ಅಪಘಾತ
ಪ್ರಕರಣ:
ಮೂಡಬಿದ್ರೆ
ಠಾಣೆ;
- ದಿನಾಂಕ :08-04-2013 ರಂದು KA 20 P 9340 ನೇ ಇಂಡಿಗೋ ಕಾರಿನಲ್ಲಿ ಪಿರ್ಯಾದಿದಾರರು ಮತ್ತುನ ಆಕೆಯ ಮಗ ಅಬ್ದುಲ್ ನಿಸಾರ್ ಅಹಮ್ಮದ್ ಜೊತೆಯಲ್ಲಿ ತಮ್ಮ ಮಹಮ್ಮದ್ ಇಸ್ಮಾಯಿಲ್ ರವೂತರ್ ರವರ ಚಾಲಕನಾಗಿ ಮನೆಯಾದ ಕಾಶಿಪಟ್ನಕ್ಕೆ ಹೋಗುತ್ತಿದ್ದು 12-30 ಗಂಟೆಗೆ ಶಿರ್ತಾಡಿ ಗ್ರಾಮದ ಶಿರ್ತಾಡಿ ಬ್ರಿಡ್ಜ್ ಬಳಿ ಚಾಲಕನ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಎದುರಿನಲ್ಲಿ ದನವೊಂದು ಅಡ್ಡ ಬಂದಾಗ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಕಾರು ಚರಂಡಿಗೆ ಪಲ್ಟಿಯಾಗಿ ಪಿರ್ಯಾದಿದಾರರಿಗೆ ,ಅವರ ಮಗ ಅಬ್ದುಲ್ ನಿಸಾರ್ ಅಹಮ್ಮದ್‌ಗೆ ಮತ್ತು ಚಾಲಕ ಮಹಮ್ಮದ್ ಇಸ್ಮಾಯಿಲ್ ರವೂತರ್‌ರವರಿಗೆ ರಕ್ತಗಾಯವಾಗಿದ್ದು, ಮಂಗಳೂರು ಯೆನಪೊಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಎಂಬುದಾಗಿ ನಸೀಮಾ ಅಶ್ರಫ್ (32), ಗಂಡ : ಮಹಮ್ಮದ್ ಆಶ್ರಫ್, ವಾಸ : ಜುಮ್ಮ ಮಸೀದಿ ಬಳಿ, ಕಾಶಿಪಟ್ನ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ಮೂದಬಿದ್ರೆ ಠಾಣೆ ಅಪರಾದ ಕ್ರಮಾಂಕ 74/2013, ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ : 08-04-2013 ರಂದು 11-15 ಗಂಟೆಗೆ ಪಿರ್ಯಾದಿದಾರರು ಬೆಳುವಾಯಿ ಗ್ರಾಮದ ಬೆಳುವಾಯಿ ಬ್ರಹ್ಮ ಬೈದರ್ಕಳ ಗರಡಿ ಬಳಿ ಸೈಕಲಿನಲ್ಲಿ ಬೆಳುವಾಯಿ ಕಡೆಗೆ ಹೋಗುತ್ತಿರುವ ಸಮಯ KA 20 P 9340 ನೇ ಇಂಡಿಗೋ ಕಾರಿನ ಚಾಲಕ ನಿಶಾಂತ್ @ ವಾಸುದೇವ ಭಟ್ ಎಂಬವರು ಎದುರು ಕಡೆಯಿಂದ ಅಂದರೆ ಕಾರ್ಕಳ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗೆ ಬಿದ್ದು, ಅವರ ಎಡ ಕಾಲು ಜಖಂ ಗೊಂಡಿದ್ದು, ರಕ್ತಗಾಯವಾಗಿದ್ದು, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಪದ್ಮನಾಭ ಬಂಗೇರ (56), ತಂದೆ : ದಿ/ ಅಂತಪ್ಪ ಪೂಜಾರಿ, ವಾಸ : ಅಭಿ ನಿವಾಸ, ಬೆಳುವಾಯಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂದಬಿದ್ರೆ ಠಾಣೆ ಅಪರಾದ ಕ್ರಮಾಂಕ 73/2013, ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ
ಪ್ರಕರಣ:
ಮೂಡಬಿದ್ರೆ
ಠಾಣೆ;
- ದಿನಾಂಕ 09/04/2013 ರಂದು ರಾತ್ರಿ ಸುಮಾರು 11-00 ಗಂಟೆಗೆ ಪಿರ್ಯಾದಿದಾರರು ಮತ್ತು ಆತನ ಸ್ನೇಹಿತ ಮಹಮ್ಮದ್ ರಾಹಿಲ್ ಎಂಬವರು ರೂಮಿನಲ್ಲಿ ಇರುವಾಗ ಯಾರೋ ನಾಲ್ಕು ಜನರು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ರೂಮಿನೊಳಗೆ ಅಕ್ರಮ ಪ್ರವೇಶ ಮಾಡಿ ಒಂದು ರೂಮಿನಲ್ಲಿ ಮಹಮ್ಮದ್ ರಾಹಿಲ್ ಎಂಬವರನ್ನು ಕೂಡಿ ಹಾಕಿ ಪಿರ್ಯಾದಿಯನ್ನು ಇನ್ನೊಂದು ರೂಮಿಗೆ ಕರೆದುಕೊಂಡು ಹೋಗಿ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ “ ಬೇವಾರ್ಸಿ ಮೂರುಕಾಸಿನವನೇ ನೀನು ಭಾರೀ ದೊಡ್ಡ ಪೆಟ್ಟಿಸ್ಟಾ” ಎಂದು ಹೇಳಿ ಅವರಲ್ಲಿ ಒಬ್ಬನು ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಲೆಯ ಎದುರು ಭಾಗಕ್ಕೆ ಎಡಕಾಲಿನ ಪಾದಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು ಇತರ ಮೂವರು ಮುಖಕ್ಕೆ , ಕೆನ್ನೆಗೆ, ಬೆನ್ನಿಗೆ ಕೈಯಿಂದ ಹೊಡೆದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿದ್ದು ಈ ಘಟನೆ ಗೆ ಈ ಹಿಂದೆ ನಾನು ಒಂದು ಹುಡುಗಿಯ ಜೊತೆಯಲ್ಲಿ ಮಾತನಾಡುವುದನ್ನು ಕಂಡು ಒಂದು ತಿಂಗಳ ಹಿಂದೆ ಸದ್ರಿ ಹುಡುಗಿಯ ಸಂಬಂಧಿ ವರುಣ್ ಮೊರಾಸ್ ಹಾಗೂ ಇತರರು ಗಲಾಟೆ ಮಾಡಿದ್ದು ಫೋನ್‌ನಲ್ಲಿ ಬೆದರಿಕೆ ಹಾಕುತ್ತಿದ್ದು ಈ ಘಟನೆಗೆ ಕೂಡಾ ವರುಣ್ ಮೊರಾಸ್ ಹಾಗೂ ಆತನ ಗೆಳೆಯರು ಸೇರಿ ಈ ಕೃತ್ಯವನ್ನು ಮಾಡಿರಬಹುದೆಂದು ಸಂಶಯ ಇರುತ್ತದೆ ಎಂಬುದಾಗಿ ಅನೂಪ್ (22), ತಂದೆ : ಜನಾರ್ಧನ ಭಟ್, ವಾಸ : ಬೆಳ್ಮಣ್ ಗ್ರಾಮ, ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ಮೂದಬಿದ್ರೆ ಠಾಣೆ ಅಪರಾದ ಕ್ರಮಾಂಕ 75/2013 ಕಲಂ ; 323, 324, 504, 506, 448 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ:
ಕೋಣಾಜೆ
ಠಾಣೆ;
- ದಿನಾಂಕ 09.04.2013 ರಂದು ಬೆಳಿಗ್ಗೆ 08:00 ಸಮಯಕ್ಕೆ ಫಿರ್ಯಾದಿದಾರರ ತಮ್ಮ ನಿತೇಶ್ ರೋಯಿ ಮೊಂತೆರೋ (30) ರವರು ಅಡಿಕೆ, ತೆಂಗು ತೆಗೆಯುವ ಕೆಲಸ ಮಾಡುತ್ತಿದ್ದು, ತಮ್ಮ ತೋಟದಲ್ಲಿ ಅಡಿಕೆ ಹೆಕ್ಕುವರೇ ಹೋಗಿದ್ದು, ವಾಪಾಸ್ಸು ಮನೆಗೆ ಬಾರದೇ ಇದ್ದುದರಿಂದ ತೋಟದಲ್ಲಿ ಹುಡುಕಾಡಿದಾಗ ತೋಟದ ಹಳ್ಳದಲ್ಲಿ ಬಿದ್ದು ಮೃತ ಪಟ್ಟಿರುವುದು ಕಂಡು ಬಂದಿದ್ದು, ಮೃತರಿಗೆ ಒಂದು ವಾರದಿಂದ ತಲೆಸುತ್ತು, ಎದೆನೋವು ಇದ್ದು ಇದೇ ಕಾರಣದಿಂದ ಮೃತರು ತಲೆ ತಿರುಗಿಯೋ, ಕಾಲು ಜಾರಿಯೋ ಆಕಸ್ಮಿಕವಾಗಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಮೆಲ್ವಿನ್ ಮೊಂತೆರೋ (41) ತಂದೆ: ಸೈಮನ್ ಮೊಂತೆರೋ ವಾಸ: ಹರಿದೋಟ ಮನೆ ಹರೇಕಳ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಕೋಣಾಜೆ ಠಾಣೆ ಯುಡಿಆರ್ ನಂಬ್ರ 09/2013 ಕಲಂ: 174 ಸಿಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment