ಅಪಘಾತ ಪ್ರಕರಣ
ಸಂಚಾರ ಪೂವರ್ಾ ಠಾಣೆ:
- ದಿನಾಂಕ: 28-12-2012 ರಂದು ಸಮಯ ಸುಮಾರು 18.30 ಗಂಟೆಗೆ ಪಿರ್ಯಾದುದಾರರಾದ ರುದ್ರಪ್ಪ.ಎಂ. (22) ತಂದೆ- ಸಂಗಪ್ಪ ಕೇರಾಫ್ ಯಮುನಾ ಗ್ರೂಫ್ಸ್, ನಂತೂರು, ಮಂಗಳೂರು ರವರು ಟಿಪ್ಪರ್ ಲಾರಿ ನಂಬ್ರ ಏಂ-05 ಂಃ- 6161 ನ್ನು ಮರೋಳಿ ಕಡೆಯಿಂದ ಬಿಕರ್ನಕಟ್ಟೆ - ಜಯಶ್ರೀ ಗೇಟ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸೋಜಾ ಚಿಕನ್ ಸೆಂಟರ್ ಬಳಿ ತಲುಪುವಾಗ ಎದುರಿನಿಂದ ಅಂದರೆ ಬಿಕರ್ನಕಟ್ಟೆ ಕಡೆಯಿಂದ ಮರೋಳಿ ಕಡೆಗೆ ಅಟೊರಿಕ್ಷಾ ನಂಬ್ರ ಏಂ-19 ಃ- 7175 ನ್ನು ಅದರ ಚಾಲಕ ಅನ್ವರ್ ಕೆ ಬಿ ಎಂಬವರು ಪೆಲ್ಸಿ ಪಿಂಟೊ ಮತ್ತು ರತನ್ ಪಿಂಟೊ ಎಂಬುವರನ್ನು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಟಿಪ್ಪರ್ ಲಾರಿಯ ಮುಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಅಟೊರಿಕ್ಷಾದ ಮುಂಭಾಗ ಸಂಪೂರ್ಣ ಜಖಂಗೊಂಡು, ಅಟೊರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಪೆಲ್ಸಿ ಪಿಂಟೊರವರ ಎಡಕೈಗೆ ಮೂಳೆ ಮುರಿತದ ಗಾಯವಾಗಿ ರತನ್ ಪಿಂಟೊರವರ ಹಣೆಗೆ, ಮೂಗಿಗೆ ಮತ್ತು ತುಟಿಗೆ ರಕ್ತಗಾಯ ಉಂಟಾಗಿರುತ್ತದೆ. ಅಪಘಾತದಿಂದ ಅರೋಪಿತರಿಗೆ ಗಂಭೀರ ಸ್ವರೂಪ ಗಾಯ ಉಂಟಾಗಿ ಗಾಯಾಳುಗಳು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ರುದ್ರಪ್ಪ.ಎಂ. (22) ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ. 191/2012 279 , 337 , 338 ಐ.ಪಿ.ಸಿ, ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ದಕ್ಷಿಣ ಪೊಲೀಸ್ ಠಾಣೆ:
- ಫಿಯರ್ಾದುದಾರರಾದ ಶ್ರೀಮತಿ ವನಜಾಕ್ಷಿ ಕೆ. ಮ.ಹೆಚ್.ಸಿ.1839 ನೇಯವರು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಸಿಬ್ಬಂದಿಯಾಗಿದ್ದು, ಈದಿನ ದಿನಾಂಕ 29-12-2012 ರಂದು ಮದ್ಯಾಹ್ನ 1-30 ಗಂಟೆಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸಮಯ, ಓರ್ವ ಅಟೋರಿಕ್ಷಾ ಚಾಲಕನು ಅತ್ತಾವರ ಕಡೆಯಿಂದ ಅಸೌಖ್ಯದಿಂದ ಬಳಲುತ್ತಿದ್ದ ವಿಜಯ [53] ಎಂಬಾತನನ್ನು ತನ್ನ ಬಾಬ್ತು ಅಟೋರಿಕ್ಷಾದಲ್ಲಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸುವರೇ ಕರೆತಂದಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಸ್ಟ್ರಚರ್ಗೆ ಹಾಕುವ ಮೊದಲೇ ವಿಜಯ ಎಂಬಾತನು ಮೃತಪಟ್ಟಿರುವುದಾಗಿಯೂ, ರಿಕ್ಷಾದಲ್ಲಿ ಕರೆದುಕೊಂಡು ಬಂದ ರಿಕ್ಷಾ ಚಾಲಕನು ಅಲ್ಲಿಂದ ಹೋಗಿರುವುದಾಗಿಯೂ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ಪಿರ್ಯಾದಿದಾರರಿಗೆ ತಿಳಿಸಿದ್ದು, ಮೃತನು ಅಪರಿಚಿತ ವ್ಯಕ್ತಿಯಾಗಿದ್ದು, ಯಾವುದೋ ಖಾಯಿಲೆಯಿಂದ ಅಥವಾ ಸ್ವಾಭಾವಿಕವಾಗಿ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ವನಜಾಕ್ಷಿ ಕೆ. ಮ.ಹೆಚ್.ಸಿ.1839 ನೇಯವರು ನೀಡಿದ ದೂರಿನಂತೆ ದಕ್ಷಿಣ ಪೊಲೀಸ್ ಠಾಣೆ ಯು.ಡಿ.ಆರ್. ನಂಬ್ರ 93/2012 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳ್ಳತನ ಪ್ರಕರಣ
ಮಂಗಳೂರು ಗ್ರಾಮಂತರ ಠಾಣೆ:
- ದಿನಾಂಕ: 23.12.2012 ರಂದು ಬೆಳಿಗ್ಗೆ 6-00 ಗಂಟೆಗೆ ಪಿಯರ್ಾದಿದಾರರಾದ ಲತಾ (46) ರವರು ತಮ್ಮ ಮನೆಗೆ ಬೀಗ ಹಾಕಿ ಕ್ರಿಸ್ಮಸ್ ಹಬ್ಬದ ಆಚರಣೆಗೆ ಗೋವಾದಲ್ಲಿರುವ ತನ್ನ ಗಂಡನ ಅಕ್ಕನ ಮನೆಗೆ ತೆರಳಿದ್ದು, ದಿನಾಂಕ 27.12.2012 ರಂದು ರಾತ್ರಿ 8-30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲು ತೆರೆದಿದ್ದು, ಪಿಯರ್ಾದಿಯವರು ಗಾಬರಿಗೊಂಡು ಮನೆಯ ಒಳಗಿನ ಬೆಡ್ರೂಮಿಗೆ ಹೋಗಿ ನೋಡಿದಾಗ ಕಬ್ಬಿಣದ ಕಪಾಟಿನ ಬಾಗಿಲನ್ನು ಬಲವಂತದಿಂದ ಮುರಿದಿರುವುದು ಮತ್ತು ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಲಾಕರನ್ನು ಪರಿಶೀಲಿಸಿದ್ದಲ್ಲಿ ಪಿಯರ್ಾದಿಯವರ ಕಿವಿಯ ಓಲೆ ಮತ್ತು ಲೋಲಕ್, ಗೋಲ್ಡನ್ ಕಲರ್ ವಾಚು ಮತ್ತು ಸದ್ರಿಯವರ ಮಗಳ ಕಿವಿಯ ಓಲೆ ಎರಡು ಜೊತೆ ಮತ್ತು ಕಿವಿಯ ಸಣ್ಣ ಗುಂಡು ಇರುವ ರಿಂಗ್ ಒಂದು ಇತ್ಯಾದಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂತು, ಸದ್ರಿ ಕಳವಾದ ಚಿನ್ನಾಭರಣಗಳ ಅಂದಾಜು ಒಟ್ಟು ಮೌಲ್ಯ ಸುಮಾರು 23700/- ಆಗಬಹುದು ಎಂಬುದಾಗಿ ಲತಾ (46) ಮನೆ ನಂಬ್ರ.2-45/50 ಗುತ್ತುಗುಡ್ಡೆ ಅಳಪೆ ಕರ್ಮಾರ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 342/2012 ಕಲಂ 457 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ
ಉಳ್ಳಾಲ ಪೊಲೀಸ್ ಠಾಣೆ:
- ಫಿರ್ಯಾದಿದಾರರಾದ ಚೆರಿಯನ್ 65 ವಾಸ. ಜೆಸ್ಸಿ ವಿಲ್ಲಾ, ವಿಷ್ಣುಮೂತರ್ಿ ಟೆಂಪಲ್ ರೋಡ್, ಮುನ್ನೂರು ಅಂಚೆ, ಕುತ್ತಾರುಪದವು, ಮಂಗಳೂರು ತಾಲೂಕು ಮತ್ತು ಆರೋಪಿಗಳಾದ ಕ್ಯಾಥರಿನ್ ಗಂಡ. ಚೆರಿಯನ್ ಸೆಬೆಸ್ಟಿಯನ್ ತಂದೆ. ಚೆರಿಯನ್, ಮತ್ತು ಸನಿಲ್ ವಗರ್ಿಸ್, ತಂದೆ. ಚೆರಿಯನ್ ರವರ ಮದ್ಯೆ ಇದ್ದ ಕೌಟುಂಬಿಕ ಕಲಹವನ್ನು ಇತ್ಯರ್ಥ ಮಾಡಿಕೊಳ್ಳುವ ಸಲುವಾಗಿ ಫಿರ್ಯಾದಿದಾರರ ಸಹೋದರರು ಕುತ್ತಾರುಪದವು ಎಂಬಲ್ಲಿಗೆ ಬಂದ ಸಮಯದಲ್ಲಿ ಆರೋಪಿಗಳು ಫಿರ್ಯಾದಿದಾರರಿಗೆ ಮತ್ತು ಅವರ ಸಹೋದರರಿಗೆ 29-11-2012 ರಂದು ಬೆಳಿಗ್ಗೆ 11-00 ಗಂಟೆಗೆ ಹತ್ಯಾರಿನಿಂದ ಹಲ್ಲೆ ನಡೆಸಿದ ವಿಚಾರದಲ್ಲಿ ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 312/2012 ರಂತೆ ಪ್ರಕರಣ ದಾಖಲಾಗಿರುತ್ತದೆ.ನಂತರದ ದಿನಗಳಲ್ಲಿ ಇವರು ತನ್ನ ನಗದು ಹಣವನ್ನು ಪಡೆಯುವ ಬಗ್ಗೆ ಬ್ಯಾಂಕಿಗೆ ಹೋಗಿ ವಿಚಾರಿಸಿಕೊಂಡಾಗ ಆರೋಪಿಗಳು ಸೇರಿ ಇಂಟರ್ನೆಟ್ ಬ್ಯಾಂಕಿಂಗ್ ಸವರ್ಿಸ್ ಮುಖೇನ ಫಿರ್ಯಾದಿದಾರರ ಪಾಸ್ವಡರ್್ ನಂಬರ್ ಉಪಯೋಗಿಸಿಕೊಂಡು ಫಿರ್ಯಾದಿದಾರರ ಲಕ್ಷಗಟ್ಟಲೆ ಹಣವನ್ನು ಇವರ ಗಮನಕ್ಕೆ ತಾರದೇ ಅಕ್ರಮವಾಗಿ ತೆಗೆದು ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ ಅಲ್ಲದೆ ಫಿರ್ಯಾದಿದಾರರ ನೋಂದಣಿ ಮಾಲಕತ್ವದ ಮೋಟಾರು ಸೈಕಲನ್ನು ಅರೋಪಿಗಳು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿದಲ್ಲದೆ ಈ ವಿಚಾರದಲ್ಲಿ ದೂರು ಕೊಡಲು ಹೋದಲ್ಲಿ ಕೊಲ್ಲುವುದಾಗಿ ಫಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಚೆರಿಯನ್ 65 ವಾಸ. ಜೆಸ್ಸಿ ವಿಲ್ಲಾ, ವಿಷ್ಣುಮೂತರ್ಿ ಟೆಂಪಲ್ ರೋಡ್, ಮುನ್ನೂರು ಅಂಚೆ, ಕುತ್ತಾರುಪದವು, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 339/2012 ಕಲಂ 420, 417, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment