Sunday, January 6, 2013

Daily Crime Incidents for Jan 06, 2013


ಹಲ್ಲೆ ಪ್ರಕರಣ

ಪೂರ್ವ ಪೊಲೀಸ್ ಠಾಣೆ:

  • ಫಿಯರ್ಾದಿದಾರರಾದ ಶ್ರೀ.ವಿಲ್ಫ್ರೆಡ್ ಡಿ'ಸೋಜ (53) ತಂದೆ: ದಿ.ಮೈಕಲ್ ಡಿ'ಸೋಜ ವಾಸ: ಲೋವರ್ ಬೆಂದೂರು, 2ನೇ ಅಡ್ಡ ರಸ್ತೆ, ಮಂಗಳೂರು ರವರು ದುಬೈಯಲ್ಲಿ ಉದ್ಯೋಗದಲ್ಲಿದ್ದು, ಕ್ರಿಸ್ಮಸ್ ರಜೆಯಲ್ಲಿ ಮನೆಗೆ ಬಂದಿದ್ದು,  ಫಿಯರ್ಾದಿದಾರರು ತನ್ನ ಹೆಂಡತಿ, ಮಕ್ಕಳೊಂದಿಗೆ ಫಿಯರ್ಾದಿದಾರರ ಹೆಂಡತಿಯಲ್ಲಿದ್ದು, ದಿನಾಂಕ: 05-01-2013 ರಂದು ಮದ್ಯಾಹ್ನ ಸುಮಾರು 1-00 ಗಂಟೆಗೆ ಫಿಯರ್ಾದಿದಾರರು ಮಂಗಳೂರು ನಗರದ ಲೋವರ್ ಬೆಂದೂರ್ನ 2 ನೇ ಅಡ್ಡ ರಸ್ತೆಯಲ್ಲಿರುವ ಸದ್ರಿ ಮನೆಯಲ್ಲಿದ್ದ ಸಮಯ ಆರೋಪಿ ರಿಚಡರ್್ ಮಸ್ಕರೇನಸ್ನು ಫಿಯರ್ಾದಿದಾರರ ಮನೆಯ ಕಂಪೌಂಡ್ಗೆ ಅಕ್ರಮ ಪ್ರವೇಶ ಮಾಡಿ ಫಿಯರ್ಾದಿದಾರರಿಗೆ ಏಕಾಎಕಿ ಕೈಯಿಂದ ಹಾಗೂ ಹಾಕಿಸ್ಟಿಕ್ನಿಂದ ಹಲ್ಲೆ ನಡೆಸಿರುವುದಲ್ಲದೇ ತಡೆಯಲು ಬಂದ ಫಿಯರ್ಾದಿದಾರರ ಹೆಂಡತಿಯ ತಾಯಿ ಅಪೋಲಿನ್ ಮಸ್ಕರೇನಸ್ರವನ್ನು ಉದ್ದೇಶಿಸಿ ಬೇವಾಸರ್ಿ ರಂಡೆ ಎಂದು ಬೈದು ಅವರ ತಲೆ ಕೂದಲಿನ ಜುಟ್ಟು ಹಿಡಿದು ಬಗ್ಗಿಸಿರುವುದಲ್ಲದೇ ಫಿಯರ್ಾದಿದಾರರ ಹೆಂಡತಿಯ ತಂಗಿ ವ್ಯಾಲೆಟ್ ಮಸ್ಕರೇನಸ್ ರವರನ್ನು ಉದ್ದೇಶಿಸಿ ನಿನ್ನನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆಯೊಡ್ಡಿರುತ್ತಾರೆ ಎಂಬುದಾಗಿ ಶ್ರೀ.ವಿಲ್ಫ್ರೆಡ್ ಡಿ'ಸೋಜ ರವರು ನೀಡಿದ ದೂರಿನಂತೆ ಪೂರ್ವ ಪೊಲೀಸ್ ಠಾಣಾ ಅ,ಕ್ರ 02/2013 ಕಲಂ: 323 324  447 504  506 ಭಾ.ಧಂ.ಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಉಳ್ಳಾಲ ಪೊಲೀಸ್ ಠಾಣೆ

  • ಫಿರ್ಯಾದಿದಾರರಾದ ಶ್ರೀಮತಿ ಪ್ರಮೀಳ (36) ಗಂಡ-ರಾಘವ ,ವಾಸ- ಸೋಮೇಶ್ವರ ದ್ವಾರಾದ ಬಳಿ, ಸೋಮೇಶ್ವರ ಗ್ರಾಮ ರವರ ಪತಿ ರಾಘವ ರವರು ಮನೆಕಟ್ಟಲು ಸಾಲ ಮಾಡಿಕೊಂಡಿದ್ದು ಅಲ್ಲದೆ ಡಯಾಬಿಟಿಸ್ ಖಾಯಿಲೆಯಿಂದ ಬಳಲುತ್ತಿದ್ದು ಇದರಿಂದ ಮಾನಸಿಕವಾಗಿ ನೊಂದುಕೊಂಡು, ಜೀವನದಲ್ಲಿ ಜುಗುಪ್ಸೆಗೊಂಡು  ನಿನ್ನೆ ದಿನ 4-1-13 ರ ರಾತ್ರಿ 9.00 ಗಂಟೆಯಿಂದ 5-1-13  ರ  2.00 ಗಂಟೆಯ ಮದ್ಯೆ ಕುತ್ತಿಗೆಗೆ ಚೂಡಿದಾರದ ಶಾಲುನಿಂದ ನ್ಭೆಣುಬಿಗಿದುಕೊಂಡು ವಾಸ್ತವ್ಯದಮನೆಯ ಬೆಡ್ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಪ್ರಮೀಳ ರವರು ನೀಡಿದ ದೂರಿನಂತೆ ಉಳ್ಳಾಲ ಯುಡಿಆರ್ ನಂ 01/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ

  • ಪಿರ್ಯಾದಿದಾರರಾದ ಸುದೇಶ್‌ ತಂದೆ: ಸೂರಪ್ಪ ದೇವಾಡಿಗ ವಾಸ:ಬೆಂಗ್ಲೆ ಮನೆ ಮುಚ್ಚೂರು ಪೋಸ್ಟ್‌ ಮಂಗಳೂರು ರವರು ದಿ: 05.01.2012  ರಂದು ಬೆಳಿಗ್ಗೆ 08.45 ಗಂಟೆಗೆ  ತನ್ನ ಅಣ್ಣ ಕಮಲಾಕ್ಷ ಎಂಬವರ ಜೊತೆ  ವಾಮಂಜೂರು ವಿದ್ಯಾಜ್ಯೋತಿ ಶಾಲೆಯ ಸಮೀಪ ರಸ್ತೆ ಬದಿ  ನಿಂತಿದ್ದಾಗ ವಾಮಂಜೂರು  ಜಂಕ್ಷನ್‌  ಕಡೆಯಿಂದ ಮಂಗಳೂರು ಕಡೆಗೆ ಬಸ್ಸು ಕೆಎ-19-ಡಿ-5630 ನೇಯದನ್ನು ಅದರ ಚಾಲಕ ಹಮೀದ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಮಲಾಕ್ಷ ರವರಿಗೆ ಡಿಕ್ಕಿಹೊಡೆದುದರಿಂದ ತಲೆಗೆ  ಹಣೆಗೆ ತೀವ್ರ ಗಾಯಗಳಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುತ್ತಾರೆ ಎಂಬುದಾಗಿ ಸುದೇಶ್‌‌ ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣ ಅಕ್ರ: 02/13 ಕಲಂ:279,338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ

  • ಪಿರ್ಯಾದಿದಾರರಾದ ಸಂತೋಷ್‌ ಕುಮಾರ್‌ ತಂದೆ: ರಘುರಾಮ್‌ ವಾಸ: ಉಲ್ಲಾಸ್‌ ಮನೆ ಬೈತುರ್ಲಿ ಮಂಗಳೂರು ರವರು ದಿನಾಂಕ  04.01.2013 ರಂದು ಬೈತುರ್ಲಿಯಿಂದ ಕುಲಶೇಕರ ಕಡೆಗೆ ಅವರ ಬಾಬ್ತು ಮೋಟಾರು ಸೈಕಲ್‌ ಕೆ.ಎಲ್‌- 60 ಬಿ- 9454 ಹೋಗುತ್ತಿದ್ದಾಗ ರಾತ್ರಿ ಸುಮಾರು 09-15 ಗಂಟೆಗೆ ಕುಲಶೇಕರ ಡೈರಿ ಬಳಿ ಅವರ ಮುಂದಿನಿಂದ ಅವರ ಸ್ನೇಹಿತ ವಿಷ್ಣು ಪ್ರಸಾದ್‌ ಆತನ ಬಾಬ್ತು ಕೆ.ಎ 19 ಯು- 1956 ನ್ನು  ಚಲಾಯಿಸಿಕೊಂಡು ಕುಲಶೇಕರಕಡೆ ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ ಒಂದು ಬಿಳಿ ಬಣ್ಣದ ಟಾಟಸುಮೋ ನಂಬ್ರ ಕೆ.ಎ 19 ಬಿ- 6381 ನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಡೈರಿ ಕಡೆ ಹೋಗುವ ರಸ್ತೆಗೆ ತಿರುಗಿಸಿ ವಿಷ್ಣುಪ್ರಸಾದ್‌ ಚಲಾಯಿಸುತ್ತಿದ್ದ ಬೈಕಿಗೆ  ಡಿಕ್ಕಿಹೊಡೆದ ಪರಿಣಾಮ  ವಿಷ್ಣುಪ್ರಸಾದ್‌ಗೆ ಮುಖಕ್ಕೆ ತರಚಿದ ಗಾಯಹಾಗೂ ತಲೆಗೆ ತೀವ್ರ ತರದ ಗಾಯವಾಗಿದ್ದು ಗಾಯಾಳುವನ್ನು ಪಿರ್ಯಾದಿದಾರರು ಮಂಗಳೂರು ಸಿ.ಟಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಎಂಬುದಾಗಿ ಸಂತೋಷ್ ಕುಮಾರ್ ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣ ಅಕ್ರ: 03/13 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಪಣಂಬೂರು ಠಾಣೆ

  • ಪಿರ್ಯಾದಿದಾರರಾದ ಜಸ್ಟಿನ್ ಸಿಕ್ವೇರಾ (58) ತಂದೆ: ಮಾಂತು ಸಿಕ್ವೇರಾ ವಾಸ: ಹೆಬ್ಬಾರ್ ಮನೆ ಪಡೀಲ್ ಮಂಗಳೂರು ರವರು ದಿನಾಂಕಃ 05-01-13 ರಂದು ಬಂದರಿನಿಂದ ಸಿಮೆಂಟ್ ಲೋಡ್ ಮಾಡಿಕೊಂಡು  ಎಂಆರ್ ಪಿಎಲ್ ನ ಒಎಂಪಿಎಲ್ ಗೆ ಹೋಗುವರೇ, ಕೂಳೂರು ಕುದುರೆಮುಖ ಜಂಕ್ಷನ್ ಎಂಆರ್ ಪಿಎಲ್ ರಸ್ತೆಯಿಂದಾಗಿ ಜೋಕಟ್ಟೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 2-10ರ ವೇಳೆಗೆ  ಟೋಟಲ್ ಗ್ಯಾಸ್ ನ ರಸ್ತೆಯ ತಿರುವಿನ ಬಳಿ ಪಿರ್ಯಾದಿದಾರರು ತನ್ನ ಬಾಬ್ತು ಲಾರಿ ಕೆಎ-19ಬಿ-7133ನೇದನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜೋಕಟ್ಟೆ ಕಡೆಯಿಂದ ಟೆಂಪೋ ಟ್ರಾವೆಲ್ ನಂಬ್ರ ಕೆಎ-19ಎ-3317 ನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಬಲಬದಿಯಲ್ಲಿ ಜೋಕಟ್ಟೆ ಕಡೆಯಿಂದ ಕುದುರೆಮುಖ ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಒಂದನ್ನು ಓವರ್ ಟೇಕ್ ಮಾಡಿ ಜೋಕಟ್ಟೆ ಕಡೆಗೆ ಹೋಗುತ್ತಿದ್ದ ಪಿರ್ಯಾದಿದಾರರ ಲಾರಿಯ ಎದುರಿನ ಬಲಬದಿಗೆ ಬಲವಾಗಿ ಡಿಕ್ಕಿ ಹೊಡೆದಾಗ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಲಾರಿಯನ್ನು ಆದಷ್ಟು ಎಡಗಡೆಗೆ ಚಲಾಯಿಸಿದ ಪರಿಣಾಮ ಟೆಂಪೋ ಟ್ರಾವೆಲರ್ ಸಂಪೂರ್ಣವಾಗಿ ತಿರುಗಿ ನಿಂತಿದ್ದು, ಟೆಂಪೋ ಟ್ರಾವೆಲರ್ ನ ಒಳಗಡೆ ಇದ್ದ ಜ್ಯೋತಿ  ವರ್ಮ ರವರ ಎರಡು ಕಾಲುಗಳಿಗೆ ಮೂಳೆ ಮುರಿತದಂತಹ ಗಾಯ ಹಾಗೂ ಇತರ ಸಣ್ಣ ಪುಟ್ಟ ಗಾಯ ಮತ್ತು ಅವರ ಗಂಡ ಧೀರಜ್ ವರ್ಮ ರವರಿಗೆ ಹಣೆಗೆ ರಕ್ತ ಗಾಯ ಹಾಗೂ ತಲೆಗೆ ಗುದ್ದಿದ ಮತ್ತು ಸಣ್ಣ ಪುಟ್ಟ ಗಾಯವಾಗಿರುತ್ತದೆ.  ಹಾಗೂ ಅದರ ಚಾಲಕರಿಗೆ ಸಣ್ಣ ಪುಟ್ಟ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಪಿರ್ಯಾದಿದಾರರಿಗೆ ಕೂಡ ಚಿಕ್ಕ ಪುಟ್ಟ ಗಾಯಗಳಾಗಿದ್ದು,  ಗಾಯಾಳುಗಳು ಎ.ಜೆ. ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಜಸ್ಟಿನ್ ಸಿಕ್ವೇರಾ ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಮೊ.ನಂ. 01/2013 ಕಲಂ. 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ

  • ದಿನಾಂಕ 05/01/2013 ರಂದು ಮಧ್ಯಾಹ್ನ 12.45 ಗಂಟೆಗೆ ಪಿರ್ಯಾದಿದಾರರಾದ ಆಸೀಫ್ (34) ತಂದೆ ಸಯ್ಯದ್‌ ಇಬ್ರಾಹಿಂ ವಾಸ: ಕಿನ್ನಿಕಂಬಳ ಮೂಡುಪೆರಾರ ಗ್ರಾಮ ಮಂಗಳೂರು ತಾಲೂಕು ರವರು ತನ್ನ ಬಾಬ್ತು ಕಾರು ನಂಬ್ರ KA 21 MB 4144 ನೇದರಲ್ಲಿ ಪ್ರಯಾಣಿಸುತ್ತಾ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿ ತಲುಪುತ್ತಿದ್ದಂತೆ ಹಿಂದಿನಿಂದ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ನಂಬ್ರ KA 20 C5164 ನ್ನು ಅದರ ಚಾಲಕನು ತನ್ನ ಬಾಬ್ತು ಟ್ಯಾಂಕರನ್ನು ಓವರ್ ಟೇಕ್ ಮಾಡಿ ನನ್ನ ಕಾರಿನ ಬಲ ಬದಿಗೆ ಎದುರುಗಡೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುತ್ತದೆ. ಈ ಅಪಘಾತಕ್ಕೆ ಟ್ಯಾಂಕರ್ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯೇ ಕಾರಣ ಎಂಬುದಾಗಿ ಆಸೀಫ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 08/2013 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment