Monday, December 24, 2012

Daily Crime Incidents for December 24, 2012




ಅಪಹರಣ ಪ್ರಕರಣ:

ಸುರತ್ಕಲ್ ಠಾಣೆ;

  •      ದಿ: 22-12-12 ರಂದು ಸಂಜೆ 04.30 ಘಂಟೆಗೆ ಫಿರ್ಯಾಧಿದಾರರು ಅವರ ಮನೆಯ ಕೋಣೆಯಲ್ಲಿ ಅವರ ಹೆಂಡತಿ ಶ್ರೀಮತಿ ಸುಮಂಗಳ ಮತ್ತು ಮಗುವಿನೊಂದಿಗೆ ಮಲಗಿದ್ದು, ಪಕ್ಕದ ಚಾವಡಿಯಲ್ಲಿ ಪ್ರಾಯ ಸುಮಾರು 50 ವರ್ಷದ ಅವರ ತಾಯಿ ಶ್ರೀಮತಿ ಸಂಪಾ ಮಲಗಿದ್ದು, ಈ ದಿನ ದಿ: 23-12-=12 ರಂದು ಬೆಳಿಗ್ಗೆ ಸುಮಾರು 07:00 ಗಂಟೆಗೆ ಫಿರ್ಯಾಧಿದಾರರು ಎದ್ದು ನೋಡುವಾಗ ಶ್ರೀಮತಿ ಸಂಪಾರವರು ಇಲ್ಲದೇ ಇದ್ದು, ಶ್ರೀಮತಿ ಸುಮಂಗಳಲ್ಲಿ ವಿಚಾರಿಸಿದಾಗ ಸಂಪಾ ಹಾಗೂ ಕಳವಾರು ಗ್ರಾಮ ಪಂಚಾಯತ್ ಸದಸ್ಯ ಬಿ ಆದಂರವರು ಮನೆಯ ಅಂಗಳದಲ್ಲಿ ಮಾತನಾಡಿಕೊಂಡಿದ್ದು, ತನ್ನೊಂದಿಗೆ ಬರುವಂತೆ ಹೇಳಿದ ಬಿ ಆದಂರವರು ಶ್ರೀಮತಿಸಂಪಾರವರನ್ನು ಕರೆದುಕೊಂಡು ಹೋಗಿದ್ದು, ಬಳಿಕ ಫಿರ್ಯಾಧಿದಾರರು ಈ ದಿನ ಮಧ್ಯಾಹ್ನ 1:00 ಗಂಟೆಗೆ ಕಳವಾರಿನ ಖುರ್ಸುಗುಡ್ಡೆಗೆ ಹೋಗಿ ಸದ್ರಿ ಮನೆಯಲ್ಲಿದ್ದ ಆದಂರವರನ್ನು ವಿಚಾರಿಸಿದಾಗ ಮನೆಯ ಒಳಗಡೆ ಬರಬೇಡ, ಏನು ನೋಡುತ್ತಿ ಎಂದು ಆದಂರವರು ತಿಳಿಸಿರುತ್ತಾರೆ. ನಾಳೆ ದಿನ ದಿ: 24-12-12 ರಂದು ಬಾಳ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಉಪಾಧ್ಯಾಕ್ಷರ ಚುನಾವಣೆ ಇದ್ದು, ಅದರಲ್ಲಿ ಬಿ,ಆದಂರವರು ಚುನಾವಣೆಯಲ್ಲಿ ಸ್ವರ್ಧಿಸುವ ಸಾಧ್ಯತೆ ಇದ್ದು, ಫಿರ್ಯಾಧಿದಾರರ ತಾಯಿಯ ಮತ ಸೆಳೆಯುವ ಉದ್ದೇಶದಿಂದ  ಆದಂರವರು ಸಂಪಾರವರನ್ನು ಅಪಹರಿಸಿಕೊಂಡು ಹೋಗಿದ್ದು, ಸಂಪಾರವರನ್ನು ಪತ್ತೆ ಮಾಡಿ ನ್ಯಾಯಾ ಒದಗಿಸಿ ಕೊಡಬೇಕಾಗಿ ಎಂಬುದಾಗಿ  ಶಂಕರ (28_ ) ತಂದೆ: ದಿ ಸುಂದರ, ವಾಸ: ಕಾಪಿಕಾಡುಗುಡ್ಡೆಮನೆ, ಕಳವಾರು ಗ್ರಾಮ ಜೋಕಟ್ಟೆ ಅಂಚೆ, ಮಂಗಳೂರು. ರವರು ನೀಡಿದ ದೂರಿನಂತೆ  ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 255/12 PÀ®A: 365 IPC ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

 ಮೂಡಬಿದ್ರೆ ಠಾಣೆ;

  • ದಿನಾಂಕ : 22-12-2012 ರಂದು ಸಂಜೆ ಸುಮಾರು 16-30 ಗಂಟೆಗೆ ಪಿರ್ಯಾದಿದಾರರು ತನ್ನ ತಂದೆ ವಿಕ್ರಮ್ ಪರುಷೋತ್ತಮ ಗಲಗಲಿ ರವರೊಂದಿಗೆ ಪ್ರಾಂತ್ಯ ಗ್ರಾಮದ ಕೀರ್ತಿ ನಗರ ಎಂಬಲ್ಲಿಂದ ಮೂಡಬಿದ್ರೆ ಬಸ್‌ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿರುವ ಸಮಯ ಮೋಟಾರು ಸೈಕಲ್‌ ನಂಬ್ರ ಕೆಎ 19 ಡಬ್ಲೂ 6361 ನೇದರ ಸವಾರ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ  ಹಿಂಬದಿಯಿಂದ ಬಂದು  ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿಯ ತಂದೆಗೆ ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಧನಂಜಯ ಗಲಗಲಿ (16), ತಂದೆ : ವಿಕ್ರಮ್‌ ಪುರುಷೋತ್ತಮ ಗಲಗಲಿ, ವಾಸ : ಮಧುರ ಚೆನ್ನನಗರ, ಹಲಸಂಗಿ ಗ್ರಾಮ, ಮಮಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ  ಅಪರಾದ ಕ್ರಮಾಂಕ 250/2012, ಕಲಂ  279, 338 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ನಡೆಸಿ, ಜೀವ ಬೆದರಿಕೆ ಪ್ರಕರಣ:

ಬಜಪೆ ಠಾಣೆ;

  • ದಿನಾಂಕ  19.12.2012 ರಂದು ರಾತ್ರಿ 20.30 ಗಂಟೆಗೆ  ಮಂಗಳೂರು ತಾಲೂಕು  ಕೋಳವೂರು  ಗ್ರಾಮದ  ಬಾಳಿಕೆಮನೆ  ಎಂಬಲ್ಲಿ ಇರುವಾಗ  ಪಿರ್ಯಾದಿದಾರರ ಗಂಡನ ಅಣ್ಣನಾದ ಜೆರಾಲ್ಡ್ ಡಿಸೋಜಾ  ಆಶಾ ಡಿಸೋಜಾ ರವರು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರ ಮತ್ತು ಅವರ ಗಂಡನನ್ನು ಮನೆಯನ್ನು  ಬಿಟ್ಟು ಹೋಗಲು  ಹೇಳಿದ್ದು  ಅದಕ್ಕೆ  ಫಿರ್ಯಾದಿದಾರರು  ಒಪ್ಪದೇ  ಇದ್ದಾಗ  ಪಿರ್ಯಾದುದಾರರಿಗೆ  ಅವಾಚ್ಯ ಶಬ್ದಗಳಿಂದ  ರಂಡೇ  ಬೇವರ್ಸಿ  ಎಂದು ಬೈದು  ಕೈಗಳಿಂದ  ಕೆನ್ನೆಗೆ  ಹೊಡೆದು  ಕುತ್ತಿಗೆಯನ್ನು ಹಿಚುಕಿ  ತಲೆಯನ್ನು  ಗೋಡೆಗೆ  ಅಪ್ಪಳಿಸಿ  ಹಲ್ಲೆ ಮಾಡಿ ಜೀವ ಬೆದರಿಕೆ  ಹಾಕಿರುತ್ತಾರೆ ಎಂಬುದಾಗಿ ವೈಲೆಟ್ ಲೀನಾ  ಪಿಂಟೋ ಪ್ರಾಯ:26 ವರ್ಷ ಗಂಡ:ರಾಜೇಶ್  ಪಿಂಟೋ ವಾಸ:ಬಾಳಿಕೆ ಹೌಸ್, ಕೊಳವೂರು ಗ್ರಾಮ,ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ  ಬಜಪೆ ಠಾಣೆ ಅಪರಾದ ಕ್ರಮಾಂಕ 250/2012 ಕಲಂ: 447,323,504,506 ಜೊತೆಗೆ  34 ಐಪಿಸಿ ರಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ .


ಅಸ್ವಾಭಾವಿಕ ಮರಣ ಪ್ರಕರಣ:

ಮುಲ್ಕಿಠಾಣೆ;

  • ದಿನಾಂಕ 23.12.2012 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಾವ  ಗಣೇಶ್ ಕುಂದರ್ ಪ್ರಾಯ:45 ವರ್ಷ ಎಂಬವರು  ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಕೊಪ್ಪಲ ಎಂಬಲ್ಲಿರುವ  ರಮೇಶ್ ಬೆಳ್ಚಡ ಎಂಬವರ ಮನೆಗೆ ವಿಪರೀತ ಅಮಲು ಪದಾರ್ಥ ಸೇವನೆ  ಮಾಡಿಕೊಂಡು ಬಂದು ಮನೆಯಲ್ಲಿ ಮಲಗಿದ್ದವರನ್ನು ಊಟ ಮಾಡಲು ಎಬ್ಬಿಸಿದಾಗ ಏಳದೇ ಇದ್ದು ಸಂಜೆ ಸುಮಾರು 7.00 ಗಂಟೆಗೆ  ಎಬ್ಬಿಸಲು ನೋಡಿದಾಗ ಏಳದೇ ಇದ್ದು, ಅವರ  ಮೈ ತಣ್ಣಗಾಗಿ ಇರುವುದನ್ನು ಕಂಡುಬಂದಂತೆ ಫಿರ್ಯಾದಿದಾರರಿಗೆ ಅವರ ಅತ್ತೆ ಶ್ರೀಮತಿ ಗೀತಾರವರು  ಫೋನ್  ಮಾಡಿ ತಿಳಿಸಿದ್ದು, ಫಿರ್ಯಾದುದಾರರು ಮತ್ತು ಅವರ  ಗೆಳೆಯರು ಗಣೇಶ್ ಕುಂದರ್ ರವರನ್ನು ಚಿಕಿತ್ಸೆಯ ಬಗ್ಗೆ  ಅವರ ಕಾರಿನಲ್ಲಿ ಪದ್ಮಾವತಿ ಆಸ್ಪತ್ರೆಗೆ  ಕೊಂಡುಹೋದಲ್ಲಿ ವೈದ್ಯರು ಪರೀಕ್ಷಿಸಿ ಗಣೇಶ್ ಕುಂದರ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಗಣೇಶ್ ಕುಂದರ್ ರವರು ವಿಪರೀತ ಅಮಲು  ಪದಾರ್ಥ ಸೇವನೆ  ಮಾಡಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಕಿರಣ್  ಸಾಲ್ಯಾನ್ ಪ್ರಾಯ 31  ವರ್ಷ  ತಂದೆ:ದಿ.ರಾಮಪ್ಪ ಸುವರ್ಣ ವಾಸ:ಶ್ರೀ ಭಗವತಿ ಸ್ಟೋರ್ ಕೊಯಿಕುಡೆ ಅಂಚೆ ಮತ್ತು ವಿಳಾಸ  ಹಳೆಯಂಗಡಿ ವಯ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿಠಾಣೆ ಅಪರಾದ ಕ್ರಮಾಂಕ 32/2012 ಕಲಂ: 174 .ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ;

  • ದಿನಾಂಕ : 23-12-2012 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿಯ ತಮ್ಮ ನೋಣಯ್ಯ (34) ಎಂಬವರು ಕಲ್ಲಬೆಟ್ಟು ಗ್ರಾಮದ ತೆಂಕಬೆಟ್ಟು ಗುತ್ತು ಮನೆ  ಎಂಬಲ್ಲಿಯ ವಿಜಯ ಶೆಟ್ಟಿ ಎಂಬವರ ಅಡಿಕೆ ತೋಟದಿಂದ ಅಡಿಕೆ ಕೀಳುವ ಕೆಲಸಕ್ಕೆ ಹೋಗಿದ್ದವರು ಆಕಸ್ಮಿಕವಾಗಿ ಎದೆಯಲ್ಲಿ ನೋವು ಕಾಣೆಸಿಕೊಂಡಿದ್ದು ಚಿಕಿತ್ಸೆ ಕೊಡಿಸುವ ಸಲುವಾಗಿ ಆಸ್ಪತ್ರೆಗೆ ಹೊರಡುತ್ತಿದ್ದಂತೆ ಅಡಿಕೆ ತೋಟದಿಂದ ವಿಜಯ ಶೆಟ್ಟಿಯವರ ಅಂಗಳಕ್ಕೆ ನಡೆದುಕೊಂಡು ಬರುತ್ತಿದ್ದ ವೇಳೆ ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟಿರುವುದಾಗಿದೆ ಎಂಬುದಾಗಿ ರವಿ ಪ್ರಾಯ 39 ವರ್ಷ, ತಂದೆ : ಕೇಪು ಹರಿಜನ, ವಾಸ : ನೆಲ್ಲಿಗುಡ್ಡೆ ಮನೆ, ಗಂಟಾಲ್‌ಕಟ್ಟೆ, ಕರಿಂಜೆ  ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ 55/2012 ಕಲಂ : 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments:

Post a Comment