ಅಪಘಾತ ಪ್ರಕರಣಗಳು
- ಉಳ್ಳಾಲ ಠಾಣೆ : ದಿನಾಂಕ 06-12-2012 ರಂದು ಪಿರ್ಯಾದಿದಾರರು ಕುಂಪಳದಿಂದ ಮಂಗಳೂರಿಗೆ ಹೋಗುವ ರಕ್ಷ ಎಂಬ ಹೆಸರಿನ 44 ಸಿಟಿ ಬಸ್ಸು ನಂಬ್ರ ಕೆಎ19 ಸಿ 1854ನೇಯದರಲ್ಲಿ ಮುಂಭಾಗದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದು ಬೆ. 8-15 ಗಂಟೆಗೆ ತೊಕ್ಕೊಟ್ಟು ಕಲ್ಲಾಪು ಬಳಿಯಿಂದ ಈ ಬಸ್ಸನ್ನು ಅದರ ಚಾಲಕರು ವೇಗವಾಗಿ ಚಲಾಯಿಸಿಕೊಂಡು ಹೋಗಿ ಕಣಚ್ಚೂರ್ ಮಿಲ್ ನ ಎದುರುಗಡೆಯಿಂದ ಅಂದರೆ ಮಂಗಳೂರು ಕಡೆಗೆ ಕೆಎಲ್ 14 ಎಲ್ 3747ನೇ ನಂಬ್ರದ ಜೀಪನ್ನು ಅದರ ಚಾಲಕರು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಎದುರುಗಡೆಯ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂದಕ್ಕೆ ಬಂದುದರಿಂದ ಬಸ್ಸು ಹಾಗೂ ಜೀಪು ಪರಸ್ಪರ ಡಿಕ್ಕಿ ಹೊಡೆದುದರಿಂದ ಜೀಪಿನಲ್ಲಿದ್ದ ಜೀಪು ಚಾಲಕ ಅಬೂಬಕ್ಕರ್ ಹಾಗೂ ಇತರ ನಾಲ್ವರಿಗೆ ರಕ್ತಗಾಯವಾಗಿರುವುದು ಎಂಬುದಾಗಿ ಜಗದೀಶ (42) ತಂದೆ: ಶಾಂತರಾಮ, ಮಿತ್ರನಗರ ಭಜನಾ ಮಂದಿರ, ಕುಂಪಳ, ಕೋಟೆಕಾರ್ ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅಪರಾಧ ಸಂಖ್ಯೆ. 322/2012 ಕಲಂ 279, 337,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಸುರತ್ಕಲ್ ಠಾಣೆ; ದಿನಾಂಕ: 06-12-2012 ರಂದು ರಾತ್ರಿ ಸುಮಾರು 8-45 ಗಂಟೆಗೆ ಮುಕ್ಕ ಕಡೆಯಿಂದ ತಡಂಬೈಲ್ ಕಡೆಗೆ ಮೊಟಾರು ಸೈಕಲಿನಲ್ಲಿ ಬರುತ್ತಿದ್ದ ಸಮಯ ಮುಕ್ಕ ಶ್ರೀ ಸತ್ಯಧರ್ಮ ದೇವಸ್ಥಾನದ ಎದುರು ಲಾರಿ ನಂಬ್ರ ಕೆಎ-19-ಸಿ-4899 ನೇದನ್ನು ಅದರ ಚಾಲಕನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಅಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಒಬ್ಬ ಸುಮಾರು 45 ರಿಂದ 50 ವಷ್ದ ಕುಲಿ ಕಾಮಿಕನಂತೆ ಕಾಣುವ ವ್ಯಕ್ತಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ಆ ವ್ಯಕ್ತಿ ರಸ್ತೆಗೆ ಬಿದ್ದಾಗ ಲಾರಿಯ ಚಕ್ರವು ಅತನ ಮೆಲೆ ಹರಿದು ಆ ವ್ಯಕ್ತಿ ಸ್ಥಳದಲ್ಲಿ ಮೃತ ಪಟ್ಟಿದ್ದು, ಲಾರಿ ಚಾಲಕನು ಲಾರಿಯನ್ನು ನಿಲ್ಲಿಸದೆ ವೇಗ ಹೆಚ್ಚಿಸಿಕೊಂಡು ಪರಾರಿಯಾಗಿದ್ದು, ಪಿಯರ್ಾದಿದಾರಾದ ಭವಿಷ್ ಪ್ರಾಯ: 29 ವರ್ಷ ತಂದೆ: ಪುರಂದರ ಜಿ ಸಾಲಿಯಾನ್ ವಾಸ: ಮನೆ ನಂಬ್ರ: 14-52-3, ಅಂಜುಮಾನ್ ಶಾಲೆ ಹತ್ತಿರ ಮುಕ್ಕ ಸುರತ್ಕಲ್ ಗ್ರಾಮ ಮಂಗಳೂರು ತಾಲುಕು ಮತ್ತು ಇತರರು ಮೋಟಾರು ಸೈಕಲಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಲಾರಿಯನ್ನು ಎನ್ಐಟಿಕೆ ಬಲಿ ನಿಲ್ಲಿಸಿದ್ದು, ಆಗ ಲಾರಿ ಚಾಲಕನು ಪರಾರಿಯಾಗಿದ್ದು , ಪಿಯರ್ಾದಿದಾರರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ 236/2012 ಕಲಂ: 279,304(ಎ) ಐ.ಪಿ.ಸಿ ಮತ್ತು ಕಲಂ: 134 (ಎ) & (ಬಿ) ಐಎಮ್ವಿ ಆಕ್ಟ್ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಬಜಪೆ ಠಾಣೆ; ದಿನಾಂಕ 05-12-2012 ರಂದು ಸಚಿಜೆ 4.00 ಗಂಟೆಗೆ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಎಡಪದವು ಎಂಬಲ್ಲಿ ಇರುವ ಕಲ್ಲಿನ ಕೋರೆಯಲ್ಲಿರುವ ಮಣ್ಣು ರಸ್ತೆಯಲ್ಲಿ ಆರೋಪಿಯು ತನ್ನ ಬಾಬ್ತು ಲಾರಿ ನಂಬ್ರ ನಂಬ್ರ ಕೆ.ಎ.20 3051 ನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಲಾರಿಯ ಕ್ಯಾಬಿನ್ ನಲ್ಲಿ ಕುಳಿತಿದ್ದ ಕ್ಲೀನರ್ ಚಂದು 40 ವರ್ಷ ್ ವಾಸ: ಎಡಪದವು, ದಡ್ಡಿ, ಮಂಜನಕಟ್ಟೆ, ಬಡಗ ಎಡಪದವು, ಮಂಗಳೂರು ಇವರು ಟಿಪ್ಪರ್ ಲಾರಿಯ ಕ್ಯಾಬಿನ್ ನ ಡೋರ್ ತೆರೆದು ರಸ್ತೆಗೆ ಬಿದ್ದು ಅವರ ಎಡ ದವಡೆಗೆ ತೀವ್ರ ಜಖಂ ಆಗಿ ಎಡಬದಿಯ ಕೆಳಗಿನ 3 ಹಲ್ಲುಗಳು ಕಳಚ್ಚಿ ಹೋಗಿದ್ದು ಗಾಯಳುವನ್ನು ಮಂಗಳೂರು ಸಿ.ಟಿ. ಆಸ್ಪತ್ರೆಗೆ ದಾಖಲು ಮಾಡಿರುವುದು ಎಂಬುದಾಗಿ ನಾಗೇಶ, ಪ್ರಾಯ 42 ವರ್ಷ, ತಂದೆ: ಕಾಳಪ್ಪ ಶೆಟ್ಟಿ, ದೇವಸ ಮನೆ, ವಾಮಂಜೂರು, ಮಂಗಳೂರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾಧ ಸಂಖ್ಯೆ. 240/2012 ಕಲಂ: 338 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣಗಳು;
- ಮಂಗಳೂರು ಗ್ರಾಮಾಂತರ ಠಾಣೆ; ದಿನಾಂಕ 05-12-2012 ರಾತ್ರಿ ಸಮಯ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ದಕ್ಷಿಣ ಉಪವಿಭಾಗ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಣ್ಣೂರು ಗ್ರಾಮದ ಕೊಡಕ್ಕಲ್ ಶೆಟ್ಟಿ ಡಾಬಾದ ಎದುರುಗಡೆ ಎಂ.ಎಚ್ 06- ಜೆ-6250 ನೇ ನಂಬ್ರದ ಇನ್ನೋವಾ ಕಾರು ನಿಂತಿದ್ದು, ಅದರ ಚಾಲಕನಾದ ಇಬ್ರಾಹಿಂ ಯಾನೆ ದೊಡ್ಡ ಪುತ್ತ ಪ್ರಾಯ 28 ವರ್ಷ ತಂದೆ ಬಾವಾ ವಾಸ ಬದ್ರುದ್ದೀನ್ರವರ ಬಾಡಿಗೆ ಮನೆ ಸಲಾಫಿ ಮಸೀದಿ ಬಳಿ ಬೋರುಗುಡ್ಡೆ ಕಣ್ಣೂರು ಎಂಬವನನ್ನು ವಿಚಾರಿಸಲಾಗಿ ಸದ್ರಿ ಕಾರಿನ ದಾಖಲೆ ಪತ್ರದ ಜೆರಾಕ್ಸ್ ಪ್ರತಿಗಳನ್ನು ಹಾಜರುಪಡಿಸಿದ್ದು, ಪರಿಶೀಲಿಸುವಾಗ ಅದು ಮಹಾರಾಷ್ಟ್ರದ ರಾಯಗಢ ಆರ್ಟಿಓ ದಲ್ಲಿ ನೋಂದಣಿಯಾಗಿದ್ದು ಅಮಿತ್ ಶಾರದ್ ಸಾವಂತ್ ಎಂಬವರು ಪ್ರಥಮ ಆರ್ಸಿ ಮಾಲಕರಾಗಿದ್ದು, ಪ್ರೀತಿ ಸುಜಿತ್ ಭೋಜಕ್ ಎಂಬವರು ಹಾಲಿ ನೋಂದಣಿದಾರರು ಆಗಿರುವುದು ಕಂಡು ಬರುತ್ತದೆ. ಆರ್ಸಿಯಲ್ಲಿ ಬರೆದಿರುವ ಚಾಸಿಸ್ ನಂಬ್ರಕ್ಕೂ ಹಾಲಿ ಸದ್ರಿ ವಾಹನದಲ್ಲಿ ಇರುವ ಚಾಸಿಸ್ ಮತ್ತು ಎಂಜಿನ್ ನಂಬ್ರಕ್ಕೆ ವ್ಯತ್ಯಾಸವು ಕಂಡು ಬಂದ್ದಿದ್ದು, ಸದ್ರಿ ವಾಹನವು ಎಲ್ಲಿಂದಲೋ ಕಳುವು ಮಾಡಿಕೊಂಡು ಬಂದಿರುವ ಸಾಧ್ಯತೆಗಳು ಕಂಡು ಬಂದ ಕಾರಣ ಸದ್ರಿ ವಾಹನವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ, ಪಿಯರ್ಾದಿದಾರರು ಸಲ್ಲಿಸಿದ ಮಾಹಿತಿಯಂತೆ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾಧ ಸಂಖ್ಯೆ 330/2012 ಕಲಂ 102 ಸಿಆರ್ಪಿಸಿ ಜೊತೆಗೆ 379 ಐಪಿಸಿಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕಾವೂರು ಠಾಣೆ; ದಿನಾಂಕ 06-12-2012 ರಂದು ಬೆಳಿಗ್ಗೆ 11-00 ಗಂಟೆ ಭಾಸ್ಕರ (42) ತಂದೆ: ದಿ. ಸಂಜೀವ ನಾಯ್ಕ, ವಾಸ: ಶ್ರಿದೇವಿ ನಿಲಯ, ಕೊರಂಟಾಡಿ, ಮರಕಡ ಗ್ರಾಮ, ಮಂಗಳೂರು. ಇವರು 2-3 ವರ್ಷಗಳಿಂದ ಹೆಚ್.ಐ.ವಿ. ಮತ್ತು ಕ್ಷಯ ರೋಗದಿಂದ ಬಳಲುತ್ತಿದ್ದು, ಕೆಲಸಕ್ಕೂ ಹೋಗದೆ ಮನೆಯಲ್ಲೇ ವಾಸವಾಗಿದ್ದು, ಇದೇ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಹೆಂಡತಿ ಕೆಲಸಕ್ಕೆ ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದ ಸಮಯ ಸೀರೆಯನ್ನು ತುಂಡು ಮಾಡಿ ಮನೆಯ ಅಡುಗೆ ಕೋಣೆಯ ಪಕ್ಕಾಸಿಗೆ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಗಂಗಾಧರ ನಾಯ್ಕ (50) ತಂದೆ: ದಿ. ಸಂಜೀವ ನಾಯ್ಕ, ವಾಸ: ಡೋರ್. ನಂ. 2-150, ಫಳನೀರ್ ಸೈಟ್, ಕಾವೂರು ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣಾ ಯು.ಡಿ.ಆರ್. ನಂ. 45/2012 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment