Friday, January 4, 2013

Daily Crime Incidents for Jan 04, 2013

ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾಧಿದಾರರಾದ ಶ್ರೀನಿವಾಸ, ಪ್ರಾಯ: 22 ವರ್ಷ, ತಂದೆ: ಪಯಮಳ ಹಾಲಿ ವಾಸ: ಹೊಯ್ಗೆ ಬಜಾರ್, ಮಂಗಳೂರು ಖಾಯಂ ವಿಳಾಸ: ಸಾವಡಿ ಸ್ಟ್ರೀಟ್, ಪುಕ್ಕಿರವಾರಿ ಅಂಚೆ, ಕಲ್ಲಕುಚರ್ಿ, ವಿಳುಪುರಂ ಜಿಲ್ಲೆ, ತಮಿಳುನಾಡು ರವರ ದೊಡ್ಡಪ್ಪನ ಮಗನಾದ ಮಾಣಿಕ್ಯವೇಲು, ಪ್ರಾಯ: 35 ವರ್ಷ ಎಂಬವರು ದಿನಾಂಕ 03-01-2013 ರಂದು ಸಂಜೆ ಸಮಯ ಸುಮಾರು 19-00 ಗಂಟೆಗೆ ತನ್ನ ವಾಸದ ಮನೆಯ ಕೋಣೆಯಲ್ಲಿ ಕೇಬಲ್ ವಯರ್ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಇವರಿಗೆ ವಿವಾಹವಾಗಿ ಒಂಬತ್ತು ವರ್ಷಗಳಾಗಿ, ಇವರಿಗೆ ಮಕ್ಕಳಿಲ್ಲದೇ ಇದ್ದು, ಅಲ್ಲದೇ ಇವರು ಪಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಖಾಯಿಲೆ ವಾಸಿಯಾಗದೇ ಇದ್ದುದರಿಂದ ಜೀವನಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮೃತ ದೇಹವನ್ನು ಬಿಟ್ಟು ಕೊಡುವಂತೆ ಶ್ರೀನಿವಾಸ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು,ಡಿ.ಆರ್ ನಂಬ್ರ 02/13 ಕಲಂ : 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದುದಾರರಾದ ರಾಮಚಂದ್ರ ಕೆ, (45) ತಂದೆ : ಶಿವಪ್ಪ, ವಾಸ : ಆ. ಓಠ 20-7 464,  ಕಂದುಕ ಜೈರ ಮೇಸ್ತ್ರಿ ಕಂಪೌಂಡ್, ಮಂಗಳೂರು  ರವರು ತನ್ನ ಬಾಬ್ತು ಕೆ.ಎ ಇ.ಡಿ 1533 ನೇ ಬಜಾಜ್ ಪಲ್ಸರ್ ಮೋಟಾರು ಸೈಕಲ್ ನ್ನು ತನ್ನ ತಂಗಿಯ ಮಗ ಪವೀಶ್ ರಾಜ್ ಎಂಬವರಿಗೆ ದಿನಾಂಕ 30-12-2012 ರಂದು ನೀಡಿದ್ದು, ಆತನು ದಿನಾಂಕ 31-12-2012 ರ 02-30 ಗಂಟೆಗೆ ನಗರದ ಕಂದಕದ ಭಜನಾ ಮಂದಿರ ಬಳಿಯ ಗಣೇಶ್ ಪೂಜಾರಿ ಎಂಬವರ ಮನೆಯ ಅಂಗಳದಲ್ಲಿ ಪಾಕರ್್ ಮಾಡಿದ್ದನ್ನು ದಿನಾಂಕ 31-12-2012 ರಂದು ಬೆಳಿಗ್ಗೆ 9-00 ಗಂಟೆಗೆ ನೋಡಿದಾಗ, ಸದ್ರಿ ಮೋಟಾರು ಸೈಕಲ್ ಅಲ್ಲಿರದೇ ಇದ್ದು, ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು,  ಫಿಯರ್ಾದುದಾರರು ಈ ದಿನದ ವರೆಗೂ ಹುಡುಕಾಡಿದರೂ ಪತ್ತೆಯಾಗದಿದ್ದರಿಂದ ಈ ದಿನ ದೂರು ನೀಡಿರುವುದು ಎಂಬಿತ್ಯಾದಿ ಕಳವಾದ ಮೋಟಾರು ಸೈಕಲ್ನ ಅಂದಾಜು ಬೆಲೆ ರೂ 47,000/- ಆಗಬಹುದು ಎಂಬುದಾಗಿ ರಾಮಚಂದ್ರ ಕೆ, ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ.04/2013 ಕಲಂ 379  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕಾಣೆ ಪ್ರಕರಣ

ಹುಡುಗಿ ಕಾಣೆ 

ದಕ್ಷಿಣ ಠಾಣೆ

  • ದಿನಾಂಕ 28-12-2012 ರಿಂದ ಫಿರ್ಯದುದಾರರಾದ ಶ್ರೀ ಲಕ್ಷ್ಮೀ ನಾರಾಯಾಣ ಭಟ್.ಪಿ ರವರ  ಮನೆಯಲ್ಲಿ ಕೆಲಸಕ್ಕಿದ್ದ, ಉಡುಪಿ ಸ್ಟೇಟ್ಹೋಮ್ನ ನಿವಾಸಿ ಕುಮಾರಿ ಪ್ರೇಮ ಪ್ರಾಯ 20 ವರ್ಷ ಎಂಬವಳು ದಿನಾಂಕ 03-01-2013 ರಂದು ಮಧ್ಯಾಹ್ನ 1-15 ಗಂಟೆತನಕ ಫಿಯರ್ಾದುದಾರರ ಮನೆಯಲ್ಲಿಯೇ ಇದ್ದವಳು ಸಂಜೆ 3-45 ಗಂಟೆಗೆ ಫಿರ್ಯದುದಾರರು ಕುಮಾರಿ ಪ್ರೇಮಳನ್ನು ಹುಡುಕಾಡಿದಾಗ, ಪತ್ತೆಯಾಗದೇ ಇದ್ದು, ಕುಮಾರಿ ಪ್ರೇಮಳು ಫಿಯರ್ಾದುದಾರರ ಮನೆಯಲ್ಲಿ ಯಾರಿಗೂ ತಿಳಿಸದೆ ಕಾಣಿಯಾಗಿರುತ್ತಾಳೆ ಎಂಬುದಾಗಿ ಶ್ರೀ ಲಕ್ಷ್ಮೀ ನಾರಾಯಾಣ ಭಟ್.ಪಿ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ.05/2013 ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ

ಪೂರ್ವ ಪೊಲೀಸ್ ಠಾಣೆ

  • ಪಿರ್ಯಾದಿದಾರರಾದ ಶ್ರೀವ್ಮತಿ.ಮೇರಿ ಜೋಸ್ (42) ಗಂಡ: ಜೋಸ್ ಪಿ.ಎಲ್ ವಾಸ: ಪುನ್ನೆಕಲ್ ಹೌಸ್, ಸುಲ್ತಾನ್ ಬತ್ತೇರಿ ಸಂಚೆ ಮತ್ತು ಗ್ರಾಮ, ವಯನಾಡು ಜಿಲ್ಲೆ, ಕೇರಳ. ರವರ ಗಂಡನಾದ ಜೋಸ್ ಪಿ.ಎಲ್. ಎಂಬವರು ಮಂಗಳೂರಿನ ತೇಜಸ್ವಿನಿ ಆಸ್ಫತ್ರೆಯಲ್ಲಿ ಅವರ ಸಂಬಂಧಿಕರಾದ ಫಾ! ಜೋಜರ್್ ಎಂಬವರು ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದು ಅವರ ಯೋಗ ಕ್ಷೇಮ ನೋಡಿಕೊಳ್ಳುವರೇ ದಿನಾಂಕ: 28-12-2012 ರಂದು ಮನೆಯಿಂದ ಮಂಗಳೂರಿಗೆ ಹೊರಟು ಬಂದಿದ್ದು  ದಿನಾಂಕ :31-12-2012 ರ ಬೆಳಗ್ಗೆ 03-00 ಗಂಟೆಯ ವರೆಗೆ ಆಸ್ಫತ್ರೆಯಲ್ಲಿ ರೋಗಿಯ ಆರೈಕೆ ಮಾಡಿಕೊಂಡಿದ್ದು ನಂತರ ಅವರು ಅಸ್ಫತ್ರೆಯಲ್ಲಿಯೂ ಇಲ್ಲದೇ ಮನೆಗೂ ಬಾರದೇ ಇರುವುದರಿಂದ ಆವರ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಅವರು ಪತ್ತೆಯಾದೇ ಇದ್ದುದರಿಂದ ಪಿರ್ಯಾದಿದಾರರು ಈ ದಿನ ದಿನಾಂಕ: 03-01-2013 ರಂದು ಠಾಣೆಗೆ ಬಂದು ಕಾಣೆಯಾದ ಜೋಸ್ ಪಿ.ಎಲ್. ಎಂಬವರನ್ನು ಪತ್ತೆಮಾಡಿಕೊಡಬೇಕಾಗಿ ಎಂಬುದಾಗಿ ಮೇರಿ ಜೋಸ್ ರವರು ನೀಡಿದ ದೂರಿನಂತೆ ಪೂರ್ವ ಪೊಲೀಸ್ ಠಾಣಾ ಅ,ಕ್ರ 01/2013 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹುಡುಗ ಕಾಣೆ

ಬಜಪೆ ಠಾಣೆ

  • ಫಿರ್ಯಾದಿದಾರರಾದ ಮೊಹಮ್ಮದ್ ಶರೀಫ್, 45 ವರ್ಷ, ತಂದೆ: ಮೊಯಿದಿನ್ ಕುಟ್ಟಿ, ವಾಸ: ನೀರಪಲ್ಕೆ ಮನೆ, ಕುಪ್ಪೆಪದವು, ಕೆಲಿಂಜಾರು ಗ್ರಾಮ, ಮಂಗಳೂರು ತಾಲೂಕು ರವರ 2ನೇ ಮಗನಾದ ಮಹಮ್ಮದ್ ಸಫ್ವಾನ್, 19 ವರ್ಷ ಎಂಬವನು ದಿನಾಂಕ: 02-01-2013 ರಂದು ಬೆಳಿಗ್ಗೆ 09-00 ಗಂಟೆಗೆ ತನ್ನ ಮನೆಯಾದ ಕುಪ್ಪೆಪದವಿನ ನೀರಪಲ್ಕೆ ಮನೆ ಎಂಬಲ್ಲಿಂದ ಕುಪ್ಪೆಪದವಿನ ಅಂಗಡಿಗೆ ಹೋಗುವುದಾಗಿ ಹೇಳಿ ಬಂದವನು ಅಂಗಡಿಗೆ ಬಂದು ಬಳಿಕ ಕುಪ್ಪೆಪದವಿನಿಂದ ಸುರೇಶ್ ಫಿಟ್ಟರ್ ಎಂಬವರ ಮೋಟಾರು ಸೈಕಲ್ನಲ್ಲಿ ಮಂಗಳೂರಿಗೆ ಹೋಗುವುದಾಗಿ ಹೇಳಿ ಕೈಕಂಬಕ್ಕೆ ಬಂದವನು ಮರಳಿ ಮನೆಗೆ ಬಾರದೇ ಕಾಣೆಯಾಗಿರುವುದು ಎಂಬುದಾಗಿ ಮೊಹಮ್ಮದ್ ಶರೀಫ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 02/2013 ಕಲಂ: ಹುಡುಗ  ಕಾಣೆ ಯಂತೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.



ದರೋಡೆ ಪ್ರಕರಣ

ಉಳ್ಳಾಲ ಠಾಣೆ

  • ದಿನಾಂಕ. 2-1-2013 ರಂದು 23-00 ಗಂಟೆಯಿಂದ 3-1-2013 ರಂದು 05-00 ಗಂಟೆಯ ಮದ್ಯೆ ಮಂಗಳೂರು ತಾಲೂಕು ಕಿನ್ಯಾ ಗ್ರಾಮದ ಮೀಂಪ್ರಿ ಸಂಕೇಶ ಮನೆ ಎಂಬಲ್ಲಿನ ಫಿರ್ಯಾದಿದಾರರಾದ ಸುನೀತ (28) ಗಂಡ. ಜಯರಾಂ ವಾಸ. ಸಂಕೇಶ ಹೌಸ್ ಮೀಂಪ್ರಿ ಡೋರ್ ನಂ. 1-333/4, ಕಿನ್ಯಾ ಗ್ರಾಮ, ಮಂಗಳೂರು ತಾಲೂಕು ರವರ ವಾಸದ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ತೆರೆದು ಮನೆಯ ಒಳಗೆ ಪ್ರವೇಶಿಸಿ ಆ ಮನೆಯ ಬೆಡ್ರೂಮಿನಲ್ಲಿ ಇರಿಸಿದ್ದ ಗೋದ್ರೆಜ್ ಕಪಾಟಿನಲ್ಲಿ 2 ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಇಟ್ಟಿದ್ದ ಒಟ್ಟು 24 ಪವನ್ ತೂಕದ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ. 5ಲಕ್ಷ) ಹಾಗೂ ಕೋಟೆಕಾರು ಸಿಂಡಿಕೇಟ್ ಬ್ಯಾಂಕಿನ ಪಾಸ್ಪುಸ್ತಕ ಹಾಗೂ ನಗದು ಹಣ ರೂಪಾಯಿ 2,000/ ಇದ್ದ ಬ್ಯಾಗನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಸುನೀತ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಮೊ.ನಂ. 2/2013 ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉತ್ತರ ಠಾಣೆ

  • ಫಿಯರ್ಾದಿದಾರರಾದ ಶ್ರೀಮತಿ ವೀಣಾ ಮಂಗಳ, ಪ್ರಾಯ 30 ವರ್ಷ, ಗಂಡ: ಪ್ರವೀಣ್ ಕುಮಾರ್, ವಾಸ: ಭವಾನಿ ನಿಲಯ, ಬಜಾಲ್ ಅಂಚೆ, ಎಕ್ಕೂರು, ಮಂಗಳೂರು ರವರು ಮಿಲಾಗ್ರೀಸ್ ಸೆಂಟರ್ ಬಿಲ್ಡಿಂಗ್ ನಲ್ಲಿ ಆಯುಷ್ ಎಂಬ ಸ್ಟುಡಿಯೋವನ್ನು ನಡೆಸುತ್ತಿದ್ದು, ದಿನಾಂಕ 02-01-2013 ರಂದು ಸಂಜೆ 7:00 ಗಂಟೆಗೆ ಫಿಯರ್ಾದಿದಾರರು ಹಾಗೂ ಅವರ ಸ್ಟುಡಿಯೋದಲ್ಲಿ ಕೆಲಸ ಮಾಡುವ ಯುವಕ ಬೀಗ ಹಾಕಿ ಹೋಗಿದ್ದು, ಮರುದಿನ ಬೆಳಿಗ್ಗೆ  8:30 ಗಂಟೆಗೆ ಹತ್ತಿರದ ಬಸ್ ಪಾಸ್ ವಿತರಣೆ ಕೇಂದ್ರದ ಸಿಬ್ಬಂದಿಗಳು ಫಿಯರ್ಾದಿದಾರರಿಗೆ ಫೋನ್ ಮುಖಾಂತರ ಸ್ಟುಡಿಯೋದ ಬೀಗ ಹೊಡೆದಿರುವುದಾಗಿ ತಿಳಿಸಿದ್ದು, ಬಂದು ನೋಡಲಾಗಿ 1. ಆ 90 ಓಏಔಓ ಆಉಖಿಂಐ ಅಂಒಇಖಂ,  2. ಅಂಒಇಖಂ ಐಇಓಖ  ಕಳವಾಗಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 24,000 /- ಆಗಿರಬಹುದು. ಈ ಸೊತ್ತುಗಳನ್ನು ಯಾರೋ ಕಳ್ಳರು ರಾತ್ರಿ ಸಮಯ ಕಳವು ಮಾಡಿದ್ದುದಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕಳವಾದ ಸೊತ್ತನ್ನು ಪತ್ತೆ ಮಾಡಿ ಕೊಡಬೇಕೆಂದು ಎಂಬುದಾಗಿ ವೀಣಾ ಮಂಗಳ ರವರು ನೀಡಿದ ದೂರಿನಂತೆ ಉತ್ತರ ಠಾಣಾ ಮೊ.ನಂ. 02/2013 ಕಲಂ 457, 380 ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ

  • ದಿನಾಂಕ: 03-01-2013 ರಂದು ಸಮಯ ಸುಮಾರು ಬೆಳಿಗ್ಗೆ 09.00 ಗಂಟೆಗೆ ಮೊ,ಸೈಕಲ್ ನಂಬ್ರ ಏಂ-19 ಇಅ-1184 ನ್ನು ಅದರ ಸವಾರ ಮೊಹಮ್ಮದ್ ನಿಯಾಜ್ ಎಂಬವರು  ಪಿರ್ಯಾದುದಾರರಾದ ಮಹಮ್ಮದ್ (35) ತಂದೆ- ಅಬ್ದುಲ್ ರಹಿಮಾನ್, ವಾಸ :ಎಂ,ಜೆ.ಎಂ-286, ಕಸಬಾ ಬೆಂಗ್ರೆ,  ಮಂಗಳೂರು ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ನಂತೂರು ಕಡೆಯಿಂದ ಪಂಪ್ವೆಲ್ ಕಡೆಗೆ ರಾ-ಹೆದ್ದಾರಿ 66ರಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಕನರ್ಾಟಕ ಬ್ಯಾಂಕ್ನ ಪ್ರಧಾನ ಕಚೇರಿ ಎದುರು ತಲುಪುವಾಗ ಮೊ,ಸೈಕಲ್ಗೆ ನಿರ್ಲಕ್ಷತನದಿಂದ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದುದಾರರು ಮತ್ತು ಮೊ,ಸೈಕಲ್ ಸವಾರ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕಣ್ಣಿನ ಬಳಿ ರಕ್ತಗಾಯವಾಗಿ ಮತ್ತು ಎರಡೂ ಕಾಲುಗಳ ಮೊಣಗಂಟಿಗೆ ತರಚಿದ ಗಾಯ ಉಂಟಾಗಿ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಹಮ್ಮದ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಮೊ.ನಂಬ್ರ 02/2013 279 , 337 ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment