ಕೊಲೆ ಪ್ರಕರಣ
ಉತ್ತರ ಠಾಣೆ:
- ದಿನಾಂಕ 31-12-2012 ರಂದು ರಾತ್ರಿ 10:45 ಗಂಟೆಯ ಸಮಯ ಮಂಗಳೂರಿನ ಕಾರ್ಸ್ಟ್ರೀಟನ ಕಾಶೀಮಠ ದಲ್ಲಿ ನೌಕರರು ಮಲಗುವ ಒಂದನೇ ಅಂತಸ್ತಿನ ಕೋಣೆಯಲ್ಲಿ ನಂದಕುಮಾರ್ ಪ್ರಭು ಪ್ರಾಯ 41 ವರ್ಷ ಮತ್ತು ಮಹೇಶ್ ಪ್ರಭು ಪ್ರಾಯ 39 ವರ್ಷ ರವರೊಳಗೆ ಮೊದಲಿನಿಂದಲೂ ವೈಮನಸ್ಸಿದ್ದು, ಈ ದಿನ ಜಗಳ ಬೆಳೆದು ನಂದಕುಮಾರ್ ಪ್ರಭು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಮಹೇಶ್ ಪ್ರಭುವಿನ ಎದೆಗೆ ತಿವಿದು ತೀವ್ರ ಗಾಯಗೊಳಿಸಿದ್ದು, ಯೆನಪೊಯ ಆಸ್ಪತ್ರೆಗೆ ಸಾಗಿಸಲ್ಪಟ್ಟು ರಾತ್ರಿ 11:00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶ್ರೀ ಗಿರಿ ಪ್ರಭು, ಪ್ರಾಯ 74 ವರ್ಷ, ತಂದೆ: ದಿ. ಗೋಪಾಲ ಪ್ರಭು, ವಾಸ: ಹೌಸ್ ನಂಬ್ರ 8-87, ಪ್ರಭು ಭಾಗ್ ಸ್ಟ್ರೀಟ್, ಕೊಚ್ಚಿ ತಿರುಮಲ ದೇವಸ್ವಂ, ಪಡಿನ್ವರೆನಡಾ, ದಕ್ಷಿಣ ಚೆಲ್ಲಾಯ ಕೊಚ್ಚಿನ್ - 2 ರವರು ನೀಡಿದ ದೂರಿನಂತೆ ಉತ್ತರ ಠಾಣಾ ಅ.ಕ್ರ. 210/2012 ಕಲಂ 302 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ಸುರತ್ಕಲ್ ಠಾಣೆ:
- ಪಿರ್ಯಾದಿದಾರರಾದ ಗಂಗಾದರ ಪ್ರಾಯ ಃ 29 ವರ್ಷ ತಂದೆ ಃ ಸದಾಶಿವ ವಾಸಃ ಡೋರ್ ನಂಬ್ರ ಜಿಎಲ್ 5/43 ಕೃಷ್ಣಾಪುರ -5 ನೇ ಬ್ಲಾಕ್ ಕಾಟಿಪಳ್ಳ ಗ್ರಾಮ ಮಂಗಳೂರು ತಾಲೂಕು ರವರ ಅಣ್ಣ ಬಾಲಕೃಷ್ಣರವರು ಕಾಪೊರ್|ರೇಟರ್ ಬಶೀರ್ ಅಹಮ್ಮದ್ರವರ ಬಿಲ್ಡಿಂಗ್ ಕೆಲಸ ಮಾಡಿಕೊಂಡಿದ್ದು ಅವರಿಂದ ಕೆಲಸದ ಬಾಬ್ತು ಬಾಲಕೃಷ್ಣರವರಿಗೆ ಹಣ ಬರಲು ಬಾಕಿ ಇದ್ದು ನಿನ್ನೆ ದಿನಾಂಕ 31-12-12 ರಂದು ಸದ್ರಿ ಹಣದ ಬಗ್ಗೆ ಬಾಲಕೃಷ್ಣರವರು ಬಶೀರ್ ಅಹಮ್ಮದ್ರವರಲ್ಲಿ ಕೇಳಿದ್ದರು. ಈ ದಿನ ದಿನಾಂಕ 01-01-2013 ರಂದು ಅಪರಾಹ್ನ ಬಶೀರ್ ಅಹಮ್ಮದ್ರವರ ಮಗ ಅಕೀಲ್ ಎಂಬವರು ಬಾಲಕೃಷ್ಣರವರ ಮೊಬೈಲ್ಗೆ ಕರೆ ಮಾಡಿ ಕಾಟಿಪಳ್ಳ 3ನೇ ಬ್ಲಾಕ್ನಲ್ಲ್ರಿರುವ ಅವರ ಬಾಬ್ತು ಅಂಗಡಿಗೆ ಬರುವಂತೆ ತಿಳಿಸಿದ್ದು ಆ ಸಮಯ ಪಿರ್ಯಾದಿದಾರರು ಕೂಡಾ ಅವರ ಅಣ್ಣನ ಜತೆಗೆ ಅಲ್ಲಿಗೆ ಹೋಗಿದ್ದು ಅಲ್ಲಿ ಅಪರಾಹ್ನ 13-00 ಗಂಟೆಗೆ ಅಕಿಲ್ನು ಪಿರ್ಯಾದಿದಾರರನ್ನು ಉದ್ದೇಶಿಸಿ ನಿನಗೆ ಹಣ ಆಗಬೇಕು ಅಂತಾ ನಿನ್ನ ತಂದೆಯಂದಿರಲ್ಲಿ ಹೇಳಿಕೊಂಡು ಬಂದಿದ್ದಿಯಲ್ಲಾ ಬೇವಸರ್ಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಬಳಿಕ ಅಂಗಡಿಯ ಬಳಿ ಇದ್ದ ಒಂದು ಮರದ ರೀಪಿನ ತುಂಡಿನಿಂದ ಪಿರ್ಯಾದಿದಾರರ ಎದೆಗೆ ಕಾಲಿಗೆ ತಲೆಗೆ ಹಲ್ಲೆ ನಡೆಸಿದ್ದು ಬಳಿಕ ಅಲ್ಲಿ ಸೇರಿದವರು ಹಲ್ಲೆಯನ್ನು ಬಿಡಿಸಿದ್ದು ಅಕಿಲ್ನು ಆ ಸಮಯ ಪಿರ್ಯಾದಿಹಾಗೂ ಅವರ ಅಣ್ಣನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿದ್ದು ಗಲಾಟೆಯ ಸಮಯ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚೈನ್ ಮತ್ತು ಪಸರ್್ ಕಾಣೆಯಾಗಿರುತ್ತದೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರನ್ನು ಅವರ ಅಣ್ಣ ಸುರತ್ಕಲ್ನ ಪದ್ಮಾವತಿ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ ಎಂಬುದಾಗಿ ಗಂಗಾದರ ಪ್ರಾಯ ಃ 29 ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ,ಕ್ರ. 03/13 ಕಲಂಃ 504-324-506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಪಿರ್ಯಾದಿದಾರರಾದ ಮೊಹ್ಮಮ್ಮದ್ ಅಕಿಲ್ (38) ಎಂಬವರು ದಿನಾಂಕ 01-01-2013 ರಂದು ತನ್ನ ಬಾಬ್ತು 1ನೇ ಬ್ಲಾಕಿನ ಗಣೇಶ್ ಪುರ ಎಂಬಲ್ಲಿರುವ ಹಾರ್ಡ್ ವೇರ್ ಅಂಗಡಿಯಲ್ಲಿ ಇದ್ದ ಸಮಯ ಪಿರ್ಯಾದಿದಾರರು ಕಟ್ಟಿಸುತ್ತಿರುವ ಪ್ಲಾಟಿನ ಕಂಟ್ರಾಕ್ಟರ್ ಆದ ಬಾಲಕೃಷ್ಣ ಪೂಜಾರಿ ಎಂಬವರು ಮದ್ಯಾಹ್ನ 1-00 ಗಂಟೆಗೆ ಅಲ್ಲಿಗೆ ಬಂದು ಕಟ್ಟಡದ ಕೆಲಸದ ಉಳಿದ ಹಣವನ್ನು ಕೊಡುವಂತೆ ಕೇಳಿದಾಗ ಅದರ ಲೆಕ್ಕ ತಂದೆಯವರಲ್ಲಿ ಇದೆ ವಿಚಾರಿಸಿ ಕೊಡುತ್ತೇನೆಂದು ಹೇಳಿದಾಗ ಬಾಲಕೃಷ್ಣ ಪೂಜಾರಿಯು ಪಿರ್ಯಾದಿದಾರರಿಗೆ ಗದರಿಸಿದ್ದು ಬಾಲಕೃಷ್ಣನು ಆತನ ತಮ್ಮ ಗಂಗಾಧರ ನನ್ನು ಕರೆಸಿ ಮೋಟಾರು ಸೈಕಲ್ ನಲ್ಲಿ ಬಂದು ಇಬ್ಬರೂ ಸೇರಿ ದುರುದ್ದೇಶದಿಂದ ಪಿರ್ಯಾದಿದಾರರ ಅಂಗಡಿಗೆ ನುಗ್ಗಿ ಪಿರ್ಯಾದಿದಾರರ ಮುಖಕ್ಕೆ , ಕೈಗೆ , ಹೊಟ್ಟೆಗೆ ಕೈಯಿಂದ ಹೊಡೆದಿದ್ದು ಅಲ್ಲದೇ ಕಬ್ಬಿಣದ ರಾಡ್ ನಿಂದ್ ಹಲ್ಲೆ ನಡೆಸಿದ್ದು ಅಂಗಡಿಯ ಒಳಗೆ ನುಗ್ಗಿ ಅಂಗಡಿಯನ್ನು ಪುಡಿ ಮಾಡಿರುತ್ತಾರೆ, ಆ ಸಮಯ ಪಿರ್ಯಾದಿದಾರರ 12,000-/ ರೂ ಕಳೆದು ಹೋಗಿರುತ್ತದೆ ಎಂಬುದಾಗಿ ಮೊಹ್ಮಮ್ಮದ್ ಅಕಿಲ್ (38) ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆ ಅ.ಕ್ರ. 01/2013 ಕಲಂ: 447, 323, 324, ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಪಿರ್ಯಾದಿದಾರರಾದ ಬಾಲಕೃಷ್ಣ ರಾವ್ (60) ಎಂಬವರು ಎನ್ ಐ ಟಿ ಕೆ ಗ್ರಾಹಕರ ಸಂಘದಲ್ಲಿ ಎಕೌಂಟೆಂಟ್ ಆಗಿದ್ದು ಎಂದಿನಂತೆ ಕರ್ತವ್ಯ ಮುಗಿಸಿ ದಿನಾಂಕ 28-12-2012 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರ ಬಾಬ್ತು ಕೆನೆಟಿಕ್ ಹೊಂಡಾದಲ್ಲಿ ಮನೆಗೆ ಹೊರಟು ರಾತ್ರಿ 8-45 ಗಂಟೆಗೆ ಪಡ್ರೆ ಗಣೇಶ್ ನಗರ ಗೇಟ್ ಹತ್ತಿರ ತಲುಪಿದಾಗ ರಸ್ತೆ ಬದಿಯಲ್ಲಿ 3 ಜನ ಯುವಕರಿದ್ದು ಪಿರ್ಯಾದಿದಾರರನ್ನು ಕಂಡು ರಸ್ತೆ ಮದ್ಯೆ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಇಲ್ಲಿ ಆಟ ಎಲ್ಲಿ ಎಂದು ಕೇಳಿದ್ದು ಪಿರ್ಯಾದಿದಾರರು ಇಲ್ಲಿ ಹತ್ತಿರ ಆಟ ಇಲ್ಲ ಎಂದು ಹೇಳಿದ್ದು ಆ ಸಮಯ 3 ಜನ ಯುವಕರಲ್ಲಿ ಒಬ್ಬಾತನು ಪಿರ್ಯಾದಿದಾರರ ಎಡಕಣ್ಣಿಗೆ ಕೈಯಿಂದ ಹೊಡೆದನು. ಇದರಿಂದ ಪಿರ್ಯಾದಿದಾರರು ಆಯತಪ್ಪಿ ಸ್ಕೂಟರ್ ಸಮೇತ ಕೆಳಗೆ ಬಿದ್ದು ಜೋರಾಗಿ ಬೊಬ್ಬೆ ಹೊಡೆದಾಗ ಆ ಮೂವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಯುವಕರು ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದಿದಾರರಿಗೆ ಎಡ ಕಣ್ಣಿಗೆ ರಕ್ತ ಬರುವ ಗಾಯವಾಗಿದ್ದು ಶ್ರೀನಿವಾಸ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಕೊಂಡಿರುತ್ತಾರೆ. ಹಲ್ಲೆ ನಡೆಸಿದ ಯುವಕರ ಹೆಸರು ಗೊತ್ತಿಲ್ಲದ ಕಾರಣ ಸುತ್ತಮುತ್ತ ವಿಚಾರಿಸಲಾಗಿ ಮೂವರು ಆರೋಪಿಗಳ ಪೈಕಿ ಕುಮಾರ @ ಧ್ಯಾಮಪ್ಪ ಮತ್ತು ಹೊಳೆಯಪ್ಪ ಎಂಬವರ ಹೆಸರು ತಿಳಿದು ಬಂದಿದ್ದು ಇನ್ನೊಬ್ಬ ಆರೋಪಿಯ ಹೆಸರು ತಿಳಿದು ಬಂದಿರುವುದಿಲ್ಲ. ಆರೋಪಿಗಳ ಹೆಸರು ತಿಳಿಯದೆ ಇದ್ದುದರಿಂದ ಈ ದೂರು ನೀಡಲು ತಡವಾಗಿರುತ್ತದೆ ಎಂಬುದಾಗಿ ಬಾಲಕೃಷ್ಣ ರಾವ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 02/13 ಕಲಂ:341-323 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ಮಂಗಳೂರು ಗ್ರಾಮಾಂತರ ಠಾಣೆ :- ಫಿರ್ಯಾದಿದಾರರಾದ ಯೊಗೀಶ್ ತಂದೆ: ವಾಮನ, ವಾಸ :ಬಂದಲೆ ಪಚ್ಚನಾಡಿ ಗ್ರಾಮ ಮಂಗಳೂರು ಎಂಬವರ ಅಣ್ಣನಾದ ಅಶೋಕ(38) ಎಂಬವರು ಇತ್ತಿಚೆಗೆ ಸುಮಾರು 20 ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದುಕೊಂಡು ಶರಾಬು ಸೇವಿಸಿಕೊಂಡಿದ್ದು ಈ ದಿನ ತಾರೀಕು 01.01.2013 ರಂದು ಬೆಳಿಗ್ಗೆ 9:30 ಗಂಟೆಗೆ ಮಂಗಳೂರು ನಗರದ ಪಚ್ಚನಾಡಿ ಗ್ರಾಮದ ಬಂದಲೆ ಎಂಬಲ್ಲಿರುವ ಮನೆಯಲ್ಲಿ ತಂದೆಯ ಕಾಲು ನೋವಿನ ಬಗ್ಗೆ ತಂದಿರಿಸಿದ್ದ ಎಣ್ಣೆಯನ್ನು ಶರಾಬು ಎಂದು ತಿಳಿದು ಕುಡಿದ ಪರಿಣಾಮ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದವನು ಸಂಜೆ 4:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಎಂಬುದಾಗಿ ಯೋಗೀಶ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಯು.ಡಿ.ಆರ್ ನಂಬ್ರ 01/13 ಕಲಂ : 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೆ
ಪ್ರಕರಣಗಳು
ಕಾವೂರು
ಠಾಣೆ
- ಪಿರ್ಯಾದುದಾರರಾದ ಶ್ರೀಮತಿ ಇಂದಿರಾ @ ಇಂದಿರಮ್ಮ ಎಂಬವರು ಪರಿಶಿಷ್ಟ ಜಾತಿಯ ಹಿಂದೂ ಮಾದರ್ ಜಾತಿಗೆ ಸೇರಿದವರಾಗಿದ್ದು ಪಿರ್ಯಾದುದಾರರು ತನ್ನ ವಾಸದ ಮನೆಯಾದ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೊಳಪಟ್ಟ ಕಾವೂರು ಠಾಣಾ ಸರಹದ್ದಿನ ಮಂಗಳೂರು ತಾಲೂಕು ಮರಕಡ ಗ್ರಾಮದ ಮನೆ ಸಂಖ್ಯೆ 3/408 ರಲ್ಲಿನ ತನ್ನ ಬಾಬ್ತು ವಾಸದ ಮನೆಯ ಕಾಂಪೌಡು ಗೋಡೆಯಲ್ಲಿ ಒಗೆದ ಬಟ್ಟೆಯನ್ನು ಒಣಗಿಸಲು ಹಾಕುತ್ತಿದ್ದುದನ್ನು ನೆರೆಯ ವಾಸಿ ಆರೋಪಿ ಬಸವರಾಜು ಎಂಬವರು ಆಕ್ಷೇಪವನ್ನು ಮಾಡುತ್ತಿದ್ದು ದಿನಾಂಕ:01-01-2013 ರಂದು ಬೆಳಿಗ್ಗೆ ಸುಮಾರು 07-30 ಗಂಟೆಯ ಸಮಯಕ್ಕೆ ಆರೋಪಿ ಬಸವರಾಜು ಮತ್ತು ಆತನ ಮಗ ಆತ್ಮಾನಂದ ಎಂಬವರು ಪಿರ್ಯಾದುದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಬಸವರಾಜು ಎಂಬವರು ಪಿರ್ಯಾದುದಾರರು ಉಟ್ಟಿದ್ದ ಸೀರೆ ಮತ್ತು ರವಕೆಯನ್ನು ಎಳೆದು ಹರಿದು ಮಾನಭಂಗ ಮಾಡಿದ್ದು ಪಿರ್ಯಾದುದಾರರು ಪರಿಶಿಷ್ಟ ಜಾತಿಯ ಹಿಂದೂ ಮಾದರ್ ಜಾತಿಗೆ ಸೇರಿದವರೆಂದು ಆರೋಪಿಗಳಿಗೆ ತಿಳಿದೇ “ ಕೀಳು ಜಾತಿಯವಳೇ ನೀನು ನಿಮ್ಮ ಕಾಂಪೌಡು ಗೋಡೆಯ ಮೇಲೆ ಬಟ್ಟೆಯನ್ನು ಒಣಗಿಸಲು ಹಾಕುತ್ತಿಯ ‘’ ಎಂದು ಹೇಳಿ ಜಾತಿ ನಿಂದನೆಯನ್ನು ಮಾಡಿದ್ದಲ್ಲದೆ ಬೇವಾರ್ಸಿ ರಂಡೆ ಎಂಬುದಾಗಿ ಅವಾಚ್ಯ ಶಬ್ಬದಿಂದ ಬೈದು ಅವಮಾನಪಡಿಸಿ ಆರೋಪಿ ಬಸವರಾಜುನು ತಂದಿದ್ದ ಸಣ್ಣ ಚೂರಿಯಿಂದ ಪಿರ್ಯಾದುದಾರರ ಎಡಕೈಯ ಮಣಿಗಂಟಿಗೆ ಚುಚ್ಚಿ ರಕ್ತಗಾಯಪಡಿಸಿದ್ದು ಪಿರ್ಯಾದುದಾರರು ಬೊಬ್ಬೆ ಹಾಕಿದಾಗ ಅವರಿಬ್ಬರು ಬೊಬ್ಬೆ ಹಾಕಿದರೆ ಕೊಲ್ಲುತ್ತೇವೆಂದು ಕೊಲೆ ಬೆದರಿಕೆಯನ್ನು ಒಡ್ಡಿದರೆಂದು ಆ ಸಂದರ್ಭ ಆರೋಪಿಯ ಹೆಂಡತಿ ಶ್ರೀಮತಿ ಕಮಲಮ್ಮ ಮತ್ತು ಮಗಳು ಕು:ವಿಧ್ಯಾ ಎಂಬವರು ಕೂಡಾ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರಿಗೆ ಕೈಯಿಂದ ಥಳಿಸಿ ಹಲ್ಲೆಮಾಡಿ ಅವರು ಕೂಡಾ ಅದೇ ರೀತಿ ಜಾತಿ ನಿಂದನೆ ಮಾಡಿದ್ದು ಅದಾಗಲೇ ಮನೆಗೆ ಬಂದ ಪಿರ್ಯಾದಿ ಮಕ್ಕಳಾದ ಮಂಜುನಾಥ ಮತ್ತು ಮಹೇಶ್ ಎಂಬವರು ಪಿರ್ಯಾದಿ ರಕ್ಷಣೆಗೆ ಹೋದಾಗ ಆರೋಪಿಗಳೆಲ್ಲರೂ ಅವರಿಗೂ ಕೂಡಾ ಕೈಯಿಂದ ಥಳಿಸಿರುವುದಾಗಿ ಪಿರ್ಯಾದುದಾರರು ಬಟ್ಟೆಯನ್ನು ಒಣಗಿಸಲು ಹಾಕಿದರೆ ಆರೋಪಿಗಳಿಗೆ ಅವಮಾನವೆಂಬ ಉದ್ದೇಶದಿಂದಲೇ ಈ ಕೃತ್ಯವನ್ನು ಎಸಗಿರುವುದಾಗಿ ಪಿರ್ಯಾದುದಾರರ ಹೇಳಿಕೆಯ ಸಾರಾಂಶವಾಗಿರುತ್ತದೆ ಎಂಬುದಾಗಿ ಶ್ರೀಮತಿ ಇಂದಿರಾ ರವರು ನೀಡಿದ ದೂರಿನಂತೆ ಕಾವೂರು ಠಾಣಾ ಅ.ಕ್ರ. 01/2013: ಕಲಂ 448, 354, 324, 504, 506 ಭಾ.ದಂ.ಸಂ 3 (1) , 10 ಪ.ಜಾ/ಪ.ಪ. ಕಾಯ್ದೆ 1989 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಬಜಪೆ ಠಾಣೆ
- ದಿನಾಂಕ 31/12/2012 ರಂದು ರಾತ್ರಿ ಸುಮಾರು 8.45 ಗಂಟೆ ಸಮಯಕ್ಕೆ
ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೆಟ್ರೋಲ್ ಪಂಪ್ ಬಳಿ ಕಟೀಲು ಕಡೆಯಿಂದ ಮಂಗಳೂರು ಕಡೆಗೆ ನೊಂದಣಿಯಾಗದ
ETIOS
ಕಾರನ್ನು ಅದರ ಚಾಲಕ ಅತೀವೇಗ
ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತ್ತಿದ್ದ ಮೋ. ಸೈಕಲ್ ನಂ. KA 19 U 8595 ಕ್ಕೆ
ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ತಾರನಾಥ ಬಿ. ಎಂಬವರ ಬಲ ಕಾಲಿಗೆ ಗುದ್ದಿದ ಹಾಗೂ ಬಲಬದಿ
ತಲೆಗೆ ಸಾದಾ ಸ್ವರೂಪದ ಗಾಯವಾಗಿರುತ್ತದೆ ಎಂಬುದಾಗಿ ತಾರನಾಥ ಬಿ. ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 01/2013 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೂಡಬಿದ್ರೆ ಠಾಣೆ
- ದಿನಾಂಕ : 31-12-2012 ರಂದು ಬೆಳಿಗ್ಗೆ ಸುಮಾರು 11-45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಪತಿ ಭಟ್ ಕೆ ಎಂಬವರು ಮಾರೂರು ಗ್ರಾಮದ ಬೋರ್‌ವೆಲ್ ಬಸ್ಸು ನಿಲ್ದಾಣದ ಬಳಿ ಇದ್ದಾಗ ಪಿರ್ಯಾದಿದಾರರ ಅಕ್ಕನ ಮಗನಾದ ಗೋಪಾಲಕೃಷ್ಣ ಶಾಸ್ತ್ರಿ ಎಂಬವರು ಮೋಟಾರು ಸೈಕಲ್ ನಂಬ್ರ ಕೆಎ 21 ಜೆಎ 6285 ನೇದರಲ್ಲಿ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಮೂಡಬಿದ್ರೆ ಕಡೆಯಿಂದ ವೇಣೂರು ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ನಂಬ್ರ ಕೆಎ 19 ಬಿ 9713 ನೇ ಚಾಲಕನು ತನ್ನ ಬಾಬ್ತು ಆಟೋರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಹಾಗೂ ಸವಾರ ರಸ್ತೆಗೆ ಬಿದ್ದ ಪರಿಣಾಮ ಗೋಪಾಲಕೃಷ್ಣ ಶಾಸ್ತ್ರಿಯ ಬಲಕಾಲಿಗೆ ಬಲಕೈಗೆ ತೀವ್ರ ಸ್ವರೂಪದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಶ್ರೀಪತಿ ಭಟ್ ಕೆ ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ. 01/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment