ಅಪಘಾತ ಪ್ರಕರಣ
ಉಳ್ಳಾಲ ಠಾಣೆ ;
- ದಿನಾಂಕ 14.12.2012 ರಂದು ಪಿರ್ಯಾದಿದಾರರಾದ ರಾಜೇಶ್ ಕೆ (25) ತಂದೆ: ಶೀನ ಮೂಲ್ಯ, ಕನಂದಕಟ್ಟೆ ಮನೆ, ಪಾವೋರು ಅಂಚೆ, ಮಂಜೇಶ್ವರರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 19 ಇಸಿ 7172ನೇಯದರಲ್ಲಿ ಸಹಸವಾರನನ್ನಾಗಿ ಕಿಶೋರ್ ಎಂಬವರನ್ನು ಕುಳ್ಳಿರಿಸಿಕೊಂಡು ಕುಂಪಲ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ಬಳಿ ತಲುಪಿದಾಗ ತೊಕ್ಕೊಟ್ಟು ಕಡೆಯಿಂದ ಟೆಂಪೋ ನಂಬ್ರ ಕೆಎ 13 6407ನೇಯದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಉಳ್ಳಾಲದ ಕಡೆ ತಿರುಗಿಸಿ ನನ್ನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಮತ್ತು ಸಹಸವಾರ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿ ಮತ್ತು ಸಹ ಸವಾರನಿಗೆ ರಕ್ತ ಗಾಯವಾಗಿರುವುದು ಎಂಬುದಾಗಿ ರಾಜೇಶ್ ಕೆ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 327/2012. ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ ;
- ದಿನಾಂಕ 07-12-2012 ರಂದು ಸಮಯ ಸುಮಾರು 12.15 ಗಂಟೆಗೆ ಲಾರಿ ನಂಬ್ರ ಏಂ-19 ಆ-2867 ನ್ನು ಅದರ ಚಾಲಕರು ಬಿಜೈ ನ್ಯೂ ರೋಡ್ನ ಎಮ್ಸಿಎಫ್ ಕಾಲೋನಿ ಬಳಿ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿದ್ದ ಮೆಸ್ಕಾಂನ ವಿದ್ಯುತ್ ಕಂಬಕ್ಕೆ ಡಿಕ್ಕಿಯುಂಟು ಮಾಡಿ ಜಖಂಗೊಳಿಸಿರುವುದಾಗಿದೆ ಎಂಬುದಾಗಿ ಕೆ. ಶಶಿಂದ್ರ (58 ವರ್ಷ) ತಂದೆ-ಕೆ. ಲಕ್ಷ್ಮಣ. ಮೆಸ್ಕಾಮ್ , ಎಸ್- 4, ಬಿಜೈ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ. 181/2012 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment