ಕಳ್ಳತನ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ 22-12-2012 ರಂದು 18-00 ಗಂಟೆಯಿಂದ ದಿನಾಂಕ 23-12-2012 ರಂದು 23-30 ಗಂಟೆಯ ಮಧ್ಯೆ ಮಂಗಳೂರು ತಾಲೂಕು ಹೊಸಬೆಟ್ಟು ಗ್ರಾಮದ ಕಡಂಬೋಡಿ ಎಂಬಲ್ಲಿಯ ಈ ಪ್ರಕರಣದ ಪಿರ್ಯಾದಿದಾರರ ಮನೆಯಿಂದ ಮುಂದಿನ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಒಳಗಿನ ಬೆಡ್ರೂಮ್ನ ಬಾಗಿಲನ್ನು ಕೂಡಾ ಮುರಿದು ಒಳಗೆ ಹೋಗಿ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟನ್ನು ಮುರಿದು ಅದರ ಸೇಫ್ ಲಾಕರನ್ನು ಜಖಂಗೊಳಿಸಿ ಅದರೊಳಗಿದ್ದ ಸುಮಾರು 173 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದಾಗಿ ಮತ್ತು ಮನೆಯ ಇನ್ನೊಂದು ಬೆಡ್ರೂಮ್ನ ಕೋಣೆಯಲ್ಲಿದ್ದ ಎರಡು ಕಬ್ಬಿಣದ ಕಪಾಟುಗಳನ್ನು ತೆರದು ಬಟ್ಟೆ-ಬರೆಗಳನ್ನು ಚೆಲ್ಲಾ-ಪಿಲ್ಲಿ ಮಾಡಿರುತ್ತಾರೆ. ಹಾಗೂ ಅಡುಗೆ ಕೋಣೆಯ ಕೆಳಗಡೆ ಮತ್ತು ಮೇಲ್ಗಡೆ ಇರುವ ಸೆಲ್ಪ್ಗಳನ್ನು ತೆರೆದು ವಸ್ತುಗಳನ್ನು ಹುಡುಕಾಡಿರುವುದಾಗಿ ಹಾಗೂ ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ಸುಮಾರು 4 ಲಕ್ಷ ರೂಪಾಯಿ ಆಗಬಹುದುದಾಗಿ ಎಂಬುದಾಗಿ ಫಿರ್ಯಾದಿದಾರರಾದ ಎಮ್.ವೀರಪ್ಪ ನಾಯ್ಕ್,ಪ್ರಾಯ 49 ವರ್ಷ ತಂದೆ ಸೋಮ ನಾಯ್ಕ್, ಮನೆ ನಂಬ್ರ 1-13/1, 'ಮಂಜುಶ್ರೀ', ಕಡಂಬೋಡಿ, ಗೋವಿಂದದಾಸ್ ಕಾಲೇಜಿನ ಹಿಂಬದಿ, ಸುರತ್ಕಲ್, ಮಂಗಳೂರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 256/2012 ಕಲಂ: 457,454,380 ಐ.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಪಣಂಬೂರು ಠಾಣೆ;
- ದಿನಾಂಕ 24-12-12 ರಂದು 15-30 ಗಂಟೆಗೆ ಮಾರುತಿ ಆಲ್ಟೋ ಕಾರು ನಂಬ್ರ ಕೆಎ-44/3191 ನೇಯದನ್ನು ಬೈಕಂಪಾಡಿ ಲೆಮಿನಾ ಕಂಪೆನಿಯಿಂದ ಜನರಲ್ ಮ್ಯಾನೇಜರ್ರವರನ್ನು ಬೈಕಂಪಾಡಿಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ರಾ ಹೆ 66 ರ ಜೋಕಟ್ಟೆ ಕ್ರಾಸ್ ಜಂಕ್ಷನ್ನಲ್ಲಿ ವಾಹನ ದಟ್ಟನೆ ಇದ್ದ ಕಾರಣ ಪಿರ್ಯಾದಿದಾರರು ಕಾರನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಮಂಗಳೂರು ಕಡೆಗೆ ಹೋಗುತ್ತಿರುವ ಸಮಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ರೆಡಿಮಿಕ್ಸ್ ಮಿಲ್ಲರ್ ಲಾರಿ ಕೆಎ-35/ಎಮ್-2021ನೇಯದರ ಚಾಲಕ ಉಸ್ಮಾನ್ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಬಲಬದಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಬಲಬದಿಯ ಎರಡು ಬಾಗಿಲು ಮತ್ತು ಸೈಡ್ ಮಿರರ್ ಜಖಂಗೊಂಡಿರುವುದಾಗಿದೆ ಎಂಬುದಾಗಿ ಧರ್ಣಪ್ಪ ಪೂಜಾರಿ ಪ್ರಾಯ 38 ವರ್ಷ ತಂದೆ: ಅಣ್ಣಿ ಪೂಜಾರಿ ವಾಸ: ಸಬರಬೆಪಣಕಜೆಬೆಳ್ತಂಗಡಿ ತಾಲೂಕು ಹಾಲಿ ವಾಸ: ಅಚ್ಚುಕೋಡಿ ಬೊಂದೇಲ್ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 224/12 ಕಲಂ 279 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾವೂರು ಠಾಣೆ;
- ದಿನಾಂಕ 22-12-2012 ರಂದು ರಾತ್ರಿ 00-35 ಗಂಟಗೆೆ ಊಟವಾದ ಬಳಿಕ ಎ.ಜೆ. ಆಸ್ಪತ್ರೆ ಕಡೆಯಿಂದ ಪಣಂಬೂರು ಕಡೆಗೆ ದಿನೇಶ್ನ ಕಾರು ಏಂ 36-ಒ-3977 ನೇಯದರಲ್ಲಿ ಪಣಂಬೂರು ಕಡೆಗೆ ಹೋಗುತ್ತಿದ್ದು, ದಿನೇಶನು ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಕೂಳೂರು ಅರವಿಂದ ಮೋಟಾರ್ಸ್ ಪ್ರೈ.ಲಿ. ಕಟ್ಟಡದ ಎದುರು ತಲುಪಿದಾಗ ನಿರ್ಲಕ್ಷ್ಯತನದಿಂದ ಒಮ್ಮಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಸೂಚನಾ ಫಲಕದ ಕಂಬಕ್ಕೆ ಢಿಕ್ಕಿಯಾಗಿ ಮಗುಚಿ ಬಿದ್ದು ಕಾರಿನಲ್ಲಿದ್ದ ಫಿಯರ್ಾದಿದಾರರ ಎಡಭುಜಕ್ಕೆ ಮೂಳೆ ಮುರಿತದ ಗಾಯ ಮತ್ತು ಎಡಕಾಲಿಗೆ ಗಾಯವಾಗಿರುತ್ತದೆ, ದಿನೇಶನ ಬಲಕಾಲಿಗೆ ಗಾಯವಾಗಿರುತ್ತದೆ, ಅಜರ್ುನ್ರಾಜ್ನ ಬಲಕೈಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಫಿರ್ಯಾದಿದಾರರಾದ ಶ್ರೀ ಅಜರ್ುನ್ ಕೆ ವಾಸುದೇವ (19) ತಂದೆ: ಕೆ.ಕೆ. ವಾಸುದೇವ, ವಾಸ: ಕೋಜಪರಂಬಿಲ್ ಹೌಸ್,ೆ ಎಲ್ತೂರು ವಲಾರಿ, ತ್ರಿಶ್ಶೂರ್, ಕೇರಳ. ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 190/2012 ಕಲಂ: 279, 337, 338 ಐ.ಪಿ.ಸಿ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 23-12-2012 ರಂದು ಫಿಯರ್ಾದಿದಾರರು ತನ್ನ ಬಾಬ್ತು ಸ್ಕೂಟರ್ ನಂಬ್ರ ಏಂ-19-ಇಂ-5425 ನೇಯದರಲ್ಲಿ ಸ್ನೇಹಿತ ಕೊಪ್ಪಲಕಾಡಿನ ಪ್ರವೀಣ್ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೆ.ಪಿ.ಟಿ.ಯಿಂದಾಗಿ ಮೇರಿಹಿಲ್ ಕಡೆಗೆ ಬರುತ್ತಾ ಅಪರಾಹ್ನ 3-10 ಗಂಟೆಗೆ ಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯ ಬಳಿ ತಲುಪಿದಾಗ ಅವರ ಹಿಂದುಗಡೆಯಿಂದ ಅಂದರೆ ಹರಿಪದವು ಜಂಕ್ಷನ್ನಿಂದ ಮೇರಿಹಿಲ್ ಕಡೆಗೆ ಏಂ-19-ಇಂ-2150 ನೇ ಮೋಟಾರು ಸೈಕಲ್ ಸವಾರನು ತನ್ನ ಬಾಬ್ತು ಮೋಟಾರು ಸೈಕಲ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರ ಸ್ಕೂಟರ್ಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾಧುದಾರರು ಮತ್ತು ಪ್ರವೀಣ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪ್ರವೀಣ್ ರವರ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಖುಲಾಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಫಿರ್ಯಾದಿದಾರರಾದ ಶ್ರೀ ಗಿರೀಶ್ ಆಚಾರ್ಯ (36) ತಂದೆ: ಬಾಬು ಆಚಾರ್ಯ, ವಾಸ: ಕುಂಟಲ್ಪಾಡಿ ಹೌಸ್, ಶಕ್ತಿನಗರ, ಮಂಗಳೂರು. ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 192/2012 ಕಲಂ: 279, 338 ಐ.ಪಿ.ಸಿ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಜಪೆ ಠಾಣೆ;
- ದಿನಾಂಕ 23-12-2012 ರಂದು ರಾತ್ರಿ ಮಂಗಳೂರು ತಾಲೂಕು ಕೊಂಡೆಮೂಲೆ ಗ್ರಾಮದ ಕಟೀಲು ಬಸ್ ನಿಲ್ದಾಣದ ಬಳಿ ಅಂಗಡಿಯ ಎದುರುಗಡೆ ಜಗುಲಿಯಲ್ಲಿ ಮಲಗಿದ್ದ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸು ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶ್ರೀ ವಿಶ್ವೇಶ್ ರಾವ್, ಪ್ರಾಯ 65 ವರ್ಷ, ತಂದೆ: ಕೃಷ್ಣ ರಾವ್, ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ವಸತಿ ಗೃಹ, ಕಟೀಲು, ಕೊಂಡೆಮೂಲೆ ಗ್ರಾಮ ರವರು ನೀಡಿದ ದೂರಿನಂತೆ ಬಜಪೆ ಠಾಣೆ ಯುಡಿಆರ್ ನಂಬ್ರ 54/2012 ಕಲಂ 174 ಸಿ ಆರ್ ಪಿ ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಪೊರ್ವ ಠಾಣೆ;
- ದಿನಾಂಕ: 19-12-2012 ರಂದು 07.30 ಗಂಟೆಗೆ ಪಿರ್ಯಾದಿದಾರರ ತಂದೆಯಾ ಈಶ್ವರರವರು ರಕ್ತದೊತ್ತಡ ಹಾಗೂ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಉಡುಪಿ ಜಿಲ್ಲಾ ಪಂಚಾಯತ್ನಲ್ಲಿ ಕೆಲಸ ಮಾಡಿಕೊಡಿಕೊಂಡಿದ್ದು ಮನೆಯಿಂದ ಕೆಲಸದ ಬಗ್ಗೆ ಹೊರಟು ಹೋಗಿದ್ದು ಉಡುಪಿಗೆ ಹೋಗುವರೇ ಮಂಗಳೂರು ನಗರದ ಬಂಟ್ಸ್ ಹಾಸ್ಟೇಲ್ ಬಳಿ ಬಸ್ಗಾಗಿ ಕಾಯುತ್ತಿರುವ ಸಮಯ ಖಾಯಿಲೆಯು ಉಲ್ಬಣಗೊಂಡು ಕಸಿದು ಬಿದ್ದವರನ್ನು ಪೊಲೀಸರು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಫತ್ರೆಗೆ ದಾಖಲಿಸಿದ್ದು, ಪೊಲೀಸರು ಪೋನು ಕರೆ ಮಾಡಿ ತಿಳಿಸಿದಂತೆ ನಂತರ ಅಲ್ಲಿಂದ ಅವರನ್ನು ಫಾದರ್ ಮುಲ್ಲರ್ಸ್ ಆಸ್ಫತ್ರೆಗೆ ದಾಖಲಿಸಿದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 24-12-2012 ರಂದು 09-000 ಗಂಟೆಗೆ ಮೃತಪಟ್ಟಿರುವುದಾಗಿದೆ. ಎಂಬುದಾಗಿ ಲತೇಶ್ (18) ತಂದೆ; ಈಶ್ವರ ವಾಸ: ಆಸೈ ಮನೆ ಆಸೈಗೋಳಿ ಮಂಜನಾಡಿ ಗಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್ ನಂ: 38/2012 ಕಲಂ: 174 ಸಿ.ಆರ್.ಪಿ.ಸಿ ರಂತೆ ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment