Tuesday, January 29, 2013

Daily Crime Incidents for Jan 29, 2013

ಕಳವು ಪ್ರಕರಣ

ಕಾವೂರ್ ಠಾಣೆ


  • ಫಿರ್ಯಾಧುದಾರರಾದ ಶ್ರೀ ಉಮೇಶ್ ರವರ ಬಾಬ್ತು ಕೆ.ಎ.-19-ಡಿ-6554 ಮಾರುತಿ ಓಮಿನಿ ಕಾರನ್ನು ಅವರ ಮನೆಯ ಎದುರುಗಡೆ ಇರುವ ರಸ್ತೆಬದಿಯಲ್ಲಿ  ದಿನಾಂಕ 19-01-2013 ರಂದು ರಾತ್ರಿ 09-00 ಗಂಟೆಗೆ ಪಾರ್ಕ್ ಮಾಡಿದ್ದು, ಈ ದಿನ ದಿನಾಂಕ 20-01-2013 ರಂದು ಬೆಳಿಗ್ಗೆ 07-00 ಯ ಮಧ್ಯೆ ಯಾರೋ ಕಳ್ಳರು ಸದ್ರಿ ಕಾರಿನ ಎದುರುಗಡೆಯಿರುವ ಎರಡು ಸೀಟ್, ಸ್ಟೆಪಿನ್ ಟೈಯರ್ ಹಾಗೂ ಬ್ಯಾಟರಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 12,000 ಆಗಬಹುದು ಎಂಬುದಾಗಿ ಉಮೇಶ್ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 22/2013 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಅಪಘಾತ ಪ್ರಕರಣ

ಕಾವೂರ್ ಠಾಣೆ


  • ಫಿರ್ಯಾಧುದಾರರಾದ ಶ್ರೀ ಯಶವಂತ ದೇವಾಡಿಗರವರು ದಿನಾಂಕ 28-01-2013 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ತನ್ನ ಬಾಬ್ತು ಕೆ-19-ಇಬಿ-9530 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ಮನೆಯಿಂದ ಕಾವೂರು ಕಡೆಗೆ ಹೋಗುವಾಗ  ಮುಲ್ಲಕಾಡು 4 ನೇ ಮೈಲು ಬಸ್ ಸ್ಟಾಂಡ್ ನ ಬಳಿ ತಲುಪಿದಾಗ ಎದುರುಕಡೆ ಅಂದರೆ ಕಾವೂರು ಕಡೆಯಿಂದ ಕೆಎ-19-ಇಡಿ-7202 ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಮೋಟಾರು ಸೈಕಲ್ ಸವಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈಗೆ ಮೂಳೆಮೂರಿತದ ಗಾಯ, ಡ ಭುಜಕ್ಕೆ ಗುದ್ದಿದ ಮತ್ತು ಚಮಱ ಸುಲಿದ ಗಾಯ ವಾಗಿದ್ದು, ಚಿಕಿತ್ಸೆಯ ಬಗ್ಗೆ ವೆಲ್ ಲ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸೆ ಪಡೆದಿರುವುದಾಗಿದೆ ಎಂಬುದಾಗಿ ಯಶವಂತ ದೇವಾಡಿಗರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 23/2013 ಕಲಂ. 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



  • ಫಿರ್ಯಾಧುದಾರರಾದ ಶ್ರೀ ಅಜರತ್ ಸಾಹೇಬ್ ರವರು ದಿನಾಂಕ 28-01-2013 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ತನ್ನ ಬಾಬ್ತು ಕೆ-19-ಇಡಿ-7202 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ಮನೆಯಿಂದ ಮುಲ್ಲಕಾಡು 4 ನೇ ಮೈಲು ಬಸ್ ಸ್ಟಾಂಡ್ ನ ಬಳಿ ತಲುಪಿದಾಗ ಎದುರುಕಡೆ ಅಂದರೆ ದೇರೆಬೈಲು ಕಡೆಯಿಂದ ಕೆಎ-19-ಇಬಿ-9530 ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದರರುಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಕೈ, ಕಾಲುಗಳ ಬೆರಳುಗಳಿಗೆ ಮುರಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ವೆಲ್ ಲ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ ಎಂಬುದಾಗಿ ಅಜರತ್ ಸಾಹೇಬ್ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 24/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



  • ಫಿರ್ಯಾಧುದಾರರಾದ ಶ್ರೀ ಹ್ಯಾಡ್ಲಿ ಡಿಸೋಜರವರು ಸ್ನೇಹಿತ ನಿತಿನ್ಎಂಬವರಿಂದ MH-04-DY-2628 ನಂಬ್ರದ ಇನ್ನೊವ ಕಾರನ್ನು ಪಡೆದುಕೊಂಡಿದ್ದು, ದಿನಾಂಕ 28-01-2013 ರಂದು ಮೇಲಿನ ಕಾರನ್ನು ಮಂಗಳೂರು ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಾ ಸಂಜೆ ಸುಮಾರು 4-30 ಗಂಟೆಗೆ  ರಾ.ಹೆ 66 , 4 ನೇ ಮೈಲು ತಲುಪಿದಾಗ ಎದುರುಗಡೆಯಿಂದ KA-02-AB-7599 ನಂಬ್ರದ 18 ಚಕ್ರದ ಟಾಟಾ ಟ್ರೈಲರ್ ಮಂಗಳೂರು ಕಡೆಗೆ ಹೋಗುತ್ತಿದ್ದು, ಪಿರ್ಯಾದಿದಾರರು ಕಾರನ್ನು ಸೂಚನೆ ಹಾಗೂ ಹಾರ್ನ ಹಾಕುತ್ತ ಮುಂದಕ್ಕೆ ಚಲಾಯಿಸುವಾಗ ಟಾಟಾ ಟ್ರೈಲರ್ ನ ಚಾಲಕನು ದುಡುಕುತನದಿಂದ ಯಾವುದೇ ಮುಂಜಾಗ್ರತೆ ವಹಿಸದೇ ರಸ್ತೆಯ ಬಲಬದಿಗೆ ಚಲಾಯಿಸಿದ ಪರಿಣಾಮ ಟಾಟಾ ಟ್ರೈಲರ್ ಕಾರಿನ ಎಡ ಬದಿಗೆ ಡಿಕ್ಕಿಯಾಗಿ ಜಖಂ ಉಂಟಾಗಿರುವುದಾಗಿದೆ ಎಂಬುದಾಗಿ ಹ್ಯಾಡ್ಲಿ ಡಿಸೋಜರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 25/2013 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಮೂಡಬಿದ್ರೆ ಠಾಣೆ


  • ದಿನಾಂಕ : 28/01/2013 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಪಿರ್ಯಾದಿದಾರರಾದ ಚಂದಪ್ಪ ಎಂಬವರು ಮಂಗಳೂರು ತಾಲೂಕು ಪಡುಕೊಣಾಜೆ ಗ್ರಾಮದ ಹೌದಾಲ್‌ ಅಂಗನವಾಡಿ ಬಳಿ ಮೂಡಬಿದ್ರೆ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದ ಸಮಯ ಮೂಡಬಿದ್ರೆ ಕಡೆಯಿಂದ ಶಿರ್ತಾಡಿ ಕಡೆಗೆ ಮೋಟಾರು ಸೈಕಲ್‌ ಸವಾರನು ತನ್ನ ಬಾಬ್ತು ಮೋಟಾರು ಸೈಕಲ್‌ ನಂಬ್ರ ಕೆಎ 21 ಕ್ಯೂ 7319 ನೇದರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ  ಆತನ ತಲೆಯ ಎಡಭಾಗಕ್ಕೆ ರಕ್ತ ಗಾಯವಾಗಿದ್ದು, ಎಡಕೈ ಮಣಿಗಂಟಿನ ಬಳಿ ತರಚಿದ ಗಾಯ ಹಾಗೂ ಎರಡು ಕಾಲುಗಳು ಮೂಳೆಮುರಿತದ ರಕ್ತಗಾಯವಾಗಿರುತ್ತದೆ. ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಚಂದಪ್ಪ ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ. 22/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 




ಸಂಚಾರ ಪೂರ್ವ ಠಾಣೆ


  • ದಿನಾಂಕ: 28-01-2013 ರಂದು ಸಮಯ ಸುಮಾರು 14.30 ಗಂಟೆಗೆ ಸ್ಕೂಟರ್ ನಂಬ್ರ ಏಂ-19 ಇಇ-5711 ನ್ನು ಅದರ ಸವಾರ ಇರಾಲ್ ಡಿಸೋಜ ಎಂಬವರು ಕಲ್ಪನೆ ಕಡೆಯಿಂದ ನಂತೂರು ಜಂಕ್ಷನ್ ಕಡೆಯಿಂದ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬಿಕರ್ನಕಟ್ಟೆಯ ಇನ್ಫ್ರಂಟ್ ಜೀಸಸ್ ಚಚರ್್ ಬಳಿ ತಲುಪುವಾಗ ರಸ್ತೆ ದಾಟುತ್ತಿದ್ದ ಸುಮಂತ್ ಎಂಬವರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಸುಮಂತ್ ರಸ್ತೆಗೆ ಬಿದ್ದು ಎಡಭುಜಕ್ಕೆ, ಬಲಕೋಲು ಕಾಲಿಗೆ ಮತ್ತು ತಲೆಗೆ ಗುದ್ದಿದ ಗಂಭಿರ ಸ್ವರೂಪದ ಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತದಿಂದ ಅರೋಪಿತರಿಗೆ ಸಾಮಾನ್ಯ ಸ್ವರೂಪದ ಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಭಗವಾನ ದಾಸ್(49) ತಂದೆ-ಭೋಜ ಕರ್ಕರ, ಬಿಕರ್ನಕಟ್ಟೆ ಬಸ್ ನಿಲ್ದಾಣದ ಬಳಿ, ಬಿಕರ್ನಕಟ್ಟೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 19/2013 279 ,  337, 338, ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment