ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ 15-01-2013 ರಂದು ಸಮಯ ಸುಮಾರು 17.30 ಗಂಟೆಗೆ ಪಿರ್ಯಾದುದಾರರು ಸ್ಕೂಟರ್ ನಂಬ್ರ ಏಂ-19 -ಕ-1090 ರಲ್ಲಿ ಸವಾರರಾಗಿ ಹಾಗೂ ಅವರ ಸಂಬಂಧಿಕರಾದ ಸುಪ್ರೀತಾ ಪೂಜಾರಿ ಎಂಬವರನ್ನು ಹಿಂಬದಿ ಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಬಲ್ಮಠ ಜಂಕ್ಷನ್ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಕಡೆಗೆ ಹೋಗುತ್ತಾ ಅಂಬೇಡ್ಕರ್ ವೃತ್ತದ ಬಳಿ ತಲುಪಿ ಪೊಲೀಸರ ಸೂಚನೆಯಂತೆ ವಾಹನವನ್ನು ಚಲಾಯಿಸಿಕೊಂಡು ಜ್ಯೋತಿ ಟಾಕೀಸಿನ ಎಡಭಾಗದ ಗೇಟಿನ ಬಳಿ ತಲುಪಿದಾಗ ಬಾವುಟಗುಡ್ಡೆ ಕಡೆಯಿಂದ ಬಸ್ ನಂಬ್ರ ಏಂ-19-ಂಃ-5454 ನ್ನು ಅದರ ಚಾಲಕ ಪೊಲೀಸ್ ಸೂಚನೆಯನ್ನು ಉಲ್ಲಂಘಿಸಿ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿ ಪಿರ್ಯಾದುದಾರರ ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಸುಪ್ರೀತಾ ಪೂಜಾರಿರವರು ಸೂಟರ್ ಸಮೇತ ರಸ್ತೆಗೆ ಬಿದ್ದುದರಿಂದ ಸುಪ್ರೀತಾ ಪೂಜಾರಿಯವರಿಗೆ ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಫಘಾತದಲ್ಲಿ ಫಿರ್ಯಾದುದಾರರರಿಗೆ ಯಾವುದೇ ಗಾಯವಾಗಿರುವುದಿಲ್ಲ ಹಾಗೂ ಅರೋಪಿ ಅಪಘಾತವನ್ನುಂಟು ಮಾಡಿದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಸುಮಂತ ಮಲ್ಯ (36)ತಂದೆ- ದಿ.ದಿನೇಶ್ ಮಲ್ಯ , ವಾಸ: 5/6/536, ಡೊಂಗರಕೇರಿ, ಕೊಡಿಯಲ್ಬೈಲ್ ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 14/2013 279 , 338, ಐ.ಪಿ.ಸಿ.ಕಾಯ್ದೆ 134 (ಬಿ) ,219 ಮೋ.ವಾಹನ ಕಾಯ್ದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಕಳವು ಪ್ರಕರಣ
ದಕ್ಷಿಣ ಠಾಣೆ
- ದಿನಾಂಕ 14-01-2013 ರಂದು ಸಂಜೆ 5-00 ಗಂಟೆಗೆ ತನ್ನ ಬಾಬ್ತು ಬಜಾಜ್ ಸಿ.ಟಿ 100 ಮೋಟಾರು ಸೈಕಲ್ನ್ನು ಮಂಗಳೂರು ಫಳ್ನೀರ್ನಲ್ಲಿರುವ ಲುದ್ರಿಕ್ ಎಂಟರ್ಪ್ರೈಸಸ್ ಕಛೇರಿ ಮುಂಭಾಗ ಪಾಕರ್್ ಮಾಡಿ ಕಛೇರಿ ಹೋಗಿ ವಾಪಾಸು 17-15 ಗಂಟೆಗೆ ಮೋಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದಾಗ, ಫಿಯರ್ಾದುದಾರರು ಪಾಕರ್್ ಮಾಡಿದ್ದ ಮೋಟಾರು ಸೈಕಲ್ ಅಲ್ಲಿರದೇ ಇದ್ದು, ಸದ್ರಿ ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ ಕಳವಾದ ಮೋಟಾರು ಸೈಕಲ್ನ ಅಂದಾಜು ಬೆಲೆ ರೂ 12,000/- ಆಗಬಹುದು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದುದಾರರಾದ ಏಂಜಲ್ ಡೊಮ್ನೊಕ್ ಡಿಸೋಜಾ (38), ತಂದೆ: ಮ್ಯಾಕ್ಸಿಂ ಡಿಸೋಜಾ, ವಾಸ: ಮ್ಯಾಕ್ಸಿಲಿ, ಸೋನಲಿಕೆ, ಬಜಾಲ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ ದಕ್ಷಿಣ ಠಾಣೆ ಮೊ.ನಂ.16/13 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸುಲಿಗೆ ಪ್ರಕರಣ
ದಕ್ಷಿಣ ಠಾಣೆ
- ದಿನಾಂಕ 15-01-2013 ರಂದು ಫಿರ್ಯಾದುದಾರರು ನಗರದ ಅತ್ತಾವರದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿ.ಸಿ.ಐ ತರಬೇತಿ ಪಡೆದು, ವಾಪಾಸು ಅತ್ತಾವರ, ಬಿ.ವಿ ರಸ್ತೆಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ, ಸಮಯ ಸುಮಾರು ಸಂಜೆ 4-45 ಗಂಟೆಗೆ ಬಿ.ವಿ ರಸ್ತೆ ಕಡೆಯಿಂದ ಸುಮಾರು 25 ರಿಂದ 30 ವರ್ಷ ಪ್ರಾಯದ ಯುವಕನು ಫಿಯರ್ಾದುದಾರರ ಎದುರುಗಡೆಯಿಂದ ನಡೆದುಕೊಂಡು ಬಂದು, ಒಮ್ಮೆಲೆ ಫಿಯರ್ಾದುದಾರರ ಕುತ್ತಿಗೆಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಸುಮಾರು ರೂ 1,00,000-00 ಬೆಲೆ ಬಾಳುವ, ಸುಮಾರು 5 ಪವನ್ ತೂಕದ ಚಿನ್ನದ ಹವಳದ ಸರವನ್ನು ಕಿತ್ತುಕೊಂಡು ಅಲ್ಲಿಯೇ ಸ್ವಲ್ಪ ದೂರದಲ್ಲಿ ಕೋಟಿ ಚೆನ್ನಯ ವೃತ್ತದ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ನಿಂತಿದ್ದ ಕಪ್ಪು ಬಣ್ಣ ಮೋಟಾರು ಸೈಕಲ್ನಲ್ಲಿ ಸವಾರನೊಂದಿಗೆ ಪರಾರಿಯಾಗಿರುವುದು ಎಂಬುದಾಗಿ ಲಿಲ್ಲಿ ಪಿರೇರಾ (58), ಗಂಡ: ಲೂಯಿಸ್ ಪಿರೇರಾ, ವಾಸ: ಜುವಾನ ಲೋಬೋ ಕಂಪೌಂಡ್, ಬಿವಿ ರೋಡ್, ಅತ್ತಾವರ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 17/13 ಕಲಂ 392 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ಉಳ್ಳಾಲ ಠಾಣೆ
- ದಿನಾಂಕ 15-01-2013 ರಂದು ಕೆಲಸದ ನಿಮಿತ್ತ ಅವರ ಮನೆಯಿಂದ ಮಂಗಳೂರಿಗೆ ಹೋಗುವರೇ ನೇತ್ರಾವತಿ ನದಿಯ ಬ್ರಿಡ್ಜ್ ಬಳಿಯ ಕಾಲು ದಾಯಲ್ಲಿ ನಡೆದುಕೊಂಡು ಬರುವಾಗ ಬಲಬದಿಯ ನೀರು ನಿಂತ ಜಾದಲ್ಲಿ ಪೊದರುಗಳ ನಡುವೆ ಸಮಯ ಸುಮಾರು 12-30 ಗಂಟೆಗೆ ಸುಮಾರು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಕಂಡು ಬಂದಿದ್ದು, ಮೃತ ದೇಹವು ಕೊಳೆತು ವಾಸನೆ ಬರುತ್ತಿದ್ದು, ಮೃತ ದೇಹದ ಮೇಲೆ ಪ್ಯಾಂಟ್ ಶಟರ್್ ಇರುತ್ತದೆ ಎಂಬುದಾಗಿ ಆಶೋಕ ಡಿ ಸೋಜಾ ಪ್ರಾಯ 37 ತಂದೆ: ಅಲ್ಬಟರ್್ ಡಿಸೋಜಾ ವಾಸ: ಹೊಯಿಗೆ, ಪೆರ್ಮನ್ನೂರು ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಯು.ಡಿ. ಅರ್ ನಂಬ್ರ 02/2013 ಕಲಂ 174 ಸಿಆರ್ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ಬಕರ್ೆ ಠಾಣೆ
- ದಿನಾಂಕ 14/15-01-2013 ರಂದು 19-00 ಗಂಟೆಯಿಂದ 06-30 ಗಂಟೆ ಮಧ್ಯೆ ದುರ್ಗಮಹಲ್ ರಸ್ತೆ ಬಳಿ ಇರುವ ಪಿರ್ಯಾದುದಾರರ 'ದೀಪಕ್ ಮೆಟಲ್ ವಕ್ಸರ್್ ಶಾಪ್ನ ಹಂಚು ಛಾವಣಿಯ ಕಟ್ಟಡದ ಹಿಂಬದಿಯ ಮಾಡಿನ ಹಂಚನ್ನು ಯಾರೋ ಕಳ್ಳರು ತೆಗೆದು, ಒಳಬಂದು, 4 ಮಶೀನ್ ಮತ್ತು ಕಬ್ಬಿಣದ ರ್ಯಾಕ್ಗೆ ವೆಲ್ಡ್ ಮಾಡಿ ಅಳವಡಿಸಿದ್ದ ಸ್ಟೇನ್ಲೆಸ್ ಸ್ಟೀಲ್ನ ಡಬ್ಬಿಯನ್ನು ವೆಲ್ಡಿಂಗ್ನಿಂದ ಕೊರೆದು ಅದರಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮಶೀನ್ಗಳ ಒಟ್ಟು ಮೌಲ್ಯ ಸುಮಾರು 17,500/- ರೂ. ಆಗಬಹುದು ಎಂಬುದಾಗಿ ಸಂದೇಶ್, (40) ತಂದೆ: ದಿ. ಎಂ. ಕೃಷ್ಣನ್, ವಾಸ: ಶ್ರೇಯಸ್ಸ್, 7ನೇ ಅಡ್ಡರಸ್ತೆ, ಆಲಗುಡ್ಡೆ, ಕೋಡಿಕಲ್, ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ, ಅಪರಾದ ಕ್ರಮಾಂಕ 04/2013 ಕಲಂ. 457, 380 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment