ಅಸ್ವಾಭಾವಿಕ ಮರಣ ಪ್ರಕರಣ
ಬಜಪೆ
ಠಾಣೆ
- ಪಿರ್ಯಾದಿದಾರರಾದ ಮಹೇಶ್ ಶೆಟ್ಟಿ ವಾಸ: ನಡುಗೋಡು ಗ್ರಾಮ ಮಂಗಳೂರು
ತಾಲೂಕು ರವರ ತಂದೆ ಜಯಂತ ಶೆಟ್ಟಿ 55 ವರ್ಷ ಎಂಬವರು ಸುಮಾರು ಒಂದು ವರ್ಷದಿಂದ ಹೊಟ್ಟೆ
ನೋವು ಖಾಯಿಲೆಯಿಂದ ಬಳಲುತ್ತಿದ್ದು,ಇದಕ್ಕೆ
ಮದ್ದು ಮಾಡಿಸಿದರೂ ಗುಣಮುಖವಾಗದೇ ಇದ್ದು, ಈ
ಬಗ್ಗೆ ನೊಂದು ವಿಪರೀತ ಅಮಲು ಪಧಾರ್ಥ ಸೇವಿಸುತ್ತಿದ್ದರು. ದಿನಾಂಕ 18/01/2013 ರಂದು
ರಾತ್ರಿ ಸುಮಾರು 9.00 ಗಂಟೆಗೆ ಊಟ ಮಾಡಿ ಮಲಗಿದವರು ಈ ದಿನ ದಿನಾಂಕ 19/01/2013 ರಂದು
ಬೆಳಿಗ್ಗೆ 6.00 ಗಂಟೆಯ ಮಧ್ಯೆ ಮಂಗಳೂರು ತಾಲೂಕು ನಡುಗೋಡು ಗ್ರಾಮದ ಮಲ್ಲಿಗೆ ಅಂಗಡಿ
ಬ್ರಾಮರಿ ನಿಲಯ ಎಂಬಲ್ಲಿ ಮನೆಯ ಚಾವಡಿ ಕೋಣೆಯ ಪಕ್ಕಾಸಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು
ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ ಎಂಬುದಾಗಿ ಮಹೇಶ್
ಶೆಟ್ಟಿ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಯು.ಡಿ.ಆರ್. ನಂಬ್ರ 03/2013 ಕಲಂ: 174 ಸಿಆರ್ ಪಿಸಿಯಂತೆ
ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮ ಜೂಜಾಟ ಪ್ರಕರಣ
ಮುಲ್ಕಿ
ಠಾಣೆ
- ದಿನಾಂಕ 19.01.2013 ರಂದು 10.00 ಗಂಟೆಗೆ ಕಾರ್ನಾಡು
ಗ್ರಾಮದ
ಲಿಂಗಪ್ಪಯ್ಯಕಾಡು ನಾಗಬನದ ಬಳಿಯಲ್ಲಿ
ಆರೋಪಿ ಬಸವರಾಜ್
ಎಂಬಾತನು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಆಡುತ್ತಿದ್ದವರನ್ನು ಮುಲ್ಕಿ
ಠಾಣಾ
ಪಿ.ಎಸ್.ಐ ರವರು
ಸಿಬ್ಬಂದಿಗಳ
ಜೊತೆ ದಾಳಿ
ಮಾಡಿ
ಆರೋಪಿಯವರನ್ನು ದಸ್ತಗಿರಿ
ಮಾಡಿ
ಮಟ್ಕಾ ಜೂಜಾಟಕ್ಕೆ
ಸಂಬಂಧಿಸಿದ
ನಗದು ಹಣ 1370, ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಬಿಳಿ ಹಾಳೆ 2
ಮಟ್ಕಾ
ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ಪೆನ್ನು
1
ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಆರೋಪಿ ಬಸವರಾಜ್ ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸಿ ಆರೋಪಿ
ರಮೇಶನಿಗೆ
ನೀಡುತ್ತಿರುವುದಾಗಿದೆ ಎಂಬುದಾಗಿ ಮುಲ್ಕಿ ಠಾಣಾ ಅ.ಕ್ರ 4/2013 ಕಲಂ:78 ಕೆ.ಪಿ ಆಕ್ಟ್
ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ಮೂಡಬಿದ್ರೆ ಠಾಣೆ
- ದಿನಾಂಕ : 17-01-2013 ರಂದು ಪಿರ್ಯಾದಿದಾರರಾದ ಯಶೋಧರ
ಪ್ರಾಯ 22 ವರ್ಷ, ತಂದೆ : ಕರುಣಾಕರ
ಪೂಜಾರಿ, ವಾಸ : ಕಿನ್ನಿಪದವು ಪಾಲಡ್ಕ ಗ್ರಾಮ, ಮಂಗಳೂರು
ತಾಲೂಕು ರವರು ತಮ್ಮ ಬಾಬ್ತು ಹೊಸ ಪಲ್ಸರ್ ಮೋಟಾರು ಸೈಕಲನ್ನು (ನೊಂದಾಣೆ
ಆಗಿರುವುದಿಲ್ಲ )
ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ತಂದು ಆಸ್ಪತ್ರೆಯ ಆವರಣದಲ್ಲಿ
ರಾತ್ರಿ 9-30 ಗಂಟೆಗೆ ನಿಲ್ಲಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರ ಬಾವ ಸುಧೀರ್ ರವರ
ಜೊತೆಯಲ್ಲಿ ರಾತ್ರಿ ಉಳಿದುಕೊಂಡು ದಿನಾಂಕ : 18-01-2013 ರಂದು ಬೆಳಿಗ್ಗೆ ಸುಮಾರು 06-30
ಗಂಟೆಗೆ ನಿಲ್ಲಿಸಿದ್ದ ಮೋಟಾರು ಸೈಕಲನ್ನು ನೋಡಿದಾಗ ಕಾಣೆಯಾಗಿದ್ದು, ಸದ್ರಿ
ಮೋಟಾರು ಸೈಕಲನ್ನು ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಆ ಮೋಟಾರು ಸೈಕಲ್
ಕೆಂಪು ಮತ್ತು ಕಪ್ಪು ಬಣ್ಣದ್ದಾಗಿದ್ದು, ಚಾಸಿಸ್ ನಂಬ್ರ :- VCB01126, ಇಂಜಿನ್ ನಂಬ್ರ:- BVB 6264, ಮತ್ತು
ಇದು
2012 ನೇಯ ಮಾಡಲ್ ಆಗಿರುತ್ತದೆ, ಸದ್ರಿ
ಮೋಟಾರು ಸೈಕಲ್‌ನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬುದಾಗಿ ಯಶೋಧರ
ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 14/2013 ಕಲಂ
;
379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ
ಕೈಗೊಳ್ಳಲಾಗಿದೆ.
ನಿರ್ಲಕ್ಷತನದಿಂದ ಮೃತ್ಯು
ಸುರತ್ಕಲ್ ಠಾಣೆ
- ಫಿರ್ಯಾದಿದಾರರಾದ ಮಹಮ್ಮದ್ ಆಶೀಖ್ ಖಾನ್ ಎಂಬವರು ಮಂಗಳೂರು
ತಾಲೂಕು ಕಳವಾರು ಗ್ರಾಮದ ಎಂಆರ್‌ಪಿಎಲ್ 3 ನೇ ಹಂತದ ಕಾಮಗಾರಿ ಗುತ್ತಿಗೆ ವಹಿಸಿಕೊಂಡ
ಪವರ್‌ಮೇಕ್ ಕಂಪನಿಯಲ್ಲಿ ಹೆಲ್ಪರ್ ಕೆಲಸ ಮಾಡಿಕೊಂಡಿದ್ದು ಅಲಗು ಕುಮಾರ್ ಎಂಬವರು
ವೆಲ್ಡಿಂಗ್ ಕೆಲಸ ಮಾಡುತ್ತಿದ್ದು ಈ ದಿ ದಿನಾಂಕ 19-01-2013 ರಂದು ಹೀಟ್ ರಿಕವರಿ ಸ್ಟೀಮ್
ಜನರೇಟರ್-2 ನ ಬೋಯ್ಲರ್‌ನಲ್ಲಿ ಸುಮಾರು 10 ಮೀಟರ್ ಎತ್ತರದಲ್ಲಿ ವೆಲ್ಡಿಂಗ್ ಕೆಲಸ
ಮಾಡುತ್ತಿದ್ದು ಫಿರ್ಯಾದಿದಾರರು ಅಲಗು ಕುಮಾರ್‌ರವರಿಗೆ ಹೆಲ್ಪರ್
ಕೆಲಸ ಮಾಡಿಕೊಂಡಿದ್ದು ಸಂಜೆ ಸುಮಾರು 5-45 ಗಂಟೆಗೆ ಅಲಗು ಕುಮಾರ್‌ರವರು 10 ಮೀಟರ್
ಕೆಳಗೆ ಬಿದ್ದು ತಲೆಗೆ ಹಾಗೂ ಶರೀರಕ್ಕೆ ಗಂಭೀರ ಗಾಯವಾಗಿ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು
ಹೋದಲ್ಲಿ ಸಂಜೆ 6-50 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಘಟನೆಗೆ ಕಾರಣ ಸದ್ರಿ ಪವರ್‌ಮೇಕ್
ಕಂಪನಿಯ ಸೇಫ್ಟೀ ಇಂಜಿನಿಯರ್ ರಾಜ್ ಕುಮಾರ್ ಹಾಗೂ ಸೇಫ್ಟೀ ಸುಪರ್‌ವೈಸರ್ ಶ್ಯಾಮ್
ಪಟ್ನಾಯಕ್ ರವರು ಕೆಲಸಗಾರರಿಗೆ ಸೇಫ್ಟೀ ಬೆಲ್ಟ್ ನೀಡದೇ ಹಾಗೂ ಕೆಳಗಡೆ ಬೀಳದಂತೆ ನೆಟ್
ಕಟ್ಟದೇ ಕೆಲಸಗಾರರಿಗೆ ಸುರಕ್ಷತಾ ಕ್ರಮವನ್ನು ಅನುಸರಿಸದೇ ತೀವ್ರ ನಿರ್ಲಕ್ಷತನ
ತೋರಿರುವುದರಿಂದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಅಲಗು ಕುಮಾರ್ ಯಾದವ್ ಸುಮಾರು 10
ಮೀಟರ್ ಎತ್ತರದಿಂದ ಕೆಳಗಡೆ ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ಮಹಮ್ಮದ್ ಆಶೀಖ್ ಖಾನ್ ರವರು ನೀಡಿದ ದೂರಿನಂತೆ ಸುರತ್ಕಲ್
ಪೊಲೀಸ್ ಠಾಣಾ ಅ.ಕ್ರ. 19/13 ಕಲಂ 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment