ಜೀವ ಬೆದರಿಕೆ ಪ್ರಕರಣ
ದಕ್ಷಿಣ ಠಾಣೆ
- ಈ ಪ್ರಕರಣದ ಸಾರಾಂಶವೇನೆಂದರೆ, ಘನ 2ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯ, ಮಂಗಳೂರು ರವರ ಖಾಸಗಿ ಫಿರ್ಯಾದಿ ನಂ.73/12: ದಿನಾಂಕ: 16-01-2013 ರ ಫಿರ್ಯಾದಿಯನ್ನು ಪಡೆದುಕೊಂಡು ಪರಿಶೀಲಿಸಲಾಗಿ, ಫಿರ್ಯಾದಿದಾರರಾದ ಶ್ರೀಮತಿ ಆಲ್ಬಟರ್್ ಸಿಕ್ವೇರಾ ಎಂಬವರ ಮಗಳಾದ ಜಸಿಂತ ಸಿಕ್ವೇರಾ ಎಂಬವರನ್ನು ಆರೋಪಿ ವಲೇರಿಯನ್ ಆಳ್ವ ಎಂಬವರಿಗೆ ಮದುವೆ ಮಾಡಿ ಕೊಟ್ಟಿದ್ದು, ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ದಿನಾಂಕ: 10-03-2010 ರಂದು ವಿವಾಹ ವಿಚ್ಛೇದನಗೊಂಡಿರುತ್ತದೆ. ಬಳಿಕ ಜಸಿಂತಾ ಸಿಕ್ವೇರಾರವರು ರಿಚಾಡರ್್ ಪಿಂಟೋ ಎಂಬವರನ್ನು ದಿನಾಂಕಃ 12-10-2010 ರಂದು ಮದುವೆಯಾಗಿರುತ್ತಾರೆ. ತದನಂತರ ಆರೋಪಿಯು ಫಿರ್ಯಾದಿದಾರರ ಕುಟುಂಬದವರ ವಿರುದ್ಧ ಹಗೆಯನ್ನು ಸಾಧಿಸುತ್ತಿದ್ದು, ದಿನಾಂಕ: 28-07-12 ರಂದು ಮಂಗಳೂರು ನಗರದ ವಲೆನ್ಸಿಯಾದಲ್ಲಿರುವ ಫಿರ್ಯಾದಿದಾರರ ಮನೆಗೆ ಆರೋಪಿಯು ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಹಾಗೂ ತನ್ನ ಮಗಳನ್ನು ಉದ್ದೇಶಿಸಿ, ನಿನ್ನ ಮಾನ ಕೆಟ್ಟ ಬೇವಸರ್ಿ ಮಗಳೆಲ್ಲಿ ತುಜೋ ಅತಾಂಸೋ ಜ್ಲಾಂ ವೈ ಕೈಂಯು ಅಸಾ ಎಂದು ಹೇಳಿ ಚಾಕುವನ್ನು ತೋರಿಸಿ ಇದೇ ಚಾಕುವಿನಿಂದ ರಿಚಾಡರ್್ ಪಿಂಟೋನನ್ನು ಕೊಂದು ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿದ್ದಲ್ಲದೇ ಮನೆಯಲ್ಲಿದ್ದ ಜಸಿಂತಾ ಸಿಕ್ವೇರಾರವರ ಹೆಸರಿನಲ್ಲಿದ್ದ ಉಳಿತಾಯ ಪತ್ರಗಳನ್ನು ಬಲಾತ್ಕಾರವಾಗಿ ಮನೆಯಲ್ಲಿದ್ದ ಕಪಾಟಿನಿಂದ ತೆಗೆದುಕೊಂಡು ಹೋಗಿರುವುದಲ್ಲದೇ ಅ ಸಮಯ ತಡೆಯಲು ಹೋದಾಗ, ಪುನಃ ಬೈದು ಚಾಕು ತೋರಿಸಿ ಕೊಲ್ಲುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿಯೂ ಆ ಸಮಯ ಜೋಯ್ಲಸ್ ಡಿ'ಸೋಜಾ ಮತ್ತು ರೋಹನ್ ಕಾಡರ್ೋಸಾ ಎಂಬವರು ಹಾಜರಿದ್ದರು ಎಂಬುದಾಗಿ ಆಲ್ಬಟರ್್ ಸಿಕ್ವೇರಾ (85), ಗಂಡ: ದಿ/ ಫಾಸ್ಕಲ್ ಸಿಕ್ವೇರಾ, ವಾಸ: ಹೌಸ್ ನಂಬ್ರ 205, ಡೈನಾಸ್ಟರಿ-1, ಗೋರಿಗುಡ್ಡ ರೋಡ್, ವಲೆನ್ಸಿಯಾ, ಕಂಕನಾಡಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ.18/13 ಕಲಂ 420, 424, 425, 447, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ದಿನಾಂಕ 16-01-13 ರಂದು ರಾತ್ರಿ 19-00 ಗಂಟೆಗೆ ಮೇಲ್ಕಂಡ ಫಿರ್ಯಾದುದಾರರಾದ ಪ್ರಕಾಶ್ ಆಲ್ವರೀಸ್ ರವರು ಮೀನು ಹಿಡಿಯಲು ಹೋಗಿದ್ದವರು ತನ್ನ ಮನೆಗೆ ವಾಪಾಸು ಬಂದಿದ್ದಾಗ ಮನೆಯಲ್ಲಿದ್ದ ಮೃತ ತನ್ನ ಸಹೋದರ ಕ್ಲಮೆಂಟ್ ಆಲ್ವರೀಸ್ ಈತನು ಬೆಡ್ ರೂಂ ನಲ್ಲಿ ಬಾಗಿಲು ತೆರೆದು ಮಲಗಿದ್ದವನು ನಂತರ ಫಿರ್ಯಾದಿಯು ಮೀನು ಸಾಂಬಾರು ಮಾಡಿ ಸ್ನಾನಕ್ಕೆಂದು ಹೊರಡುವಾಗ ಟವಲ್ಗೆ ಬೆಡ್ ರೂಮ್ಗೆ ಹೋಗಲು ನೋಡಿದಾಗ ಮಲಗಿದ್ದ ಕ್ಲಮೆಂಟ್ ಆವಾರೀಸ್ ಬಾಗಿಲು ಚಿಲಕ ಹಾಕಿದ್ದು ಕಂಡು ಬಂದು, ಫಿರ್ಯಾದಿಯು ಅಡಿಗೆ ಕೋಣೆಯ ಸಜ್ಜೆಯ ಮೇಲೆ ಹತ್ತಿ ನೋಡಿದಾಗ ಮೃತ ಕ್ಲಮೆಂಟ್ ಆಲ್ವಾರೀಸ್ ತನ್ನ ಪಂಚೆ ಯಿಂದ ಅಟ್ಟಕ್ಕೆ ಹಾಕಿದ ಮರಕ್ಕೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಕಂಡು ಬಂದಿರುತ್ತದೆ. ಮೃತನು ಮಾನಸಿಕ ಅಸ್ವಸ್ಥನಿದ್ದು ತನ್ನ ತಮ್ಮ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅಲ್ಲದೇ ತನಗೆ ಮದುವೆಯಾಗದೇ ಇರುವ ಕಾರಣದಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬುದಾಗಿ ಪ್ರಕಾಶ್ ಆಲ್ವರೀಸ್, ಪ್ರಾಯ: 31 ವರ್ಷ ತಂದೆ: ಅಬ್ರಾಹಂ ಅಲ್ವಾರೀಸ್ ವಾಸ: ಮನೆ ನಂಬ್ರ 17-6, ಸಂತ ಜೊಸೆಫ್ ನಗರ, ಜಪ್ಪು, ಮಂಗಳೂರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಯು.ಡಿ.ಆರ್ ನಂ: 06/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹೆಂಗಸು ಕಾಣೆ ಪ್ರಕರಣ
ಉಳ್ಳಾಲ ಠಾಣೆ
- ಪಿಯರ್ಾದುದಾರರಾದ ಜುಬೈದಾ ಪ್ರಾಯ 39 ವರ್ಷ, ಗಂಡ: ಅಬೂಬಕ್ಕರ್ ಹಾಜಿ, ಸುಬಾಷ್ನಗರ, ಮುಕ್ಕಚ್ಚೇರಿ, ಉಳ್ಳಾಲ ಮಂಗಳೂರು ರವರ ಮಗಳು ಶ್ರೀಮತಿ. ಫಾತಿಮಾ ನಸೀರ ಪ್ರಾಯ 24 ವರ್ಷ ಎಂಬವಳು ತನ್ನ ಗಂಡನಲ್ಲಿ ಜಗಳ ಮಾಡಿಕೊಂಡು ಪಿಯರ್ಾದುದಾರರ ಮನೆಗೆ ಬಂದವಳು, ದಿನಾಂಕ 09-01-2013 ರಂದು ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಮುಕ್ಕಚ್ಚೇರಿ, ಸುಭಾಸ್ನಗರದಲ್ಲಿರುವ ಪಿಯರ್ಾದುದಾರರ ಮನೆಯಿಂದ 16-00 ಗಂಟೆಗೆ ತಾನು ಸಬೀನಾ ಪ್ಲಾಟ್ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಈ ತನಕ ವಾಪಾಸು ಬಾರದೇ ಕಾಣೆಯಾಗಿರುತ್ತಾಳೆ ಎಂಬುದಾಗಿ ಜುಬೈದಾ ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣಾ ಅ.ಕ್ರ. 19/2013 ಕಲಂ ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment