Wednesday, January 9, 2013

Daily Crime Incidents for Jan 09, 2013


ಅಪಘಾತ ಪ್ರಕರಣ 

ಬಜಪೆ ಠಾಣೆ 

  • ಫಿರ್ಯಾದಿದಾರರಾದ ಜಯಂತ ಶೆಟ್ಟಿಗಾರ, 40 ವರ್ಷ, ತಂದೆ: ದಿ: ಕೇಶವ ಶೆಟ್ಟಿಗಾರ, ವಾಸ: ಗಾಂಧಿನಗರ, ಗಂಜಿಮಠ, ಬಡಗುಳಿಪಾಡಿ ಗ್ರಾಮ, ಮಂಗಳೂರು ತಾಲೂಕು. ರವರು  ದಿನಾಂಕ: 047-01-2013 ರಂದು 19-30 ಗಂಟೆ ಸಮಯಕ್ಕೆ ತನ್ನ ಬಾಬ್ತು ಮೋಟಾರು ಸೈಕಲ್ ನಂ: ಕೆಎ 19 ಇಡಿ 2659 ರಲ್ಲಿ ಗುರುಪುರದಿಂದ ಗಂಜಿಮಠ ಕಡೆಗೆ ಬರುತ್ತಾ ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ವಿಕಾಸ ನಗರ ಎಂಬಲ್ಲಿಗೆ ತಲುಪುತ್ತಿದ್ದಂತೇ ಫಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಏಂ 19 ಃ 9240 ನೇ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಅವರ ತಲೆಗೆ ಬಲಕೈಗೆ, ಸೊಂಟಕ್ಕೆ ಹಾಗೂ ಎಡ ಕಾಲಿಗೆ ಸಾಮಾನ್ಯ ಸ್ವರೂಪದ ಗಾಯವಾಗಿತರುತ್ತದೆ ಎಂಬುದಾಗಿ ಜಯಂತ ಶೆಟ್ಟಿಗಾರರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 10/2013 ಕಲಂ: 279-337 ಐಪಿಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಠಾಣೆ 

  • ದಿನಾಂಕ 08-01-2013 ರಂದು ಪಿಯರ್ಾದುದಾರರಾದ ಶ್ರೀ.  ಪುರುಷೋತ್ತಮ ರಾವ್ ಎಂಬವರು ತಮ್ಮ ಬಾಬ್ತು ಏಂ 19 ಃ 8962 ನೇ ನಂಬ್ರದ ಆಟೋ ರಿಕ್ಷಾದಲ್ಲಿ ರಾಮ್ಮೋಹನ್ ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು, ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ಚಾಲಾಯಿಸಿಕೊಂಡು ಹೋಗುತ್ತಾ, ಬೆಳಿಗ್ಗೆ 05-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ರಾ.ಹೆ. 66 ರ ಕುದ್ರು ಶಾಲೆಯಿಂದ ಮುಂದೆ ನೇತ್ರಾವತಿ ಸೇತುವೆಯ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಏಂ 20 ಃ 8968 ನೇ ಲಾರಿಯನ್ನು ಅದರ ಚಾಲಕ ವೆಂಕಟರಮಣ ಎಂಬವರು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ಪ್ರಯಾಣಿಕ ರಾಮ್ಮೋಹನ್ರವರ ಎರಡೂ ಕಾಲುಗಳ ಮೂಳೆ ಮುರಿತ ಹಾಗೂ ಗಾಯವಾಗಿರುತ್ತದೆ ಎಂಬುದಾಗಿ ಪುರುಷೋತ್ತಮ ರಾವ್ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. ಅ.ಕ್ರ. 06/2013 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಠಾಣೆ 

  • ದಿನಾಂಕ 07-01-2013 ರಂದು 19-00 ಗಂಟೆಗೆ ಪಿಯರ್ಾದುದಾರರಾದ ಶ್ರೀ. ಅರುಣ ವೇಗಸ್ ಪ್ರಾಯ 35 ವರ್ಷ, ತಂದೆ: ಸಬೆಸ್ಟಿಯನ್ ವೇಗಸ್, ವಾಸ: ಕೊಲ್ಯ ನಿಯರ್ ಕುಲಾಲ್ ಮಂದಿರ, ಕೋಟೆಕಾರ್ ಮಂಗಳೂರು ರವರು ತನ್ನ ತಾಯಿ ಶ್ರೀಮತಿ. ಲಿಲ್ಲಿ ವೇಗಸ್ ಎಂಬವರೊಂದಿಗೆ ಮಂಗಳೂರು ತಾಲೂಕು, ಕೋಟೆಕಾರ್, 'ಕೋಟೆಕಾರ್ ಮೆಡಿಕಲ್' ಎದುರುಗಡೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಎದುರಿನಿಂದ ಅಂದರೆ ಮಂಳೂರು ಕಡೆಯಿಂದ ಏಐ - 15 - 7609 ನೇ ನಂಬ್ರದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಲಾಯಸಿಕೊಂಡು ಬಂದು ಲಿಲ್ಲಿ ವೇಗಸ್ರವರಿಗೆ ಡಿಕ್ಕಿ ಹೊಡೆದುದರಿಂದ ಲಿಲ್ಲಿ ವೇಗಸ್ರವರು ರಸ್ತೆಗೆ ಎಸೆಯಲ್ಪಟ್ಟು, ತಲೆಗೆ ಗುದ್ದಿದ ಗಾಯಾಗೊಂಡ ಲಿಲ್ಲಿ ವೇಗಸ್ರವರನ್ನು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಕಂಕನಾಡಿ ಫಾದರ್ ಮುಲ್ಲಸರ್್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಅರುಣ ವೇಗಸ್  ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 07/2013 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ದಕ್ಷಿಣ ಠಾಣೆ 

  • ದಿನಾಂಕ 07-01-13 ರಂದು ಮದ್ಯಾಹ್ನ 12-00 ಗಂಟೆ ಸಮಯಕ್ಕೆ ಫಿರ್ಯಾದುದಾರರಾದ ಮೊಹಮ್ಮದ್ ರಿಯಾಜ್ (25) ಎಮ್.ಎ ಹಮೀದ್ ವಾಸ: ನಡುಗುಡ್ಡೆ ಮನೆ, ಮಲಾರ್ ಬದ್ರಿಯಾ ನಗರ, ಪಾವೂರು ಅಂಚೆ, ಮಂಗಳೂರು ರವರ ತಮ್ಮನಾದ ಮಹಮ್ಮದ್ ಇಲಿಯಾಸ್ ಎಂಬವರು ರೊಸಾರಿಯೋ ಶಾಲೆಯ ಬಳಿ ನಡೆದುಕೊಂಡು ಸ್ಟೇಟ್ ಬ್ಯಾಂಕ್ ಕಡೆಗೆ ಬರುತ್ತಿದ್ದಾಗ ಬಿಳಿ ಬಣ್ಣದ ಆಲ್ಟೋ ಮಾರುತಿ ಕಾರಿನಲ್ಲಿ ಬಂದ ತುಫೈಲ್ ಮತ್ತು ಆತನ ಗೆಳೆಯರಾದ ಇಮ್ರಾನ್, ಸವಾದ್, ಕಾರು ಚಾಲಕ ಸತ್ತಾರ್, ಹಾಗೂ ಇಮ್ರಾನ್ನ ಬಾವ ಮತ್ತಿತರರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ತಡೆದು ನಿಲ್ಲಿಸಿ "ಬೇವಸರ್ಿ ಸೂಳೆ ಮಗನೇ ನೀನು ಸ್ಕೀಮ್ನ ಹಣ ಏನು ಮಾಡಿದ್ದಿ?' ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆಲ್ಟ್ನಿಂದ ಹಾಗೂ ಕಬ್ಬಿಣದ ರಾಡ್ನಿಂದ ಫಿರ್ಯಾದುದಾರರ ತಮ್ಮನ ಬೆನ್ನಿಗೆ ಕುತ್ತಿಗೆ ಹಿಂಭಾಗ, ಸೊಂಟಕ್ಕೆ ಹೊಡೆದು, ಕೈಗಳಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಫಿರ್ಯಾದುದಾರರು ಹಾಗೂ ಅವರ ಅತ್ತೆ ಮಗ ಸಾಧಿಕ್ ಎಂಬವರು ಸೇರಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬುದಾಗಿ ಮೊಹಮ್ಮದ್ ರಿಯಾಜ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅಕ್ರ 09/2013 ಕಲಂ 143, 147, 148, 341, 323, 324, 504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಠಾಣೆ 

  • ದಿನಾಂಕ 08.01.2013 ರಂದು ಪಿರ್ಯಾದಿದಾರರಾದ ಇಷರ್ಾದ್ (18) ತಂದೆ: ಆದಂ, ಮೂಸಾ ಮಂಜಿಲ್, ಕುಂಜತ್ತೂರು ಪದವು, ಮಂಜೇಶ್ವರ, ಕೇರಳ ರವರು ಉಳ್ಳಾಲ ಗ್ರಾಮದ ಕೋಡಿಯಲ್ಲಿರುವ ತನ್ನ ಕಸಿನ್ ಬ್ರದರ್ ವಾಕರ್ ಯೂನಿಸ್ ಎಂಬವರ ಮನೆಗೆ ಬಂದಿದ್ದು  ನಂತರ ಪಿರ್ಯಾದಿಯು ತನ್ನ ಕಸಿನ್ ಬ್ರದರ್ ವಾಕರ್ ಯೂನಿಸ್ನ ಜೊತೆಯಲ್ಲಿ ಉಳ್ಳಾಲದ ದಗರ್ಾ ರಸ್ತೆಯಲ್ಲಿರುವ ಶ್ರೀಭಗವತಿ ದೇವಸ್ಥಾನದ ಬಳಿ ಓಣಿಯಲ್ಲಿ ರಾತ್ರಿ ಸುಮಾರು 8.00 ಗಂಟೆಗೆ ಬಂದು ಅಲ್ಲಿ ಮಾತಾಡುತ್ತಿದ್ದ ಸಮಯ ಅಲ್ಲಿಗೆ ಇಬ್ಬರು ಬರುತ್ತಿದ್ದುದನ್ನು ಕಂಡು ವಕಾರ್ ಯೂನಿಸ್ ನನ್ನಲ್ಲಿ ಹೋಗುವ ಎಂದು ಹೇಳಿ ನಾವು ಅಲ್ಲಿಂದ ಹೋಗುತ್ತಿದ್ದಂತೆ ನಮ್ಮನ್ನು ಅವರಿಬ್ಬರು ತಡೆದು ನಿಲ್ಲಿಸಿ ಅದರಲ್ಲಿ ಒಬ್ಬನು ವಕಾರ್ ಯೂನಿಸ್ನಲ್ಲಿ ನೀನು ಕೋಡಿಯಲ್ಲಿ ನನಗೆ ಜನ ಸೇರಿಸಿ  ಹೊಡೆಯಲು ಬಾರಿ ನೋಡುತ್ತೀಯಾ  ಎಂದು ಹೇಳಿ ನಿನ್ನನ್ನು ಕೊಲ್ಲದೇ ಬಿಡಬಾರದು ಎಂದು ಹೇಳಿ ಅವರೊಬ್ಬ ಅವನ ಕೈಯಲ್ಲಿದ್ದ ಚೂರಿಯಿಂದ ವಾಕರ್ ಯೂನಿಸನ ಹೊಟ್ಟೆಗೆ ಹಾಕಿದಾಗ ವಾಕರ್ ಯೂನಿಸನು ಇಲ್ಯಾಸ್ ಬಿಡು ಎಂದು ಹೇಳಿ ಕೈಯಲ್ಲಿ ತಡೆಯುತ್ತಿದ್ದಾಗ ನಿನ್ನದೇ ಕೊಲ್ಲದೇ ಬಿಡಬಾರದು ಎಂದು ಹೇಳಿ ಇಲ್ಯಾಸ್ ಆತನ ಕೈಯಲ್ಲಿದ್ದ ಚೂರಿಯಿಂದ ಪುನ: ಪುನ: ವಕಾರ್ ಯೂನಿಸನ ಕೈಗೆ, ಎದೆಗೆ, ತಲೆಗೆ ಚೂರಿಯಿಂದ ತಿವಿದನು. ಆತನೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿ ವಾಕರ್ ಯೂನಿಸ್ಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದಾಗ ವಾಕರ್ ಯೂನಿಸ್ ಸಾಧಿಕ್ ಬಿಡು ಎಂದು ಹೇಳಿದರೂ ಕೇಳದೇ ಮತ್ತೆ ಹೊಡೆದರು. ನಂತರ ನಾನು ಮತ್ತು ಇತರರು ವಕಾರ್ ಯೂನಿಸ್ನನ್ನು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸುವರೇ ಕರೆದುಕೊಂಡು ಹೋದೆವು ಎಂಬುದಾಗಿ ಇಷರ್ಾದ್ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 09/2013 ಕಲಂ 341,323,307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ

ದಕ್ಷಿಣ ಠಾಣೆ 

  • ಈ ಪ್ರಕರಣದ ಫಿರ್ಯಾದುದಾರರಾದ ಅಶೋಕ್ ಕುಮಾರ್ ಶೆಟ್ಟಿ ತಂದೆ: ಸಂಕಪ್ಪ ಶೆಟ್ಟಿ ವಾಸ: ಶೆಟ್ಟಿ ವಿಹಾರ್ ಮಾರಿಗುಡಿ ದೇವಸ್ಥಾನದ ಬಳಿ, ಬೋಳಾರ, ಮಂಗಳೂರು ರವರ ತಮ್ಮನಾದ ಜಯರಾಮ್ ಶೆಟ್ಟಿ ಪ್ರಾಯ  48 ವರ್ಷ,  ಎಂಬವರು  ದಿನಾಂಕ 06-01-2013 ರಂದು ಮದ್ಯಾಹ್ನ  12-00 ಗಂಟೆಗೆ  ಮನೆಯಿಂದ ಹೋದವರು ಈತನಕ ವಾಪಾಸು ಮನೆಗೆ ಹಿಂತಿರುಗಿ ಬಂದಿರುವುದಿಲ್ಲ. ಅವರು ಬಿ.ಪಿ.ಕಾಯಿಲೆಯಿಂದ ಬಳಲುತ್ತಿದ್ದು, ಇವರನ್ನು ಹುಡುಕಿ ಕೊಡಬೇಕಾಗಿ ವಿನಂತಿ ಎಂಬುದಾಗಿ ಅಶೋಕ್ ಕುಮಾರ್ ಶೆಟ್ಟಿ ಯವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅಕ್ರ 10/2013 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಂಚನೆ ಪ್ರಕರಣ

ಮಂಗಳೂರು ಪೂರ್ವ ಠಾಣೆ 

  • ಮಾನ್ಯ ಜೆ.ಎಂಎಫ್ಸಿ 2ನೇ ನ್ಯಾಯಾಲಯದಿಂದ ಬಂದ ಖಾಸಗಿ ಪಿರ್ಯಾದಿ ನಂ 138/2012 ರ  ಸಂಕ್ಷಿಪ್ತ ಸಾರಾಂಶವೇನೆಂದರೆ ಈ ಪ್ರಕರಣದ ಫಿಯರ್ಾದಿದಾರರಾದ ತಸ್ಲೀಂ ಶೇಕ್   ತಂದೆ: ಶೇಕ್ ಅಝಿಝ್ ವಾಸ: ಶಾಂತಿ ನಗರ ನಾಗ್ಪುರ  ಮಹರಾಷ್ಟ್ರ ರವರು ಈ ಹಿಂದೆ 2007 ನೇ ಇಸವಿಯಲ್ಲಿ ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ  ಸಮಯ 1 ನೇ ಆರೋಪಿ ಸೂರಜ್ ಬಿ ಕೋಟ್ಯಾನ್ ಮತ್ತು 2 ನೇ ಆರೋಪಿ ಚಂದ್ರಶೇಖರ ಉಪಾಧ್ಯ ಎಂಬವರು ಫಿಯರ್ಾದಿದಾರರಲ್ಲಿ ಶಾಜರ್ಾದಲ್ಲಿ ಹೊಟೇಲು ಪ್ರಾರಂಭಿಸುವ ಬಗ್ಗೆ ಮಾತನಾಡಿದಂತೆ ಫಿಯರ್ಾದಿದಾರರು ಒಪ್ಪಿ ನಂತರ ದಿ: 01-03-2009 ರಂದು ಶಾಜರ್ಾದಲ್ಲಿ ಒಚಿಟಿರಚಿಟಠಡಿಜ ಅಣಥಿ ಖಜಣಚಿಣಡಿಚಿಟಿಣ ಎಂಬ ರೆಸ್ಟೋರೆಂಟ್ನ್ನು ಪ್ರಾರಂಭಿಸಿದ್ದು, ಈ ರೆಸ್ಟೋರೆಂಟ್ ಪ್ರಾರಂಭಿಸಲು ಫಿಯರ್ಾದಿದಾರರು ಒಟ್ಟು 60,00,000/- ಹಣವನ್ನು ಆರೋಪಿಗಳಿಗೆ ನೀಡಿದ್ದಲ್ಲದೇ ನಂತರ ಫಿಯರ್ಾದಿದಾರರ ತಂದೆ ಆರೋಪಿ (1) ನೇಯವನ ತಮ್ಮನ ಕಾಪರ್ೋರೇಶನ್ ಬ್ಯಾಂಕ್ ಪದವು ಬ್ರಾಂಚ್ನ ಬ್ಯಾಂಕ್ ಖಾತೆಗೆ ರೂ. 3 ಲಕ್ಷ ಹಣವನ್ನು ಹಾಗೂ ಆರೋಪಿ (2) ನೇಯವರ ಕನರ್ಾಟಕ ಬ್ಯಾಂಕ್ ಕೊಡಿಯಾಲ್ಬೈಲ್ ಬ್ರಾಂಚ್ ಖಾತೆಗೆ ಒಟ್ಟು 10 ಲಕ್ಷ ಹಣವನ್ನು ಪಾವತಿ ಮಾಡಿದ್ದು, ನಂತರ 2011 ನೇ ನವಂಬರ್ ತಿಂಗಳಲ್ಲಿ ಆರೋಪಿಗಳು ಫಿಯರ್ಾದಿದಾರರಲ್ಲಿ ಮಾತುಕತೆ ನಡೆಸದೇ ಫಿಯರ್ಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಸದ್ರಿ ರೆಸ್ಟೋರೆಂಟ್ನ್ನು ಮಾರಾಟ ಮಾಡಿ ನಂತರ ಭಾರತಕ್ಕೆ ಬಂದಿರುವುದಲ್ಲದೇ ಫಿಯರ್ಾದಿದಾರರು ಬಂಡವಾಳ ಹೂಡಿದ ಸದ್ರಿ ಹೊಟೇಲ್ನ್ನು ಮಾರಾಟ ಮಾಡಿದ ನಂತರ ಫಿಯರ್ಾದಿದಾರರಿಗೆ ಹಣವನ್ನು ವಾಪಾಸು ನೀಡದೇ ಫಿಯರ್ಾದಿದಾರರಿಗೆ ಮೋಸ ಹಾಗೂ ವಂಚನೆ ಮಾಡಿರುತ್ತಾರೆ ಎಂಬುದಾಗಿ ತಸ್ಲೀಂ ಶೇಕ್ ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣಾ ಅ.ಕ್ರ: 04-2013 ಕಲಂ: 409  420 120(ಃ)ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment