ಕಳ್ಳತನ ಪ್ರಕರಣ:
ಮಂಗಳೂರು ಪೂರ್ವ ಠಾಣೆ
- ದಿನಾಂಕ 05-01-2013 ರಂದು 18-30 ಗಂಟೆಯಿಂದ ದಿನಾಂಕ 07-01-2013 ರಂದು 09-30 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಬಲ್ಮಠದಲ್ಲಿ ನೇತ್ರಾವತಿ ಬಿಲ್ಡಿಂಗ್ನ ಒಂದನೇ ಮಹಡಿಯಲ್ಲಿರುವ ಖಿಚಿಟಟಥಿ ಅಠಟಠಿಣಣಜಡಿ' ಶಾಫ್ನ ಬಾಗಿಲಿನ ಬೀಗವನ್ನು ಬಲತ್ಕಾರವಾಗಿ ಮೀಟಿ ತೆರೆದು ಒಳ ಪ್ರವೇಶಿಸಿ ಂಅಇಖ ಕಂಪನಿಯ ಲ್ಯಾಪ್ಟಾಪ್-2, ಅಔಒಕಂಕಿ ಕಂಪನಿಯ ಲ್ಯಾಪ್ಟಾಪ್-1, ಖಿಠಛಚಿ ಕಂಪನಿಯ ಲ್ಯಾಪ್ಟಾಪ್-1, ಊಕ ಕಂಪನಿ ಲ್ಯಾಪ್ಟಾಪ್-1, ಐಣಟಟಿಠಣ ಕಂಪನಿಯ ಗಕಖ-1, ಖಔಓಙ ಆರಣಚಿಟ ಅಚಿಟಚಿಡಿಚಿ-1, ಹೀಗೆ ಒಟ್ಟು 100000/-ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಎಂಬುದಾಗಿ ಜಗದೀಶ ಶೆಟ್ಟಿ (42 ) ತಂದೆ: ವಿಶ್ವನಾಥ ಶೆಟ್ಟಿ ವಾಸ: ಸ್ವರ್ಣ ದೀಪಾ ಎಪಾಟರ್್ಮೆಂಟ್ ಬಿಜೈ ಮೈನ್ ರೋಡ್ ಬಿಜೈ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 03-2013 ಕಲಂ: 454,457,380 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ 06-01-2013 ರಂದು ಅವರ ಮನೆಯ ಬಳಿ ನಿಂತುಕೊಂಡಿರುವಾಗ ಅಪರಾಹ್ನ 15-20 ಗಂಟೆಗೆ ಪಿರ್ಯಾದಿದಾರರ ಪರಿಚಯದ ಪ್ರಾಣೇಶ್ ಎಂಬವರು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ವಿ-8466 ನೇಯದ್ದನ್ನು 5 ನೇ ಬ್ಲಾಕ್ ಕಡೆಯಿಂದ 9ನೇ ಬ್ಲಾಕ್ ಮದ್ಯ ಕಡೆಗೆ ಸವಾರಿ ಮಾಡಿಕೊಂಡು 5 ನೇ ಬ್ಲಾಕ್ ಶಾಲೆಯ ಬಳಿ ಹೋಗುತ್ತಿರುವಾಗ 9 ನೇ ಬ್ಲಾಕ್ ಕಡೆಯಿಂದ 5 ನೇ ಬ್ಲಾಕ್ ಕಡೆಗೆ ಕೆಎ-19-ಇಇ-8326 ನೇ ಮೋಟಾರ್ ಸೈಕಲನ್ನು ಅದರ ಸವಾರ ಅತೀವೇಗ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪ್ರಾಣೇಶ್ರವರ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಪಡಿಸಿದ ಪರಿಣಾಮ 2 ಮೋಟಾರ್ ಸೈಕಲ್ಗಳು ರಸ್ತೆಗೆ ಬಿದ್ದು ಪರಿಣಾಮ ಪ್ರಾಣೇಶ್ರವರಿಗೆ ತಲೆಯ ಬಲ ಬದಿ ರಕ್ತಗಾಯ ಹಾಗೂ ದೇಹದ ಇತರ ಬಾಗಗಳಿಗೆ ಗಾಯವಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದೊಯ್ದಿದ್ದು , 2 ಮೋಟಾರ್ ಸೈಕಲ್ಗಳು ಈ ಅಪಘಾತದಿಂದ ಎಂಬುದಾಗಿ ದೇವಿಪ್ರಸಾದ್ ಪ್ರಾಯ ಃ 31 ವರ್ಷ ತಂದೆಃ ಕೆ. ಲೊಕೇಶ್ ಸಾಲ್ಯಾನ್ ವಾಸಃ ಸೈಟ್ ನಂಬ್ರ 185 ಡೋರ್ ನಂಬ್ರ 5-125 ಶ್ರೀ ಗಣೇಶ್ ಪ್ರಸಾದ್ 5 ನೇ ವಿಬಾಗ ಕಾಟಿಪಳ್ಳ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 06/2013 ಕಲಂ: 279, 337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವಠಾಣೆ;
- ದಿನಾಂಕ: 06-01-2013 ರಂದು ಸಮಯ ಸುಮಾರು ರಾತ್ರಿ 08.30 ಗಂಟೆಗೆ ಮೊ,ಸೈಕಲ್ ನಂಬ್ರ ಏಂ-31 ಏ-8510 ರಲ್ಲಿ ಪಿರ್ಯಾದುದಾರರು ಹಿಂಬದಿ ಸವಾರಳಾಗಿ, ಪಿರ್ಯಾದುದಾರರ ಗಂಡ ಸತ್ಯನಾರಾಯಣ ಭಟ್ ಎಂಬವರು ಸವಾರರಾಗಿದ್ದುಕೊಂಡು ಕದ್ರಿ ಪಾಕರ್್ ಗೇಟ್ ಕಡೆಯಿಂದ ಸಕ್ಯರ್ೂಟ್ ಹೌಸ್ ಜಂಕ್ಷನ್ ಕಡೆಗೆ ಕದ್ರಿ ಪಾಕರ್್ ರಸ್ತೆಯಲ್ಲಿ ಬರುತ್ತಿರುವಾಗ ಪಿರ್ಯಾದುದಾರರ ಮೊ,ಸೈಕಲ್ನ ಹಿಂದಿನಿಂದ ಅಂದರೆ ಪದವು ಜಂಕ್ಷನ್ ಕಡೆಯಿಂದ ಸಕ್ಯರ್ೂಟ್ ಹೌಸ್ ಜಂಕ್ಷನ್ ಕಡೆಗೆ ನೀರಿನ ಟ್ಯಾಂಕರ್ ನಂಬ್ರ ಏಂ-19 ಃ-2110 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋ, ಸೈಕಲ್ಲಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಸವಾರರು ಮೊ,ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಪಿರ್ಯಾದುದಾರರ ಎಡಕಣ್ಣಿನ ಬಳಿ ಮತ್ತು ಮುಖಕ್ಕೆ ತರಚಿದ ಗಾಯವಾಗಿ, ಎದೆಯ ಬಲಭಾಗಕ್ಕೆ ತೀವೃ ಸ್ವರೂಪದ ಗುದ್ದಿದ ಗಾಯವಾಗಿದ್ದು, ಸವಾರ ಸತ್ಯನಾರಾಯಣಭಟ್ರವರ ಮುಖಕ್ಕೆ ಮತ್ತು ತಲೆಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ಶ್ರೀಮತಿ ಕಮಲಾಕ್ಷಿ (40) ತಂದೆ- ಸತ್ಯನಾರಾಯಣ ಭಟ್, ಮಂಜುನಾಥ ಕೃಪಾ, ಬಿಶಪ್ ಕಾಂಪೌಂಡ್, ಯೆಯ್ಯಡಿ, ಮಂಗಳೂರು. ರವರು ನೀಡಿದ ದೂರಿನಂತೆ ಸಂಚಾರ ಪೊರ್ವ ಠಾಣೆ ಅಪರಾದ ಕ್ರಮಾಂಕ 05/2013 279 , 338, ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ: 06-01-2013 ರಂದು ಸಮಯ ಸುಮಾರು ಮಧ್ಯಾಹ್ನದ ವೇಳೆಗೆ 13.15 ಗಂಟೆಗೆ ಪಿರ್ಯಾದುದಾರರು ಕುಲಶೇಖರ ಚಚರ್ಿನ ಬಳಿ ರಸ್ತೆ ದಾಟಲು ನಿಂತಿರುವಾಗ ಕುಲಶೇಖರ ಡೈರಿ ಕಡೆಯಿಂದ ಕಲ್ಪನೆ ಕಡೆಗೆ ನೊಂದಣಿ ಸಂಖ್ಯೆ ಆಗಿರದ ಹೊಸ ನೀಲಿ ಬಣ್ಣದ ಪಲ್ಸರ್ ಮೋಟಾರ್ ಸೈಕಲ್ಲನ್ನು ಅದರ ಸವಾರ ಗ್ಲೇಡ್ಸನ್ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಬಲಬದಿಯ ಪಕ್ಕೆಲುಬಿಗೆ ಗುದ್ದಿದ ಗಾಯ, ಎಡಕೈಯ ಕಿರುಬೆರಳಿಗೆ ರಕ್ತಗಾಯ, ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗೊಂಡಿದ್ದು ಫಾ.ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಮೋಟಾರು ಸೈಕಲ್ ಸವಾರ ಹೊರರೋಗಿಯಾಗಿ ಚಿಕಿತ್ಸೆಪಡೆದುಕೊಂಡಿರುತ್ತಾರೆ ಎಂಬುದಾಗಿ ವಲೇರಿಯನ್ ರೇಗೋ (59) ತಂದೆ- ದಿ|| ಸೆಲ್ವದೋರ್ ರೇಗೊ, ದಿದ್ದಿಲು, ಕುಲಶೇಖರ ಅಂಚೆ, ಮಂಗಳೂರು. ರವರು ನೀಡಿದ ದೂರಿನಂತೆ ಸಂಚಾರ ಪೊರ್ವ ಠಾಣೆ ಅಪರಾದ ಕ್ರಮಾಂಕ 06/2013 279 , 338, ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಹರಣ ಪ್ರಕರಣ:
ಕಾವೂರು ಠಾಣೆ;
- ದಿನಾಂಕ 02-01-2013 ರಂದು ಫಿರ್ಯಾದಿದಾರರಾದ ಶ್ರೀಮತಿ ವೆಂಕಮ್ಮ ಎಂಬವರ ಮಗಳು 18 ವರ್ಷ ಪ್ರಾಯದ ಕು. ಕೀತರ್ಿ ಎಂಬವರನ್ನು ಪಿರ್ಯಾದಿದಾರರ ಮನೆಗೆ ಬಂದು ಆರೋಪಿ ಅನೀಶ್ ಎಂಬಾತನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಎಂಬುದಾಗಿ ಶ್ರೀಮತಿ ವೆಂಕಮ್ಮ ಗಂಡ: ಶ್ರೀನಿವಾಸ. ಮನೆ ನಂಬ್ರ: 3-170/1, ಅನುಪಮ ಗ್ಯಾಸ್ ಗೋಡನ್ನ ಬಳಿ. ಕಾವೂರು, ಕುಂಜತ್ತ್ಬೈಲು, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 04/2013 ಕಲಂ: 363 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment