ಅಸ್ವಾಭಾವಿಕ ಮರಣ ಪ್ರಕರಣ
ಬಜಪೆ ಠಾಣೆ :
- ದಿನಾಂಕ 17/12/2012 ರಂದು ಬೆಳಿಗ್ಗೆ ಸುಮಾರು 09.00 ಗಂಟೆಗೆ ಪಿಯರ್ಾದಿದಾರರು ಮಂಗಳೂರು ತಾಲೂಕು ಮುಳೂರು ಗ್ರಾಮದ ದೋಣಿಂಜೆ ನದಿ ತೀರದಲ್ಲಿ ಮರುಳು ತುಂಬಿಸುವ ಕೆಲಸಗಾರರೊಂದಿಗೆ ಬಂದು ನೋಡಿದಾಗ ಸುಮಾರು 30 ವರ್ಷದ ಒಂದು ಅಪರಿಚಿತ ಗಂಡಸಿನ ಮೃತ ದೇಹ ಇರುವುದಾಗಿ ಈತನ 2 ದಿನಗಳ ಹಿಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೃತ ಶರೀರವು ನದಿ ನೀರಿನಲ್ಲಿ ಕವುಚಿ ತೇಲಾಡುತ್ತಿರುವುದು ಎಂಬುದಾಗಿ ಶ್ರೀ ರೋಹಿತಾಕ್ಷ ಶೆಟ್ಟಿ, @ ಅಣ್ಣು, ವಾಸ: ಮರಂಕರಿಯ ಮನೆ, ಗುರುಪುರ ಅಂಚೆ, ಮುಳೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅಪರಾಧ ಕ್ರಮಾಂಕ 51/2012 ಕಲಂ 174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಕ್ಷಿಣ ಠಾಣೆ :
- ದಿನಾಂಕ 16-12-2012 ರಂದು ಶ್ರೀ ಮಂಜುನಾಥ ಮೂಕಿ ಪಿ.ಸಿ 1019, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ರವರು ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಯ ಹೊರಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ, ಸಮಯ ಸುಮಾರು 17-30 ಗಂಟೆಗೆ ನಗರ ನಿಯಂತ್ರಣ ಕೊಠಡಿಯಿಂದ, ಮಂಗಳೂರು ರೈಲ್ವೇ ನಿಲ್ದಾಣದ ಬಳಿ ಒರ್ವ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿರುವುದಾಗಿ ಬಂದ ಮಾಹಿತಿಯಂತೆ ಫಿಯರ್ಾದುದಾರರು ಸದ್ರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸುಮಾರು 55 ವರ್ಷ ಪ್ರಾಯ ಒಬ್ಬ ಅಪರಿಚಿತ ಗಂಡಸು ಮಲಗಿದಲ್ಲಿಯೇ ಮೃತಪಟ್ಟಿದ್ದು, ಈತನು ಬಿಕ್ಷುಕನಂತೆ ಕಂಡು ಬರುತ್ತಿದ್ದು, ಈತನು ಯಾವುದೋ ಖಾಯಿಲೆಯಿಂದ ಅಥವಾ ಸ್ವಾಭಾವಿಕವಾಗಿ ಮೃತಪಟ್ಟಿರಬಹುದಾಗಿದ್ದು, ಎಂಬುದಾಗಿ ಶ್ರೀ ಮಂಜುನಾಥ ಮೂಕಿ ಪಿ.ಸಿ 1019, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 91/2012 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಉಳ್ಳಾಲ ಠಾಣೆ :
- ದಿನಾಂಕ 13.12.2012 ರಂದು ಆನಂದ ಶೆಟ್ಟಿ (56) ತಂದೆ- ವಾಮಯ್ಯ ಶೆಟ್ಟಿ, ವಾಸ- ಪಡ್ಯಾರ ಗುತ್ತಿನ ಮನೆ, ಆಂಬ್ಲಮೊಗ್ರು ಗ್ರಾಮ, ರವರು ಬೆಳಿಗ್ಗೆ ಮನೆಯಿಂದ ಹೊರಟು ತೊಕ್ಕೊಟ್ಟುಚೆಂಬುಗುಡ್ಡೆಗೆ ಬಂದಿದ್ದು ಚೆಂಬುಗುಡ್ಡೆಯಲ್ಲಿ ಬಸ್ಸಿನಿಂದ ಇಳಿದು ರಸ್ತೆಯ ಬಲ ಬದಿಯಲ್ಲಿ ತೊಕ್ಕೊಟ್ಟು ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆನಂದ ಶೆಟ್ಟಿ ಯವರ ಹಿಂದಿನಿಂದ ಝೆನ್ ಕಾರೊಂದನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಗೆ ಒಮ್ಮೆಲೇ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯ ಬಲ ಕೈಗೆ ಗುದ್ದಿದ ನೋವಾಗಿದ್ದು ಪಿರ್ಯಾದಿಯು ಆ ಕೂಡಲೇ ಸ್ಮ್ರತಿ ತಪ್ಪಿ ಬಿದಿದ್ದವರನ್ನು ಅಲ್ಲಿ ಸೇರಿದ್ದ ಯಾರೋ ಒಬ್ಬರು ಸಹರಾ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಪಿರ್ಯಾದಿಗೆ ಡಿಕ್ಕಿ ಹೊಡೆದ ಕಾರು ನಂಬ್ರ ಕೆಎ19 ಎಂಬಿ 0951 ಅಂತ ತಿಳಿದಿದ್ದು ಚಾಲಕನ ಹೆಸರು ನವೀನ್ ಎಂಬುದಾಗಿದ್ದು ಚಾಲಕ ಪಿರ್ಯಾದಿಯ ಚಿಕಿತ್ಸೆಯ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು ನಂತರ ಕಾರು ಚಾಲಕನು ಚಿಕಿತ್ಸೆಯ ವೆಚ್ಚ ಹೆಚ್ಚಾಗಿರುವುದರಿಂದ ಭರಿಸಲಾಗದೇ ಈ ಬಗ್ಗೆ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆನಂದ ಶೆಟ್ಟಿ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅಪರಾಧ ಕ್ರಮಾಂಕ 329/2012 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ :
- ದಿನಾಂಕ 16-12-2012 ರಂದು ಸಮಯ ಸಂಜೆ ಸುಮಾರು 06.00 ಗಂಟೆಗೆ ಕಾರು ನಂಬ್ರ ಕೆಎ 19 ಎಂಬಿ 3784ನ್ನು ಅದರ ಚಾಲಕರು ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಶಕ್ತಿನಗರ ಕ್ರಾಸ್ ಬಳಿಯ ಇಂಚರ ಬಾರ್ & ರೆಸ್ಟೊರೆಂಟ್ ಎದುರು ತಲುಪುವಾಗ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಶ್ರೀಮತಿ ನಾಗಿಣಿ ಎಂಬವರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಶ್ರೀಮತಿ ನಾಗಿಣಿ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತ ಗಾಯ ಉಂಟಾದವರನ್ನು ಪಿರ್ಯಾದುದಾರರು ಅಲ್ಲೆ ಸೇರಿದ ಜನರ ಸಹಾಯದಿಂದ ಉಪಚರಿಸಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ವೆಂಕಪ್ಪ ಮೂಲ್ಯ (45 ವರ್ಷ) ತಂದೆ- ಕಿಟ್ಟು ಮೂಲ್ಯ, ವಾಸ:ಎದುರು ಪದವು ವಾಮಾಂಜೂರು. ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅಪರಾಧ ಕ್ರಮಾಂಕ 183/2012 279 , 337 ಐ.ಪಿ.ಸಿ, ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೆ ಪ್ರಕರಣ
ಮುಲ್ಕಿ ಠಾಣೆ :
- ದಿನಾಂಕ 17.12.2012 ರಂದು ರಾತ್ರಿ 00.45 ಗಂಟೆಗೆ ಯಾರೋ ದುಷ್ಕಮರ್ಿಗಳು ಮಂಗಳೂರು ತಾಲೂಕು ಕಾನರ್ಾಡು ಗ್ರಾಮದ ಕಾನರ್ಾಡು ಎಂಬಲ್ಲಿರುವ ಮಸ್ಜಿದ್ ನೂರ್ ಮಸೀದಿಗೆ ಕಲ್ಲು ತೂರಾಟ ಮಾಡಿ ಮಸೀದಿಯ ಕಿಟಕಿ ಗಾಜುಗಳನ್ನು ಪುಡಿಗೈದು ಹಾನಿಪಡಿಸಿ ಕೋಮು ಪ್ರಚೋದನಾ ಕೃತ್ತಯ ಎಸಗಿರುತ್ತಾರೆ ಎಂಬುದಾಗಿ ಇಕ್ಬಾಲ್ ಅಹ್ಮದ್ ಮೂಲ್ಕಿ ಪ್ರಾಯ:39 ವರ್ಷ ತಂದೆ:ಹಾಜಿ ಅಹ್ಮದ್ ಇಬ್ರಾಹಿಂ ವಾಸ:ನಿಶಿಬಾಣ್ ಜ್ಯೂನಿಯರ್ ಕಾಲೇಜ್ ಹತ್ತಿರ, ಕಾನರ್ಾಡು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅಪರಾಧ ಕ್ರಮಾಂಕ 158/2012 ಕಲಂ:427 ,153(ಎ),427,2(ಎ) ಕೆ.ಪಿ.ಡಿ.ಎಲ್.ಪಿ ಆಠ್ಟಿ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment