.ಎಸ್. ಹೌಸ್, ಜೋಕಟ್ಟೆ, ತೋಕೂರು ಗ್ರಾಮ, ಮಂಗಳೂರು ತಾಲೂಕು. ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 110/2013 ಕಲಂ: 279, 323 ಐಪಿಸಿ ಮತ್ತು ಕಲಂ: 134(ಬಿ) ಐಎಂವಿ ಆಕ್ಟ್. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂ. ಗ್ರಾಮಾಂತರ ಠಾಣೆ:
- ದಿನಾಂಕ: 10.04.2013 ರಂದು 16.00 ಗಂಟೆಗೆ ಪಿರ್ಯಾದಿದಾರರು ತನ್ನ ಬಾಬ್ತು ಕೆಎ-21-ಕೆ-9510 ನೇ ಮೋಟಾರ್ ಸೈಕಲ್ನ್ನು ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಕಣ್ಣೂರು ಮಸೀದಿ ಬಳಿ ಮಂಗಳೂರು-ಬಿ.ಸಿ ರೋಡ್ ರಾಹೆ 75 ರಲ್ಲಿ ತಲುಪಿದಾಗ ಆರೋಫಿ ಇಬ್ರಾಹೀಂ ಎಂಬವರು ಕೆಎ-19-ಎಕ್ಸ್-7452 ನೇ ಹೋಂಡಾ ಆಕ್ಟಿವಾ ವನ್ನು ರಸ್ತೆಯ ಎಡಬದಿಯ ಹೊಳೆಬದಿ ಕಡೆಯಿಂದ ಬರುವ ರಸ್ತೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಹೆ-75 ರಲ್ಲಿ ಒಮ್ಮೆಲೇ ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದ್ದು ಈ ಪರಿಣಾಮ ಪಿರ್ಯಾದಿಯ ಕಾಲಿಗೆ ತರಚಿದ ಗಾಯವಾಗಿದ್ದು ಆರೋಪಿಗೆ ಮುಖಕ್ಕೆ ಹಣೆಗೆ ಬಲಕಾಲಿನ ಪಾದಕ್ಕೆ ರಕ್ತಗಾಯವಾಗಿ, ಕೈ ಕಾಲುಗಳಿಗೆ, ಬಲ ಅಳ್ಳೆಗೆ ಗುದ್ದಿದ ಗಾಯವಾಗಿದ್ದು ಈ ಪೈಕಿ ಆರೋಪಿತನು ಹೈಲ್ಯಾಂಡ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಪ್ರತೀಶ್ ತಂದೆ ಶ್ರೀಧರ ಪ್ರಜಾರಿ ವಾಸ: ಪೆರಿಂಜ ಬೆಳ್ತಂಗಡಿ ದ.ಕ ರವರು ನೀಡಿದ ದೂರಿನಂತೆ ಮಂ. ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 135/13 ಕಲಂ: 279 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ಫಿರ್ಯಾದುದಾರರಾದ ಶ್ರೀ ಅಶ್ವಿನ್ ರವರು ಯಾಂತ್ರಿಕ ಮೀನುಗಾರರ ಸಂಘದಲ್ಲಿ ಕ್ಲಕರ್್ ಆಗಿ ಕೆಲಸ ಮಾಡಿಕೊಂಡಿದ್ದು, ಇವರ ಸಂಘದ ಬಾಬ್ತು ಕಟ್ಟಡದಲ್ಲಿ ಸುಮಾರು 6 ತಿಂಗಳಿನಿಂದ ಚಿಕ್ಕಮಗಳೂರಿನ ಸುರೇಂದ್ರ ಡಿ.ಜೆ ಪ್ರಾಯ 65 ವರ್ಷ ಎಂಬವರು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ದಿನಾಂಕ 11-04-2013 ರಂದು ಎಂದಿನಂತೆ ಬೆಳಿಗ್ಗೆ 07-00 ಗಂಟೆಯಿಂದ ಕರ್ತವ್ಯದಲ್ಲಿದ್ದು, ಸಂಜೆ ಸುಮಾರು 3-45 ಗಂಟೆಗೆ ಅಸೌಖ್ಯಗೊಂಡು ಚೆಯರ್ನಲ್ಲಿ ಕುಳಿತ್ತಿದ್ದವರು ಬೆವತುಗೊಂಡು ಒಮ್ಮೆಲ್ಲೇ ನಡುಗುತ್ತಾ ಇದ್ದವರನ್ನು ಫಿಯರ್ಾದುದಾರರು ಮತ್ತು ಇತರರು ಸೇರಿ ಆರೈಕೆ ಮಾಡಿ, ಚಿಕಿತ್ಸೆಯ ಬಗ್ಗೆ ಮಂಗಳೂರಿನ ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ಕರೆದುಕೊಂಡು ಹೋಗಿ, ತುತರ್ು ವಿಭಾಗದಲ್ಲಿ ದಾಖಲಿಸಿಕೊಂಡಿದ್ದು, ಸುರೇಂದ್ರ ಡಿ.ಜೆ ರವರು ಚಿಕಿತ್ಸೆಯಲ್ಲಿರುತ್ತಾ ಈ ದಿನ ಮೃತಪಟ್ಟಿದ್ದು, ಸುರೇಂದ್ರರವರು ಹೃದಾಯಘಾತದಿಂದಲೋ ಅಥವಾ ಇನ್ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ಚಿಕಿತ್ಸೆಯಲ್ಲಿರುವಾಗ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ಅಶ್ವಿನ್ ಪ್ರಾಯ 47 ವರ್ಷ, ತಂದೆ: ಎಮ್. ಶೀನ, ವಾಸ: ಪಳ್ಳ ಬಳಿ, ಕುಂಜತ್ತೂರು, ಮಂಜೇಶ್ವರ, ಕಾಸರಗೋಡು, ತಾಲೂಕು ಮತ್ತು ಜಿಲ್ಲೆ, ಕೇರಳ ರಾಜ್ಯ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಯು.ಡಿ.ಆರ್ ನಂ: 34/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment