ಅಪಘಾತ ಪ್ರಕರಣ:
ಮಂಗಳೂರು ಸಂಚಾರ ಪೂರ್ವ ಠಾಣೆ;
- ದಿನಾಂಕ 24-12-2012 ರಂದು ಸಮಯ ಸಂಜೆ ಸುಮಾರು 6.30 ಗಂಟೆಗೆ ಮೋಟಾರು ಸೈಕಲ್ ನಂಬ್ರ ಏಂ-21 ಐ-8837ರಲ್ಲಿ ಅದರ ಸವಾರ ಸಹಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ನಂತೂರು ಜಂಕ್ಷನ್ ಕಡೆಯಿಂದ ಕುಲಶೇಖರದ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ಹೋಗಿ ಕುಲಶೇಖರ ಕಲ್ಪನೆ ಪೋಸ್ಟ್ ಆಫೀಸ್ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು, ಬಲಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವುಂಟಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಫಿರ್ಯಾದಿದಾರರಾದ ವೆಂಕಟ ಸ್ವಾಮಿ (48) ತಂದೆ- ಪೆದ್ದ ಕ್ರಿಪಯೆ. ಪೆದ್ದಮಾಂಡಲಿ ಗ್ರಾಮ, ವನಭಾರತಿ ತಾಲೂಕು, ಮೆಹಬೂಬ್ ನಗರ, ಆಂಧ್ರ ಪ್ರದೇಶ ರವರು ನೀಡಿದ ದೂರಿನಂತೆ ಮಂಗಳೂರು ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 188/2012 279 , 338 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆ;
- ದಿನಾಂಕ: 25.12.2012 ರಂದು ಮದ್ಯಾಹ್ನ 12.40 ಗಂಟೆಗೆ ತರಕಾರಿ ಸೇಲ್ಸ್ ಬಗ್ಗೆ ನಂತೂರು ಕಡೆಯಿಂದಕೆ.ಪಿ.ಟಿ. ಕಡೆಗೆ ತನ್ನ ಬಾಬ್ತು ಕಾರಿನಲ್ಲಿ ಹೋಗುತ್ತಿರುವಾಗ ಕದ್ರಿ ಪಾಕರ್್ ಬದಿಯಲ್ಲಿ ಅಳವಡಿಸಿದ ಕಬ್ಬಿಣದ ತಡೆ ಬೇಲಿ ಬಳಿಯಲ್ಲಿ ಯರೋ ಅಪರಿಚಿತ ಗಂಡಸು ಪ್ರಾಐ 25-30 ವರ್ಷದ ನೀಲಿ ಬಣ್ಣದ ಟೀ-ಶಟರ್್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿದ ವ್ಯಕ್ತಿಯು ಮಲಗಿದ್ದ ಸ್ಧಿತಿಯಲ್ಲಿ ಎಡ ಕಿವಿಯಲ್ಲಿ, ಬಾಯಿ. ಮೂಗಿನಲ್ಲಿ ರಕ್ತ ಸುರಿಯುತ್ತಿದ್ದ ಸ್ದಿತಿಯಲ್ಲಿ ಕಂಡು ಬಂದಿದ್ದು ಈತನು ಯಾವುದೋ ವಾಹನ ಅಥವಾ ರಸ್ತೆ ಬದಿಯಲ್ಲಿ ಬಿದ್ದೋ, ಅಥವಾ ಇನ್ಯಾವೋದೋ ಕಾರಣದದಿಂದ ಸಂಶಯಾಸ್ಪದ ರೀತಿಯಲ್ಲಿ ಗಂಬೀರ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಎಂಬುದಾಗಿ ಸಂತೋಷ ಕುಮಾರ್ (35) ತಂದೆ: ಸುಬ್ಬು ಬೆಳ್ಚಡ ವಾಸ: ಶಭರಿ ನಿಲಯ ಪಾವೂರು ಅಂಚೆ ಮಂಜೇಶ್ವರ ಕಾಸರಗೋಡು ಜಿಲ್ಲೆ ಹಾಲಿ: ಸುರೇಶ್ ಟೈಲರ್ ಪೂಜಾ ಕಾಂಪ್ಲೆಕ್ಸ್ ಕಾಫಿಕಾಡ್ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್ ನಂ: 39/2012 ಕಲಂ: 174 (ಸಿ) ಸಿ.ಆರ್.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಜಪೆ ಠಾಣೆ;
- ದಿನಾಂಕ 22/12/2012 ರಂದು ಆರೋಪಿ ಡೇವಿಡ್ ಮೈಕಲ್ ಫೆನರ್ಾಂಡಿಸ್ ತನ್ನ ಕೆಎ 19 ವಿ 1910 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ತನ್ನ ತಂದೆ ( ಪಿಯರ್ಾದಿದಾರರು) ಫೆಲಿಕ್ಸ್ ಫೆನಾಂಡಿಸ್ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಬೆ 10.45 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಾಂಧಿನಗರ ಎಂಬಲ್ಲಿ ರಸ್ತೆ ದಾಟುತ್ತಿದ್ದ 65 ವರ್ಷ ಪ್ರಾಯದ ಗಂಗೂ ಬಾಯಿ ಎಂಬವರಿಗೆ ಡಿಕ್ಕಿ ಹೊಡೆದುದರ ಪರಿಣಾಮ, ಗಂಗೂ ಬಾಯಿ ರಸ್ತೆಗೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡು ಅಭೋದಾವಸ್ಥೆಯಲ್ಲಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತಂದು ದಾಖಲು ಮಾಡಿರುವುದಾಗಿದೆ ಎಂಬುದಾಗಿ ಫೆಲಿಕ್ಸ್ ಫೆನಾಂಡಿಸ್, ಪ್ರಾಯ 63 ವರ್ಷ, ತಂದೆ: ದಿ. ಗ್ರೆಗರಿ ಫೆನಾಂಡಿಸ್, ವಾಸ: ಆಶಿವರ್ಾದ್ ವಿಲ್ಲಾ, ಗಂಜಿಮಠ ಅಂಚೆ, ಬಡಗುಳಿಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 251/2012 ಕಲಂ: 279, 338 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾವೂರು ಠಾಣೆ;
- ಕಾವೂರು ಗ್ರಾಮದ ಬೊಂದೇಲ್ನ ಕೆ,ಎಚ್.ಬಿ ಕಾಲೋನಿ ಮನೆನಂಬ್ರ ಇ.ಡಬ್ಲ್ಯೂ.ಎಸ್-137 ರಲ್ಲಿ ಒಬ್ಬಂಟಿಯಾಗಿ ವಾಸವಾಗಿರುವ ಫಿರ್ಯಾಧುದಾರರ ಚಿಕ್ಕಮ್ಮ ಅಂದರೆ ತಾಯಿ ಶ್ರೀಮತಿ ರೇಖಾ ಶೆಣೈರವರ ತಂಗಿ ಕಿಶೋರಿ ಪ್ರಭು ಎಂಬವರು ಮೂಕಿ ಮತ್ತು ಕಿವುಡಿಯಾಗಿದ್ದು, ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದವರು 2012 ನೇ ಇಸವಿ ಮೇ ತಿಂಗಳಿನಿಂದ ಕಾಣೆಯಾಗಿದ್ದು, ಈತನಕ ಹುಡುಕಾಡಿದ್ದು ಪತ್ತೆಯಾಗಿಲ್ಲ. ಪತ್ತೆ ಮಾಡಿಕೊಡಬೇಕಾಗಿ ಶ್ರೀಮತಿ ಅಕ್ಷತಾ (26) ಗಂಡ: ಪ್ರದೀಪ್ ಶೆಟ್ಟಿ, ವಾಸ: ಶ್ರೀ ದೇವಿ ಕೃಪಾ, ಗುರು ಮಂದಿರದ ಬಳಿ, ಮುಕ್ರಂಪಾಡಿ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 193/2012 ಕಲಂ: ಹೆಂಗಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ:
ಪಣಂಬೂರು ಠಾಣೆ;
- ದಿನಾಂಕ 12/11/2012 ರಂದು 08:00 ಗಂಟೆಗೆ ಪಿರ್ಯಾದಿದಾರರ ತಂದೆಯಾದ ಕೆ. ಮೋಹನ್ ಸುಮಾರು 8 ತಿಂಗಳಿನಿಂದ ಮಂಗಳೂರು ತಾಲೂಕು ತಣ್ಣೀರು ಬಾವಿ ಆರ್.ಪಿ.ಪಿ. ಸಿಲ್ವರ್ ಗೇಟ್ ಎಂಬಲ್ಲಿ ವೆಲ್ಡಂಗ್ ಕಾಂಟ್ರಾಕ್ಟರ್ ಆಗಿ ಕೆಸಲ ಮಾಡುತ್ತಿದ್ದು, ಸುಮಾರು 1 ತಿಂಗಳಿನಿಂದ ಪಿರ್ಯಾದಿಯಾಗಲಿ, ಅವರ ಮನೆಯವರಾಗಲಿ ಪೋನ್ ಮಾಡಿದಾಗ, ಅವರ ಪೋನ್ ಸಂಪರ್ಕಕ್ಕೆ ದೊರೆಯದೇ ಇದ್ದು, ಅವರು ಕೆಲಸ ಮಾಡುತ್ತಿದ್ದಲ್ಲಿ ವಿಚಾರಿಸಿದ್ದಲ್ಲಿ, ಸಂಬಂದಿಕರಲ್ಲಿಯೂ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ದೊರೆಯದೇ ಇದ್ದು, ಈ ತನಕ ಪತ್ತೆಮಾಡಬೇಕಾಗಿ ಎಮ್. ವೆಂಕಟೇಶ (22) ತಂದೆ: ಕೆ ಮೋಹನ್, ವಾಸ: 2, ಭಾರತೀಯ ಸ್ಟ್ರಿಯೂ , ಕಾಮರಾಜ ಪುರಂ, ಪಟ್ಟಾಭಿರಾಮ್, ಚೆನೈ, ತಮಿಳುನಾಡ್, ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 225/2012 ಕಲಂ: ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment