Tuesday, January 1, 2013

Daily Crime Incidents for January 01, 2013


ಅಪಘಾತ ಪ್ರಕರಣ: 

ಮೂಡಬಿದ್ರೆ ಠಾಣೆ;


  • ದಿನಾಂಕ 22-12-2012 ರಂದು 12-30 ಗಂಟೆಗೆ ಪಿರ್ಯಾದಿದಾರು ಅವರ ಚಿಕ್ಕ ಮಗಳು ಹಾಗೂ ಅವರ ಅಣ್ಣನ ಮಕ್ಕಳನ್ನು ಅಲಂಗಾರು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವರೇ ಅಲಂಗಾರು ಅಬ್ಬಾಸ್ ಮಿಲ್ನ ಮಾಲಕರ ಮನೆಯ ಎದುರು ರಸ್ತೆಯ ಬದಿಯಲ್ಲಿ ಅಡ್ಡ ದಾಟುವರೇ ಮಕ್ಕಳೊಂದಿಗೆ ನಿತ್ತುಕೋಂಡಿರುವಾಗ ಮೂಡಬಿದ್ರೆ ಕಡೆಯಿಂದ ಕೆಎ-19-ಇಎಫ್-7655ನೇ ಬೈಕ್ ಸವಾರ ಮಹಮ್ಮದ್ ಇಮ್ರಾನ್ ರವರು ಬೈಕನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಹೋಗುತ್ತಿದ್ದ ಬಸ್ಸೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲ ಬದಿಗೆ ಬಂದು ಪಿರ್ಯಾದಿದಾರೊಂದಿಗಿದ್ದ ಕುಮಾರಿ ಕನ್ಯಾ ಪ್ರಭುಳಿಗೆ ಡಿಕ್ಕಿಯಾಗಿದ್ದು ಪರಿಣಾಮ ಆಕೆಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬುದಾಗಿ ಅಶೋಕ್ ಪ್ರಭು (42) ತಂದೆ: ಸೀತಾರಾಮ ಪ್ರಭು ವಾಸ: ಪ್ರೀತಿ ಮನೆ, ಗುಡ್ಡೆಯಂಗಡಿ, ಮಿತ್ತಬೈಲು ಅಂಚೆ, ಪುತ್ತಿಗೆ ಗ್ರಾಮ ರವರು ನೀಡಿದ ದೂರಿನಂತೆ 256/2012,  279 337, ಐ.ಪಿ.ಸಿ 134(ಬಿ) ಜೊತೆಗೆ 187 ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಉಳ್ಳಾಲ ಠಾಣೆ;


  • ದಿನಾಂಕ. 30/12/2012 ರಂದು 24-00 ಗಂಟೆ ಸಮಯಕ್ಕೆ  ಕೆಎ-19-4238 ನೇ ನಂಬ್ರದ ಅಂಬಾಸಿಡರ್ ಕಾರನ್ನು ಅರೋಪಿತ ಉಸ್ಮಾನ್ ರವರು ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಕಲ್ಲಾಪು ಆಡಂ ಕುದ್ರು ಎಂಬಲ್ಲಿ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಪಿರ್ಯಾದಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ-19-ಜೆ-3574 ನೇ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದುದರಿಂದ ಪಿರ್ಯಾದಿಯು ಬೈಕು ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿಯು ತಲೆಗೆ, ಮುಖಕ್ಕೆ, ಬಲ ಕಾಲಿಗೆ ಗಾಯಗೊಂಡು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿರುವುದು ಎಂಬುದಾಗಿ ಪಿರ್ಯಾದಿದಾರರಾದ ಅಶೋಕ ಶೆಟ್ಟಿ ವಾಸ: ಸೇವಂತಿ ಗುಡ್ದೆ ಪೆಮರ್ಾನೂರು ಮಂಗಳೂರು ತಾಲೂಕುರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ 343/2012 ಕಲಂ 279  337 ಐಪಿಸಿ ರಂತೆ ಪ್ರಕರಣ  ದಾಖಲಿಸಿ   ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ 30-12-12 ರಂದು ಪಿರ್ಯಾದಿದಾರರು ತಲಪಾಡಿ ಬಳಿ ರಸ್ತೆ ಬದಿ ನಿಂತಿರುವ ಸಮಯ ಮೇಲ್ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಕೆಎಲ್ 14 ಎಮ್ 4776 ನೇ ಕಾರನ್ನು ಅದರ ಚಾಲಕನು ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿ ಫಿರ್ಯಾದಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಅಮ್ಮು ಶೆಟ್ಟಿ ತಂದೆ; ಕೋರಗ ಶೆಟ್ಟಿ ವಾಸ; ಮಂಜೇಶ್ವರ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ 342/2012 ಕಲಂ 279  337 ಐಪಿಸಿ ಯಂತೆ ಪ್ರಕರಣ  ದಾಖಲಿಸಿ   ತನಿಖೆ ಕೈಗೊಳ್ಳಲಾಗಿದೆ.


ಅಸ್ವೌಭಾವಿಕ ಮರಣ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 31-12-12 ರಂದು ಊರಿಗೆ ಹೋಗುತ್ತೇನೆಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರ ಕಚೇರಿಯಾದ ಅನಿ ಇನ್ಟ್ರುಮೆಂಟ್ ಪ್ರೈ ಲಿ. ಕಂಪೆನಿಯ ಬಾಬ್ತು ಸಬ್ ಬ್ರಾಂಚ್ ಆದ ಸುರತ್ಕಲ್ ಕುಳಾಯಿ ಗೋಕುಲ ನಗರದ ಕಚೇರಿಯಲ್ಲಿ  ಕೆಲಸ ಮಾಡುತ್ತಿದ್ದ ಪಿ. ಆಶೋಕನಲ್ಲಿ  ನಾನು ನೀಡಿದ ನನ್ನ ಮೂಲ ದಾಖಲಾತಿಗಳನ್ನು ನೀಡಿ ಎಂದು ಕೇಳಿದಾಗ ಪಿರ್ಯಾದಿದಾರರು ಸ್ವಲ್ಪ ಬಳಿಕ ದಾಖಲಾತಿಗಳನ್ನು ಕೊಡುತ್ತೇನೆಂದು ತಿಳಿಸಿದ ಮೇರೆಗೆ ಅವರು ರೂಮಿಗೆ ಹೋಗಿದ್ದು ಬಳಿಕ ಅಪರಾಹ್ನ 1 ಗಂಟೆಯ ತನಕ ಆತ ಬಾರದೇ ಇದ್ದಾಗ ಪಿರ್ಯಾದಿ ಆತನ ರೂಮಿನ ಬಳಿಗೆ ಹೋದಾಗ ಚಿಲಕ ಹಾಕಿದ್ದು ಅವರನ್ನು ಕರೆದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದು ಬಳಿಕ ಸಹೋದ್ಯೋಗಿಗಳನ್ನು ಕರೆದು ಕೋಣೆಯಲ್ಲಿ ಇಣುಕಿದಾಗ ಅಶೋಕರವರು ನೈಲಾನ್ ಹಗ್ಗವನ್ನು ಪ್ಯಾನ್ಗೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಅಶೋಕರವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ ಜಲಂದರ್ ಮೂಲ್ಯ ವಯಸ್ಸು 30 ವರ್ಷ ತಂದೆಃ ಚಂದು ಮೂಲ್ಯ ವಾಸಃ ಪಣೋಲಿಬೈಲು ಮನೆ ಸಜೀಪ ಮೂಡ ಅಂಚೆ  ಸಜೀಪ ಮೂಡ ಬಂಟ್ವಾಳ ತಾಲೂಕು.ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಯು.ಡಿ.ಆರ್ ನಂ: 47/2012 ಕಲಂ: 174 ದಂ.ಪ್ರ.ಸಂ. ಪ್ರಕರಣ ದಾಖಲಿಸಿ    ತನಿಖೆ ಕೈಗೊಳ್ಳಲಾಗಿದೆ.

ಉಳ್ಳಾಲ ಠಾಣೆ;


  • ದಿನಾಂಕ. 31-12-2012 ರಂದು 18-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ನೇತ್ರಾವತಿ ನದಿ ಬದಿಗೆ ದೋಣಿ ಕಟ್ಟಲು ಬಂದಾಗ ಅಲ್ಲಿ ನದಿ ಬದಿಯಲ್ಲಿ ಒಂದು ಗಂಡಸಿನ ಮೃತ ಶರೀರ ಪತ್ತೆಯಾಗಿದ್ದು, ಸದ್ರಿ ಮೃತ ದೇಹದಲ್ಲಿ ದೊರೆತ ಚಾಲನಾ ಪರವಾನಿಗೆಯನ್ನು ಪರಿಶೀಲಿಸಲಾಗಿ ಮೃತರ ಹೆಸರು ಜಯಕರ ಸಾಲ್ಯಾನ್ ತಂದೆ. ಪೂವಪ್ಪ ಪೂಜಾರಿ ವಾಸ. ನಾರಾಯಣ ಕೃಪಾ ಮಂದಿರದ ಬಳಿ, ಇಡ್ಯ ಸುರತ್ಕಲ್ ಎಂಬುದಾಗಿ ಇರುತ್ತದೆ. ಮೃತರು ಎಲ್ಲಿಯೋ ಅಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರ ಬಹುದಾಗಿ ಫಿರ್ಯಾದಿದಾರರು ಸ್ಟೀವನ್ ಡಿ ಸೋಜ (41) ತಂದೆ. ಆರ್.ವಿ. ಡಿ ಸೋಜ ವಾಸ. ಉಳ್ಳಾಲ ಹೊಗೆ, ಸ್ಕೂಲ್ ಹೌಸ್ ಹತ್ತಿರ, ಪೆರ್ಮನ್ನೂರು ಅಂಚೆ ಮತ್ತು ಗ್ರಾಮ, ಮಂಗಳೂರು ತಾಲೂಕು  ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಯುಡಿಆರ್ ನಂಬ್ರ 47/2012 ಕಲಂ 174 ಸಿಆರ್ಪಿಸಿ ಪ್ರಕರಣ ದಾಖಲಿಸಿ    ತನಿಖೆ ಕೈಗೊಳ್ಳಲಾಗಿದೆ.

No comments:

Post a Comment