ಅಸ್ವಾಭಾವಿಕ ಮರಣ ಪ್ರಕರಣ:
ಮಂಗಳೂರು ಉತ್ತರಠಾಣೆ;
- ದಿನಾಂಕ 15-12-2012 ರಂದು ಕೇಂದ್ರ ಮಾರುಕಟ್ಟೆಗೆ ಸಂಜೆ ಸುಮಾರು 5:00 ಗಂಟೆಗೆ ಬೀಬಿ ಅಲಾಬಿ ರಸ್ರೆಯಲ್ಲಿ ಹೋಗುತ್ತಿರುವಾಗ ಬೀಬಿ ಅಲಾಬಿ ರಸ್ತೆಯಲ್ಲಿ ಸಿಪಿಸಿ ಕಂಪೌಂಡು ಬಳಿ ಇರುವ ಹಿತೇಂದ್ರ ರವರಿಗೆ ಸಂಬಂಧಿಸಿದ ಕಟ್ಟಡದ ಜಗುಲಿಯಲ್ಲಿ ಒಬ್ಬ ವ್ಯಕ್ತಿಯು ಮಲಗಿದ್ದನ್ನು ಕಂಡಿದ್ದು, ಆತನು ಮೃತ ಪಟ್ಟಂತೆ ಕಂಡುಬಂದುದರಿಂದ ಪೊಲೀಸರಿಗೆ ಫೋನ್ ಮುಖಾಂತರ ತಿಳಿಸಿ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮೃತಪಟ್ಟಿರುವುದು ಕಂಡುಬಂದಿದ್ದು, ನಂತರ ಖಾಸಗಿ ಅಂಬುಲೆನ್ಸನ್ನು ಸ್ಥಳಕ್ಕೆ ತರಿಸಿ ಶವಾಗಾರದಲ್ಲಿ ಇರಿಸಲಾಗಿದೆ. ಸದ್ರಿ ಅಪರಿಚಿತ ಗಂಡಸಿನ ದೇಹವನ್ನು ಪರಿಶೀಲಿಸಲಾಗಿ ಅಂದಾಜು ಸುಮಾರು 45 ರಿಂದ 50 ವರ್ಷ ಪ್ರಾಯದವನಾಗಿದ್ದು, ಸುಮಾರು 5' 5 ಅಡಿ ಎತ್ತರ, ಗೋಧಿ ಮೈ ಬಣ್ಣ, ಬಲಕೈಯಲ್ಲಿ ಶಿಲುಬೆ ಗುರುತು ಇರುತ್ತದೆ. ಗಿಡ್ಡ ಕಪ್ಪು ಬಿಳಿ ತಲೆಕೂದಲು ಹೊಂದಿದ್ದು,. ಮೃತನು ಸಪೂರ ಶರೀರ ಹೊಂದಿದ್ದು, ಸದ್ರಿ ಅಪರಿಚಿತ ಗಂಡಸು ಬಿಳಿ ಬಣ್ಣದ ಒಳಚಡ್ಡಿ, ಬಿಳಿ ಗೆರೆ ಚೌಕುಳಿ ಅಂಗಿ ಧರಿಸಿರುತ್ತಾನೆ. ಕಾಲಿನಲ್ಲಿ ಹುಣ್ಣು ಇರುತ್ತದೆ. ಎಂಬುದಾಗಿ ಅಬ್ದುಲ್ಲಾ ತಂದೆ: ಖಾಸೀಂ ವಾಸ : ಮಾಕರ್ೆಟ್ ರೋಡ್, ಬಂದರು ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 33/2012, ಕಲಂ 174 ಸಿಆರ್ ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆೆ ಕೈಗೊಳ್ಳಲಾಗಿದೆ.
No comments:
Post a Comment