ಕಳವು ಪ್ರಕರಣ
- ಪಣಂಬೂರು ಠಾಣೆ : ಸುದೇಶ್ ಕುಮಾರ್, 44 ವರ್ಷ, ತಂದೆಃ ಬಿ. ಗುರುದತ್ತರಾವ್ ವಾಸಃ ರೈಲ್ವೇ ಕಾಲನಿ, ಕ್ವಾರ್ಟಸರ್್ ನಂಬ್ರ-ಎ4, ಜೋಕಟ್ಟೆ, ತೋಕೂರು ರವರು ರೈಲ್ವೇ ಇಲಾಖೆಗೆ ಸಂಬಂಧಿಸಿದ ತೋಕೂರು ಗ್ರಾಮದ ಜೋಕಟ್ಟೆ ಹಳೆ ರೈಲ್ವೇ ಸ್ಟೇಶನ್ ಬಿಲ್ಡಿಂಗ್ನ ರೂಮಿನಲ್ಲಿರಿಸಿದ್ದ ಸುಮಾರು 18,000/- ರೂ ಬೆಲೆ ಬಾಳುವ ಸುಮಾರು 85 ಬ್ಯಾಟರಿಗಳನ್ನು ಯಾರೋ ಕಳ್ಳರು ದಿನಾಂಕಹ 01-12-12 ರಂದು ಸಂಜೆ 3-30 ಗಂಟೆಯಿಂದ ದಿನಾಂಕಹ 05-12-12 ರಂದು ಬೆಳಿಗ್ಗೆ 08-30 ಗಂಟೆಯ ಮಧೆಯ ರೂಮಿನ ಬಾಗಿಲನ್ನು ಒಡೆದು ಒಳಹೊಕ್ಕಿ ಕಳವು ಗೈದುಕೊಂಡು ಹೋಗಿರುವುದಾಗಿದೆ ಎಂಬುದಾಗಿ ಶ್ರೀ ಸುದೇಶ್ ಕುಮಾರ್ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆಯ ಅಪರಾಧ ಕ್ರಮಾಂಕ 214/12,ಕಲಂ ಃ 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
- ಮುಲ್ಕಿ ಠಾಣೆ : ದಿನಾಂಕ 4.12.2012 ರಂದು ಮಂಗಳೂರು ತಾಲೂಕು ಪಡುಪಣಂಬೂರು ಗ್ರಾಮದ ಪಡುತೋಟ ಎಂಬಲ್ಲಿ ಪಿರ್ಯಾದಿದಾರರ ಅತ್ತೆ ಮನೆಯಲ್ಲಿ ಪಿರ್ಯಾದಿದಾರರ ಹೆಂಡತಿಯ ಅಕ್ಕನ ಗಂಡ ವಿಶ್ವನಾಥ ವಾಸ: ಪಡುಪಣಂಬೂರು ಗ್ರಾಮ, ಮಂಗಳೂರು ತಾಲೂಕುನು ತನ್ನ ಹೆಂಡತಿ ಗೀತಾಳಿಗೆ ಕಿರುಕುಳ ನೀಡಿ ಜಗಳವಾಡುತ್ತಿದ್ದಾಗ ಪಿರ್ಯಾದಿದಾರರು ವಿಶ್ಬನಾಥನನ್ನು ಮನೆಯಿಂದ ಹೊರಗೆ ಹಾಕಿರುವ ದ್ವೇಷದಲ್ಲಿ ದಿನಾಂಕ 05.12.2012 ರಂದು ಮದ್ಯಾಹ್ನ 01.30 ಗಂಟೆಗೆ ಪಿರ್ಯಾದಿದಾರರು ತನ್ನ ಅತ್ತೆ ಮನೆಯ ಅಂಗಳದಲ್ಲಿ ನಿಂತಿದ್ದ ವೇಳೆ ಆರೋಪಿ ವಿಶ್ವನಾಥನು ಅಲ್ಲಿಗೆ ಬಂದು ಬೇವಸರ್ಿ ನಿನ್ನೆ ಭಯಂಕರ ಮಾತನಾಡಿದ್ದಿ ನಿನ್ನನ್ನು ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಜೊತೆಯಲ್ಲಿ ಇರಿಸಿಕೊಂಡಿದ್ದ ಕತ್ತಿಯಿಂದ ಪಿರ್ಯಾದಿದಾರರ ತಲೆಗೆ ಇರಿದು ರಕ್ತಗಾಯಮಾಡಿರುವುದಾಗಿದೆ ಎಂಬುದಾಗಿ ಶ್ರೀ ಜೀವನ್ ಪ್ರಾಯ: 27 ವರ್ಷ ತಂದೆ:ರಮೇಶ ವಾಸ: ಪಿಲಿಕುಳ ನಿಸರ್ಗಧಾಮದ ಹತ್ತಿರ, ಶಿವನಗರ, ಮೂಡುಶೆಡ್ಡೆ ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆಯ ಅಪರಾಧ ಕ್ರಮಾಂಕ 151/2012 ಕಲಂ: 504,324 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment