Friday, December 21, 2012

Daly Crime Incidents for Dec 21, 2012


ಅಪಘಾತ ಪ್ರಕರಣ

ಮಂಗಳೂರು ಸಂಚಾರ ಪಶ್ಚಿಮ ಠಾಣೆ


  • ದಿನಾಂಕ 20.12.2012 ರಂದು ಸಂಜೆ 17.30 ಗಂಟೆಗೆ ಮಂಗಳೂರು ನಗರದ ಸಾರ್ವಜನಿಕ ಡಾಮಾರು ರಸ್ತೆಯಾದ ಕೊಟ್ಟಾರ ಚೌಕಿ - ಕೋಡಿಕಲ್  ಸವರ್ಿಸ್ ರಸ್ತೆಯಲ್ಲಿ ಒಂದು ನಂಬ್ರ ತಿಳಿಯದ ಟಾ.ಟಾ ಮೊಬೈಲ್ ರೀತಿಯ ವಾಹನವನ್ನು ಕೊಟ್ಟಾರ ಚೌಕಿ ಕಡೆಯಿಂದ - ಕೋಡಿಕಲ್ ಸವರ್ಿಸ್ ರಸ್ತೆಯಲ್ಲಿ  ಅದರ ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿ ಅಂದರೆ ಧನುಷ್ ಹೊಟೇಲ್ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದ ಒಬ್ಬ ಅಪರಿಚಿತ ವ್ಯಕಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿ ಗಂಭೀರ ತರಹದ ಗಾಯಗೊಂಡವರನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಯಾರೋ ಸಾರ್ವಜನಿಕರು ತಂದಲ್ಲಿ ಸದ್ರಿ ವ್ಯಕ್ತಿ ಸಂಜೆ 18.00 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಅಲ್ಲದೆ ಡಿಕ್ಕಿ ಹೊಡೆದ ವಾಹನ ಚಾಲಕ ಅಪಘಾತ ಘಟಿಸಿದ ಬಳಿಕ ತನ್ನ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿರುವುದಾಗಿದೆ ಈ ಘಟನೆಯ ಬಗ್ಗೆ ದೂರು ನೀಡಲು ಯಾರು ಮುಂದೆ ಬಾರದ ಕಾರಣ ನಾನು ಸ್ವ ಇಚ್ಚೆಯಿಂದ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ ಎಂಬುದಾಗಿ ಶಂಕರ ಶೆಟ್ಟಿ, ಹೆಚ್.ಸಿ. 524, ಸಂಚಾರ ಪಶ್ಚಿಮ ಪೊಲೀಸ್ ಠಾಣೆ, ಬಂದರು, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಸಂಚಾರ ಪಶ್ಚಿಮ ಠಾಣಾ ಅ.ಕ್ರ.146/2012 ಕಲಂ: 279,304(ಎ) ಭಾದಂಸಂ  ಮತ್ತು 134(ಎ)(ಬಿ) ಭಾ. ಮೋ.ವ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ

  • ದಿನಾಂಕ 20-12-2012 ರಂದು ಬೆಳಿಗ್ಗೆ 8-30 ಗಂಟೆಗೆ ಆರೋಪಿ ಚಾಲಕ ಗಿರೀಶ್ ಎಂಬಾತನು ಮಾರುತಿ ಓಮ್ನಿ ಕ್ಫರು ನಂಬ್ರ ಕೆಎ 19 ಪಿ 285 ನ್ಮ್ನ ಬೋಂದೇಲ್ ಕಡೆಯಿಂದ ಯೆಯ್ಯಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ನಗರದ ಬೋಂದೇಲ್ ಚಚರ್್ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಿಯರ್ಾದಿ ಧನಂಜಯ ಕುಮಾರ್ ಎಂಬವರಿಗೆ ಡಿಕ್ಕಿ ಹೊಡೆದಿದ್ದು , ಈ ಪರಿಣಾಮ ಪಿಯರ್ಾದಿಯ ಬಲಕಾಲಿನ ತೊಡೆಗೆ ಎಲುಬು ಮುರಿದ ತೀವ್ರ ಗಾಯವಾಗಿ ಹಣೆಯ ಎಡಬದಿಗೆ ರಕ್ತಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತದೆ ಎಂಬುದಾಗಿ ಧನಂಜಯ ಕುಮಾರ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 336/2012 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹುಡುಗಿ ಕಾಣೆ ಪ್ರಕರಣ

ಪಣಂಬೂರು ಠಾಣೆ

  • ಶ್ರೀಮತಿ ಮೀನಾಕ್ಷಿ 32 ವರ್ಷ ಗಂಡ: ದಿ: ವೆಂಕಟೇಶ ನಾಗಿನ ಮೆಟ್ಟಿಲು ಹಾವೇರಿ ತಾಲೂಕು & ಜಿಲ್ಲೆ  ಹಾಲಿ:ಬ್ರೈಟ್ ಮೊಸಾಯಿಲ್ ಇಂಡಸ್ಟ್ರೀಯಲ್ ರೂಮ್ ಬೈಕಂಪಾಡಿ ಕೈಗಾರಿಕಾ ಪ್ರದೇಶ ಬೈಕಂಪಾಡಿ ಮಂಗಳೂರು ರವರ ಮಗಳು ಕು: ಜ್ಯೋತಿ 14 ಎಂಬಾಕೆಯು ದಿನಾಂಕ: 17-12-12 ರಂದು ಬೆಳಿಗ್ಗೆ ಪಣಂಬೂರು ಎನ್ ಎಮ್ ಪಿ ಟಿ ಶಾಲೆಗೆಂದು ಹೋದವಳು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು ಆಕೆಯನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ  ಪತ್ತೆ ಹಚ್ಚಿಕೊಡಬೇಕಾಗಿ  ನೀಡಿದ ಲಿಖಿತ ಪಿಯರ್ಾದಿಯಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:  ಪ್ರಾಯ 14 , ವಿದ್ಯಾಭ್ಯಾಸ: 7ನೇ ತರಗತಿ; ಎತ್ತರ: 4ಳಿ ಅಡಿ ; ಬಿಳಿ ಮೈಬಣ್ಣ; ಬಟ್ಟೆಬರೆಗಳು: ಶಾಲೆಯ ಸಮವಸ್ತ್ರ : ಕಡು ನೀಲಿ ಬಣ್ಣದ ಲಂಗ , ಆಕಾಶ ನೀಲಿ ಬಣ್ಣದ ಅಂಗಿ, ; ಕಿವಿಯಲ್ಲಿ ಬಂಗಾರದ ಬೆಂಡೋಲೆ ಇರುತ್ತದೆ. ; ಮಾತನಾಡುವ ಬಾಷೆ: ಕನ್ನಡ , ಜಾತಿ : ಹಿಂದು ಎಂಬುದಾಗಿ ಮೀನಾಕ್ಷಿ ಯವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಅ.ಕ್ರ. 222/12 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಬಜಪೆ ಪೊಲೀಸ್ ಠಾಣೆ

  • ದಿನಾಂಕ 19/12/2012 ರಂದು ಸಂಜೆ ಸುಮಾರು 4.00 ಗಂಟೆಗೆ ವಿಶ್ವನಾಥ ಎನ್ , ಪ್ರಾಯ 35 ವರ್ಷ, ತಂದೆ: ನಾರಾಯಣ ಪೂಜಾರಿ ವಾಸ: ಬೊಗರಿದಡಿ ಮನೆ, ಕರಂಬಾರು ಶಾಲೆಯ  ಹತ್ತಿರ  ಕೆಂಜಾರು ಗ್ರಾಮ ಮಂಗಳೂರು ತಾಲೂಕು ರವರ ತಾಯಿ ಶ್ರೀಮತಿ ಪುಷ್ಪಾ 62 ವರ್ಷ ಎಂಬವರು ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಬೊಗರಿದಡಿ ಮನೆ ಎಂಬಲ್ಲಿ ತನ್ನ ಮನೆಯ ಬಚ್ಚಲಿನ ಒಲೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವಾಗ ಬೆಂಕಿಯು ಒಮ್ಮೆಲೆ ಪ್ರಜ್ವಲಿಸಿ ಪುಷ್ಪಾರವರ ಸಿರೆಗೆ ತಗಲಿದ್ದರಿಂದ ಸೀರೆ ಉರಿದು ಸುಟ್ಟ ಗಾಯವಾದವರನ್ನು ಪಿಯರ್ಾದಿದಾರರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನ ರಾತ್ರಿ 10.00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ವಿಶ್ವನಾಥ ಎನ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ.53/2012 ಕಲಂ 174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.



ಇತರೆ ಪ್ರಕರಣಗಳು

ಉತ್ತರ ಠಾಣೆ:

  • ದಿನಾಂಕ 12.12.2012 ರಂದು ಲೈಟ್ ಹೌಸ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ನಲ್ಲಿ ರೂ 1,000 ಮುಖ ಬೆಲೆಯ 4 ಖೋಟಾ ನೋಟುಗಳು ಹಾಗೂ ರೂ 500 ಮುಖ ಬೆಲೆಯ 1 ಖೋಟಾ ನೋಟು ಸಿಕ್ಕಿದ್ದು, ಈ ನೋಟುಗಳನ್ನು ಯಾರೋ ಅಪರಿಚಿತರು ಬ್ಯಾಂಕಿನ ವ್ಯವಹಾರದ ಸಮಯದಲ್ಲಿ ಚಲಾವಣೆ ಮಾಡಿರುವುದಾಗಿದ್ದು, ಈ ಬಗ್ಗೆ ಶ್ರೀ ಎಂ. ಐತಾ, ಸೀನಿಯರ್ ಮ್ಯಾನೇಜರ್, ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್, ಬಲ್ಮಠ ರಸ್ತೆ, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು ರವರು ನೀಡಿದ ದೂರಿನಂತೆ ಉತ್ತರ ಠಾಣಾ ಅ.ಕ್ರ.202/2012 ಕಲಂ 489(ಎ)&(ಬಿ) ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment