ಅಪಘಾತ ಪ್ರಕರಣ
ಮಂಗಳೂರು ಠಾಣೆ
- ದಿನಾಂಕ 22-01-2013 ರಂದು ಬೆಳಿಗ್ಗೆ 10-30 ಗಂಟೆಗೆ ಪಿಯರ್ಾದಿದಾರರು ಕಂಕನಾಡಿ ಗರೋಡಿ ಬಳಿಯ ಬೇಬಿಯವರ ಹೋಟೇಲ್ ಎದುರುಗಡೆ ರಸ್ತೆ ದಾಟಲೆಂದು ನಿಂತಿದ್ದಾಗ ಪಂಪುವೆಲ್ ಕಡೆಯಿಂದ ಪಡಿಲ್ ಕಡೆಗೆ ಟೆಂಪೋ ನಂಬ್ರ ಕೆಎ 19 ಬಿ 6950 ನೇಯದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿ ನಿಂತಿದ್ದ ಪಿಯರ್ಾದಿದಾರರಿಗೆ ಮತ್ತು ಅವರ ಹತ್ತಿರ ನಿಂತಿದ್ದ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದುದಲ್ಲದೆ ಟೆಂಪೋದ ಮೇಲಿನ ಹತೋಟಿ ಕಳೆದುಕೊಂಡದ್ದರಿಂದ ಟೆಂಪೋ ಪಿಯರ್ಾದಿ ಮತ್ತು ಅಪರಿಚಿತ ವ್ಯಕ್ತಿಯ ಮೇಲ್ಗಡೆ ಬಿದ್ದ ಪರಿಣಾಮ, ಪಿಯರ್ಾದಿದಾರರ ಎರಡೂ ಕಾಲುಗಳಿಗೆ, ಕೈಗಳಿಗೆ ತರಚಿದ ಗಾಯಗಳಾಗಿದ್ದು, ಅಪರಿಚಿತ ವ್ಯಕ್ತಿಯ ತಲೆಗೆ , ಕಣ್ಣುಗಳಿಗೆ , ಎಡಕಾಲಿಗೆ ತೀವ್ರ ಗಾಯಗಳಾಗಿದ್ದಲ್ಲದೆ, ಟೆಂಪೋ ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಲುಗಳ ಪೈಕಿ ಅಪರಿಚಿತ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೆ ಮದ್ಯಾಹ್ನ 12-30 ಗಂಟೆಗೆ ಮೃತ ಪಟ್ಟಿರುತ್ತಾನೆ ಎಂಬುದಾಗಿ ಸುರೇಶ್ (61) ತಂದೆ :ಐತಪ್ಪ ಬೆಳ್ಚಡ ವಾಸ : ಗರೋಡಿ ಮನೆ ಕಂಕನಾಡಿ ಗ್ರಾಮ ಮಂಗಳೂರು ಮಂಗಳೂರು ಠಾಣೆ ಅಪರಾದ ಕ್ರಮಾಂಕ 15/13 ಕಲಂ: 279, 337, 304 (ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಹಿಳೆ ವಿರುದ್ದ ಪ್ರಕರಣ
ಪಣಂಬೂರು ಠಾಣೆ
- ದಿನಾಂಕ: 31-05-2012 ರಂದು ಪ್ರತಿಮಾ ಕುಲಾಲ್ ಇವರನ್ನು ಸೂರಜ್ ಎಂಬವರು ಮದುವೆಯಾಗಿದ್ದು ಮದುವೆಯ ಮೊದಲು ಸೂರಜ್ ಆರೋಪಿ ಹೇಮ ಎಂಬವಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಈ ವಿಚಾರ ಸೂರಜ್ನ ತಂದೆಯವರಾದ ನಾರಾಯಣ ಕುಲಾಲ್, ತಾಯಿ ಸರೋಜಿನಿ, ಮತ್ತು ತಂಗಿ ಚೇತನ್ ಇವರಿಗೆ ಗೊತ್ತಿದ್ದರೂ ಈ ವಿಷಯವನ್ನು ಬಚ್ಚಿಟ್ಟು ಪಿರ್ಯಾದಿದಾರರರೊಂದಿಗೆ ಸೂರಜ್ನ ಮದುವೆಯನ್ನು ಮೋಸದಿಂದ ಮಾಡಿಸಿದ್ದು ಈ ಬಗ್ಗೆ ಅನಂತರ ವಿಚಾರ ತಿಳಿದ ಪಿರ್ಯಾದಿದಾರರು ಪಿರ್ಯಾದಿಯ ಅತ್ತೆ ಸರೋಜಿನಿ ಮಾವ ನಾರಾಯಣ ಕುಲಾಲ್ ಮತ್ತು ನಾದಿನಿ ಚೇತನ್ ಇವರಲ್ಲಿ ವಿಚಾರಿಸಿದಾಗ ಅವರುಗಳು ಮತ್ತು ಪಿರ್ಯಾದಿಯ ಗಂಡ ಸೂರಜ್ ಹಾಗೂ ಸೂರಜ್ ಅಕ್ರಮ ಸಂಬಂಧ ಇರಿಸಿಕೊಂಡ ಹೇಮ ಎಂಬವಳು ಜೊತೆ ಸೇರಿ ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಲ್ಲದೇ ಪಿರ್ಯಾದಿದಾರರಿಗೆ ಅವೆರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆಯನ್ನು ಒಡ್ಡಿದ್ದಲ್ಲದೇ ಪಿರ್ಯಾದಿದಾರರಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇದೆ ಎಂಬುದಾಗಿ ಕಟ್ಟುಕತೆಯನ್ನು ಕಟ್ಟಿ ಪಿರ್ಯಾದಿದಾರರು ಮಾನಸಿಕವಾಗಿ ನೊಂದುಕೊಳ್ಳುವಂತೆ ಮಾಡಿರುತ್ತಾರೆ ಎಂಬುದಾಗಿ ಪ್ರತಿಮಾ ಕುಲಾಲ್ 29 ವರ್ಷ ಗಂಡ: ಸೂರಜ್ ವಾಸ: ಕಕ್ಕಬೆಟ್ಟು ಹೌಸ್, ಹೊಸಬೆಟ್ಟು ಕುಳಾಯಿ ಸುರತ್ಕಲ್ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 12/13 ಕಲಂ 498 (ಎ) 420, 504, 506 ಜತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment