Thursday, January 17, 2013

Daily Crime Incidents for Jan 15, 2013


ಹಲ್ಲೆ ಪ್ರಕರಣ

ಮಂಗಳೂರು ದಕ್ಷಿಣೆ ಠಾಣೆ

  • ದಿನಾಂಕ 14-01-13 ರಂದು ರಾತ್ರಿ 10-45 ಗಂಟೆಯ ವೇಳೆಗೆ ಫಿರ್ಯಾಧುದಾರರು ತನ್ನ ಮೆನಯಾದ ಶಿವನಗರಕ್ಕೆ ಹೋಗುತ್ತಿರುವಾಗ ಪಾಂಡೇಶ್ವರ ರೈಲ್ವೇ ಗೇಟ್ ಅಂದರೆ ಕೊರಗಜ್ಜನ ಕಟ್ಟೆಯ ಬಳಿ ಸುಮಾರು 5 ರಿಂದ 6 ಜನ ಯುವಕರು ಫಿರ್ಯಾದುದಾರರನ್ನು ಉದ್ದೇಶಿಸಿ ನೀನು ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ರುದ್ರ ಗಿರಿಯ ತಮ್ಮನಲ್ಲವ? ಎಂದು ಜೋರಾಗಿ ಹೇಳಿದ್ದು, ಫಿರ್ಯಾದುದಾರರು ಅವರಲ್ಲಿ ಹೌದು ಎಂದು ಹೇಳಿದಾಗ ಯುವಕರು ನಿನ್ನ ಅಣ್ಣ ರುದ್ರಗಿರಿ ನಾವುಗಳು ಪ್ರಥಮ ಬಿಹೆಚ್ಎಂ ನಲ್ಲಿ ಇರುವಾಗ ನಮಗೆ ತುಂಬಾ ತೊಂದರೆ ಕೊಟ್ಟಿದ್ದಾನೆ ಎಂದು ಹೇಳಿ, ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ ಎಲ್ಲರೂ ಸೇರಿ ಕೈಗಳಿಂದ ಹಣೆಯ ಬಳಿ, ಮೂಗಿನ ಎಡಬದಿ, ಮುಖದ ಬಲಬದಿ ಕುತ್ತಿಗೆ ಬಳಿ ಹೊಡೆದುದಲ್ಲದೇ ಎಡ ಕೈಯನ್ನು ಎಳೆದು ತಿರುಚಿದ್ದು, ಪರಿಣಾಮ ಫಿರ್ಯಾದುದಾರರಿಗೆ ಅಂಗೈಗೆ ಉಳುಕಿದ ಗಾಯವಾಗಿದ್ದು, ನಂತರ ನೆಲಕ್ಕೆ ಬೀಳಿಸಿ ಎಳೆದಾಡಿದ್ದು, ಪರಿಣಾಮ ಎಡ ಕೈಯ ಮೊಣಕಂಠಿನ ಕೆಳಗೆ ಬೆನ್ನಿನ ಹಿಂಬದಿ ಸೊಂಟದ ಮೇಲೆ ತರಚಿದ ಗಾಯವಾಗಿರುತ್ತದೆ. ನಂತರ ಹಲ್ಲೆ ನಡೆಸಿದವರು ಸಾರ್ವಜನಿಕರು ಬರುವುದನ್ನು ಕಂಡು ಓಡಿ ಹೋಗಿರುತ್ತಾರೆ ಎಂಬಿತ್ಯಾದಿಯಾಗಿದ್ದು ಹಲ್ಲೆನಡೆಸಿದ ಯುವಕರು ಮಂಗಳೂರಿನ ಪಾಂಡೇಶ್ವರ ಶ್ರೀನಿವಾಸ್ ಕಾಲೇಜಿನ ವಿಧ್ಯಾಥರ್ಿಗಳಾಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ  ಶ್ರೀ ಭಾಸ್ಕರಗಿರಿ (25), ತಂದೆ: ಮಣಿಕುಮಾರ್, ವಾಸ: ತಾಚೈ, ಸಿಪ್ಪು, ಸಮಸ್ತೆ, ಭೂತಾನ್ಹಾಲಿ ವಾಸ: ಅ/ಔ ಭಟ್ 4ನೇ ಅಡ್ಡ ರಸ್ತೆ, ಶಿವ ನಗರ, ಪಾಂಡೇಶ್ವರ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣೆ ಠಾಣೆ ಅಪರಾದ ಕ್ರಮಾಂಕ 15/13 ಕಲಂ 143, 147, 341, 323, 504 ಖ/ಘ 149  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಖೆ ಕೈಗೊಳ್ಳಲಾಗಿದೆ.


ಅಪಘಾತ  ಪ್ರಕರಣ

ಉಳ್ಳಾಲ ಠಾಣೆ

  • ದಿನಾಂಕ 13-01-2013 ರಂದು ರಾತ್ರಿ ಸಮಯ ಬೀರಿ ಜಂಕ್ಷನ್ನಿಂದ ಕೋಟೆಕಾರ್ನಲ್ಲಿರುವ ತನ್ನ ಮನೆಗೆ ಏಂ 19 ಆ 6237 ನೇ ನಂಬ್ರದ ಆಟೋ ರಿಕ್ಷಾದಲ್ಲಿ  ಪ್ರಯಾಣಿಸುತ್ತಿದ್ದು, ರಿಕ್ಷಾ ಚಾಲಕ ರೋಹಿತ್ರವರು ಆಟೋ ರಿಕ್ಷಾವನ್ನು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸುತ್ತಿದ್ದು, 21-45 ಗಂಟೆಗೆ ಕೋಟೆಕಾರ್ ಹೈಯರ್ ಪ್ರೈಮರಿ ಶಾಲೆಯ ಬಳಿ ತಲುಪುತ್ತಿದ್ದಂತೆ ಚಾಲಕ ರೋಹಿತ್ರವರು ಆಟೋ ರಿಕ್ಷಾವನ್ನು ಒಮ್ಮೆಲೆ ತಿರುಗಿಸಿದ ಪರಿಣಾಮ ರಿಕ್ಷಾ ಸಮೇತ ರಸ್ತೆ ಬಿದ್ದ ಪಿಯರ್ಾದಿಯ ಎಡ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಾಳು ಕೋಟೆಕಾರ್ ಜೆ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ದಯಾನಂದ ತಂದೆ: ಲೋಕಯ್ಯ ಗಟ್ಟಿ, ಗಟ್ಟಿ ಕಂಪೌಂಡ್, ಕೋಟೆಕಾರ್ ಗ್ರಾಮ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 16/2013 ಕಲಂ 279, 338  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಖೆ ಕೈಗೊಳ್ಳಲಾಗಿದೆ.


  • ದಿನಾಂಕ 14.01.2013 ರಂದು ಪಿರ್ಯಾದಿದಾರರು ತನ್ನ ಸಂಸಾರದೊಂದಿಗೆ ಮೋಟಾರ್ ಸೈಕಲ್ ನಂಬ್ರ ಕೆಎ19 ಇಸಿ 1407ನೇಯದರಲ್ಲಿ ಉಚ್ಚಿಲದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು ಸೋಮೇಶ್ವರ ಗ್ರಾಮದ ಅಡ್ಕ ಎಂಬಲ್ಲಿಗೆ ಸಮಯ  15.45 ಗಂಟೆಗೆ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಸ್ವಿಪ್ಟ್ ಕಾರು ನಂಭ್ರ ಕೆಎ19 ಎಂಎ 2857ನೇಯದನ್ನು ಅದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ತನ್ನ ಹೆಂಡತಿ ಮತ್ತು ಮಗಳ ಜೊತೆಯಲ್ಲಿ ರಸ್ತೆಗೆ ಬಿದ್ದು ಪಿರ್ಯಾದಿಗೆ ತೀವ್ರ ತರದ ರಕ್ತಗಾಯ ಮತ್ತು ಹೆಂಡತಿ, ಮಗಳಿಗೆ ತರಚಿದ ರಕ್ತ ಗಾಯವಾಗಿರುವುದು ಮತ್ತು ಸದ್ರಿ ಕಾರಿನ  ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿರುವುದು ಎಂಬುದಾಗಿ ಪಿರ್ಯಾದಿದಾರರಾದ ಅಬ್ದುಲ್ ಅಜೀಜ್ (35) ತಂದೆ: ಅಹ್ಮದ್ ಹುಸೈನ್ ನ್ಯೂ ಪಂಡಿಂಜಾರ್ ಮನೆ, ಉಚ್ಚಿಲ ಮಸೀದಿ ಹತ್ತಿರ, ಸೋಮೇಶ್ವರ ಗ್ರಾಮ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 17/2013 ಕಲಂ 279, 338  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಜುಗಾರಿ ಆಟ- ಆರೋಪಿಗಳ ಬಂಧನ

ಬಜಪೆ ಠಾಣೆ

  • ದಿನಾಂಕ:13/14-01-2013 ರಂದು ರಾತ್ರಿ 00-45 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಬಜಪೆ ಪೊಲೀಸ್ ಠಾಣಾ ಸರಹದ್ದಾದ ಪಡುಪೆರಾರ ಗ್ರಾಮದ ಕಟ್ಟಲ್ತಾಯ ಪಂಜುಲರ್ಿ ದೈವಸ್ಥಾನದ ಹತ್ತಿರ ನದಿಯಲ್ಲಿ ಮರಳಿನ ಮೇಲೆ ಒಟ್ಟು 8 ಮಂದಿ ಅರೋಪಿಗಳಾದ 1.ಐವನ್ ಡಿ'ಕೋಸ್ತಾ 2.ಐವನ್ 3.ಅಮರ್ ಆಳ್ವ 4.ಸಂದೀಫ್ 5.ಸಚಿನ್ ಶೆಟ್ಟಿ 6.ಆಸಿಫ್ 7.ರಾಜ್ ಕುಮಾರ್ 8.ಶರತ್ ನಗದು ಹಣ ರೂ. 15,000/- ನ್ನು ಪಣವಾಗಿಟ್ಟು ಇಸ್ಫೀಟ್ ಎಲೆಗಳಿಂದ  ಉಲಾಯಿ ಪಿದಾಯಿ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದು, ಆರೋಪಿಗಳು ಜುಗಾರಿ ಆಟಕ್ಕೆ 3 ಮೊಬೈಲ್ ಮತ್ತು ಮೋಟಾರು ಸೈಕಲ್ ಏಂ 19 ಇಃ 7460 ಸ್ಕೂಟರ್  ಏಂ 19 8942 ಮತ್ತು ಸ್ಕಾಪರ್ಿಯೋ ಕಾರು  ಏಂ 19 ಒಅ 2294 ಹಾಗೂ ಒಂದು ಅಟೋ ರಿಕ್ಷಾವನ್ನು ಕೂಡಾ ಜುಗಾರಿ ಆಟಕ್ಕೆ ಉಪಯೋಗಿಸಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿರುವುದಾಗಿದೆ ಎಂಬುದಾಗಿ ಶ್ರೀ ದಿನಕರ ಶೆಟ್ಟಿ, ಪೊಲೀಸ್ ನಿರೀಕ್ಷಕರು, ಬಜಪೆ ಪೊಲೀಸ್ ಠಾಣೆ, ಬಜಪೆ. ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 13/2013 ಕಲಂ: 87 ಕೆ.ಪಿ.ಆಕ್ಟ್ ರಂತೆ ಪ್ರಕರಣ ಲಿಸಿ ತನಿಖೆ ಕೈಗೊಳ್ಳಲಾಗಿದೆ.


ನಿರ್ಲಕ್ಷತನದಿಂದ ಮೃತ್ಯು

ಬಜಪೆ ಠಾಣೆ

  • ದಿನಾಂಕ: 14-01-2013 ರಂದು ರಾತ್ರಿ ಸುಮಾರು 9-30 ಗಂಟೆಯ ಹೊತ್ತಿಗೆ ಆರೋಪಿಯು ಮಂಗಳೂರು ನಗರದ, ಕೆಂಜಾರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಭಜನಾ ಮಂದಿರದ ಹತ್ತಿರದ ಶ್ರೀ ಎ.ಜೆ. ಶೆಟ್ಟಿ ಹಾಗೂ ದಿ:ಮನ ಮೋಹನ್ ಮಲ್ಲಿ ಇವರಿಗೆ ಸಂಬಂಧ ಪಟ್ಟ ಜಾಗದಲ್ಲಿ ಹೂಂಡೈಎಕ್ಸಾವೇಟರ್ ವಾಹನದಲ್ಲಿ ತೆಂಗಿನ ಮರ ಹಾಗೂ ಇತರ ಮರಗಳನ್ನು ಮಗುಚಿ ಹಾಕುವ ಕೆಲಸ ನಿರ್ವಹಿಸುತ್ತಾ ರಾತ್ರಿ ಹೊತ್ತಿನಲ್ಲಿ ಯಾವುದೇ ಮುಂಜಾಗ್ರತೆ ಇಲ್ಲದೇ ಅಜಾಗರೂಕತೆಯಿಂದ ತೆಂಗಿನ ಮರಗಳನ್ನು ಮಗುಚಿ ಹಾಕಿದ್ದರಿಂಧ ತೆಂಗಿನ ಮರದ ಸೋಗೆ ಕಡಿಯುತ್ತಿದ್ದ ನರಸಿಂಹ ಪೈ (47 ವರ್ಷ) ಎಂಬವರ ಮೈ ಮೇಲೆ ತೆಂಗಿನ ಮರವೊಂದು ರಭಸದಿಂದ ಬಿದ್ದ ಪರಿಣಾಮ ಸದರಿ ನರಸಿಂಹ ಪೈಯವರ ತಲೆಗೆ ಹಾಗೂ ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸಂದೇಶ್ ಪೈ, 30 ವರ್ಷ, ತಂದೆ: ಜಗದೀಶ್ ಪೈ, ವಾಸ: 3-129(5), ತೋಡ್ಲ ಗುಡ್ಡೆ , ಕಾವೂರು, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ 14/2013 ಕಲಂ: 304(ಎ) ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment