ಅಪಹರಣ ಪ್ರಕರಣ:
ಸುರತ್ಕಲ್ ಪೊಲೀಸ್ ಠಾಣೆ:
ದಿನಾಂಕ 26-12-12 ರಂದು ಪಿರ್ಯಾದಿದಾರರ ಗಂಡ ದೀನನಾಥರವರನ್ನು ಮೂಲ್ಕಿ ರಿಜಿಸ್ರ್ಟೇಷನ್ ಆಪೀಸಿಗೆ ಬರುವಂತೆ ನಿತೇಶ ಹಾಗೂ ಇತರರು ನಿನ್ನೆ ರಾತ್ರಿ ಪೋನ್ನಲ್ಲಿ ತಿಳಿಸಿದ್ದು ಅದರಂತೆ ಪಿರ್ಯಾದಿಯ ಗಂಡ ದೀನನಾಥರವರು ಈ ದಿನ ಬೆಳಿಗ್ಗೆ 8-30 ಗಂಟೆಗೆ ಅವರ ಬಾಬ್ತು ಕೆಎ-19-ಎಂಎ-6099 ನೇ ಮಾರುತಿ ಓಮ್ನಿ ಕಾರಿನಲ್ಲಿ ಅವರ ಅಕ್ಕನ ಮಗ ನಿತಿನ್ ಜತೆಯಲ್ಲಿ ಮನೆಯಿಂದ ಹೊರಟು ಹೋಗಿದ್ದು ಅಪರಾಹ್ನ 2-00 ಗಂಟೆಗೆ ನಿತಿನ್ನು ಪುನಃ ಮನೆಗೆ ಬಂದು ಕಾಪರ್ೊರೇಷನ್ ಬ್ಯಾಂಕ್ನ ಪಾಸ್ಬುಕ್ ಕೆನರಾ ಬ್ಯಾಂಕ್ ಹಳೆಯಂಗಡಿಯ ಪಾಸ್ಬುಕ್ ಮತ್ತು ಚಕ್ ಬುಕ್ ಹಾಗೂ ಸುರತ್ಕಲ್ನ ಮಹಾಲಕ್ಷೀ ಬ್ಯಾಂಕ್ನ ಪಾಸ್ಬುಕ್ ಮತ್ತು ಚಕ್ಬುಕ್ನ್ನು ಕೊಡುವಂತೆ ದೀನನಾಥರವರು ತಿಳಿಸಿರುತ್ತಾರಾಗಿ ಹೇಳಿ ಅವುಗಳನ್ನು ಪಡೆದುಕೊಂಡು ಹೋಗಿದ್ದು ನಂತರ ಪಿರ್ಯಾದಿದಾರರು ಅವರ ಗಂಡನಿಗೆ ಮತ್ತು ಅಕ್ಕನ ಮಗನಿಗೆ ಪೋನ್ ಮಾಡಿಚಲ್ಲಿ ಪೋನ್ ಎತ್ತದೇ ಇದ್ದು ಬಳಿಕ ಪಿರ್ಯಾದಿದಾರರ ಗಂಡ ಪಿರ್ಯಾದಿಯ ಮೆಬೈಲಿಗೆ ಕರೆ ಮಾಡಿ ಇವರು ಜಾಗಕ್ಕೆ ಸಂಬಂದಪಟ್ಟವರಲ್ಲ ನಿತೇಶನ ಕಡೆಯವರಾಗಿರಬೇಕು ಆತನು ಕೂಡಾ ನಮ್ಮ ಜೊತೊಗೆ ಇದ್ದಾನೆ. ಜಾಸ್ತಿ ಮಾತನಾಡಲು ಆಗುವುದಿಲ್ಲ ಈಗ ಮಂಗಳೂರಿನಲ್ಲಿ ಇದ್ದೆನೆ ಎಂದು ಹೇಳಿದ್ದು ಪಿರ್ಯಾದಿದಾರರ ಗಂಡ ಹಾಗೂ ಅಕ್ಕ ಮಗನನ್ನು ನಿತೇಶ್ ಹಾಗೂ ಕಡೆಯವರು ಯಾವುದೋ ಉದ್ದೇಶದಿಂದ ಅಪಹರಿಸಿ ಎಲ್ಲಿಗೋ ಕರೆದುಕೊಂಡು ಹೋಗಿರುಗಿ್ತಾರೆ. ಅವರನ್ನು ಪತ್ತೆಮಾಡಿ ಕೊಡಬೇಕು ಎಂಬುದಾಗಿ ಜಯಶ್ರೀ ಡಿ ಕಾಂಚನ್ (46) ವಾಸಃ ಡೋರ್ ನಂಬ್ರ 2/11ಎ ಶ್ರೀ ಮಾತ ಪಾಂಚಜನ್ಯ ಹಾಲ್ ಬಳಿ ಸಸಿಹಿತ್ಲು ಮಂಗಳೂರು ರವರು ನೀಡಿದ ದೂರನಂತೆ ಸುರತ್ಕಲ್ ಠಾಣಾ ಅ.ಕ್ರ. 259/2012 ಕಲಂ: 365 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಕಳವು ಪ್ರಕರಣ:
ಮಂಗಳೂರು ಉತ್ತರ ಪೊಲೀಸ್ ಠಾಣಾ
ಫಿಯರ್ಾದಿದಾರರು ಮಂಗಳೂರಿನ ಅಳಕೆಯಲ್ಲಿ ಶ್ರೀ ಬಾಲಾಜಿ ಜನರಲ್ ಸ್ಟೋರ್ ಎಂಬ ಹೆಸರಿನ ದಿನಸಿನ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು, ಕೆಎ-19-ಎಂ-5236 ನಂಬ್ರದ ಮಾರುತಿ ಓಮ್ನಿ ಕಾರು ಹೊಂದಿದ್ದು, ಸ್ವಂತ ಉಪಯೋಗಕ್ಕೆ ಉಪಯೋಗಿಸಿಕೊಳ್ಳುತ್ತಿದ್ದು, ದಿನಾಂಕ 22-12-2012 ರಂದು ಪ್ರತಿ ನಿತ್ಯದಂತೆ ಅಂಗಡಿಯಿಂದ ಮನೆಗೆ ಬಂದು ತನ್ನ ಸ್ವಂತ ವಿಳಾಸವಾದ ಕೊಡಿಯಾಲ ಬೈಲಿನಲ್ಲಿರುವ ಟಿ.ವಿ.ರಮಣ ಪೈ ಅಪಾಟರ್್ ಮೆಂಟ್ ಕಂಪೌಂಡಿನ ರಸ್ತೆಯ ಬದಿಯಲ್ಲ್ಲಿ ಕಾರು ಪಾಕರ್್ ಮಾಡಿ ಮನೆಗೆ ಹೋಗಿದ್ದು, ದಿನಾಂಕ 23-12-2012 ರಂದು ಬೆಳಿಗ್ಗೆ 6:00 ಗಂಟೆಗೆ ಸೆಂಟ್ರಲ್ ಮಾಕರ್ೆಟಿಗೆ ಸಾಮಾನು ಖರೀದಿಸುವರೇ ಕಾರು ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಲಾಗಿ ಕಾರು ಕಾಣೆಯಾಗಿದ್ದು, ಕಾರಿನಲ್ಲಿ ಕಾರಿಗೆ ಸಂಬಂಧಪಟ್ಟ ಆರ್.ಸಿ., ಇನ್ಸೂರೆನ್ಸ್, ಮತ್ತು ಡ್ರೈವಿಂಗ್ ಲೈಸೆನ್ಸ್ನ ಮೂಲ ದಾಖಲಾತಿಗಳು ಕೂಡಾ ಕಾರಿನೊಂದಿಗೆ ಕಳವಾಗಿದ್ದು, ಕಾರನ್ನು ಇದುವರೆಗೂ ಮಂಗಳೂರು ನಗರದಲ್ಲಿ ಮತ್ತು ಸುತ್ತುಮುತ್ತಲಿನ ಸ್ಥಳಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದು, ಈ ಕಾರನ್ನು ಯಾರೋ ಕಳ್ಳರು ಕಳವು ಮಾಡಿದ್ದು,. ಕಳವಾದ ಕಾರಿನ ಬೆಲೆ ರೂ 35,000 /- ಇರಬಹುದು, ಈ ಬಗ್ಗೆ ಫಿರ್ಯಾದುದಾರರಾದ ಸ್. ವಾಮನ ಪೈ ವಾಸ ಟಿ ವಿ ರಮಣ ಪೈ ಹಾಲ್ ರಸ್ತೆ ಕೊಡಿಯಾಲ ಬೈಲ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊನಂ. 204/2012 ಕಲಂ 379 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಕಾವೂರು ಠಾಣೆ;
ದಿನಾಂಕ 25-12-2012 ರಂದು ಕೂಳೂರಿನಲ್ಲಿ ಕೆಲಸ ಮುಗಿಸಿ ಕಾವೂರು ಕಡೆಗೆ ನಡೆದುಕೊಂಡು ಬರುತ್ತಾ ರಾತ್ರಿ ಸುಮಾರು 9-00 ಗಂಟೆಗೆ ಕೂಳೂರು ಅರವಿಂದ ಮೋಟಾರ್ಸ್ ಪ್ರೈ.ಲಿ.ಕಟ್ಟಡದ ಎದುರು ರಸ್ತೆ ದಾಟುತ್ತಿದ್ದಾಗ ಕೊಟ್ಟಾರ ಚೌಕಿ ಕಡೆಯಿಂದ ಮೋಟಾರು ಸೈಕಲ್ ಏಂ 19-ಇಇ-7540 ನೇಯದನ್ನು ಸವಾರರಾದ ಭಾರ್ಗವರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿದಾರರಿಗೆ ಢಿಕ್ಕಿ ಮಾಡಿದ ಪರಿಣಾಮ ಫಿಯರ್ಾದಿದಾರರು ರಸ್ತೆಗೆ ಬಿದ್ದು ತಲೆಗೆ ರಕ್ತ ಬರುವ ಗಾಯ ಮತ್ತು ಬಲಕಾಲಿಗೆ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಮತ್ತು ಮೋಟಾರು ಸೈಕಲ್ ಸವಾರ ಭಾರ್ಗವರವರು ಸಹ ಗಾಯಗೊಂಡು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಫಿಯರ್ಾದಿದಾರರಾದ ಶಂಕರ (28) ತಂದೆ: ರುದ್ರಪ್ಪ, ವಾಸ: ಮೂಕಬಸುರಿಗಟ್ಟಿ ಗ್ರಾಮ, ಹಳೆ ಬಂಕಾಪುರ ಪೋಸ್ಟ್, ಶಿಗ್ಗಾವಿ ತಾಲೂಕು. ಹಾವೇರಿ. ಜಿಲ್ಲೆ ಎಂಬವರು ನೀಡಿದ ದೂರಿನಂತೆ ಕಾವೂರು ಪೊಲೀಸು ಠಾಣಾ ಅ.ಕ್ರ. 195/2012 ಕಲಂ: 279, 337 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜುಗಾರಿ ಆಡುತ್ತಿದ್ದವರ ಬಂಧನ:
ಪಣಂಬೂರು ಠಾಣೆ;
ದಿನಾಂಕಃ 26-12-12 ರಂದು ಪಣಂಬೂರು ಪೊಲೀಸ್ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಇಲಾಖಾ ಜೀಪು ಕೆಎ-19ಜಿ-484 ರಲ್ಲಿ ಜೋಕಟ್ಟೆ ಕ್ರಾಸ್ ಬಳಿ ಲಾರಿ ನಿಲ್ಲಿಸುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ನೆಲಕ್ಕೆ ಬಟ್ಟೆಯ ಬೈರಾಸ್ ಹಾಸಿ ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟು ಒಳಗೆ ಹೊರಗೆ ಎಂಬ ಜುಗಾರಾಟವನ್ನು ಆಡುತ್ತಿದ್ದವರನ್ನು 10-30 ಗಂಟೆಗೆ ಸುತ್ತುವರಿದು ಆರೋಪಿಗಳನ್ನು ವಶಕ್ಕೆ ಪಡೆದು ಆಟಕ್ಕೆ ಉಪಯೋಗಿಸಿದ 7125/- ರೂಪಾಯಿ ಹಣ, 52 ಇಸ್ಪೀಟ್ ಎಲೆಗಳು ಹಾಗೂ ನೆಲಕ್ಕೆ ಹಾಸಿದ ಬಟ್ಟೆಯ ಬೈರಾಸನ್ನು ಮಹಜರು ಮುಖಾಂತರ ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಣಂಬೂರು ಪೊಲೀಸ್ ಠಾಣಾ ಅ.ಕ್ರ ಃ 227/12 ಕಲಂ: 87 ಕೆ. ಪಿ. ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಮಂಗಳೂರು ಗ್ರಾಮಾಂತರ ಠಾಣೆ :
:ದಿನಾಂಕ: 25.12.2012 ರಂದು ರಾತ್ರಿ 9-50 ಗಂಟೆ ವೇಳೆಗೆ ಫಿರ್ಯಾದಿದಾರರು, ತನ್ನ ದೊಡ್ಡಪ್ಪನ ಮಗ ಸಚಿನ್ ಎಂಬವನೊಂದಿಗೆ ಸಂಬಂಧಿಕರ ಮನೆ ಗೃಹಪ್ರವೇಶದ ಬಗ್ಗೆ ಹೋಗುತ್ತಾ ಶಕ್ತಿನಗರದ ನವೀನ್ ಎಂಬವರ ಮನೆ ಮುಂದೆ ತಲಪಿದಾಗ ನವೀನನು, ಫಿರ್ಯಾದಿದಾರರನ್ನು ಉದ್ದೇಶಿಸಿ ಕುರುಡ ಎಂದು ತಮಾಷೆ ಮಾಡಿದ್ದಕ್ಕೆ ಫಿರ್ಯಾದಿದಾರರು ಪ್ರಶ್ನಿಸಿದ ದ್ವೇಷದಿಂದ ಆರೋಪಿಗಳು ಪಿಯರ್ಾದಿದರರ ಎಡಕಾಲಿನ ಮೊಣಗಂಟಿಗೆ ಮರದ ಸೋಮಟೆಯಿಂದ ಹೊಡೆದು ಗಾಯಗೊಲೀಸಿದಲ್ಲದೆ ಬೇವಸರ್ಿ ರಂಡೆಮಗ ಎಂಬಿತ್ಯಾದಿ ಅವಾಚ್ಯಶಬ್ದಗಳಿಂದ ಬೈದದರುವುದಾಗಿದೆ ಎಂಬುದಾಗಿ ಫಿಯರ್ಾದಿದಾರರಾದ ಜಗಜೀವನ್ ವಾಸ ಶಕ್ತಿನಗರ ಪದವು ಮಂಗಳೂರು ಎಂಬವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಕ್ರ 339/2012 324,504 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉಲ್ಲಾಳ ಠಾಣೆ:
ದಿನಾಂಕ. 16-12-2012 ರಂದು ಉಳ್ಳಾಲ ಸುಭಾಸ್ನಗರ ಎಂಬಲ್ಲಿರುವ ತಾಜ್ಮಹಲ್ ಹಾಲ್ನಲ್ಲಿ ಜರಗಿದ್ದ ಫಿರ್ಯಾದಿದಾರರ ಸಂಬಂಧಿ ಯು.ಎಸ್.ಅಬೂಬಕ್ಕರ್ ರವರ ಮಗ ಇಫರ್ಾನ್ ರವರ ಮದುವೆ ಕಾರ್ಯಕ್ರಮಕ್ಕೆ ಫಿರ್ಯಾದಿ ಮತ್ತು ಅವರ ಗಂಡ ನೌಶದ್ ರವರು ಮದ್ಯಾಹ್ನದ ಸಮಯದಲ್ಲಿ ಹೋಗಿದ್ದು, ಅಲ್ಲಿ ಫಿರ್ಯಾದಿದಾರರ ಗಂಡ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದು, ಮದುವೆ ಕಾರ್ಯಕ್ರಮ ಮುಗಿದ ಬಳಿಕ ಮದ್ಯಾಹ್ನ 2-00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರು ತನ್ನ ಗಂಡನಿಗೆ ಪೋನ್ ಮಾಡುತ್ತಿರುವ ಸಮಯದಲ್ಲಿ ಆರೋಪಿ ಇಮ್ತಿಯಾಜ್ನು ಫಿರ್ಯಾದಿದಾರರ ಸಮೀಪಕ್ಕೆ ಬಂದು ಅವರ ಮೊಬೈಲ್ ನಂಬ್ರವನ್ನು ಕೇಳಿದಾಗ, ಮೊಬೈಲ್ ನಂಬ್ರ ಕೊಡಲು ಫಿರ್ಯಾದಿದಾರರು ನಿರಾಕರಿಸಿದಾಗ ಆರೋಪಿಯು ಫಿರ್ಯಾದಿದಾರರ ಕೈಯನ್ನು ಹಿಡಿದು ಎಳೆದು ಮಾನಭಂಗ ಮಾಡಿ ನಂತರ ಫಿರ್ಯಾದಿದಾರರ ಕೈಯಲ್ಲಿದ್ದ ಮೊಬೈಲ್ ಪೋನನ್ನು ಎಳೆದು ತೆಗೆದು ಅದರಿಂದ ಆತನ ಮೊಬೈಲ್ ಪೋನ್ಗೆ ಮಿಸ್ಕಾಲ್ ಕೊಟ್ಟು, ಮೊಬೈಲ್ ಪೋನ್ನ್ನು ವಾಪಾಸು ಕೊಟ್ಟು, ಮುಂದೆ ತನಗೆ ಆಗಾಗ ಫೋನ್ ಮಾಡಬೇಕು ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಫಿರ್ಯಾದಿಗೆ ಜೀವ ಬೆದರಿಕೆ ಹಾಕಿದ್ದು, ಆ ವೇಳೆ ಫಿರ್ಯಾದಿದಾರರು ತನ್ನ ಗಂಡನಿಗೆ ಫೋನ್ ಮಾಡಿ ಸ್ಥಳಕ್ಕೆ ಬರಮಾಡಿಸಿಕೊಂಡಾಗ ಆರೋಪಿ ಇಮ್ತಿಯಾಜ್ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯಶಬ್ದಗಳಿಂದ ಬೈದು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು, ನಂತರ ಈ ವಿಚಾರವನ್ನು ತಿಳಿದುಕೊಂಡ ಫಿರ್ಯಾದಿದಾರರ ಅಕ್ಕನ ಮಗ ಇಮ್ತಿಯಾಜ್ನಲ್ಲಿ ಮರುದಿನ ವಿಚಾರಿಸಿದಾಗ ಅವರೊಳಗೆ ಮಾತಿನ ಜಗಳ ನಡೆದಾಗ ಇಮ್ತಿಯಾಜ್ನ ಅಣ್ಣ ನಾಸಿರ್ ರವರು ಬಂದು ಈ ವಿಚಾರವನ್ನು ರಾಜಿ ಮಾತುಕತೆಯಲ್ಲಿ ಮುಗಿಸುವ ಎಂದು ತಿಳಿಸಿದ್ದು, ಆದರೆ ಆರೋಪಿ ಇಮ್ತಿಯಾಜ್ನು ತನ್ನ ಅಣ್ಣ ನಾಸಿರ್ನ ಸಹಕಾರದಿಂದ ಫಿರ್ಯಾದಿದಾರರಿಗೆ ಮುಂದೆ ಕೂಡಾ ತೊಂದರೆ ಕೊಡುವ ಸಾಧ್ಯತೆ ಇರುವುದಲ್ಲದೆ ಆರೋಪಿಯು ಇದೇ ರೀತಿ ಬೇರೆ ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟಿದ್ದು, ಆತನು ಇದೇ ಚಾಳಿಯನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ಫಿರ್ಯಾದಿದಾರುರಾದ ಖತೀಜಾ (27) ವಾಸ. ಚೆನ್ನಯರಗುಡ್ಡೆ, ಅನಿಲ್ಕಂಪೌಂಡು ಒಂಭತ್ತುಕೆರೆ ಉಲ್ಲಾಳ ಎಂಬವರು ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣಾ ಮೊ.ನಂ. 335/2012 ಕಲಂ 354, 504, 506 ಜತೆಗೆ 34 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ:
ಪಣಂಬೂರು ಠಾಣೆ;
ಪಿಯರ್ಾದಿದಾರರ ಮಗಳು ಮೈತ್ರಾಳು ಎನ್ ಎಂ ಪಿಟಿ ಕನ್ನ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾಥರ್ಿನಿಯಾಗಿದ್ದು, ದಿನಾಂಕಃ 24-12-12 ರಂದು ಬೆಃ 10-30 ಗಂಟೆಗೆ ಹಲ್ಲು ನೋವಿನ ಕುರಿತು ಔಷಧಿ ತರಲೆಂದು ಪಣಂಬೂರು ಎನ್ಎಂಪಿಟಿ ಮಾಕರ್ೆಟ್ ಬಳಿ ಇರುವ ಮೆಡಿಕಲ್ಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟು ಹೋದವಳು ಇದುವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದೂ ಪತ್ತೆ ಮಾಡಿಕೊಡಬೇಕಾಗಿ ಫಿರ್ಯಾದುದಾರರಾದ ಹನುಮಂತ ಸಿದ್ಧನ್ನಾವರ್, ಹುಲಸಗೇರಿ, ಜಮುನಕಟ್ಟೆ ಅಂಚೆ, ಬಾದಾಮಿ ತಾಲಳುಕ ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣಾ ಅ.ಕ್ರ ಃ 228/12 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿಕೊಢು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment