Friday, January 18, 2013

Daily Crime Incidents for Jan 18, 2013


ಅಪಘಾತ ಪ್ರಕರಣ:

ಉಳ್ಳಾಲ ಠಾಣೆ;


  • ದಿನಾಂಕ 15-01-2013 ರಂದು 20-30 ಗಂಟೆಗೆ ಪಿಯರ್ಾದುದಾರರು ಮಂಗಳೂರು ತಾಲೂಕು, ತಲಪಾಡಿ ಪೆಟ್ರೋಲ್ ಬಳಿ ತನ್ನ ಆಟೋ ರಿಕ್ಷಾದಲ್ಲಿ ಬಾಡಿಗೆಗಾಗಿ ಕಾಯುತ್ತಾ ನಿಂತಿದ್ದ ಸಮಯ ತಲಪಾಡಿ ನ್ಯೂ ಬಸ್ ಸ್ಟಾಂಡ್ ಎದುರು ರಾ.ಹೆ. 66 ರಲ್ಲಿ ತಲಪಾಡಿ ಚೆಕ್ ಪೋಸ್ಟ್ ಕಡೆಯಿಂದ ಕೆಎ 19 ಇಬಿ 5373 ನೇ ಮೋಟಾರು ಸೈಕಲ್ನಲ್ಲಿ ಇಬ್ಬರು ಸವಾರು ಸವಾರಿ ಮಾಡಿಕೊಂಡು ಬಂದು ಸಿಗ್ನಲ್ ತೋರಿಸಿ ನಿಧಾನವಾಗಿ ರಸ್ತೆಯ ಬಲಬದಿಗೆ ತಿರುಗುತ್ತಿದ್ದಂತೆ, ಮಂಜೇಶ್ವರ ಕಡೆಯಿಂದ ಕೆಎ 20 ಬಿ 9322 ನೇ ಟೆಂಪೋ ಟ್ರಾವೆಲರ್ವೊಂದನ್ನು ಅದರ ಚಾಲಕ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಮೋಟಾರು ಸೈಕಲ್ನ ಹಿಂಬದಿಗೆ ಡಿಕ್ಕಿ ಹೊಡೆದನು. ಇದರಿಂದ ಮೋಟಾರು ಸೈಕಲ್ನ ಸಹಸವಾರನ ಕಾಲು ಮತ್ತು ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಸವಾರನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಪಿಯರ್ಾದಿ ಮತ್ತು ಸಂತೋಷ್ ಎಂಬವರು ಮಂಗಳೂರು ಅತ್ತಾವರ ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ದಿನೇಶ್ ಟಿ. ಭಗವತಿ ನಿವಾಸ, ನಿಯರ್ ನಿವ್ ಬಸ್ ಸ್ಟ್ಯಾಂಡ್, ತಲಪಾಡಿ ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 20/2013 ಕಲಂ 279, 338 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಸುರತ್ಕಲ್ ಠಾಣೆ:


  • ದಿನಾಂಕ 17-01-2013 ರಂದು  ಅಪರಾಹ್ನ 13-45 ಗಂಟೆಗೆ  ಫಿರ್ಯಾದಿದಾರರು  ಅವರು ಕೆಲಸ ಮಾಡುತ್ತಿದ್ದ ಬೈಕಂಪಾಡಿಯ ಬಿಯರ್ ಪ್ಯಾಕ್ಟರಿಗೆ ಅವ ಮನೆ ಪಾವಂಜೆಯಿಂದ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಇ-3499 ರಲ್ಲಿ ಪಿರ್ಯಾದಿ ಸವಾರರಾಗಿ ಸುದೀರ್ರವರು ಸಹಸವಾರರಾಗಿ ಅಪರಾಹ್ನ ಹೊರಟು ರಾ.ಹೆ 66 ರಲ್ಲಿ ಅಪರಾಹ್ನ 13-45 ಗಂಟೆಗೆ ಹೊನ್ನ ಕಟ್ಟೆ ಜಂಕ್ಷನ್ಗೆ ತಲುಪಿದಾಗ ಮಂಗಳೂರು ಕಡೆಯಿಂದ ಕೆಎ-19-ಸಿ-3191 ನೇ 407 ಗೂಡ್ಸ್ ಮಿನಿ ಲಾರಿಯನ್ನು ಅದರ ಚಾಲಕ ಬಾಲಕೃಷ್ಣ ಎಂಬವರು ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೊನ್ನಕಟ್ಟೆ ಜಂಕ್ಷನ್ನಲ್ಲಿ ಬಲಕ್ಕೆ ಕುಳಾಯಿ ಗುಡ್ಡೆ ಕಡೆಗೆ ತಿರುಗುವರೇ ಯಾವುದೇ ಸೂಚನೆಯನ್ನು  ನೀಡದೇ , ಇಂಡಿಕೇಟರನ್ನು ಹಾಕದೇ ಒಮ್ಮೆಲೇ ಚಲಾಯಿಸಿದ ಪರಿಣಾಮ ಸದ್ರಿ 407 ಗೂಡ್ಸ್ ಲಾರಿ ಪಿರ್ಯಾದಿದಾರರ ಮೋಟಾರ್ ಸೈಕಲ್ಲಿಗೆ ಡಿಕ್ಕಿಯಾಗಿ ಪರಿಣಾಮ ಪಿರ್ಯಾದಿ ಹಾಗೂ ಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಇಬ್ಬರಿಗೂ ಮೈಕೈಗೆ ಗಾಯವಾಗಿದ್ದು ಅಲ್ಲಿ ಸೇರಿದವರು ಹಾಗೂ 407 ಗೂಡ್ಸ್ ಲಾರಿಯ ಚಾಲಕರು ಪಿರ್ಯಾದಿ ಹಾಗೂ ಸುದೀರ್ರನ್ನು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದು ದಾಖಲಿಸಿರುವುದು ಎಂಬುದಾಗಿ ಫಿರ್ಯಾದಿದಾರರಾದ ಸುಕೇಶ್ (27), ತಂದೆ: ದಾಸು ಸಾಲ್ಯಾನ್ ವಾಸ: ಪಾವಂಜೆ ತೋಟ ಮನೆ ಹಳೆಂಯಂಗಡಿ ಅಂಚೆ ಮತ್ತು  ಗ್ರಾಮ, ಮಂಗಳೂರು  ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 14/2013 ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣ:

ಸುರತ್ಕಲ್ ಠಾಣೆ:


  • ದಿನಾಂಕ:17-01-13 ರಂದು ಮದ್ಯಾಹ್ನ 3-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಸರ್ಪರಾಜ್ ನವಾಜ್ ಎಂಬವರು ಮುಕ್ಕಾ ಹಾರೀಸ್ ಮೆರೈನ್ ಮೀನಿನ ಎಣ್ಣೆಯ ಮಿಲ್ಲಿಗೆ ಕಟ್ಟಿಗೆ ತಂದು ಮಿಲ್ಲಿನ ಕಂಪೌಂಡ್ ಒಳಗಡೆ ಅಕ್ತರ್ ಹಾಗೂ ಅಜೀಜ್ರವರ ಸಹಾಯದಿಂದ ಕಟ್ಟಿಗೆ ಅನ್ಲೋಡ್ ಮಾಡುತ್ತಿರುವ ಸಮಯ ಅಲ್ಲಿಗೆ ಬಂದ ಯಜ್ಞೇಶ್, ಶ್ರೀಕಾಂತ್ ಮತ್ತು ಮನೋಜ್ ಎಂಬವರು ಮಿಲ್ಲಿನ ಒಳಗಡೆ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೀನು ಮುಂದಕ್ಕೆ ಕಟ್ಟಿಗೆ ವ್ಯಾಪಾರ ಮಾಡಬೇಡ ಎಂದು ಬೆದರಿಸಿ ಸೋಂಟೆಯಿಂದ ಪಿರ್ಯಾದಿದಾರರ ಮುಖಕ್ಕೆ, ಕೈಗೆ, ಹೊಟ್ಟೆಗೆ ಹೊಡೆದು ಗಾಯಗೊಳಿಸಿದ್ದು ಅಲ್ಲದೇ ಮುಂದಕ್ಕೆ ವ್ಯಾಪಾರ ಮಾಡಿದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಸರ್ಪರಾಜ್, ಪ್ರಾಯ ಃ 31 ವರ್ಷ ತಂದೆಃ ಸಯ್ಯದ್ ಬಾವ ವಾಸಃ ಜಿ.ಎಲ್ ನಂಬ್ರ 70, 9ನೇ ಬ್ಲಾಕ್, ಕಾಟಿಪಳ್ಳ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 15/2013 ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಹೆಂಗಸು ಕಾಣೆ ಪ್ರಕರಣ:

ದಕ್ಷಿಣ  ಠಾಣೆ;


  • ದಿನಾಂಕ 01-01-2013 ರಂದು ಮದ್ಯಾಹ್ನ 12-00 ಗಂಟೆಗೆ  ಈ ಪ್ರಕರಣದ ಫಿರ್ಯಾದುದಾರರ ತಂಗಿಯಾದ ಸೌಧ ಭಾನು (27) ಎಂಬವಳು ತನ್ನ ಅಕ್ಕನ ಮನೆಯಾದ ಜೋಕಟ್ಟೆಗೆ ಹೋಗಿ ಬರುತ್ತೇನೆಂದು ತನ್ನ ಮನೆಯಾದ ಪ್ಲಾಟ್ ನಂಬ್ರ 602, ಕೊನ್ಕೋಡರ್್ ಅಪಾಟರ್್ಮೆಂಟ್, ಫಳ್ನೀರ್, ಮಂಗಳೂರು ಇಲ್ಲಿಂದ ಹೊರಟು ಹೋದವಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಂಬುದಾಗಿ ಫಿರ್ಯಾದುದಾರರಾದ ಆಸಿಫ್ (29), ತಂದೆ: ಹಾಜಿ ಸಿ.ಕೆ ಖಾಸಿಂ, ವಾಸ: ಫ್ಲಾಟ್ ನಂಬ್ರ 602, ಕೊನ್ಕೋಡರ್್ ಅಪಾಟರ್್ಮೆಂಟ್, ಫಳ್ನೀರ್, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣೆ  ಅಪರಾದ ಕ್ರಮಾಂಕ 20/13 ಕಲಂ ಹೆಂಗಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

No comments:

Post a Comment