Monday, April 1, 2013

Daily Crime Incidents for April 01, 2013


ಹಲ್ಲೆ ಪ್ರಕರಣ

ಕಾವೂರ್ ಪೊಲೀಸ್ ಠಾಣೆ


  • ದಿನಾಂಕ 31-03-13 ರಂದು ಫಿರ್ಯಾದಿದಾರರಾದ ಶ್ರೀಮತಿ ರುಫಿನ್ ಡಿಸೋಜ ಗಂಡ: ಸಿಲ್ವೆಸ್ಟರ್ ಡಿಸೋಜಾ ವಾಸ: ಪಡ್ಪು ಹೌಸ್, ಬಂಗ್ರಕೂಳೂರು, ಮಂಗಳೂರು ತಾಲೂಕು ರವರು ಚಚರ್್ಗೆ ಹೋಗಿ ವಾಪಾಸು ಮನೆ ಕಡೆ ಬರುತ್ತಿರುವಾಗ ರಾತ್ರಿ 9-00 ಗಂಟೆಗೆ ದಂಬೆಲ್ ಸಂಕದ ಬಳಿ ತುಂಬ ಜನ ಸೇರಿದ್ದು ಆ ಸಮಯ ರೊನಾಲ್ಡ್ ಡಿಸೋಜಾ ಹಾಗು ಅವರ ಮಗ ರೋಷನ್ ಡಿಸೋಜಾ ನೀನು ಇಲ್ಲಿ ಏನು ಮಾಡುತ್ತೀ ಎಂದು ಬಲಗೈ ಹಿಡಿದು ತಿರುಚಿ ಹೊಡೆಯಲು ಹೋದಾಗ ರೊನಾಲ್ಡ್ ಹಾಗೂ ಅವರ ಪತ್ನಿ ಮೇಬಲ್ ಫಿರ್ಯಾದಿಗೆ ಬೈದು ಕೈಕಾಲು ಕಟ್ಟಿ ದೂಡಿ ಹಾಕಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ರುಫಿನ್ ಡಿಸೋಜ ರವರು ನೀಡಿದ ದೂರಿನಂತೆ ಕಾವೂರು ಪೊಲೀಸು ಠಾಣ ಅ.ಕ್ರ. 79/13 ಕಲಂ 323, 354, 504, 506 ಜತೆಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕಾವೂರ್ ಪೊಲೀಸ್ ಠಾಣೆ

  • ದಿನಾಂಕ 30-03-2013 ರಂದು ರಾತ್ರಿ 10-00 ಗಂಟೆಗೆ ಪಿರ್ಯದಿದಾರರಾದ ಲೂಸಿ ಮಿರಾಂಡ (56) ವಾಸ: ದೇರೇಬೈಲ್ ಮಂಗಳೂರು ತಾಲೂಕು ರವರು ಮನೆಯಲ್ಲಿ ಇದ್ದ ಸಮಯ ಪಿರ್ಯದಿದಾರರ ಸೊಸೆ ಮಲಿಟಾ ಆಲಿಷ್ ಡಿಸೋಜಾ, ಅವರ ತಂದೆ ಮರ್ಸಲ್ ಅಂಟನಿ ಡಿಸೋಜಾ, ತಾಯಿ ಪಿಲೋಮಿನಾ ಡಿಸೋಜಾ ಎಂಬವರು ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರು ಮನೆಗೆ ವಾಸ್ತವ್ಯವಿರುವುದು ಬೇಡ ಎಂದು ಆಕ್ಷೇಪಿಸಿದಾಗ, ಮಾರ್ಷಲ್ ಡಿಸೋಜಾರವರು ಪಿರ್ಯಾದಿದಾರರ ಮಗಳಿಗೆ ಹೊಡೆಯಲು ಬಂದಾಗ ಅದನ್ನು ತಡೆಯಲು ಬಂದಾಗ ಪಿರ್ಯಾದಿದಾರರ ಎಡಕೈ ಕೋಲು ಕೈ ಗೆ ಹೊಡೆದು, ಕಾಲಿನಿಂದ ತುಳಿದು ಬೇವಾರ್ಸಿ ಗಳೇ ಎಂದು ಅವಾಚ್ಯ ಶಬ್ದದಿಂದ ಬೈದು , ಪಿರ್ಯಾದಿದಾರರ ಸೊಸೆ ಕಾಲಿನಿಂದ ತುಳಿದು, ಪಿಲೋಮಿನ ಡಿಸೋಜಾರವರು ಪಿರ್ಯಾದಿದಾರರ ಕೂದಲನ್ನು ಎಳೆದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ, ಈ ದಿನ ದಿನಾಂಕ 31-03-2013 ರಂದು 5-45 ಗಂಟೆಗೆ ನೆರೆಮನೆಯವರಾದ ಹ್ಯಾರಿ ಡಿಸೋಜಾ, ಜೆಸಿಂತ ಡಿಸೋಜಾ ಹಾಗೂ ಅವರ ಗಂಡ ಹಾಗೂ ಇನ್ನೂ ಕೆಲವರು ಮನೆಯ ಬಳಿಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಬಿಡುವುದಿಲ್ಲವೆಂದು ಬೆದರಿಸಿರುತ್ತಾರೆ. ಗಾಯಗೊಂಡ ಪಿರ್ಯಾದಿದಾರರು ಮಂಗಳೂರಿನ ಸಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ ಎಂಬುದಾಗಿ ಲೂಸಿ ಮಿರಾಂಡ ರವರು ನೀಡಿದ ದೂರಿನಂತೆ ಕಾವೂರ್ ಪೊಲೀಸ್ ಠಾಣಾ ಅ.ಕ್ರ. 78/13 ಕಲಂ: 143, 147, 148, 448, 323, 504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 30.03.2013 ರಂದು ಬೆಳಿಗ್ಗೆ 11:15 ಗಂಟೆ ವೇಳೆಗೆ ಆರೋಪಿ ಚಾಲಕ ಮುರುಗೇಶನ್ ಎಂಬವರು ಎಲ್.ಪಿ.ಜಿ ಟ್ಯಾಂಕರ್ ಕೆಎ 21 ಎ 4807 ನ್ನು ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ನಗರದ ಕಂಕನಾಡಿ ಗ್ರಾಮದ ಪಂಪುವೆಲ್ ಎಂಬಲ್ಲಿ  ರಾ.ಹೆ 66 ರ ಬದಿಯಲ್ಲಿ ರಸ್ತೆ ದಾಟುವರೇ ನಿಂತಿದ್ದ ಪಿಯರ್ಾದಿ ಶ್ರೀಮತಿ ಜಯಶ್ರೀರವರಿಗೆ ಡಿಕ್ಕಿ ಹೊಡೆದಿದ್ದು ಈ ಪರಿಣಾಮ ತಲೆಯ ಹಿಂಬದಿಗೆ, ತುಟಿಗೆ, ಹಾಗೂ ಎಡ ಅಂಗೈಗೆ ಗುದ್ದಿದ ಹಾಗೂ ತರಚಿದ ರಕ್ತಗಾಯವಾಗಿದ್ದಲ್ಲದೆ ಮೇಲ್ದವಡೆಯ ಹಲ್ಲುಗಳ ಸೆಟ್ಟಿಗೆ ಹಾಗೂ ಒಂದು ಹಲ್ಲು ತುಂಡಾಗಿ ತೀವ್ರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ನಗರದ ಸಿ,ಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ಜಯಶ್ರೀ ಯವರು ನೀಡಿದ ದೂರಿನಂತೆ ಮಂಗಳೂರು  ಗ್ರಾಮಾಂತರ ಠಾಣಾ ಮೊ ನಂಬ್ರ 120/12 ಕಲಂ: 279. 339.  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ಸಿದ್ದಣ್ಣ ಪ್ರಾಯ 25 ವರ್ಷ. ತಂದೆ: ಶರಣಪ್ಪ ಕಾಕಂಡಿಕೆ, ಕಾಗಲಗೊಂಬ ಗ್ರಾಮ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ  ರವರು ದಿನಾಂಕ 31-03-2013 ರಂದು ಮದ್ಯಾಹ್ನ ಮನೆಗೆ ಹೋಗುವರೇ ಬಸ್ ಗಾಗಿ ಕಾಯುತ್ತಿದ್ದ ಸಮಯ 12-30 ಗಂಟೆಗೆ ಬೈಕಂಪಾಡಿ ಕಡೆಯಿಂದ ಕೆ ಎ 19 ವೈ 1741 ನೇ ಮೋಟಾರು ಸೈಕಲ್ ನ್ನು ಯಲ್ಲಪ್ಪ ಮತ್ತು ಗೋವಿಂದಪ್ಪ ಇವರು ಸವಾರಿ ಮಾಡಿಕೊಂಡು ಬಂದು ಹೊನ್ನಕಟ್ಟೆ ಜಂಕ್ಷನ್ ನಲ್ಲಿ  ರಾ ಹೆ 66 ರ ಪೂರ್ವ ದಿಕ್ಕಿನ ರಸ್ತೆಗೆ ಬರಲು ತಿರುಗಿಸುತ್ತಿರುವಾಗ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆ ಎ 20 ಸಿ 9797 ನೇ ಬಸ್ಸನ್ನು ಅದರ ಚಾಲಕ ಸುದೀರ್ ಶೆಟ್ಟಿ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಲ್ಲಪ್ಪ ಮತ್ತು ಗೋವಿಂದಪ್ಪ ಸವಾರಿ ಮಾಡಿಕೊಂಡು ಬರುತ್ತಿದ್ದ  ಮೋಟಾರು ಸೈಕಲ್ ಗೆ  ರಭಸವಾಗಿ ಡಿಕ್ಕಿ ಹೊಡೆಸಿದ್ದು ಪರಿಣಾಮ ಮೋಟಾರು ಸೈಕಲ್ ರಸ್ತೆಯಲ್ಲಿ ಉಜ್ಜಿಕೊಂಡು ಸುಮಾರು 30 ಅಡಿ ದೂರದವರೆಗೆ ಎಳೆದುಕೊಂಡು ಹೋಗಿದ್ದು  ಪರಿಣಾಮ ಬೈಕಿನಲ್ಲಿದ್ದ ಯಲ್ಲಪ್ಪ ಮತ್ತು ಗೋವಿಂದಪ್ಪ ಇವರಿಗೆ ತೀವ್ರ ತರದ ಗಾಯವಾಗಿದ್ದು ಅಲ್ಲಿಗೆ ಬಂದ ಪೊಲೀಸ್ ಪಿಸಿಆರ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಇಬ್ಬರನ್ನು ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಯಲ್ಲಪ್ಪರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಗೋವಿಂದಪ್ಪರವರನ್ನು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬುದಾಗಿ ಸಿದ್ದಣ್ಣ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಮೊ.ನಂ. 92/2013 ಕಲಂ: 279, 338, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ಪಿಯರ್ಾದಿದಾರರಾದ ನವೀನ್ ಚಂದ್ರ (42) ತಂದೆ: ಕೃಷ್ಣ ರಾವ್, ಬೊಂದೆಲ್, ಮಂಗಳೂರು ರವರ ತಂದೆ ಬಾಲಕೃಷ್ಣ ಶೆಟ್ಟಿಯವರು ವಿಪರೀತ ಅಮಲು ಸೇರಿಸುವ ಹವ್ಯಾಸದವರಾಗಿದ್ದು ಈ ಹಿಂದೆ 5-6 ಬಾರಿ ಪ್ರಜ್ಞಾ ಅಮಲು ನಿಮರ್ೂಲನ ಕೇಂದ್ರದಲ್ಲಿ ದಾಖಲಾಗಿದ್ದು, ಆದರೂ ಅಮಲು ಸೇವಿಸುವ ಹವ್ಯಾಸವನ್ನು ಬಿಡದ ಕಾರಣ ದಿನಾಂಕ 29.03.2013 ರಂದು ವಾಪಾಸ್ಸು ಅವರನ್ನು ಕಂಕನಾಡಿ ಗ್ರಾಮದ ಉಜ್ಜೋಡಿಯಲ್ಲಿರುವ ಪ್ರಜ್ಞಾ ಅಮಲು ನಿಮರ್ೂಲನ ಕೇಂದ್ರಕ್ಕೆ ದಾಖಲು ಮಾಡಿದ್ದು ಆದರೆ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30.03.2013 ರ ರಾತ್ರಿ 11:15 ಗಂಟೆಯಿಂದ ಬೆಳಗಿನ ಜಾವ 5:45 ಗಂಟೆಯ ಮದ್ಯಾವದಿಯಲ್ಲಿ ಸದ್ರಿ ಸಂಸ್ಥೆಯಲ್ಲಿ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ನವೀನ್ ಚಂದ್ರ ರವರು ನೀಡಿದ ದೂರಿನಂತೆ ಮಂಗಳೂರು  ಗ್ರಾಮಾಂತರ ಯು.ಡಿ.ಆರ್ ನಂ: 19/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment