ಅಸ್ವಾಭಾವಿಕ ಮರಣ ಪ್ರಕರಣ:
ಮೂಡಬಿದ್ರೆಠಾಣೆ;
- ದಿನಾಂಕ 11-01-2013 ರಂದು ಸಂಜೆ 7-30 ಗಂಟೆಯಿಂದ ದಿ : 12-01-2013 ರಂದು ಬೆಳಿಗ್ಗೆ 09-30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಅಣ್ಣನಾದ ಅಣ್ಣಿ ಶೆಟ್ಟಿ ಯಾನೆ ನಾರಾಯಣ ಶೆಟ್ಟಿ (75) ಎಂಬವರು ಮಂಗಳುರು ತಾಲೂಕು ಪಡುಕೊಣಾಜೆ ಗ್ರಾಮದ ಅಗನಜಾಲ್ ಎಂಬಲ್ಲಿರುವ ಐತು ಪೂಜಾರಿ ಎಂಬವರ ಅವರಣ ಗೋಡೆಯ ಹೊರಗೆ ಕಾಲುಸಂಕವನ್ನು ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರು ಹೋಗಿ ಆಗಿರುವ ಹೊಂಡಕ್ಕೆ ಜಾರಿ ಬಿದ್ದು ತಲೆ ಕೆಳಗಾಗಿ ಬಿದ್ದ ಪರಿಣಾಮ ತಲೆಗೆ ಗುದ್ದಿದ ಪೆಟ್ಟಾಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ರಾಮಣ್ಣ ಶೆಟ್ಟಿ ಪ್ರಾಯ 65 ವರ್ಷ, ತಂದೆ : ಹೂವಯ್ಯ ಶೆಟ್ಟಿ, ವಾಸ : ಖಜಪಾಡಿ ಮನೆ, ಮೂಡುಕೊಣಾಜೆ ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆಠಾಣೆ ಅಪರಾದ ಕ್ರಮಾಂಕ ಯುಡಿಆರ್ ನಂಬ್ರ: 04/2013 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ:
ಮೂಡಬಿದ್ರೆಠಾಣೆ;
- ದಿನಾಂಕ:09-01-2013 ರಂದು ಬೆಳಿಗ್ಗೆ 07-00 ಗಂಟೆಗೆ ಪಿರ್ಯಾದಿದಾರರ ತಂಗಿ ಕುಮಾರಿ ವಿನೋದ ಪ್ರಾಯ 18 ವರ್ಷ ಎಂಬವಳು ತನ್ನ ಮನೆಯಾದ ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮ, ಬೋರುಗುಡ್ಡೆ ಮನೆ ಎಂಬಲ್ಲಿಂದ ಕೆಲಸಕ್ಕೆಂದು ಮನೆಯಲ್ಲಿ ಹೇಳಿ ಹೋದವಳು ಕೆಲಸಕ್ಕೂ ಹೋಗದೇ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು. ಅವಳನ್ನು ಸಂಬಂಧಿಕರ ಮನೆಗಳಲ್ಲಿ ಮತ್ತು ಇತರೆ ಕಡೆಗಳಲ್ಲಿ ಹುಡುಕಿದಾಗಲೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಶಂಕರ ಪ್ರಾಯ 20 ವರ್ಷ, ತಂದೆ : ದಿ/ ನೋಣಯ್ಯ, ವಾಸ : ಚಾಮುಂಡಿ ದೇವಸ್ಥಾನ ಬಳಿ, ಬೋರುಗುಡ್ಡೆ, ನೆಲ್ಲಿಕಾರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆಠಾಣೆ ಅಪರಾದ ಕ್ರಮಾಂಕ 10/2013 ಕಲಂ : ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ:
ಬಕರ್ೆ ಠಾಣೆ;
- ದಿನಾಂಕ 12/01/2013 ಬೆಳಿಗ್ಗೆ 7ಗಂಟೆಯಿಂದ ಈ ತನಕಪಿರ್ಯಾಧಿದಾರರ ತಂದೆ ಶ್ರೀ ಗಿರಿಧರ ಹನುಮಪ್ಪ ಸಾಹುಕಾರ್ (75) ಎಂಬವರು ಬೆಂಗಳೂರಿನಿಂದ ಪಿರ್ಯಾದುದಾರರ ಮಗನ ಮನೆಯಾದ 'ಆದಿತ್ಯ', 2ನೇ ಕ್ರಾಸ್ ಕಂಬ್ಳ, ಸುಪ್ರೀಂ ಅಪಾಟರ್್ಮೆಂಟ್ ಎದುರು, ಅಳಕೆ, ಮಂಗಳೂರು ಇಲ್ಲಿಗೆ ಬಂದವರು, ಇಂದು ಬೆಳಿಗ್ಗೆ ಬೆಳಿಗ್ಗೆ 7 ಗಂಟೆಗೆ ವಾಕಿಂಗ್ಗೆಂದು ಹೋದವರು ತದ ನಂತರ ವಾಪಾಸ್ಸು ಮನೆಗೆ ಬಾರದೇ ಇದ್ದು, ಈ ಬಗ್ಗೆ ಪಿರ್ಯಾದುದಾರರು ಎಲ್ಲಾ ಕಡೆ ಹುಡುಕಾಡಿ ಈ ತನಕ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಪಿರ್ಯಾದಿದಾರರಾದ ಡಾ| ಸುಶೀಲಾ ಪಾಟಿಲ್ (46)ಗಂಡ: ಡಾ| ಮಹೇಶ್ ಪಾಟೀಲ್ಅಶ್ವಿನಿ ಆಸ್ಪತ್ರೆ. ಷಾಾಪುರ, ಗುಲ್ಬಗರ್ಾ. ರವರು ನೀಡಿದ ದೂರಿನಂತೆ ಬಕರ್ೆ ಠಾಣಾ ಅಪರಾದ ಕ್ರಮಾಂಕ ಮೊನಂ. 03/2013 ಕಲಂ. ಮನುಷ್ಯಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment