ಸಂಚಾರ ಪೂರ್ವ ಠಾಣೆ
ಅಪಘಾತ ಪ್ರಕರಣ
ಹಲ್ಲೆ ಪ್ರಕರಣ
ಬಜಪೆ ಠಾಣೆ
ಜೂಜು ಪ್ರಕರಣ
ಮುಲ್ಕಿ ಠಾಣೆ
ಹುಡುಗಿ ಕಾಣೆ
ದಕ್ಷಿಣ ಠಾಣೆ
ಹುಡುಗ ಕಾಣೆ
ಅಪಘಾತ ಪ್ರಕರಣ
- ದಿನಾಂಕ: 03-01-2013 ರಂದು ಸಮಯ ಸುಮಾರು 13.00 ಗಂಟೆಗೆ ಏಖಖಖಿಅ ಬಸ್ಸು ನಂಬ್ರ ಏಂ-19 ಈ-3047 ನ್ನು ಅದರ ಚಾಲಕ ರಾಘವೇಂದ್ರ ಎಂಬವರು ಡಾ|| ಅಂಬೇಡ್ಕರ್ ಸರ್ಕಲ್ ಕಡೆಯಿಂದ ಬಲ್ಮಠ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬಲ್ಮಠ ಬಸ್ಸು ನಿಲ್ದಾಣದ ಎದುರು ತಲುಪುವಾಗ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಪಿರ್ಯಾದುದಾರರಾದ ನಿತಿನ್ ಶೆಟ್ಟಿ (19)ತಂದೆ- ನಾರಾಯಣ ಶೆಟ್ಟಿ, ವಾಸ: ಮಡ್ಯಾರ್ , ಕೋಟೆಕಾರ್ ಅಂಚೆ, ಮಂಗಳೂರು ರವರಿಗೆ ಬಸ್ಸು ಡಿಕ್ಕಿಯಾದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಮುಖಕ್ಕೆ ಮತ್ತು ಕೈ ಕಾಲುಗಳಿಗೆ ತರಚಿದ ಗಾಯ ಉಂಟಾಗಿ ಡಾ|| ಅಂಬೇಡ್ಕರ್ ವೃತ್ತದ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ನಿತಿನ್ ಶೆಟ್ಟಿ (19)ತಂದೆ- ನಾರಾಯಣ ಶೆಟ್ಟಿ, ವಾಸ: ಮಡ್ಯಾರ್ , ಕೋಟೆಕಾರ್ ಅಂಚೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಮೊ.ನಂಬ್ರ 03/2013 279 , 337 ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ಬಜಪೆ ಠಾಣೆ
- ಪಿರ್ಯಾದಿದಾರರಾದ ದಾಮೋದರ, ಪ್ರಾಯ 45 ವರ್ಷ, ತಂದೆ: ವತ್ತು ಗೌಡ, ಕನ್ನೋರಿ ಮನೆ ತೆಂಕೆಡಪದವು ಗ್ರಾಮ,ಮಂಗಳೂರು ತಾಲೂಕು ರವರು ತನ್ನ ಪಿಯರ್ಾದಿಯಲ್ಲಿ ತನಗೆ ಹಾಗೂ ತನ್ನ ದೊಡ್ಡ ತಂದೆಯ ಮಗ ಚಿದಾನಂದನಿಗೆ, ಹಿರಿಯರಿಂದ ಬಂದ ಆಸ್ತಿ ಇದ್ದು, ಆ ಆಸ್ತಿಗೆ ಕೃಷಿಮಾಡಲು ಒಂದು ಬಾವಿ ಇದ್ದು, ಆ ಬಾವಿಯಿಂದ ದಿನಕ್ಕೆ 12 ಗಂಟೆ ಯಂತೆೆ ನೀರು ಬಿಡುವುದಾಗಿದೆ. ಅದೇ ರೀತಿ ದಿನಾಂಕ 30/12/2012 ರಂದು ನೀರು ಬಿಟ್ಟಾಗ ಸಮಯಕ್ಕೆ ಮೊದಲೇ ಚಿದಾನಂದ ಪಂಪ್ ನಿಲ್ಲಿಸಿದ್ದು ಅದರ ಬಗ್ಗೆ ಕೇಳಲ್ ಹೊದ ನನಗೆ ಸಂಜೆ 5.30 ಗಂಟೆಗೆ ಚಿದಾನಂದ ಅವಾಚ್ಯವಾಗಿ ಬೈದು ಕಲ್ಲು ಕೆತ್ತುವ ಕುಂಚಾಣಿಯಿಂದ ಹೊಡೆದು ಸಾದಾ ಸ್ವರೂಪದ ಗಾಯವನ್ನುಂಟು ಮಾಡಿದ್ದಾಗಿದೆ. ತನ್ನ ಅಣ್ಣನಲ್ಲವೇ ಎಂದಿದ್ದ ತಾನು ಪಿಯರ್ಾದಿ ನೀಟದೇ ಇದ್ದು ಆದರೆ ಚಿದಾನಂದನು ಇನ್ನು ಮುಂದೆ ಗಲಾಟೆ ಮುಂದುವರಿಸುವಂತೆ ಕಂಡುಬಂದಿರುವುದರಿಂದ ತಡವಾಗಿ ದೂರು ನೀಡಿರುವುದು ಎಂಬುದಾಗಿ ದಾಮೋದರ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 06/2012 ಕಲಂ: 504,324 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಪಿಯರ್ಾದಿದಾರರಾದ ಅಬ್ದುಲ್ ಅಯಾಝ್, ಪ್ರಾಯ 34 ವರ್ಷ, ತಂದೆ: ಜಕ್ರಿಯಬ್ಬ, ವಾಸ: ನಡಿಗುತ್ತು, ಜೋಕಟ್ಟೆ, ಮಂಗಳೂರು ತಾಲೂಕು ರವರು ತನ್ನ ಪಿಯರ್ಾದಿಯಲ್ಲಿ ಬಜಾಪೆ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಸಾಹುಲ್ ಸೋತು ಹೋಗಲು ತಾನೇಕಾರಣ ಎಂದು ತಿಳಿದು ಪದೇ ಪದೇ ತನ್ನ ಅಂಗಡಿಯಲ್ಲಿ ಬೈಯುತ್ತಿದ್ದವನು ತಾರೀಕು:03/12/2013ರಂದು ರಾತ್ರಿ 9.30ಗಂಟೆ ಗೆ ತಾನು ವ್ಯಾಪಾರ ಮುಗಿಸಿ ಮನೆಗೆ ಹೋಗಲು ಪೊಕರ್ೊಡಿ ದ್ವಾರದ ಬಳಿ ನಿಂತಿದ್ದಾಗ ಸಾಹುಲ್ ಹಮೀದ್ ಆತನ ತಮ್ಮ ನಿಸಾರ್ ಹಾಗೂ 5-6 ಮಂದಿ ಇತರರೊಂದಿಗೆ ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿಕೊಂಡು ಬಂದು ಅವಾಚ್ಯವಾಗಿ ಬೈದು, ನಿಸಾರ್ ಕಬ್ಬಿಣದ ರಾಡ್ನಿಂದ ಹೊಡೆದಿದ್ದು, ಅದೇ ಸಮಯ ಸಾಹುಲ್ ಹಮೀದ್ ಕಡಿಯಲೆಂದು ತಲವಾರನ್ನು ಬೀಸಿದಾಗ ಅವರೊಂದಿಗಿದ್ದ ಇತರರು ಕೈಯಿಂದ ಹೊಡೆದು ಜೀವ ಬೆದರಿಕೆಯೊಡ್ಡಿರುತ್ತಾರೆ , ಈ ಗಲಾಟೆಯ ಸಮಯ ತನ್ನಲ್ಲಿದ್ದ 40,000ರೂ ನಗದು ಹಾಗೂ ಒಂದು ಮೊಬೈಲ್ ಕಳೆದು ಹೋಗಿದ್ದು, ಹೊಡೆತತಿಂದ ನಾನು ಗೆಳೆಯನ ಸಹಾಯದೊಂದಿಗೆ ಹೈಲ್ಯಾಂಡ್ ಆಸ್ಪತ್ರೆಗೆ ಬಂದು ದಾಖಲಾಗಿರುವುದಾಗಿದೆ ಎಂಬುದಾಗಿ ಅಬ್ದುಲ್ ಅಯಾಝ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 07/2012 ಕಲಂ: 143, 147, 148, 504,324, 506 ಖ/ಘ 149 ಕಅ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೂಜು ಪ್ರಕರಣ
ಮುಲ್ಕಿ ಠಾಣೆ
- ಕಿನ್ನಿಗೋಳಿ ಮಾಕರ್ೆಟ್ ಬಳಿ ಆರೋಪಿತರಾದ ಗಣೇಶ್ ಗುಜರನ್ ಮತ್ತು ಚಂದ್ರಕಾಂತ ಕಟೀಲು ರವರುಗಳು ಮಡ್ಕ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವ ವೇಳೆ ಮುಲ್ಕಿ ಠಾಣಾ ಪಿ ಐರವರು ಹಾಗೂ ಸಿಬ್ಬಂದಿಗಳು ಪಂಚರೊಂದಿಗೆ ದಾಳಿ ನಡೆಸಿ ಆರೋಪಿತರನ್ನು ದಸ್ತಗಿರಿ ಮಾಡಿರುವುದಾಗಿ. ನಗದು 17830/- ರೂಪಾಯಿ, ಮಡ್ಕ ಬರೆದ ಚೀಟಿ - 2, ಮೊಬೈಲ್ - 1, ಮತ್ತು ಪೆನ್ನು - 2, ಪಂಚರ ಸಮಕ್ಷಮ ಮಹಜರು ಮುಖೇನ ವಶ ಪಡಿಸಿ ಮುಲ್ಕಿ ಠಾಣಾ ಅ,ಕ್ರ 01/2012 ಕಲಂ ; 78 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ
ದಕ್ಷಿಣ ಠಾಣೆ
- ದಿನಾಂಕ 03-01-2013 ರಂದು ಬೆಳಿಗ್ಗೆ 7-45 ಗಂಟೆಗೆ ಈ ಪ್ರಕರಣದ ಫಿರ್ಯಾದುದಾರರಾದ ಬಿ.ಎಸ್ ಮಹಮ್ಮದ್, ತಮದೆ: ದಿ/ ಅಬ್ದುಲ್ಲ, ವಾಸ: ಅಲೆಮನೆ ಕಂಪೌಂಡ್, ಹುಮೈದ್ ಮೆನ್ಶನ್, ಜಪ್ಪು, ಮಂಗಳೂರು ರವರ ಮಗಳಾದ ಸಾನಿಯಾ ಶೇಕ್ (18) ಎಂಬವಳು ಕಾಲೇಜಿಗೆಂದು ತನ್ನ ಮನೆಯಾದ ಅಲೆಮಾನ್ ಕಂಪೌಂಡ್ನಲ್ಲಿರುವ ಹುಮೈದ್ ಮೆನ್ಶನ್ ಮಂಗಳೂರು ಇಲ್ಲಿಂದ ಹೊರಟು ಹೋದವಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಎಂಬುದಾಗಿ ಬಿ.ಎಸ್ ಮಹಮ್ಮದ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ.06/2013 ಕಲಂ: ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗ ಕಾಣೆ
- ದಿನಾಂಕ 03-01-2013 ರಂದು ಬೆಳಿಗ್ಗೆ 7-45 ಗಂಟೆಗೆ ಈ ಪ್ರಕರಣದ ಫಿರ್ಯಾದುದಾರರಾದ ಶ್ರೀಮತಿ ನಜೀಮಾ ಬಾನು, ಗಂಡ : ಹಫೀಝ್, ವಾಸ : ಫ್ಲಾಟ್ ನಂಬ್ರ 301, ಐಮನ್ ರೆಸಿಡೆನ್ಸಿ, ಅತ್ತಾವರ, ಮಂಗಳೂರು ರವರ ಮಗನಾದ ಮೊಹಮ್ಮದ್ ಹಸೀಬ್ (18) ಎಂಬವನು ಕಾಲೇಜಿಗೆಂದು ತನ್ನ ಮನೆಯಾದ ಐಮಾನ್ ರೆಸಿಡೆನ್ಸಿ, ಅತ್ತಾವರ, ಮಂಗಳೂರು ಇಲ್ಲಿಂದ ಹೊರಟು ಹೋದವನು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬುದಾಗಿ ನಜೀಮಾ ಬಾನು ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ.07/2013 ಕಲಂ: ಹುಡುಗ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment