ಹಲ್ಲೆ ಪ್ರಕರಣ
ಉರ್ವಾ ಪೊಲೀಸ್ ಠಾಣೆ
- ದಿನಾಂಕ 28-01-2013 ರಂದು 20:20 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಯೂಸಫ್ ವಾಸ: ಸೈಟ್ ನಂಬ್ರ. 288 2ನೇ ಬ್ಲಾಕ್ ಕಾಟಿಪಳ್ಳ ಸುರತ್ಕಲ್ ಮಂಗಳೂರು ರವರು ಪ್ರಯಾಣಿಸುತ್ತಿದ್ದ 45'ಸಿ' ನಂಬ್ರದ ಆವೆ ಮಾರಿಯಾ ಬಸ್ಸು ಲೇಡಿಹಿಲ್ ಬಸ್ ನಿಲ್ದಾಣ ತಲುಪಿದಾಗ ಯಾರೋ ಇಬ್ಬರು ಅಪರಿಚಿತರು ಕೆಎ 19 ಎಂಸಿ 839ನೇ ನಂಬ್ರದ ಆಲ್ಟೋ ಕಾರಿನಿಂದ ಇಳಿದು ಅದರಲ್ಲಿದ್ದವರ ಪೈಕಿ ಒಬ್ಬಾತನು, ಬಸ್ಸಿನ ಕಿಟಕಿಯ ಬಲಭಾಗದ ಕೊನೆಯ ಸೀಟಿನ ಮುಂಭಾಗದ ಬದಿಯ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದಿದಾರರಿಗೆ ಬಸ್ಸಿನ ಹೊರಗಡೆಯಿಂದ ಕಿಟಕಿಯ ಮೂಲಕ ಕೈಯಲ್ಲಿದ್ದ ಜಲ್ಲಿ ಕಲ್ಲಿನಿಂದ ತಲೆಗೆ ಹೊಡೆದಿದ್ದು ತಲೆಗೆ ಉಂಟಾದ ಗಾಯದಿಂದ ರಕ್ತಸ್ರಾವವಾದ ಪಿರ್ಯಾದಿದಾರರನ್ನು ಸಹಪ್ರಯಾಣಿಕರು ಉಳ್ಳಾಲ ನರ್ಸಿಂಗ್ ಹೋಂಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಯೂಸಫ್ ರವರು ನೀಡಿದ ದೂರಿನಂತೆ ಉರ್ವಾ ಪೊಲೀಸ್ ಠಾಣಾ ಮೊ.ನಂ. 05/2013 ಕಲಂ 324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ: 28-01-2013 ರಂದು ಸಮಯ ಸುಮಾರು 23.30 ಗಂಟೆಗೆ ಕಾರು ನಂಬ್ರ ಏಐ-59 - 9532 ನ್ನು ಅದರ ಚಾಲಕ ಬಾಬುಗುಡ್ಡ ಕಡೆಯಿಂದ ಅತ್ತಾವರ ಕಟ್ಟೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಅತ್ತಾವರದ ಶಾಪಿಂಗ್ ಮಾಲ್ ಬಳಿ ತಲುಪುವಾಗ ರಸ್ತೆಯ ಬಲಕ್ಕೆ ಚಲಾಯಿಸಿದ ಪರಿಣಾಮ, ಅತ್ತಾವರ ಕಟ್ಟೆ ಕಡೆಯಿಂದ ಬಾಬುಗುಡ್ಡ ಕಡೆಗೆ ಭರತ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಿರ್ಯಾದುದಾರರಾದ ವಿವೇಕ್ (21) ತಂದೆ: ಜನಾರ್ದನ ಗೌಡ, ವಾಸ: ಗೊಬ್ಬರ ತಾಂಡ ಹೌಸ್, ರೆಕ್ಯಾ ಅಂಚೆ & ಗ್ರಾಮ, ಬೆಳ್ತಂಗಡಿ ಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ನೊಂದಣಿಯಾಗಿರದ ಹೊಸ ಸ್ಲೆಂಡರ್ ಪ್ರೊ ಮೊ,ಸೈಕಲ್ಗೆ ಡಿಕ್ಕಿ ಮಾಡಿದ್ದರಿಂದ ಭರತ್ ಕಾರಿನ ಮುಂಭಾಗದ ಮೇಲೆ ಬಿದ್ದು ತಲೆಯ ಹಿಂಭಾಗ, ಬಲಕೈಗೆ ರಕ್ತಗಾಯವಾಗಿ ಮತ್ತು ಬಲಕಣ್ಣಿನ ಬಳಿ ಮತ್ತು ಬಲಕೆನ್ನಗೆ ತರಚಿದ ಗಾಯವಾಗಿ ಡಾ|| ಅಂಬೇಡ್ಕರ್ ವೃತ್ತದ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಹಾಗೂ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕೋಲುಕಾಲಿಗೆ ಮತ್ತು ಬಲತೊಡೆಗೆ ಗುದ್ದಿದ ಗಾಯ ಉಂಟಾಗಿ ಅತ್ತಾವರ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ ಎಂಬುದಾಗಿ ವಿವೇಕ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 20/2013 279 , 337, ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ
ದಕ್ಷಿಣ ಠಾಣೆ
- ಫಿಯರ್ಾದುದಾರರಾದ ಲಿಡ್ವಿನ್ ಫೆನರ್ಾಂಡಿಸ್ ರವರ ಅಜ್ಜಿಯಾದ ಶ್ರೀಮತಿ ಹಿಲ್ಡಾ ಫೆನರ್ಾಂಡಿಸ್ ರವರಿಗೆ ಮಂಗಳೂರು ತಾಲೂಕು, ಪದವು ಗ್ರಾಮದಲ್ಲಿ ಜಾಗ ಮತ್ತು ಮನೆ ಇರುತ್ತದೆ. ಇದು ಪದವು ಗ್ರಾಮದ ಸ.ನಂಬ್ರ: 8/2ಎ2ಪಿ ರಲ್ಲಿ 0.20 ಸೆಂಟ್ಸ್ ಜಮೀನು ಆಗಿದ್ದು, ಫಿಯರ್ಾದುದಾರರು ಸದ್ರಿ ಜಾಗದ ವಿಶೇಷ ಅಧಿಕಾರ ಪತ್ರ ವನ್ನು ಹೊಂದಿರುತ್ತಾರೆ ಈ ಜಾಗದಲ್ಲಿ 0.12 ಸೆಂಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಈ ಜಾಗದ ಖರೀದಿಗಾಗಿ ಆರೋಪಿ ಸಂಪತ್ರಾಜ್ ದಿನಾಂಕ 21-10-2012 ರಂದು ಮಂಗಳೂರಿನ ಗಣೇಶ್ ರವರೊಂದಿಗೆ ಫಿಯರ್ಾದುದಾರರ ಮನೆಗೆ ಬಂದು, ಈ ಜಾಗ ನಮಗೆ ಬೇಕು, ಬೇರೆ ಯಾರಿಗೂ ಕೊಡಬೇಡಿ ಎಂದು ಹೇಳಿದರಲ್ಲದೇ ಸದ್ರಿ ಜಾಗದ ದಾಖಲೆ ಪತ್ರಗಳನ್ನು ನೋಡಲು ಇದರ ಜೆರಾಕ್ಸ್ ಪ್ರತಿಯನ್ನು ನಮಗೆ ಕೊಡಿ, ಎಂದು ಹೇಳಿದಂತೆ ದಿನಾಂಕ 22-10-2012 ರಂದು ಗಣೇಶ್ ಮತ್ತು ಸಂಪತ್ ರಾಜ್ ರವರು ಫಾದರ್ ಮುಲ್ಲಸರ್್ ಆಸ್ಪತ್ರೆಗೆ ಬಂದು, ಫಿಯರ್ಾದುದಾರರಿಗೆ ಮುಂಗಡವಾಗಿ ರೂ. 51,000/- ಸ್ಟೇಟ್ ಬ್ಯಾಂಕ್ ಪಟಿಯಾಳ ಕಂಕನಾಡಿ ಶಾಖೆ ಚೆಕ್ಕನ್ನು ನೀಡಿ ಜಾಗದ ದಾಖಲೆ ಪತ್ರಗಳ ಜೆರಾಕ್ಸ್ ಪ್ರತಿಯನ್ನು ಪಡೆದುಕೊಂಡು ಹೋಗಿರುತ್ತಾರೆ. ನಂತರ ಆರೋಪಿ ಸಂಪತ್ರಾಜನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಬಂದು ಫಿಯರ್ಾದುದಾರರಿಗೆ ಕಂಕನಾಡಿ ಸ್ಟೇಟ್ ಬ್ಯಾಂಕ್ ಪಟಿಯಾಳ ಬ್ಯಾಂಕ್ನ ರೂ. 1,00,000/- ಮೌಲ್ಯದ 5 ಚೆಕ್ ಗಳನ್ನು (ಅಂದರೆ ರೂ. 5,00,000/- ಮೌಲ್ಯದ ಚೆಕ್)ಗಳನ್ನು ನೀಡಿ, ಜಾಗದ ಮೂಲ ದಾಖಲಾತಿಗಳನ್ನು ವಕೀಲರಿಗೆ ತೋರಿಸಿ ತರುತ್ತೇನೆಂದು ಫಿಯರ್ಾದುದಾರರನ್ನು ನಂಬಿಸಿಕೊಂಡು ಪಡೆದುಕೊಂಡು ಹೋಗಿರುತ್ತಾರೆ. ನಂತರ ಸಂಪತ್ರಾಜ್ ಮತ್ತು ತೇಜಸ್ವಿರಾಜ್ ರವರು ಫಿಯರ್ಾದುದಾರರಲ್ಲಿಗೆ ಬಂದು ನಾನು ನಿಮ್ಮ ಜಾಗವನ್ನು ನಾನು ಖರೀದಿಸುವುದಿಲ್ಲ, ಅತ್ತಾವರದ ಶ್ರೀ ತೇಜಸ್ವಿರಾಜ್ ಎಂಬವನು ಖರೀದಿಸುತ್ತಾನೆ. ಎಂದು ಹೇಳಿಕೊಂಡು ಅಲ್ಲದೆ ಆರೋಪಿಯಾದ ತೇಜಸ್ವಿರಾಜ್ ಫಿಯರ್ಾದುದಾರರಲ್ಲಿ ನಿಮ್ಮ ಉಳಿದ ಹಣವನ್ನು ನಾನೇ ಕೊಡುತ್ತೇನೆ ಎಂದು ಹೇಳಿ, ನಂತರ ಸಂಪತ್ರಾಜ್ ಪಡೆದುಕೊಂಡ ಜಾಗದ ಮೂಲ ದಾಖಲೆ ಪತ್ರವನ್ನು ವಾಪಾಸು ಕೊಡದೆ, "ನೀನು ಇನ್ನು ಮುಂದಕ್ಕೆ ಹಣವನ್ನಾಗಲೀ, ಜಾಗದ ದಾಖಲೆ ಪತ್ರಗಳನ್ನಾಗಲಿ ಕೇಳಿದಲ್ಲಿ ನಿನ್ನನ್ನು ಏನು ಮಾಡುತ್ತೇವೆ ನೋಡು" ಎಂದು ಈ ಮೂವರೂ ಸೇರಿ ಬೆದರಿಕೆಯನ್ನು ಹಾಕಿರುತ್ತಾರೆ. ಆರೋಪಿಗಳು ಜೊತೆಯಾಗಿ ಸೇರಿಕೊಂಡು ಮೋಸ ಮಾಡುವ ಉದ್ದೇಶದಿಂದ ಫಿಯರ್ಾದುದಾರರನ್ನು ನಂಬಿಸಿ, ಅವರಲ್ಲಿದ್ದ ಜಾಗಕ್ಕೆ ಸಂಬಂಧಪಟ್ಟ ಮೂಲ ದಾಖಲಾತಿ ಪತ್ರಗಳನ್ನು ಪಡೆದುಕೊಂಡು ಹಿಂತಿರುಗಿಸದೇ ನನಗೆ ಬೆದರಿಕೆ ಹಾಕುತ್ತಿರುವುದಾಗಿದೆ ಎಂಬುದಾಗಿ ಲಿಡ್ವಿನ್ ಫೆನರ್ಾಂಡಿಸ್ (23) ವಾಸ: ಪದವಿನಂಗಡಿ ಗ್ರಾಮ ಕೊಂಚಾಡಿ ಪೋಸ್ಟ್ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ. 26/2013 ಕಲಂ: 406, 420, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ದಕ್ಷಿಣ ಠಾಣೆ
- ಫಿಯರ್ಾದುದಾರರಾದ ಶ್ರೀ ಮಂಜುನಾಥ ಹೊನ್ನಳ್ಳಿ ರವರು ದಿನಾಂಕ 27-01-2013 ರಂದು ಮಧ್ಯಾಹ್ನ 1-00 ಗಂಟೆಗೆ ತನ್ನ ಬಾಬ್ತು ಬಜಾಜ್ ಫ್ಲಾಟಿನಾ ಮೋಟಾರು ಸೈಕಲ್ ನಂಬ್ರ ಕೆ.ಎ 19 ಡಬ್ಲ್ಯೂ 1476 ನ್ನು ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಪಾಕರ್್ ಮಾಡಿ ನಿಲ್ಲಿಸಿ, ಅಲ್ಲಿಯೇ ಸಮೀಪದಲ್ಲಿರುವ ಹೋಟೇಲ್ಗೆ ಹೋಗಿ ಊಟ ಮಾಡಿ ನಂತರ ಮಾಕರ್ೇಟ್ ರಸ್ತೆಯಲ್ಲಿರುವ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸಮಾಗ್ರಿ ಖರೀದಿಸಿ ಮಧ್ಯಾಹ್ನ 3-00 ಗಂಟೆಗೆ ನಗರದ ಕ್ಲಾಕ್ ಟವರ್ ಬಳಿ ಮೋಟಾರು ಸೈಕಲ್ನ್ನು ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ, ಫಿಯರ್ಾದುದಾರರು ಪಾಕರ್್ ಮಾಡಿದ್ದ ಮೋಟಾರು ಸೈಕಲ್ ಅಲ್ಲಿರದೇ ಇದ್ದು, ಸದ್ರಿ ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಮೋಟಾರು ಸೈಕಲ್ನ್ನು ಈವರೆಗೂ ಹುಡುಕಾಡಿದರೂ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ಬಂದು ಫಿಯರ್ಾದು ನೀಡಿರುವುದಾಗಿದೆ. ಕಳವಾದ ಮೋಟಾರು ಸೈಕಲ್ನ ಅಂದಾಜು ಬೆಲೆ ರೂ 19,000/- ಆಗಬಹುದು ಎಂಬುದಾಗಿ ಮಂಜುನಾಥ ಹೊನ್ನಳ್ಳಿ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ.25/2013 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment