Tuesday, April 2, 2013

Daily Crime Incidents for April 02,2013


ಹಲ್ಲೆ ಪ್ರಕರಣ

ಮಂಗಳೂರು ಪೂರ್ವ ಪೊಲೀಸ್ ಠಾಣೆ


  • ಫಿಯರ್ಾದಿದಾರರು ಈ ದಿನ ದಿನಾಂಕ: 31-03-2013 ರಂದು ಬೆಳಿಗಿನ ಜಾವ ಸುಮಾರು 02-00 ಗಂಟೆಗೆ ತಮ್ಮ ಗೆಳೆಯ ರೋಹನ್ ಎಂಬವರೊಂದಿಗೆ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಹೊಟೇಲ್ 'ಮೈನ್ ಲ್ಯಾಂಡ್ ಚೀನಾ' ಎಂಬಲ್ಲಿಗೆ ಊಟಕ್ಕಾಗಿ ಹೋಗಿದ್ದು, ಅಲ್ಲಿ ಫಿಯರ್ಾದಿದಾರರ ಪರಿಚಯದ ಸುನೀತ್ ಮತ್ತು ಇತರರು ಕೂಡಾ ಇದ್ದು ಅವರಿಗೆ ಪಿಯರ್ಾದಿದಾರರು ಈಸ್ಟರ್ ಶುಭಾಶಯ ತಿಳಿಸಿರುತ್ತಾರೆ. ನಂತರ ಅಲ್ಲಿಂದ ರೋಹನ್ರವರೊಂದಿಗೆ ವೆಲೆನ್ಸಿಯಾ ಕಡೆಗೆ ಹೋಗಿದ್ದು,  ಆ ಸಮಯ ಸುನೀತ್ ಎಂಬವರು ಪಿಯರ್ಾದಿದಾರರಿಗೆ ಕರೆ ಮಾಡಿ ವಾಪಾಸು ಕಂಕನಾಡಿ ಬೈಪಾಸ್ ಬಳಿಗೆ ಬರ ಹೇಳಿರುತ್ತಾರೆ. ಪಿಯರ್ಾದಿದಾರರು ತನ್ನ ಸ್ನೇಹಿತ ರೋಹನ್ರವರೊಂದಿಗೆ ಪಿಯರ್ಾದಿದಾರರ ಬಾಬ್ತು ರಿಟ್ಜ್ ಕಾರ್ನಲ್ಲಿ ಅಲ್ಲಿಗೆ ಬಂದಿದ್ದು, ಪಿಯರ್ಾದಿದಾರರನ್ನುದ್ದೇಶಿಸಿ "ನೀನು ಹುಡುಗಿಯರನ್ನು ತಮಾಷೆ ಮಾಡುತ್ತೀಯಾ" ಎಂದು ಹೇಳಿ ಏಕಾಏಕಿ ಸುನೀತ್ ಮತ್ತು ಇತರರು ಹೊಡೆಯಲು ಮುಂದಾಗಿದ್ದು, ಅವರಲ್ಲಿ ಒಬ್ಬಾತ ಬಾಟ್ಲಿಯಿಂದ ಹೊಡೆದುದಲ್ಲದೇ ಇತರರು ಕೈಯಿಂದ ಹಲ್ಲೆ ಮಾಡಿದ ಪರಿಣಾಮ ಪಿಯರ್ಾದಿದಾರರ ತಲೆಗೆ ಮತ್ತು ಬಲ ಕಣ್ಣಿನ ಬಳಿ ರಕ್ತ ಗಾಯವಾಗಿರುತ್ತದೆ. ಸದ್ರಿ  ಗಲಾಟೆಯನ್ನು ಕಂಡ ರೋಹನ್ರವರು ಅಲ್ಲಿಂದ ಓಡಿ ಹೋಗಿದ್ದು, ಸದ್ರಿ ಆರೋಪಿಗಳು ಹಲ್ಲೆ ನಡೆಸಿ ತಾವು ಬಂದ ಕಾರುಗಳಲ್ಲಿ ಅಲ್ಲಿಂದ ಪರಾರಿಯಾಗಿರುವುದಾಗಿದೆ. ನಂತರ ಪಿಯರ್ಾದಿದಾರರು ಬೈಕ್ ಸವಾರರ ಸಹಾಯದಿಂದ ಕೊಲಾಸೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಸದ್ರಿ ಘಟನೆಯು ಸಂಭವಿಸಿದ ಸಮಯ ದಿನಾಂಕ 31-03-2013 ರಂದು ಬೆಳಗಿನ ಜಾವ ಸುಮಾರು 02.30 ಗಂಟೆಯಾಗಬಹುದದು ಎಂಬುದಾಗಿ ಶ್ರೀ.ಕಾಲರ್ೆಸ್ಟೋನ್ ಲಸ್ರಾದೋ ಪ್ರಾಯ:25 ವರ್ಷ, ತಂದೆ: ಟೈಡೋರ್ ಲಸ್ರಾದೋ ವಾಸ:ಕರ್ಜಹಿತ್ತಲು, ದೇರೆಬೈಲು,ಕೊಂಚಾಡಿ, ಮಂಗಳೂರು ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂ 47/2013 ಕಲಂ 323 324  ಡಿ/ತಿ 34     ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಪೊಲೀಸ್ ಠಾಣೆ


  • ದಿನಾಂಕ 31.03.2013 ರಂದು ರಾತ್ರಿ 23.00 ಗಂಟೆಗೆ ಪಿರ್ಯಾದಿದಾರರಾದ ನೆಲ್ಸನ್ ಫೆನರ್ಾಂಡಿಸ್ (23) ತಂದೆ: ಅಬ್ರಹಾಂ ಫೆನರ್ಾಂಡಿಸ್, ಇನ್ ಫಾಂಟ್ ಜೀಸಸ್, ನಿತ್ಯಾಧರ್ ನಗರ, ಪೆವ್ರ್ಮನ್ನೂರು ಗ್ರಾಮ ರವರ ಪರಿಚಯದ ಪ್ರಶಾಂತ್ ಎಂಬವರು ಮೋಬೈಲ್ ಪೋನಿನಲ್ಲಿ ಅಜರ್ೆಂಟಾಗಿ ಕಾರಿನ ಬ್ಯಾಟರಿ ಬೇಕೆಂದು ವಿನಂತಿಸಿದಂತೆ ಪಿರ್ಯಾದಿಯು ಪ್ರಶಾಂತ್ ಎಂಬವರಿಗೆ ಬ್ಯಾಟರಿಯನ್ನು ನೀಡಲು ಉಳ್ಳಾಲ ಗ್ರಾಮದ ಮಾಯಾ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ರಾತ್ರಿ 23.15 ಗಂಟೆಗೆ ಬಂದು ಪ್ರಶಾಂತ್ ಬಳಿ ಹೋಗಿ ಕಾರಿನ ಬ್ಯಾಟರಿ ತೆಗೆದು ಕೊಡುತ್ತೇನೆ ಎಂದು ಹೇಳಿದಾಗ ಪ್ರಶಾಂತನು ಬ್ಯಾಟರಿ ತೆಗೆದು ಕೊಡುವುದು ಬೇಡ ಎಂದು ಹೇಳಿದಾಗ ಪಿರ್ಯಾದಿಯು ವಾಪಸ್ಸು ಮನೆಗೆ ಹೊರಡಲು ಹೊರಟಾಗ ಆರೋಪಿಗಳಾದ ಪ್ರಶಾಂತ್, ರಾಬಟರ್್, ಪ್ರವೀಣ್ ಪಿರ್ಯಾದಿಯನ್ನು ತಡೆದು ನಿಲ್ಲಿದಾಗ ಆರೋಪಿ ವಿನೋದ್ ಕುಂಪಲನು ಪಿರ್ಯಾದಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿಯುತ್ತಿದ್ದಂತೆ ಪ್ರಶಾಂತ್, ರಾಬಟರ್್, ಪ್ರವೀಣ್ರವರುಗಳು ಅವಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಯುತ್ತಿದ್ದಾಗ ಪಿರ್ಯಾದಿಯು ಬೊಬ್ಬೆ ಹೊಡೆದಿದ್ದು ಆ ಸಮಯ ಅಲ್ಲೇ ಇದ್ದ ಪಿರ್ಯಾದಿಯ ಪರಿಚಯದವರಾದ ಸಂದೇಶ್ ಮತ್ತು ರಾಕಿ ಇವರುಗಳು ಓಡಿ ಬಂದಾಗ ಆರೋಪಿಗಳು ಅಲ್ಲಿಂದ ಓಡಿ ಹೋಗಿರುವುದು ಎಂಬುದಾಗಿ ನೆಲ್ಸನ್ ಫೆನರ್ಾಂಡಿಸ್  ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸು ಠಾಣಾ ಅ.ಕ್ರ. 134/2013 ಕಲಂ 341, ,323, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 31.03.2013 ರಂದು ರಾತ್ರಿ 23.30 ಗಂಟೆಗೆ ಪಿರ್ಯಾದಿದಾರರಾದ ರೋಬಟ್ರ್  ಮೋರಾಸ್ ತಂದೆ: ಗಿಲ್ಬಟ್ರ್  ವಿನ್ಸೆಂಟ್ ವ್ರೆರಾಸ್, ನಿತ್ಯಾಧರ್ ನಗರ, ಪೆವ್ರ್ಮನ್ನೂರು ಗ್ರಾಮ ರವರು ಉಳ್ಳಾಲ ಗ್ರಾಮದ ಮಾಯಾ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಇರುವ ಗುಜರಿ ಅಂಗಡಿಯ ಬಳಿ ತನ್ನ ಗೆಳೆಯರಾದ ಸಂದೇಶ್, ಪ್ರವೀಣ್, ನವೀನ್ ರವರುಗಳ ಜೊತೆಯಲ್ಲಿ ಮಾತಾಡುತ್ತಿದ್ದಾಗ ಪಿರ್ಯಾದಿದಾರರ ಪರಿಚಯದ ನೆಲ್ಸನ್ ಮತ್ತು ರೊಕ್ಕಿ ಅಲ್ಲಿಗೆ ಬಂದದನ್ನು ಕಂಡು ಪಿರ್ಯಾದಿಯು ತನ್ನ ಗೆಳೆಯರೊಂದಿಗೆ ತೊಕ್ಕೊಟ್ಟು ಕಡೆಗೆ ಹೊರಟಾಗ ನೆಲ್ಸನ್ ಮತ್ತು ರೊಕ್ಕಿ ಪಿರ್ಯಾದಿಯ ಬಳಿಗೆ ಬಂದು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಬೋಳಿಮಗ, ಬೇವಸರ್ಿ ನೀನು ಎಲ್ಲಿಗೆ ಹೋಗುತ್ತೀ ಎಂದು ಹೇಳಿ ಹೊಡೆಯಲು ಶುರು ಮಡಿದ್ದು ಆ ಸಮಯ ಅಲ್ಲೇ ಇದ್ದ ನನ್ನ ಗೆಳೆಯರು ಬಿಡಿಸಲು ಬಂದಾಗ ಅವರನ್ನು ದೂಡಿ ಹಾಕಿ ನಂತರ ಪಿರ್ಯಾದಿಗೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುವುದು ಎಂಬುದಾಗಿ ರೋಬಟ್ರ್  ಮೋರಾಸ್  ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸು ಠಾಣಾ ಅ.ಕ್ರ. 135/2013 ಕಲಂ 341, 504, 323, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ


  • ಫಿಯರ್ಾದಿದಾರರಾದ ಶ್ರೀ ಮಹಮ್ಮದ್ ಇಸ್ಮಾಯಿಲ್ ತಂದೆ: ಇದಿನಬ್ಬ ವಾಸ: ಸಮೀರ್ ರೆಸಿಡೆನ್ಸಿ, ಬದ್ರಿಯಾ 2ನೇ ಕ್ರಾಸ್ ಕಂದುಕ ರವರು ದಿನಾಂಕ 31-03-2013 ರಂದು 05:30 ಗಂಟೆಗೆ ಮಂಗಳೂರು ಸೆಂಟ್ರಲ್ ಮಾಕರ್ೆಟ್ನಲ್ಲಿರುವ ಹೆಚ್ಎಸ್ಬಿ ಎಂಬ ಹೆಸರಿನ ಅಂಗಡಿಯಲ್ಲಿ ಕೆಲಸಕ್ಕೆ ಹೋಗುವರೇ ತನ್ನ ಬಾಬ್ತು ಹಿರೋ ಹೊಂಡಾ ಮೋ.ಸೈಕಲ್ ನಂಬ್ರ ಕೆಎ-19-ವಿ-8840 ನೇಯದ್ದನ್ನು ಮಂಗಳೂರು ಸೆಂಟ್ರಲ್ ಮಾಕರ್ೆಟ್ನ ಹಳೇ ಪೊಲೀಸ್ ಚೌಕಿ ಕಟ್ಟಡವಿದ್ದ ಸ್ಥಳದಲ್ಲಿ ಹ್ಯಾಂಡ್ ಲಾಕ್ ಮಾಡದೇ ಪಾಕರ್್ ಮಾಡಿ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ಬಳಿಕ 08:30 ಗಂಟೆಗೆ ಮೊಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಮೊಟಾರು ಸೈಕಲ್ ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಬಳಿಕ ಸದ್ರಿ ವಠಾರದಲ್ಲಿ ಮತ್ತು ಮಂಗಳೂರು ನಗರದಲ್ಲಿ ಇತರೇ ಕಡೆಗಳಲ್ಲಿ ಈ ವರೆಗೆ ಹುಡುಕಾಡಿದಲ್ಲಿ ಮೊಟಾರು ಸೈಕಲ್ ಪತ್ತೆಯಾಗದೇ ಇದ್ದು, ಸದರಿ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿ, ಕಳವಾದ ಮೊಟಾರು ಸೈಕಲ್ನ ಅಂದಾಜು ಮೌಲ್ಯ ರೂ. 13,000/- ಆಗಬಹುದು. ಆದ್ದರಿಂದ ಕಳವಾದ ಮೊಟಾರು ಸೈಕಲ್ನ್ನು ಪತ್ತೆ ಮಾಡಿಕೊಡಬೇಕಾಗಿ ಮಹಮ್ಮದ್ ಇಸ್ಮಾಯಿಲ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆ ಅ.ಕ್ರ. 75/2013 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಂಚನೆ ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ


  • ಪಿರ್ಯಾದಿದಾರರಾದ ಹೆಚ್.ಎಂ.ಸಿ. ಸಾಸ್ತ್ರಿ ರವರು ಕಾಪರ್ೊರೇಶನ್ ಬ್ಯಾಂಕ್, ರಾಮಭವನ ಕಾಂಪ್ಲೇಕ್ಸ್ ಬ್ರ್ಯಾಂಚ್ ಮಂಗಳೂರು ನೇದರಲ್ಲಿ ಚೀಫ್ ಮ್ಯಾನೇಜರ್ ಆಗಿದ್ದು, ತಮ್ಮ ಬ್ಯಾಂಕಿನಲ್ಲಿ ಶ್ರೀಮತಿ ಮಥರ್ಾ ಡಿ'ಸೋಜಾ ಎಂಬವರು ದಿನಾಂಕ 08-02-2002 ರಿಂದ ಎಸ್ಬಿ ಅಕೌಂಟ್ ನಂಬ್ರ 7455 ನೇದನ್ನು ಹೊಂದಿದ್ದು, ಇದರೊಂದಿಗೆ ಚೆಕ್ ಬುಕ್ ನಂಬ್ರ 60496 ನೇದನ್ನು ಬ್ಯಾಂಕ್ನಿಂದ ಪಡೆದುಕೊಂಡಿದ್ದು, ದಿನಾಂಕ 16-01-2010 ರಂದು ಎಸ್ಬಿ ಅಕೌಂಟ್ ನಂಬ್ರ 7455 ನೇದರ ಶ್ರೀಮತಿ ಮಥರ್ಾ ಡಿ'ಸೋಜಾ ರವರು ಬ್ಯಾಂಕಿಗೆ ಬಂದು, ಬ್ಯಾಂಕಿನಿಂದ ತಾನು ಪಡೆದುಕೊಂಡ ಚೆಕ್ ಬುಕ್ ನಂಬ್ರ 60496 ದಿನಾಂಕ 16-10-2004 ನೇದರಿಂದ ರೂ. 6500/- ನ್ನು ಸುಝೀಸ್ ಡಿ'ಸೋಜಾ ಹೆಸರಿನಲ್ಲಿ ಮೋಸದಿಂದ ನಗದೀಕರಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಸದ್ರಿ ಚೆಕ್ನ್ನು ತನಗೆ ಗುರುತು ಪರಿಚಯವಿರುವ ನತಾಶಾ ಟೆಲ್ಲಿಸ್ ಎಂಬವರು ಚೆಕ್ನ್ನು ಕಳವು ಮಾಡಿ, ನಕಲಿ ಸಹಿಯನ್ನು ಮಾಡಿ ನಗದೀಕರಿಸಿದ್ದಾಗಿ, ಈ ಬಗ್ಗೆ ಎಸ್ಬಿ ಅಕೌಂಟ್ ನಂಬ್ರ 7455 ನೇದರ ಶ್ರೀಮತಿ ಮಥರ್ಾ ಡಿ'ಸೋಜಾ ರವರು ದಿನಾಂಕ 27-10-2009 ರಂದು ಬ್ಯಾಂಕ್ನಲ್ಲಿ ದೂರು ನೀಡಿದ್ದು, ನಂತರ ಖಾತೆದಾರರು ಮಂಗಳೂರು ಉವರ್ಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಪ್ರತಿಯನ್ನು ಬ್ಯಾಂಕಿಗೆ ನೀಡಿರುತ್ತಾರೆ. ಆದ್ದರಿಂದ ನಮ್ಮ ಬ್ಯಾಂಕ್ನ ಎಸ್ಬಿ ಅಕೌಂಟ್ ನಂಬ್ರ 7455 ನೇದರ ಶ್ರೀಮತಿ ಮಥರ್ಾ ಡಿ'ಸೋಜಾ ರವರ ಚೆಕ್ ಬುಕ್ ನಂಬ್ರ 60496 ನೇದನ್ನು ಕಳವು ಮಾಡಿ, ಖಾತೆದಾರರ ನಕಲಿ ಸಹಿಯನ್ನು ಮಾಡಿ, ಸುಝೀಸ್ ಡಿ'ಸೋಜಾ ಎಂಬವರ ಹೆಸರಿನಲ್ಲಿ ಮೋಸದಿಂದ ರೂ. 6500/- ನ್ನು ಪಿರ್ಯಾದಿದಾರರ ಬ್ಯಾಂಕ್ನಲ್ಲಿ ನಗದೀಕರಿಸಿದ ನತಾಶಾ ಟೆಲ್ಲಿಸ್ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಹೆಚ್.ಎಂ.ಸಿ. ಸಾಸ್ತ್ರಿ ಚೀಫ್ ಮ್ಯಾನೇಜರ್ ಕಾಪರ್ೊರೇಶನ್ ಬ್ಯಾಂಕ್, ರಾಮಭವನ ಕಾಂಪ್ಲೇಕ್ಸ್ ಬ್ರ್ಯಾಂಚ್ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆ ಅ.ಕ್ರ. 77/2013 ಕಲಂ 468, 420 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಸುರತ್ಕಲ್ ಠಾಣೆ


  • ಪಿರ್ಯಾದಿದಾರರಾದ ಮೆಲ್ಕಿತ್ ಸಿಂಗ್ ಪ್ರಾಯ ಃ 21 ವರ್ಷ ತಂದೆಃ ಮನೋಹರ್ ಸಿಂಗ್  ವಾಸಃ ಮನೆ ನಂಬ್ರ 52 ಬೈನಿಗಿಲ್  ಗ್ರಾಮ, ಅಮೃತಸರ್ ತಾಲೂಕು ಮತ್ತು ಜಿಲ್ಲೆ ಪಂಜಾಬ್ ರಾಜ್ಯ  ಹಾಲಿ ವಾಸಃ ಪುಂಜಿಲಾಯ್ಡ್ ಲೇಬರ್ ಕ್ಯಾಂಪ್ ಕುತ್ತೆತ್ತೂರು  ಮಂಗಳೂರು  ರವರು ಪುಂಜಿಲಾಯ್ಡ್ ಕಂಪೆನಿಯಲ್ಲಿ ರಿಗ್ಗರ್ ಆಗಿ ಕೆಲಸ ಮಾಡಿಕೊಂಡಿದ್ದು ಅವರ ಜತೆಗೆ ಅವರ ಊರಿನ ಸುಖ್ದೇವ್ಸಿಂಗ್ ಎಂಬವರು ಕೂಡಾ ರಿಗ್ಗರ್ ಆಗಿ ಸುಮಾರು 2 ವರ್ಷಗಳಿಂದ ಕೆಲಸ ಮಾಡಿಕೊಂಡು ಕುತ್ತೆತ್ತೂರು ಲೇಬರ್ ಕ್ಯಾಂಪ್ನಲ್ಲಿ ಉಳಕೊಳ್ಳುತ್ತಿದ್ದು ಅವರಿಗ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಾಯಿಲೆ ಇದ್ದು ದಿನಾಂಕ 31-03-13 ರಂದು ಅವರಿಗೆ ಬೆಳಿಗ್ಗೆ ಅಸೌಖ್ಯ ಉಂಟಾಗಿದ್ದು ಅವರಿಗೆ ಚಿಕಿತ್ಸೆ ನೀಡಿ ಬಳಿಕ ಕ್ಯಾಂಪ್ಗೆ ಕರೆದುಕೊಂಡು ಹೋಗಿದ್ದು ಅದೇ ದಿನ ಸಂಜೆ ವೇಳೆಗೆ ಅವರಿಗೆ ತೀವ್ರ ಅಸೌಖ್ಯ ಉಂಟಾಗಿ ಅವರನ್ನು  ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ  ಚಿಕಿತ್ಸೆಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಈ ದಿನ ದಿನಾಂಕ 01-04-13 ರಂದು ಬೆಳಿಗ್ಗೆ 06-30 ಗಂಟೆಗೆ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂಬುದಾಗಿ ಮೆಲ್ಕಿತ್ ಸಿಂಗ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಯು.ಡಿ.ಆರ್ ನಂ: 10/2013 ಕಲಂ: 174 ದಂ.ಪ್ರ.ಸಂ. ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ದಕ್ಷಿಣ ಠಾಣೆ


  • ಫಿಯರ್ಾಧಿದಾರರಾದ  ಜಯಂತ್ ರವರ ಭಾವ ಶಿವರಾಮ ರವರ ಮೇಲೆ ಶೃಂಗೇರಿ ಠಾಣೆಯಲ್ಲಿ ನವ್ಯಶ್ರೀ ಹಾಗೂ ಅವರ ಮೆನೆಯವರು ಇವರಿಬ್ಬರ ಪ್ರೀತಿ ಪ್ರೇಮದ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ವಿಚಾರಣೆಗೆ 02-04-13 ರಂದು ಫಿರ್ಯಾದುದಾರರ ಜೊತೆ ಹೋಗುವುದಾಗಿ ತಿಳಿಸಿದ್ದರು. ಅದರಂತೆ ಯಂತ್ರವರು ಮಧ್ಯಾಹ್ನ ಸುಮಾರು 2-30 ಗಂಟೆಗೆ ಕರೆ ಮಾಡಿದಾಗ ಉಡುಪಿಗೆ ಬರುವುದಾಗಿ ತಿಳಿಸಿದ್ದರು. ನಂತರ ಸುಮಾರು 16-30 ಗಂಟೆಗೆ ಅಜಿತ್ರವರು ಫಿರ್ಯಾದುದಾರರಿಗೆ ಶಿವರಾಮ ಎಸ್ ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ವಿಚಾರ ತಿಳಿಸಿರುತ್ತಾರೆ. ಶಿವರಾಮ ಎಸ್ ಹಾಗೂ ನವ್ಯಶ್ರೀ ರವರ ಮಧ್ಯೆ ಇದ್ದ ಪ್ರೀತಿಗೆ, ನವ್ಯಶ್ರೀ ಮನೆಯವರ ವಿರೋಧವಿದ್ದು, ಇದರಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮ ಹತ್ಯೆ ಮಾಡಿಕೊಂಡಿರುವುದು ಎಂಬುದಾಗಿ ಶ್ರೀ ಜಯಂತ್, ಪ್ರಾಯ: 36 ವರ್ಷ ತಂದೆ: ಚೆನ್ನಪ್ಪ ಹೆಗ್ಡೆ ವಾಸ: ಬಾರಿಕೆ ಮೆನೆ, ಬಲ್ಯ ಗ್ರಾಮ & ಅಂಚೆ ಪುತ್ತೂರು ತಾಲೂಕು, ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ  ಯು.ಡಿ.ಆರ್ ನಂ: 31/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


No comments:

Post a Comment