ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ:
- ದಿನಾಂಕ: 28-12-2012 ರಂದು ಸಮಯ ರಾತ್ರಿ ಸುಮಾರು 10.15 ಗಂಟೆಗೆ ಅಟೊರಿಕ್ಷಾ ನಂಬ್ರ ಏಂ-19 ಂ- 5527ನ್ನು ಅದರ ಚಾಲಕ ಜೆಪ್ಪು ಮಾಕರ್ೆಟ್ ಕಡೆಯಿಂದ ಮುಳಿಹಿತ್ಲು ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಪಿರ್ಯಾದುದಾರರಾದ ರವಿಕಲ (50) ತಂದೆ- ದಿ.ರವಿಕುಮಾರ್, ಧನ್ಯ ಕೃಪ, ಮಾರ್ನಮಿಕಟ್ಟೆ ಮಂಗಳೂರು ರವರ ಮನೆ ಧನ್ಯಕೃಪಾದ ಬಳಿ ತಲುಪುವಾಗ ಪಿರ್ಯಾದುದಾರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಗಣೇಶ್ ಎಂಬವರು ಮಂಗಳಾದೇವಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊ,ಸೈಕಲ್ ನಂಬ್ರ ಏಂ-19 ಖ-3112 ಕ್ಕೆ ಡಿಕ್ಕಿಯುಂಟು ಮಾಡಿದ ಪರಿಣಾಮ ಮೊ,ಸೈಕಲ್ ಸವಾರ ಗಣೇಶ್ ಮತ್ತು ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡತೊಡೆಗೆ ರಕ್ತಗಾಯ ಉಂಟಾಗಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ರವಿಕಲ (50) ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ. 192/2012 279 , 337, ಐ.ಪಿ.ಸಿ, & 134(ಬಿ)ಮೋ.ವಾ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ದಕ್ಷಿಣ ಠಾಣೆ:
- ದಿನಾಂಕ 29-12-2012 ರಂದು ರಾತ್ರಿ 9-00 ಗಂಟೆಗೆ ಫಿಯರ್ಾದುದಾರರಾದ ಶ್ರೀ ಕೆ.ಎಸ್.ಸೈಯದ್ ಪ್ರಾಯ 65 ವರ್ಷ, ತಂದೆ: ಹಾಜಿ ಕೆ. ಸುಲೈಮಾನ್, ವಾಸ: ಕೋಟೆ ಹೌಸ್, ಹೆಜಮಾಡಿ, ಉಡುಪಿ ಹಾಗೂ ಅವರ ತಮ್ಮ ಇಬ್ರಾಹಿಂ ರವರೊಂದಿಗೆ ಮಂಗಳೂರು ಅತ್ತಾವರದಲ್ಲಿರುವ ಅವರ ಇನ್ನೊಬ್ಬ ತಮ್ಮನಾದ ರಜಾಕ್ ರವರ ಮನೆಗೆ ಹೋಗುತ್ತಿದ್ದಾಗ, ಅತ್ತಾವರ ಬಿಷಪ್ ರಸ್ತೆಯಲ್ಲಿ ಆರೋಪಿಗಳಾದ ಅಜೀಜ್, ಹರ್ಷದ್ ಮತ್ತು ಇತರರು ಸಮಾನ ಉದ್ದೇಶದಿಂದ ಫಿಯರ್ಾದುದಾರರನ್ನು ಹಾಗೂ ಅವರ ತಮ್ಮನಾದ ಇಬ್ರಾಹಿಂರವರನ್ನು ತಡೆದು ನಿಲ್ಲಿಸಿ, ಬೇವಸರ್ಿ ಸೂಳೆ ಮಕ್ಕಳಾ ನಿಮಗೆ ಭಾರಿ ಅಹಂಕಾರ ಇದೆ. ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಅಹಂಕಾರವನ್ನು ಈಗಲೇ ಇಳಿಸಿ ನಿಮ್ಮನ್ನು ಈವತ್ತೆ ಕೊಲ್ಲದೆ ಬೀಡುವುದಿಲ್ಲ ಎಂಬುದಾಗಿ ಹೇಳಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಅಜೀಜ್ ಮತ್ತು ಹರ್ಷದ್ರವರು ಚೂರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿವಿಯಲು ಬಂದಾಗ, ನಾವು ಬೊಬ್ಬೆ ಹಾಕಿದಾಗ, ದಾರಿ ಹೊಕರು ಬರುತ್ತಿರುವುದನ್ನು ಕಂಡು ಪರಾರಿಯಾಗಿರುವುದಾಗಿದೆ. ಈ ಕೃತ್ಯಕ್ಕೆ ದಿನಾಂಕ 29-12-2012 ರಂದು ಬೆಳಿಗ್ಗೆ 11-00 ಗಂಟೆಗೆ ಫಿಯರ್ಾದುದಾರರು ಅವರ ತಮ್ಮ ರಜಾಕ್ ರವರ ಮನೆಯಲ್ಲಿರುವಾಗ, ಆರೋಪಿ ಹರ್ಷದ್ ರವರ ತಂದೆಯಾದ ಬುನಯ್ಯರವರು ಫಿಯರ್ಾದುದಾರರಿಗೆ ಬೈದಾಡುತ್ತಿದ್ದು, ಈ ಬಗ್ಗೆ ವಿಚಾರಿಸಲು ಹೋಗಿರುವುದೇ ಕಾರಣವಾಗಿರುತ್ತದೆ ಎಂಬುದಾಗಿ ಶ್ರೀ ಕೆ.ಎಸ್.ಸೈಯದ್ ಪ್ರಾಯ 65 ವರ್ಷ, ತಂದೆ: ಹಾಜಿ ಕೆ. ಸುಲೈಮಾನ್, ವಾಸ: ಕೋಟೆ ಹೌಸ್, ಹೆಜಮಾಡಿ, ಉಡುಪಿ ಯವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅ.ಕ್ರ. 229/12 ಕಲಂ 341 504 506 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ಉಳ್ಳಾಲ ಠಾಣೆ:
- ಪಿರ್ಯಾದಿದಾರರಾದ ಚಾಲ್ಸರ್್ ವಿಕ್ಟರ್ ಲೋಬೊ, ಕುಂಪಲ, ಕೋಟೆಕಾರ್, ಮಂಗಳೂರು ರವರು 15 ದಿನಗಳ ಹಿಂದೆ ಮನೆಯ ಪಾಯ ತೆಗೆಯಲು ಸಚಿನ್ ಮತ್ತು ರೋಶನ್ ಎಂಬವರಿಗೆ ರೂಪಾಯಿ 14,000 ಕಾಂಟ್ರಾಕ್ಟ್ ಕೊಟ್ಟಿದ್ದು ಹೆಚ್ಚಾಗಿ ರೂ 1500 ಜಾಸ್ತಿ ಕೊಟ್ಟಿದ್ದು ನಂತರ ಆರೋಪಿಗಳು ಪಿರ್ಯಾದಿಯವರಲ್ಲಿ ಮನೆಯ ಪೂತರ್ಿ ಕೆಲಸ ಕೊಡಬೇಕೆಂದು ಕೇಳಿದಾಗ ಪಿರ್ಯಾದಿಯು ಬೇರೆಯವರಿಗೆ ಕಾಂಟ್ರಾಕ್ಟ್ ಕೊಟ್ಟಿರುವುದಾಗಿ ತಿಳಿಸಿದ್ದು ಈ ಬಗ್ಗೆ ಆರೋಪಿಗಳು ಸದ್ರಿ ಸ್ಥಳಕ್ಕೆ ಹೋಗಿ ಪಿರ್ಯಾದಿಯ ಸೈಟ್ ಗೆ ಬಂದು ನೋಡಿ ಪಿರ್ಯಾದಿಯನ್ನು ದಿನಾಂಕ 27.12.2012 ರಂದು 12.30 ಗಂಟೆಗೆ ಉಳ್ಳಾಲ ಗ್ರಾಮದ ಓವರ್ ಬ್ರಿಡ್ಜ್ ಬಳಿ ಕರೆದುಕೊಂಡು ಬಂದು ಮನೆಯ ಕೆಲಸ ಬೇರೆಯವರಿಗೆ ಕೊಟ್ಟಿದ್ದೀಯಾ, ಪಾಯ ತೆಗೆಯಲು ನಮಗೆ ಕೊಟ್ಟಿದ್ದು ಎಂದು ಹೇಳಿ ಪಿರ್ಯಾದಿಗೆ ಹೊಡೆದು ಪಿರ್ಯಾದಿಯ ಕಿಸೆಯಲ್ಲಿದ್ದ ರೂ 30,000ನ್ನು ತೆಗದುಕೊಂಡು ಹೋಗಿದ್ದು ಆ ಸಮಯ ಆರೋಪಿಗಳ ಜೊತೆಯಲ್ಲಿ ಕೇಶವ ಮತ್ತು ಶೈಲು ಎಂಬವರು ಕೂಡಾ ಇದ್ದು, ಈ ಬಗ್ಗೆ ಪಿರ್ಯಾದಿಯ ಜೊತೆಯಲ್ಲಿ ತೆಗೆದುಕೊಂಡು ಹೋದ ಹಣವನ್ನು ವಾಪಸ್ಸು ತೆಗೆದು ಕೊಡುವ ಬಗ್ಗೆ ಕೆಲವರು ಮಾತಾಡಲು ಬಂದಿದ್ದು ಪಿರ್ಯಾದಿಯು ಈ ದಿನದವರೆಗೆ ಕಾದಿದ್ದು ಹಣವನ್ನು ತೆಗೆದು ಕೊಡದೇ ಇದ್ದುದರಿಂದ ಈ ದಿನ ತಡವಾಗಿ ದೂರು ನೀಡಿರುವುದು ಎಂಬುದಾಗಿ ಚಾಲ್ಸರ್್ ವಿಕ್ಟರ್ ಲೋಬೊ, ಕುಂಪಲ, ಕೋಟೆಕಾರ್, ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 341/12 392,323,504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉಳ್ಳಾಲ ಠಾಣೆ
- ದಿನಾಂಕ 16.12.2012 ರಂದು ಬೆ. 10.30 ಗಂಟೆಗೆ ರಾಣಿಪುರ ಚಚರ್್ನ ವಿಚಾರಣೀಯ ಗುರುಗಳಾದ ರಿಚಡರ್್ ಸಲ್ದಾನ ಇವರು ಪಿರ್ಯಾದಿದಾರರಾದ ಶ್ರೀಮತಿ ಗೀತಾ ಡಿಸೋಜಾ ರವರ ಮಗನಾದ ರಿತೇಶ್ ಗ್ಲೆನ್ ಡಿಸೋಜಾನ ಕೆನ್ನೆಗೆ ಕಾರಣವಿಲ್ಲದೇ ಹೊಡೆದ ಬಗ್ಗೆ ಅದೇ ದಿನ ಸಂಜೆ 17.30 ಗಂಟೆಗೆ ಗುರುಗಳಾದ ರಿಚಡರ್್ ಸಲ್ದಾನ ರವರಲ್ಲಿ ಯಾವ ಕಾರಣಕ್ಕೆ ಪಿರ್ಯಾದಿಯ ಮಗನಿಗೆ ಹೊಡೆದಿರಿ ಎಂದು ಪಾಲನ ಸಮಿತಿಯ ಉಪಾಧ್ಯಕ್ಷರಾದ ನವೀನ್ ಡಿಸೋಜಾ ಇವರ ಸಮಕ್ಷಮ ವಿಚಾರಿಸುತ್ತಿದ್ದಾಗ ಪಿರ್ಯಾದಿಯ ವಿಚಾರಕ್ಕೆ ಸಂಬಂಧವಿಲ್ಲದ 3ನೇ ವ್ಯಕ್ತಿಯಾದ ಆರೋಪಿಯು ಚಚರ್್ ಆವರಣದಲ್ಲಿ ನೆರೆದಿದ್ದ ಭಕ್ತರ ಎದುರು ಪಿರ್ಯಾದಿಗೆ ಬೇವಾಸರ್ಿ ನೀನು ದೊಡ್ಡ ಜನರ ಹಾಗೇ ವತರ್ಿಸುವ ಅಗತ್ಯವಿಲ್ಲವೆಂದು ಮತ್ತು ಈ ಹಿಂದೆ ಸೇವೆ ಸಲ್ಲಿಸಿದ್ದ ಚಚರ್್ನ ಗುರುಗಳೊಂದಿಗೆ ಪಿರ್ಯಾದಿಗೆ ಅನೈತಿಕ ಸಂಬಂದವಿರುವುದಾಗಿ ಹೇಳಿ ತೊಂದರೆ ಉಂಟು ಮಾಡಿರುವುದು ಎಂಬುದಾಗಿ ಗೀತಾ ಡಿಸೋಜಾ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 340/12 ಕಲಂ 340/2012 ಕಲಂ 504,506,509 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment