Thursday, January 31, 2013

Daily Crime Incidents for Jan 31, 2013


ಅಸ್ವಾಭಾವಿಕ ಮರಣ ಪ್ರಕರಣ


  • ಫಿಯರ್ಾದಿದಾರರಾದ ರಮೇಶ್ ಹೆಚ್.ಸಿ.883 ರವರು ದಿನಾಂಕ 29-01-2013 ರಂದು ಮಂಗಳೂರು ನಗರದ ಫೆಲಿಕ್ಸ್ ಪೈ ಬಜಾರಿನ ಶ್ರೇಯಸ್ ಸ್ವೀಟ್ಸ್ ಅಂಗಡಿ ಎದುರಿನ ಜಗುಲಿಯಲ್ಲಿ ಪ್ರಜ್ಙಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಮಹಿಳೆಯನ್ನು 108 ಅಂಬುಲೆನ್ಸ್ ವಾಹನ ತರಿಸಿ ಚಿಕಿತ್ಸೆ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲು ಪಡಿಸಿದ್ದು ಆ ಸಮಯ ಆಕೆಯು ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವುದಾಗಿ ಕೋರಿಕೆ ಪತ್ರದಲ್ಲಿ ವೈದ್ಯರು ನಮೂದಿಸಿರುವುದಾಗಿದೆ. ಸದ್ರಿ ಮಹಿಳೆಯು ದಿನಾಂಕ 29-01-2013 ರಂದು ರಾತ್ರಿ  11:20 ಗಂಟೆಗೆ ಚಿಕಿತ್ಸೆಯಲ್ಲಿರುವಾಗ ಮೃತ ಪಟ್ಟಿದ್ದು ದಿನಾಂಕ 30-01-2013 ರಂದು ಬೆಳ್ಳಿಗ್ಗೆ ಸುಮಾರು 10.40 ಗಂಟೆಗೆ ವೆನ್ಲಾಕ್ ಆಸ್ಪತ್ರೆಯಿಂದ ಮಾಹಿತಿ ಪತ್ರ ಬಂದಿರುತ್ತದೆ. ಆಕೆಯು ಯಾವುದೊ ಕಾಯಿಲೆಯಿಂದ ಮೃತಪಟ್ಟಿರುವಂತೆ ಕಂಡು ಬಂದಿದ್ದು,  ಆಕೆಯು  ಸುಮಾರು 40 ರಿಂದ 45 ಪ್ರಾಯ ದವಳಾಗಿದ್ದು, ಉರುಟು ಮುಖ, ಎಡಬದಿಯ ಮೂಗಿನಲ್ಲಿ ಕಪ್ಪು ಮಚ್ಚೆ,  ಕುತ್ತಿಗೆಯಲ್ಲಿ ಕಪ್ಪು ಮಚ್ಚೆ ಇರುತ್ತದೆ. ಸುಮಾರು 5 ಅಡಿ ಉದ್ದ ಎಣ್ಣೆ ಕಪ್ಪು ಮೈ ಬಣ್ಣ ,  ಬಾಬ್ ಕಟ್ಟು ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ಲೈಟ್ ಹಸಿರು ಕಲರಿನ ರವಿಕೆ ಹಾಗೂ ಕಾಫಿ ಕಲರ್ ಹಾಗೂ ಹಳದಿ ಗೆರೆ ಇರುವ ಸೀರೆ ಧರಿಸಿರುತ್ತಾಳೆ. ಮೃತ ಮಹಿಳೆಯ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಆದ್ದರಿಂದ ಮೃತರ ವಾರಸುದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿಯಾಗಿರುತ್ತದೆ ಮತ್ತು ಉತ್ತರ ಠಾಣೆ ಯುಡಿಆರ್ ನಂಬ್ರ  08/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ

ಬರ್ಕೆ ಪೊಲೀಸ್ ಠಾಣೆ


  • ಪಿರ್ಯಾದಿದಾರರಾದ ಗಂಗಾಧರ ಜಿ.ಹೆಚ್. ಪ್ರಾಯ 32 ವರ್ಷ, ತಂದೆ: ರಾಮಣ್ಣ, ವಾಸ: ಅಕ್ಕಟೆ ಮನೆ, ಕೆಲ್ಲೆರಿ ಅಂಚೆ, ಕಲಾಯ ಗ್ರಾಮ, ಬೆಳ್ತಂಗಡಿ ತಾಲ್ಲೂಕು ರವರು ಮಂಗಳೂರು ಎಂ.ಜಿ. ರಸ್ತೆಯ ಎಸ್ಡಿಎಂ ಕಾಲೇಜಿನ ವಿದ್ಯಾಥರ್ಿಯಾಗಿದ್ದು, ಪಿರ್ಯಾದಿದಾರರು ಕಾಲೇಜ್ ಡೇ ಕಾರ್ಯಕ್ರಮದ ನಿಮಿತ್ತ ದಿನಾಂಕ 28-01-2013 ರಂದು 19:30 ಗಂಟೆಗೆ ಪಾಕರ್ಿಂಗ್ ಸ್ಥಳದಲ್ಲಿ ತನ್ನ ಬಾಬ್ತು ಮೋ.ಸೈಕಲ್ ತನ್ನ ಬಾಬ್ತು ಬ್ಯಾಗ್ನ್ನು ಇಟ್ಟು ಕಾರ್ಯಕ್ರಮಕ್ಕೆ ಹೋದವರು ವಾಪಾಸ್ಸು ಬಂದು ನೋಡಿದಾಗ ಮೋ.ಸೈಕಲ್ ಮೇಲಿಟ್ಟಿದ್ದ ಬ್ಯಾಗ್ ಕಾಣೆಯಾಗಿದ್ದು, ಎಲ್ಲಾ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಈ ಬಗ್ಗೆ ಪ್ರಾಂಶುಪಾಲರಲ್ಲಿ ತಿಳಿಸಿದಾಗ ವಿದ್ಯಾಥರ್ಿಗಳು ತೆಗೆದಿದ್ದಲ್ಲಿ ತಂದು ಕೊಡುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿ ನೀಡುವುದು ತಡವಾಗಿದ್ದು, ಸದ್ರಿ ಬ್ಯಾಗ್ನಲ್ಲಿ ಸುಮಾರು 6,600 ರೂ ಬೆಲೆಬಾಳುವ 2 ವರೆ ಗ್ರಾಮದ ಬಂಗಾರದ ಉಂಗುರ, ಪಿರ್ಯಾದಿದಾರರ ಡ್ರೈವಿಂಗ್ ಲೈಸೆನ್ಸ್, ರೂ. 600/- ನಗದು ಇದ್ದು, ಇದನ್ನು ಯಾರೋ ಕಳ್ಳರು ಕಳುವು ಮಾಡಿದ್ದಾಗಿ, ಸದ್ರಿ ಸೊತ್ತುಗಳನ್ನು ಪತ್ತೆ ಮಾಡಿಕೊಡುವಂತೆ ಗಂಗಾಧರ ಜಿ.ಹೆಚ್. ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣಾ ಮೊ. ನಂ. 06/2013 ಕಲಂ 379 ಭಾದಂಸಂ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ನಿರ್ಲಕ್ಯತನದಿಂದ ಸಾವು

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ಮಹೇಶ್ ರವರು ಮಂಗಳೂರಿನ ನ್ಯೂ ಇಂಡಿಯಾ ಕನ್ಸ್ಟ್ರಕ್ಷನ್ನಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಇವರು ದಿನಾಂಕ 30-01-2013 ರಂದು ನಗರದ ಮಾರ್ನಮಿಕಟ್ಟೆಯಲ್ಲಿ ಹೊಸದಾಗಿ ನಿಮರ್ಾಣವಾಗುತ್ತಿರುವ ಡೈಮಾಂಡ್ ಸಿಟಿ ಕಟ್ಟಡದ 4 ನೇ ಮಹಡಿಯಲ್ಲಿ ರಾಜೇಶ್ ಪ್ರಾಯ 19 ವರ್ಷ ಎಂಬವರೊಂದಿಗೆ ಪೈಟಿಂಗ್ ಕೆಲಸ ಮಾಡುತ್ತಿರುವಾಗ, ರಾಜೇಶ್ನು ಆಕಸ್ಮಿಕವಾಗಿ ಕೈ ಜಾರಿ ಕಟ್ಟಡದ 4 ನೇ ಮಹಡಿಯಿಂದ ಕೆಳಗೆ ಬಿದ್ದು, ತೀವ್ರ ಗಾಯಗೊಂಡವನನ್ನು ಪೈಟಿಂಗ್ ಕಂಟ್ರಾಕ್ಟರ್ ಪ್ರಶಾಂತ ಮತ್ತು ಇತರರ ಸೇರಿ ಮಂಗಳೂರು ಫಾದರ್ ಮುಲ್ಲರ್ ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಅವರು ಚಿಕಿತ್ಸೆಯಲ್ಲಿರುವಾಗ ಮೃತಪಟ್ಟಿರುತ್ತಾರೆ. ರಾಜೇಶ್ನು ಪೈಟಿಂಗ್ ಕೆಲಸ ಮಾಡುತ್ತಿರುವಾಗ ಯಾವುದೇ ರೀತಿಯ ಸೆಫ್ಟಿ ಬೆಲ್ಟ್ ಧರಿಸಿರಲಿಲ್ಲ. ರಾಜೇಶ್ನು ಕಟ್ಟಡದಿಂದ ಬಿದ್ದು ಮರಣ ಹೊಂದಲು ಕಟ್ಟಡದ ಕಂಟ್ರಾಕ್ಟರ್ ಅಜೀಜ್ ಮತ್ತು ಪೈಟಿಂಗ್ ಕಂಟ್ರಾಕ್ಟರ್ ಆದ ಪ್ರಶಾಂತರವರು  ಕಾರಣರಾಗಿದ್ದು, ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹೇಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ.27/2013 ಕಲಂ 304(ಎ) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಉಳ್ಳಾಲ ಪೊಲೀಸ್ ಠಾಣೆ


  • ಪ್ರದೀಪ್ ಹೆಗ್ಡೆ ಎಂಬವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿಯರ್ಾದಿಯ ಸಾರಾಂಶವೇನೆಂದರೆ, ಈ ದಿನ ತಾರೀಕು 30-01-2013 ರಂದು 18-45 ಗಂಟೆಗೆ, ಮಂಗಳೂರು ತಾಲೂಕು, ಕೋಟೆಕಾರು ಬೀರಿ, ಅರಣ್ಯ ಚಕ್ಪೋಸ್ಟ್ ಬಳಿ ರಾ.ಹೆ. 66 ರಲ್ಲಿ ಕೆಎ 20 ಬಿ 4892 ನೇ ಕಾರನ್ನು ಅದರ ಚಾಲಕ ಅಲಿಕುಂಞಿ ಎಂಬವರು ಮಂಗಳೂರು ಕಡೆಯಿಂದ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದವರು ಪಿಯರ್ಾದಿಯ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರನ್ನು ರಸ್ತೆಯ ತೀರಾ ಬಲಬದಿಗೆ ಚಾಲಾಯಿಸಿ ಅವರ ಎದುರುಗಡೆಯಿಂದ ವಿಠಲ ರೈ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ 19 ಎಲ್ 9205 ನೇ ಕೈನೆಟಿಕ್ ಸ್ಟೈಲ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಈ ಅಪಘಾತದಿಂದ ರಸ್ತೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡ ವಿಠಲ ರೈಯವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಿಠಲ ರೈಯವರು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಎಂಬುದಾಗಿ ಪ್ರದೀಪ್ ಹೆಗ್ಡೆ ಪ್ರಾಯ 36 ವರ್ಷ ತಂದೆ: ಎ.ಜಿ. ಹೆಗ್ಡೆ ವಾಸ: 11-71, ಅರ್ಯದುಗರ್ಾ ಸೋಮನಾಥ ದೇವಸ್ಥಾನದ ಬಳಿ, ಕೋಟೆಕಾರು ಅಂಚೆ, ಮಂಗಳೂರು ರವರು ನೀಡಿದ ದುರಿನಂತೆ ಉಳ್ಳಾಲ ಠಾಣಾ ಅ.ಕ್ರ. 29/2013 ಕಲಂ: 279, 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment