Saturday, January 19, 2013

Daily Crime Incidents for Jan 19, 2013


ಹಲ್ಲೆ ಪ್ರಕರಣ

ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ಪಿಯೂಸ್ ಡಿ ಸೋಜಾ ಪ್ರಾಯ ಃ 53 ವರ್ಷ ರವರ ಅತ್ತಿಗೆ ಶ್ರೀಮತಿ ಶೈಲಾ ಮೇರಿ ಡಿಸೋಜಾ ಎಂಬವರು ನಿನ್ನೆ ದಿನಾಂಕ 17-01-13 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿದಾರರಿಗೆ ಪೋನ್ ಮಾಡಿ ಅವರ ಜಾಗದಿಂದ ಸುಬಾಶ್ಚಂದ್ರ ಶೆಟ್ಟಿರವರು ಜೆಸಿಬಿ ಹಾಗೂ ಟಿಪ್ಪರ್  ತಂದು ಮಣ್ಣು  ತೆಗೆದು ಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿ ಕೂಡಲೇ ಅವರ ಅತ್ತಿಗೆಯ ಜಾಗಕ್ಕೆ ಹೋಗಿ ಅವರ ಜತೆಗೆ ಮಾತನಾಡುತ್ತಿರುವಾಗ ಬೆಳಿಗ್ಗೆ 09-45 ಗಂಟೆಗೆ ಸುಬಾಶ್ಚಂದ್ರ ಶೆಟ್ಟಿ ಮತ್ತು ಅವರ  ಜತೆಯಲ್ಲಿದ್ದ ಕೆಲವರು ಶೈಲಾ ಮೇರಿ ಡಿ ಸೋಜಾರವರ ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ ಶೈಲಾ ಮೇರಿ ಡಿ ಸೋಜಾರನ್ನು ಸುಬಾಶ್ಚಂದ್ರ ಶೆಟ್ಟಿ ಕೈ ಹಾಕಿ ದೊಡಿ ಹಾಕಿದಾಗ ತಡೆಯಲು ಹೋದ ಪಿರ್ಯಾದಿದಾರರನ್ನು ಸುಬಾಶ್ಚಂದ್ರ ಶೆಟ್ಟಿಯವರು "ಬೋಳಿ ಮಗನೆ ನೀನು ಬಂದಿಯಾ" ಎಂದು ಹೇಳಿ ಕೈಯಿಂದ ಪಿರ್ಯಾದಿದಾರರಿಗೆ ಹೊಡೆದು ಅಲ್ಲದೇ ಅವರ ಜತೆಯಲ್ಲಿದ್ದ ವ್ಯಕ್ತಿ ಕಬ್ಬಿಣದ ರಾಡ್ನಿಂದ ಪಿರ್ಯಾದಿದಾರರ ಎಡ ಕೈಯ ಮೊಣಗಂಟಿನ ಹೊಡೆದು ಸುಬಾಶ್ಚಂದ್ರ ಶೆಟ್ಟ ಪಿರ್ಯಾದಿದಾರರನ್ನು ದೊಡಿ ಹಾಕಿದ್ದು ಇದರಿಂದ ಪಿರ್ಯಾದಿದಾರರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು ಅಲ್ಲದೇ ಮುಂದಕ್ಕೆ ಸುದ್ದಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವಾಗಿ ಕೈಕಾಲು ಮುರಿದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಸುಬಾಶ್ಚಂದ್ರ ಶೆಟ್ಟಿರವರ ಜೊತೆಗೆ ಹಿಂದಿ ಮಾತನಾಡುವವರಿದ್ದರು. ನಂತರ ಪಿರ್ಯಾದಿದಾರರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕತ್ಸೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಪಿಯೂಸ್ ಡಿ ಸೋಜಾ ಪ್ರಾಯ ಃ 53 ವರ್ಷ ತಂದೆಃ ಐಸಾಕ್ ಡಿ ಸೋಜಾ  ವಾಸಃ ಸಿಯೋನ್ ಕಾಟೇಜ್ ಬಿಎಸ್ಎನ್ಎಲ್ ಟೆಲಿಪೋನ್ ಎಕ್ಸ್ಚೇಂಜ್ನ ಹತ್ತಿರ ತಡಂಬೈಲು ಸುರತ್ಕಲ್ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ 17/13 ಕಲಂಃ 447-504-354-323-324-506 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಾಂಜಾ ಮಾರಾಟ ಪ್ರಕರಣ

  • ದಿನಾಂಕ: 18-01-2013 ರಂದು ಸುರತ್ಕಲ್ ಠಾಣಾ ಅಪರಾಧ ವಿಭಾಗದ ಪೊಲೀಸ್ ಉಪ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಜೀಪ್ ನಂಬ್ರ ಕೆಎ-19 ಜಿ-237 ನೇದರಲ್ಲಿ, ಠಾಣಾ ಸಿಬ್ಬಂದಿಗಳನ್ನು ಮತ್ತು ಇಬ್ಬರು ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಕಾಟಿಪಳ್ಳ ಗ್ರಾಮದ ಕೃಷ್ಣಾಪುರದ ನೈತಂಗಡಿ ಮೀನು ಮಾಕರ್ೆಟ್ ಬಳಿ 17-30 ಗಂಟೆಗೆ ಧಾಳಿ ನಡೆಸಿದಾಗ ಅಲ್ಲಿ ಮೇಲ್ಕಾಣಿಸಿದ ಆರೋಪಿ ಅಶೋಕ್ ಮರಿಯನ್ ಫೆರಾವೊ ಎಂಬಾತನನ್ನು ಸುತ್ತುವರಿದು ಹಿಡಿದು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಲಕೋಟೆಯ ಬಗ್ಗೆ ವಿಚಾರಿಸಿದಾಗ ಗಾಂಜಾ ತುಂಬಿಸಿದ ಪ್ಯಾಕೆಟ್ ಇರುವುದಾಗಿ ತಿಳಿಸಿ ಅದನ್ನು ತೆಗೆದು ತೋರಿಸಿಕೊಟ್ಟಿದ್ದು, ಪಂಚರ ಸಮಕ್ಷಮ ನೋಡಲಾಗಿ ಪೇಪರ್ನಲ್ಲಿ ಸುತ್ತಿದ 25 ಸಣ್ಣ-ಸಣ್ಣ ಪ್ಯಾಕೆಟ್ಗಳು ಇದ್ದು, ಅದೇ ಪ್ಲಾಸ್ಟಿಕ್ ಚೀಲದಲ್ಲಿ ಇನ್ನೂ ಪ್ಯಾಕೆಟ್ ಮಾಡದ ಗಾಂಜಾ ಇರುತ್ತದೆ. ಮತ್ತು ಪ್ಲಾಸ್ಟಿಕ್ ಚೀಲದಲ್ಲಿ 150 ರೂಪಾಯಿ ನಗದು ಹಣವಿದ್ದು ಈ ನಗದು ಹಣದ ಬಗ್ಗೆ ಕೇಳಿದಾಗ ನಗದು ಹಣ ಗಾಂಜಾ ಮಾರಾಟ ಮಾಡಿ ಸಿಕ್ಕಿದ ಹಣವೆಂದು ಹಣ ತಿಳಿಸಿರುತ್ತಾನೆ. ಸದ್ರಿ ಗಾಂಜಾವನ್ನು ಕೃಷ್ಣಾಪುರದ 5ನೇ ಬ್ಲಾಕ್ ನಿವಾಸಿ ಕೇಶವ ಸನೀಲ್ ಎಂಬಾತನು ತನಗೆ ಮಾರಾಟ ಮಾಡಲು ಕೊಟ್ಟಿರುವುದಾಗಿ ತಿಳಿಸಿರುತ್ತಾನೆ. ಗಾಂಜಾವನ್ನು ವಶದಲ್ಲಿರಿಸಿಕೊಂಡು ಮಾರಾಟ ಮಾಡುವರೇ ದಾಖಲೆ ಪತ್ರ ಕೇಳಲಾಗಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಅಕ್ರಮವಾಗಿ ಇಟ್ಟುಕೊಂಡಿರುವುದಾಗಿ ತಿಳಿಸಿರುತ್ತಾನೆ. ಗಾಂಜಾವನ್ನು ಮಾರಾಟ ಮಾಡುವುದು ಅಪರಾಧವೆಂದು ಆತನಿಗೆ ತಿಳಿಸಲಾಯ್ತು. ಅಲ್ಲದೇ ಆತನ ಎಡ ಕೈಯಲ್ಲಿ ನೋಕಿಯಾ ಕಂಪನಿಯ ಮೋಬೈಲ್ ಒಂದು ಇದ್ದು, ಈ ಮೋಬೈಲ್ನಿಂದ ಗಿರಾಕಿಗಳಿಗೆ ಪೋನ್ ಮಾಡಲು ಉಪಯೊಗಿಸುವ ಮೊಬೈಲ್ ಆಗಿರುವುದಾಗಿ ತಿಳಿಸಿದನು. ಅಶೋಕ್ ಮರಿಯನ್ ಫೆರಾವೋ ಎಂಬಾತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿದ್ದ 25 ಗಾಂಜಾ ಪ್ಯಾಕೆಟ್ಗಳನ್ನು ತೂಕ ಮಾಡಲಾಗಿ ಅವುಗಳು ತಲಾ 4 ಗ್ರಾಂ ತೂಕ ಇದ್ದು, ಒಟ್ಟು 100 ಗ್ರಾಂ ತೂಕ ಇರುತ್ತದೆ. ಹಾಗೂ ಪ್ಯಾಕೇಟ್ ಮಾಡದ ಪ್ಲಾಸ್ಟಿಕ್ ಲಕೋಟೆಯಲ್ಲಿದ್ದ ಗಾಂಜಾವನ್ನು ತೂಕ ಮಾಡಲಾಗಿ 150 ಗ್ರಾಂ ಇರುತ್ತದೆ. (ಒಟ್ಟು 250 ಗ್ರಾಂ ಗಾಂಜಾ) ಸದ್ರಿ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಹೊಂದಿರುವುದರಿಂದ, ಒಟ್ಟು ರೂ.2500/- ಮೌಲ್ಯದ 250 ಗ್ರಾಂ ಗಾಂಜಾವನ್ನು ಪಂಚರ ಸಮಕ್ಷಮ ವಿವರವಾದ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು, ಆರೋಪಿ ಸಮೇತ ಠಾಣೆಗೆ ಬಂದು ಈ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಮತ್ತು ಸುರತ್ಕಲ್ ಪೊಲೀಸ್ ಠಾಣೆ. ಅ.ಕ್ರ 18/2013 ಕಲಂ: 8(ಸಿ),20(ಬಿ) ಎನ್ಡಿಪಿಎಸ್ ಆಕ್ಟ್ ಸುರತ್ಕಲ್ ಪೊಲೀಸ್ ಠಾಣೆ. ಅ.ಕ್ರ 18/2013 ಕಲಂ: 8(ಸಿ),20(ಬಿ) ಎನ್ಡಿಪಿಎಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಭಾವಿಕ ಮರಣ ಪ್ರಕರಣ

ಮುಲ್ಕಿ ಠಾಣೆ

  • ದಿನಾಂಕ 18.01.2013 ರಂದು ಬೆಳಿಗ್ಗೆ 10.00 ಗಂಟೆಗೆ  ಮಂಗಳೂರು ತಾಲೂಕು  ಅತಿಕಾರಿಬೆಟ್ಟು ಗ್ರಾಮದ  ಪಂಜಿನಡ್ಕ ಕೊಳಕಾಡಿ ರೈಲ್ವೇ  ಗೇಟ್ ಬಳಿ ಶ್ರೀಮತಿ ಮುತ್ತು ಪ್ರಾಯ:75 ವರ್ಷ ಎಂಬವರು ರೈಲ್ವೇ ಪಟ್ಟಿ ದಾಟುವಾಗ ಕಾರವಾರ -ಯಶವಂತಪುರ  ರೈಲಿಗೆ  ಢಿಕ್ಕಿ ಹೊಡೆದು ತಲೆಗೆ ಜಜ್ಜಿದ ,ಕಾಲಿಗೆ ಜಜ್ಜಿದ  ಹಾಗೂ ತೊಡೆಗೆ  ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ  ಮೃತಪಟ್ಟಿರುವುದಾಗಿದೆ ಎಂಬುದಾಗಿ ಗಣಪತಿ  ಪಂಡಿತ್ ಪ್ರಾಯ:46 ವರ್ಷ  ತಂದೆ:ಮಹಾಬಲೇಶ್ವರ ಪಂಡಿತ್ ವಾಸ:ಪಂಜಿನಡ್ಕ ಅತಿಕಾರಿಬೆಟ್ಟು ಗ್ರಾಮ,ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಯುಡಿಆರ್ ನಂಬ್ರ 01/2013 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಸುಳಿಗೆ ಪ್ರಕರಣ

ಮೂಡುಬಿದ್ರೆ ಠಾಣೆ

  • ಪಿರ್ಯಾದಿದಾರರಾದ  ಸ್ಟೆಲ್ಲಾ ಕ್ರಾಸ್ತಾ ಪ್ರಾಯ 48 ವರ್ಷ, ಗಂಡ : ರೈಮಂಡ್‌ ಕ್ರಾಸ್ತಾ, ವಾಸ : ಮೂವ ಮನೆ, ಕುರಿಯಾಳ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 18-01-13 ರಂದು 15:30 ಗಂಟೆ ಸಮಯದಲ್ಲಿ ತಾಕೋಡೆ ದ್ವಾರದ ಬಳಿ ಆರೋಪಿಗಳು ಕೆಎ 19 ಎಂ 8844 ಕಾರಿನಲ್ಲಿ  ಅಡ್ಡವಾಗಿ ಬಂದು ಅವಾಚ್ಯವಾಗಿ ಬೈದು ಕೇಳಲು ಬಂದ ಪಿರ್ಯಾದಿಯ ಕುತ್ತಿಗೆಯಲ್ಲಿದ್ದ  ಚಿನ್ನದ ಸರವನ್ನು ಎಳೆದು ಬೆದರಿಕೆ ಒಡ್ಡಿ ನಿಂದಿಸಿರುತ್ತಾರೆ ಎಂಬುದಾಗಿ  ಸ್ಟೆಲ್ಲಾ ಕ್ರಾಸ್ತಾ ರವರು ನೀಡಿದ ದೂರಿನಂತೆ ಮೂಡುಬಿದ್ರೆ ಠಾಣಾ ಅ.ಕ್ರ 13/2013  ಕಲಂ : 392, 323, 504 , 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment