ಹುಡುಗಿ ಕಾಣೆ ಪ್ರಕರಣ
ಸುರತ್ಕಲ್ ಠಾಣೆ:
ಹುಡುಗ ಕಾಣೆ:
ಸುರತ್ಕಲ್ ಠಾಣೆ:
- ದಿನಾಂಕ 04-01-2013 ರಂದು ಪಿರ್ಯಾದಿದಾರರಾದ ಶ್ರೀಮತಿ ಲಕ್ಕಮ್ಮ ಎಂಬವರ ಅಳಿಯ ಹುಲಿಗಪ್ಪ ಎಂಬವರನ್ನು ಅವರ ಊರಾದ ಬಳ್ಳಾರಿಗೆ ಹೋಗುವರೆ ಮನೆಯಿಂದ ಬಾಳ ಬಸ್ ನಿಲ್ದಾಣಕ್ಕೆ ಬಿಟ್ಟು ಬರಲು ಪಿರ್ಯಾದಿದಾರರ 2ನೇ ಮಗಳಾದ ಗಂಗಮ್ಮನೊಂದಿಗೆ ಬೆಳಿಗ್ಗೆ 11-30 ಗಂಟೆಗೆ ಆತನ ಜೊತೆಗೆ ಕಳುಹಿಸಿಕೊಟ್ಟಿದ್ದು ಆಕೆಯು ಈ ವರೆಗೆ ವಾಪಾಸು ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರ ಅಳಿಯ ಹುಲಿಗಪ್ಪ ಕೂಡಾ ಆತನ ಊರಾದ ಬಳ್ಳಾರಿಗೆ ಹೋಗಿರುವುದಿಲ್ಲ. ಸಂಭಂದಿಕರ ಮನೆಯಲ್ಲಿ ಹಾಗೂ ಇತರ ಕಡೆಯ್ಲಲಿ ವಿಚಾರಿಸಿದಲ್ಲಿ ಅಲ್ಲಿಗೂ ಕೂಡ ಹೋಗಿರುವುದಿಲ್ಲ ಎಂಬಿತ್ಯಾದಿ. ಕಾಣೆಯಾದವರ ಚಹರೆ ಗುರುತು:- ಕಪ್ಪು ಮೈಬಣ್ಣ, ಸಪೂರ ಶರೀರ, ಕೆಂಪು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಕನ್ನಡ, ತಮಿಳು, ತುಳು ಭಾಷೆ ಮಾತನ್ನಾಡುತ್ತಾಳೆ ಎಂಬುದಾಗಿ ಲಕ್ಕಮ್ಮ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. 04/2013 ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗ ಕಾಣೆ:
- ದಿನಾಂಕ 06-01-13 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ಪಿರ್ಯಾದಿದಾರರಾದ ಉಷಾ ಎಂಬವರು ಮನೆಯ ಕೆಲಸ ಮಾಡಿ ಚಾ ಕುಡಿಯಲೆಂದು ತನ್ನ ಸಾಕು ಮಗನಾದ ಅಲೆಗ್ಸಾಂಡರ್ ಅಲಿಯಾಸ್ ಪುಟ್ಟ ಎಂಬವನನ್ನು ಕರೆದಾಗ ಆತನು ಮನೆಯಲ್ಲಿ ಇಲ್ಲದೇ ಇದ್ದು ಮನೆಯ ರೂಮಿನ ಒಳಗಡೆ ಹೋಗಿ ನೋಡಲಾಗಿ ಆತನ ಬಟ್ಟೆ ಬರೆಗಳಿರುವ ಬ್ಯಾಗ್ ಕೂಡಾ ಇಲ್ಲದೇ ಇದ್ದು ಈ ಬಗ್ಗೆ ಸುತ್ತಮುತ್ತ ನೆರೆಕರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗದೇ ಇದ್ದು ಸದ್ರಿ ಅಲೆಗ್ಸಾಂಡರನು ಕಾಣೆಯಾಗಿರುವುದಾಗಿದೆ, ಕಾಣೆಯಾದ ಹುಡುಗನ ಚಹರೆ ಗುರುತು:ಎಣ್ಣೆ ಕಪ್ಪು ಮೈ ಬಣ್ಣ, ಎತ್ತರ 4.5 ಅಡಿ, ಕಪ್ಪು ಬನಿಯನ್, ನೀಲಿ ಮತ್ತು ಬಿಳಿ ಮಿಶ್ರಿತ 3/4 ಪ್ಯಾಂಟ್ ಧರಿಸಿರುತ್ತಾನೆ, ಕನ್ನಡ, ತುಳು, ಮಲಯಾಳಿ ಭಾಷೆ ತಿಳಿದಿರುತ್ತಾನೆ ಎಂಬುದಾಗಿ ಉಷಾ ರವರು ನೀಡಿದ ದೂರಿನಂತೆ ಸುರತ್ಕಲಾ ಠಾಣಾ ಅ.ಕ್ರ. 05/2012 ಹುಡುಗ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ಕಾವೂರ್ ಠಾಣೆ
- ಪಿರ್ಯಾದುದಾರರಾದ ಶ್ರೀ ಐವನ್ ಪಿರೇರಾ ಎಂಬವರು ವಿದೇಶದಲ್ಲಿ ಉಧ್ಯೋಗದಲ್ಲಿದ್ದು ಇತ್ತಿಚೆಗೆ ಉರಿಗೆ ಬಂದವರು ತನ್ನ ಪತ್ನಿಯ ತಾಯಿ ಮನೆಯಾದ ಮಂಜೇಶ್ವರದ ವರ್ಕಾಡಿ ಎಂಬಲ್ಲಿ ಇದ್ದವರು ದಿನಾಂಕ:05-01-2013 ರಂದು ಮಧ್ಯಾಹ್ನ ಸುಮಾರು 1.00 ಗಂಟೆಯ ಸಮಯಕ್ಕೆ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೊಳಪಟ್ಟ ಕಾವೂರು ಠಾಣಾ ಸರಹದ್ದಿನ ಮಂಗಳೂರು ತಾಲೂಕು,ಬಂಗ್ರ ಕೂಳೂರು ಗ್ರಾಮದ ಕೂಳೂರು ಎಂಬಲ್ಲಿರುವ ಗೋವಾ ಹೌಸ್ ಎಂಬ ಹೆಸರಿನ ತನ್ನ ತಂದೆಯವರ ಬಾಬ್ತು ವಾಸದ ಮನೆಯ ಅಂಗಳದಲ್ಲಿಗೆ ಹೋದಾಗ್ಯೆ ಸದ್ರಿ ಮನೆಯೊಳಗಿನಿಂದ ಬಂದ ಆರೋಪಿ ಪಿರ್ಯಾದುದಾರರ ಅಣ್ಣ ರಾಕಿ ಪಿರೇರಾ ಎಂಬವನು ಪಿರ್ಯಾದುದಾರರಿಗೆ “ ನೀನು ಮನೆಯೊಳಗೆ ಬರಬಾರದು ನಿನಗೆ ಇಲ್ಲಿ ಯಾವುದೇ ಹಕ್ಕು ಇರುವುದಿಲ್ಲ ಎಂಬುದಾಗಿ” ಹೇಳಿ ಓಡಿಕೊಂಡು ಹೋಗಿ ಪಕ್ಕದಲ್ಲಿಯೇ ವಾಸವಾಗಿರುವ ತನ್ನ ಆಣ್ಣ ಓಝ್‌ವಾಲ್ಟ್ ಪಿರೇರಾ ಎಂಬವನ ಜೊತೆಗೆ ಕಬ್ಬಿಣದ ರಾಡನ್ನು ಹಿಡಿದುಕೊಂಡು ಬಂದು ಆರೋಪಿಗಳಿಬ್ಬರೂ ಕಬ್ಬಿಣದ ರಾಡ್‌ನಿಂದ ಪಿರ್ಯಾದುದಾರರ ಬಲ ಕಾಲಿನ ಕೋಲು ಕಾಲಿಗೆ ಹಾಗೂ ಆರೋಪಿ ರಾಕಿ ಪಿರೇರಾನು ಪಿರ್ಯಾದುದಾರರ ಎಡಕಾಲಿನ ಕೋಲು ಕಾಲಿಗೆ ಮತ್ತು ಬೆನ್ನಿಗೆ ಹೊಡೆದು ಹಲ್ಲೆಯನ್ನುಂಡುಮಾಡಿದ ಪರಿಣಾಮ ಪಿರ್ಯಾದುದಾರರ ಎರಡೂ ಕಾಲಿನಲ್ಲಿ ರಕ್ತಗಾಯ ಹಾಗೂ ಬೆನ್ನಿನ ಎಡಭಾಗದಲ್ಲಿ ಗುದ್ದಿದ ನಮೂನೆಯ ನೋವನ್ನುಂಟು ಮಾಡಿರುವುದಲ್ಲದೆ “ ಬೇವಾರ್ಸಿ ರಂಡೇ ಮಗ ನಿನಗೆ ಜಾಗವಿಲ್ಲ ನೀನು ಇನ್ನು ಮುಂದೆ ಇಲ್ಲಿಗೆ ಬಂದರೆ ನಿನ್ನನ್ನು ಕಡಿದು ಕೊಲ್ಲುತ್ತೇವೆ” ಎಂಬುದಾಗಿ ಜೀವಬೆದರಿಕೆಯನ್ನು ಹಾಕಿರುತ್ತಾರೆಂದು ಪಿರ್ಯಾದುದಾರರು ಸದ್ರಿ ಜಮೀನಿನಲ್ಲಿ ಹಕ್ಕನ್ನು ಕೇಳಿದ್ದಾರೆಂಬ ದ್ವೇಷದಿಂದ ಜಮೀನಿನಲ್ಲಿ ಹಕ್ಕನ್ನು ಕೊಡುವುದಿಲ್ಲ ಎಂಬ ಉದ್ದೇಶದಿಂದಲೇ ಆರೋಪಿಗಳು ಈ ಕೃತ್ಯವನ್ನು ಎಸಗಿರುವುದಾಗಿದೆ ಎಂಬುದಾಗಿ ಐವನ್ ಪಿರೇರಾ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 03/2013 ಕಲಂ 324, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನಕಲಿ ಅಂಕ ಪಟ್ಟಿ ಪ್ರಕರಣ
ದಕ್ಷಿಣ ಠಾಣೆ
- ದಿನಾಂಕ 06-01-13 ರಂದು ಸಂಜೆ ಸುಮಾರು 16-30 ಗಂಟೆಗೆ ಮಂಗಳೂರು ನಗರದ ಮಂಗಳಾದೇವಿ ರಸ್ತೆಯಲ್ಲಿರುವ, ಲ್ಯಾಟಿಷ್ ಆಯಿಷ ಅಪಾಟರ್್ಮೆಂಟ್ನ ಎದುರುಗಡೆ, ಸುಭಾಸ್ ನಗರ ಜಂಕ್ಷನ್ ಬಳಿ ಆರೋಪಿ ನವಾಜ್ ಅಹಮದ್ನು ಕಪ್ಪು ಬಣ್ಣದ ಎಕ್ಸೆಸ್ ಸ್ಕೂಟರ್ ನಂಬ್ರ ಕೆಎ 19 ಇಸಿ 2504 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಕಲಿ ಅಂಕ ಪಟ್ಟಿ ಮತ್ತು ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ ಫಿರ್ಯಾದುದಾರರಾದ ದಿವಾಕರ್, ಪೊಲೀಸ್ ನಿರೀಕ್ಷಕರು, ದಕ್ಷಿಣ ಪೊಲೀಸ್ ಠಾಣೆ, ಮಂಗಳೂರು ಹಾಗೂ ಇತರ ಸಿಬ್ಬಂದಿಯವರ ಜೊತೆ ಮೇಲೆ ಹೇಳಿದ ಸ್ಥಳದಲ್ಲಿ ಆರೋಪಿಯನ್ನು ಪಂಚರ ಸಮಕ್ಷಮ ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಜಯಪ್ರಕಾಶ್ ಬಿಎಸ್ ಎಂಬ ಹೆಸರಿನ ಮಂಗಳುರು ವಿಶ್ವ ವಿದ್ಯಾನಿಲಯದ ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹೆಸರಿನ 5, 6, 7 ಮತ್ತು 8 ಸೆಮಿಸ್ಟರ್ನ ನಕಲಿ ಅಂಕ ಪಟ್ಟಿ ಮತ್ತು ಅದೇ ಹೆಸರಿನ ಮಂಗಳ:ಉರು ವಿಶ್ವ ವಿದ್ಯಾನಿಲಯದ ಪದವಿ ಪ್ರಮಾಣ ಪತ್ರವನ್ನು ಪತ್ತೆ ಹಚ್ಚಿದ್ದು ಇದನ್ನು ಆರೋಪಿಯು ತನ್ನ ಸಹಚರ ರವೀಂದ್ರ ನಾಥ ನಾಯಕ್ರವರೊಂದಿಗೆ ಸೇರಿಕೊಂಡು ನಕಲಿ ಅಂಕ ಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾರೆ ಎಂಬಿತ್ಯಾದಿಯಾಗಿದ್ದು ಸದ್ರಿ ನಕಲಿ ಅಂಕ ಪಟ್ಟಿ ಹಾಗೂ ಪದವಿ ಪ್ರಮಾಣ ಪತ್ಗರ ಹಾಗೂ ಸ್ಕೂಟರನ್ನು ಮುಂದಿನ ನಡವಳಿ ಬಗ್ಗೆ ಸ್ವಾಧಿನಪಡಿಸಕೊಳ್ಳಲಾಗಿದೆ ಎಂಬುದಾಗಿ ದಿವಾಕರ್, ಪೊಲೀಸ್ ನಿರೀಕ್ಷಕರು, ದಕ್ಷಿಣ ಪೊಲೀಸ್ ಠಾಣೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅ.ಕ್ರ 8/13 ಕಲಂ 417, 465, 467, 468, 471, 472 ಖ/ಘ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment