ವಂಚನೆ ಪ್ರಕರಣ
ಮಂಗಳೂರು ಉತ್ತರ ಪೊಲೀಸ್ ಠಾಣೆ
ಕಳವು ಪ್ರಕರಣ
ಮಂಗಳೂರು ಪೂರ್ವ ಪೊಲೀಸ್ ಠಾಣೆ
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
ಹಲ್ಲೆ ಪ್ರಕರಣ
ಬಜಪೆ ಠಾಣೆ
ಅಕ್ರಮ ಮರಳು ಸಾಗಾಟ ಪ್ರಕರಣ
ಮಂಗಳೂರು ಗ್ರಾಮಾಂತರ ಠಾಣೆ
ಮಂಗಳೂರು ಉತ್ತರ ಪೊಲೀಸ್ ಠಾಣೆ
- ಫಿಯರ್ಾದಿದಾರರಾದ ವಾಸನ್ ಪಿ.ಆರ್ ಎಸ್.ತಂದೆ : ಕೆ.ಆರ್.ಕೆ. ಪೊಟ್ಟಿ ಬ್ರ್ಯಾಂಚ್ ಮ್ಯಾನೆಜರ್ ಇಂಡಿಯನ್ ಬ್ಯಾಂಕ್ ಕೆಎಸ್ ರಾವ್ ರಸ್ತೆ ರವರು ಮಂಗಳೂರು ಹಂಪನಕಟ್ಟಾ, ಕೆ.ಎಸ್. ರಾವ್ ರಸ್ತೆಯ ಇಂಡಿಯನ್ ಬ್ಯಾಂಕ್ ಬ್ರ್ಯಾಂಚ್ನ ಮ್ಯಾನೇಜರ್ ಆಗಿದ್ದು, ಆರೋಪಿತರುಗಳು ಪಿರ್ಯಾದಿದಾರರ ಬ್ಯಾಂಕ್ನಿಂದ ರೂ. 2,25,00,000/- ಸಾಲ ತೆಗೆದಿದ್ದು, ಸಾಲದ ಭದ್ರತೆಗಾಗಿ ಚರ ಸೊತ್ತಾದ ಪ್ಲ್ಯಾಟ್ ನಂಬ್ರ 97-ಸಿ, ಲ್ಯಾಂಡ್ ಬೆಳಗೊಳ ಇಂಡಿಸ್ಟ್ರೀಯಲ್ ಏರಿಯಾ, ಬೆಳಗೊಳ ಗ್ರಾಮ, ಕಸಬಾ ಹೊಬಳಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ ಹಾಗೂ ಅರೋಪಿತರುಗಳು ಪಾಲುದಾರರಾದ ಮೆ. ಭಾರತ್ ಎಕ್ಸಿಮ್ ಕಂಪೆನಿಯ ಗೊದಾಮಿನಲ್ಲಿರುವ ಸೊತ್ತುಗಳನ್ನು ತೋರಿಸಿದ್ದು, ನಂತರ ರಿಸರ್ವ ಬ್ಯಾಂಕ್ನ ಅಧಿಕಾರಿಯವರು ತಪಾಸಣೆ ನಡೆಸಿದಾಗ ಸಾಲದ ಬಾಬ್ತು ಭದ್ರತೆಗಾಗಿ ನೀಡಿದ ಗೋದಾಮಿನಲ್ಲಿರುವ ಕಬ್ಬಿಣದ ಅದಿರಿನ ಸೊತ್ತುಗಳು ಮೆ. ಜಿ.ವಿ.ಕೆ ವುಡ್ ಕಂಪೆನಿಗೆ ಸೇರಿದ್ದಾಗಿದ್ದು, ಆರೋಪಿತರುಗಳು ಬ್ಯಾಂಕ್ ಸಾಲ ಪಡೆಯುವ ಸಮಯ ಬೇರೆ ಕಂಪೆನಿಗೆ ಸೇರಿದ ಸೊತ್ತುಗಳನ್ನು ತೋರಿಸಿ, ಸುಳ್ಳು ದಾಖಲಾತಿ ಸೃಷ್ಠನೆ ಮಾಡಿ ಸಾಲ ಪಡೆದು ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದು ಎಂಬುದಾಗಿ ವಾಸನ್ ಪಿ.ಆರ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 14-2012 ಕಲಂ 406, 415, 420, 409, 423, 463 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ಮಂಗಳೂರು ಪೂರ್ವ ಪೊಲೀಸ್ ಠಾಣೆ
- ದಿನಾಂಕ 23-01-2013 ರಂದು 17-00 ಗಂಟೆಯಿಂದ ದಿನಾಂಕ 24-01-2013 ರಂದು 08-25 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕಂಕನಾಡಿ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆಯ ಎದುರಿನ ಬೀಗವನ್ನು ಒಡೆದು ಯಾರೋ ಕಳ್ಳರು ಒಳಪ್ರವೇಶಿಸಿ ಸೈಂಟ್ ಜೋಸೆಫ್ ಪ್ರೌಢ ಶಾಲೆಯ ಕಂಪ್ಯೂಟರ್ ಲ್ಯಾಬಿನ ಬೀಗ ಮುರಿದು ಒಳಪ್ರವೇಶೀಸಿ ಂಔಅ ಕಂಪೆನಿಯ ಕಂಪ್ಯೂಟರ್ ಮತ್ತು ಮುಖ್ಯೋಪಾಧ್ಯಾಯಿನಿಯ ಆಫೀಸು ರೂಮಿನ ಬೀಗವನ್ನು ಮುರಿದು ಆಫೀಸು ರೂಮಿನಲ್ಲಿದ್ದ ಕಂಪ್ಯೂಟರ್ ಸೆಟ್ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ 34,550/-ರೂ ಆಗಬಹುದು ಎಂಬುದಾಗಿ ಮೇರಿ ಮೊಂತೆರೋ ಮುಖ್ಯ ಶಿಕ್ಷಕರು ಸೈಂಟ್ ಜೋಸೆಫ್ ಹೈಸ್ಕೂಲ್ ಕಂಕನಾಡಿ ಮಂಗಳೂರು ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ ಅಕ್ರ : 07/2012 ಕಲಣ 454,457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ
- ದಿನಾಂಕ: 23-01-2013 ರಂದು ಸಮಯ ಸುಮಾರು 18.30 ಗಂಟೆಗೆ ಸಿಟಿ ಆಸ್ಪತ್ರೆಯ ಬಳಿ ಪಿರ್ಯಾದುದಾರರಾದ ಗಿರಿಧರ(74) ತಂದೆ- ಪದ್ಮಯ್ಯ ಗೌಡ. ವಾಸ- ಕನಕಲ ಮನೆ, ಚೆಮ್ಮನೂರು, ಕಿನ್ಯಾ, ಸುಳ್ಯ ತಾಲೂಕು. ರವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರು ಸೈಕಲ್ ಒಂದನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ್ದರಿಂದ ಪಿರ್ಯಾದುದಾರರು ರಸ್ತೆಗೆ ಬಿದ್ದು ತಲೆಗೆ ಗುದ್ದಿದ ಗಾಯ ಮತ್ತು ಕೈ ಕಾಲುಗಳಿಗೆ ತರಚಿದ ಗಾಯ ಉಂಟಾಗಿ ಮಂಗಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಡಿಕ್ಕಿ ಮಾಡಿದ ಮೋಟಾರು ಸೈಕಲ್ ಸವಾರ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಗಿರಿಧರ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 17/2013 279 , 338, ಐ.ಪಿ.ಸಿ.ಕಾಯ್ದೆ 134(ಬಿ) ಮೋ.ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಲಾಗಿದೆ.
ಹಲ್ಲೆ ಪ್ರಕರಣ
ಬಜಪೆ ಠಾಣೆ
- ದಿನಾಂಕ: 23-01-2013 ರಂದು 18-30 ಗಂಟೆ ಸಮಯಕ್ಕೆ, ಮಂಗಳೂರು ತಾಲೂಕು, ಪೆಮರ್ುದೆ ಗ್ರಾಮದ ತೆಂಕ ಎಕ್ಕಾರು ಮನೆ ಎಂಬಲ್ಲಿ ಪಿರ್ಯಾದಿ ಅನಿತಾ, 30 ವರ್ಷ, ಗಂಡ: ದಯಾನಂದ, ವಾಸ: ತೆಂಕ ಎಕ್ಕಾರು ಮನೆ, ಪೆಮರ್ುದೆ ಗ್ರಾಮ, ಮಂಗಳೂರು ತಾಲೂಕು ಎಂಬವರು ಬಟ್ಟೆ ಒಗೆಯುತ್ತಿದ್ದಾಗ, ಈ ಹಿಂದಿನಿಂದಲೂ, ಅಸಮಾಧಾನದಿಂದ ಇದ್ದ ಆರೋಪಿ ಗೋಪಿಯು ಬೇವಸರ್ಿ ರಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾಳೆ ಎಂಬುದಾಗಿ ಅನಿತಾ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅಪರಾಧ ಕ್ರಮಾಂಕ: 19/2013 ಕಲಂ: 324, 504 ಐಪಿಸಿ, ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ: 24-01-2013 ರಂದು ಸಂಜೆ 6-15 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಬಜಪೆ ಪೊಲೀಸ್ ಠಾಣಾ ಸರಹದ್ದಾದ, ಕೊಳಂಬೆ ಗ್ರಾಮದ, ಸುಂಕದಕಟ್ಟೆ ದುಗರ್ಾ ಬಾರ್ನ ಬಳಿಯಿರುವ ಸೆಲೂನ್ನ ಎದುರುಗಡೆಗೆ ಆರೋಪಿ ಅನುಜ್ , ಫಿರ್ಯಾದಿದಾರರಾದ ಅಮರ್ ಆಳ್ವ, 36 ವರ್ಷ, ತಂದೆ: ದಿ: ನಾರಾಯಣ ಆಳ್ವ, ವಾಸ: ಉಳಿಯ ಗುತ್ತು ಮನೆ, ಪಡುಪೆರಾರ ಗ್ರಾಮ, ಮಂಗಳೂರು ತಾಲೂಕು ರವರನ್ನು ಕರೆದು, ಹಣದ ವಿಚಾರದ ತಕರಾರಿನಲ್ಲಿ ಅಮರ್ ಆಳ್ವರಿಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ, ಬಿದ್ದಲ್ಲಿಗೆ ಅಮರ್ ಆಳ್ವರನ್ನು ಕೊಲೆ ಮಾಡುವ ಉದ್ದೇಶದಿಂದ ದೊಡ್ಡದಾದ ಹೂವಿನ ಕುಂಡ ಮತ್ರು ಕಲ್ಲನ್ನು ತಲೆಯ ಮೇಲೆ ಹಾಕಿ ಕೊಲೆ ಮಾಡಲು ಪ್ರಯತ್ನಿಸಿ ಅಮರ್ ಆಳ್ವರ ಬೆನ್ನಿಗೆ, ಎರಡೂ ಕೈಗಳಿಗೆ ಮತ್ತು ಎರಡೂ ಕಾಲುಗಳಿಗೆ ಜಖಂಗೊಳಿಸಿ, ಕೊಲೆ ಮಾಡಲು ಪ್ರಯತ್ನಿಸಿರುವುದು ಎಂಬುದಾಗಿ ಅಮರ್ ಆಳ್ವ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 20/2013 ಕಲಂ: 323, 324, 307 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಟ ಪ್ರಕರಣ
ಮಂಗಳೂರು ಗ್ರಾಮಾಂತರ ಠಾಣೆ
- ದಿನಾಂಕ 24.01.2013 ರಂದು ಮದ್ಯಾಹ್ನ ಸುಮಾರು 12:00 ಗಂಟೆ ಸಮಯಕ್ಕೆ ಪಿ.ಎಸ್.ಐ ಕ್ರೈಂ, ಮಂಗಳೂರು ಗ್ರಾಮಾಂತರ ಇವರು ಖಚಿತವಾದ ವರ್ತಮಾನದ ಮೇರೆಗೆ ವಾಂಮಂಜೂರು ಎಂಬಲಿ ಕೆ.ಎ 19 ಸಿ 1851, ಮತ್ತು ಕೆ.ಎ 19 ಎ 923 ನೇ ನಂಬ್ರದ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ಗಳನ್ನು ಪರಿಶೀಲಿಸಿದಾಗ ಅದರ ಚಾಲಕರಾದ ಬೇಬಿ ಪೂಜಾರಿ ಮತ್ತು ಉಮೇಶ್ ಎಂಬವರು ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಗುರುಪುರ ಹೊಳೆಯಿಂದ ಕಳವು ಮಾಡಿ ತೆಗೆದ ಮರಳನ್ನು ಯಾವುದೇ ಪಮರ್ಿಟ್, ರಹದಾರಿ ಇಲ್ಲದೆ ಮಂಗಳೂರು ಕಡೆಗೆ ಅನದಿಕೃತವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಕಾರಣ ಪಿ.ಎಸ್.ಐ ಯವರು ಸದ್ರಿ ಮರಳು ಸಮೇತ ಲಾರಿಗಳನ್ನು ಮಹಜರು ಮೂಲಕ ಸ್ವಾಧಿನಪಡಿಸಿದ್ದಾಗಿರುತ್ತದೆ. ಮತ್ತು ಈ ಕೃತ್ಯದಲ್ಲಿ ಸದ್ರಿ ಟಿಪ್ಪರ್ ಮಾಲಕ ಮಯ್ಯದ್ದಿ ಮತ್ತು ಮರಳಿನ ಮಾಲಕ ಹಸೈನಾರ್ ಎಂಬವರು ಕೂಡಾ ಬಾಗಿಯಾಗಿರುವುದಾಗಿದೆ ಮತ್ತು ಮಂ.ಗ್ರಾಮಾಂತರ ಠಾಣಾ ಅಕ್ರ: 16/13 ಕಲಂ: ಕಲಂ. 4(1) & 4(1)(ಎ), ಎಂ.ಎಂ.(ಆರ್.ಡಿ.)ಕಾಯ್ದೆ 1957 ಮತ್ತು 42, 43 ಕನರ್ಾಟಕ ಉಪಖನಿಜ ರಿಯಾಯಿತಿ ನಿಯಮ 1994ರ ಉಲ್ಲಂಘನೆ ಮತ್ತು ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment