Tuesday, December 11, 2012

Daily Crime Incidents for December 11,2012


ಹಲ್ಲೆ ಪ್ರಕರಣ:

ಮಂಗಳೂರು ಉತ್ತರ ಠಾಣೆ;


  • ದಿನಾಂಕ10/12/2012 ರಂದು ಸಂಜೆ 6:30 ಗಂಟೆಗೆ ಫಿಯರ್ಾದಿದಾರರಾದ ದಯಾನಂದ ಶೆಟ್ಟಿ ತಂದೆ: ಸಂಜೀವ ಶೆಟ್ಟಿ ವಾಸ: ಪ್ರಕೃತಿ ಪಾಟರ್್ ಮೆಂಟ್ ಅಶೋಕ್ ನಗರ  2 ವರ್ಷಗಳ ಹಿಂದೆ ಪವಿತ್ರ ಶೆಟ್ಟಿ  ಎಂಬವರನ್ನು ಮದುವೆಯಾಗಿದ್ದು, ಬಳಿಕ ಹೊಂದಾಣಿಕೆ ಬಾರದೇ ಫಿಯರ್ಾದಿದಾರರ ಹೆಂಡತಿ ತನ್ನ ತಾಯಿ ಮನೆಗೆ ಹೋಗಿರುತ್ತಾರೆ. ಫಿಯರ್ಾದಿದಾರರ ಮೇಲೆ ಪಾಂಡೇಶ್ವರ ಠಾಣೆಯಲ್ಲಿ ವರದಕ್ಷಿಣೆ ಹಾಗೂ ಕೌಟುಂಬಿಕ ಕಾನೂನಿನಡಿಯಲ್ಲಿ ಕೇಸು ದಾಖಲಿಸಿಕೊಂಡಿರುತ್ತಾರೆ. ಫಿಯರ್ಾದಿದಾರರ ತಾಯಿಯ ಮನೆಯನ್ನು ಮಾರಿದ್ದು, ಅಲ್ಲಿಗೆ ಪವಿತ್ರ ಮತ್ತವರ ಮನೆಯವರು ಅಕ್ರಮ ಪ್ರವೇಶ ಮಾಡಿದ್ದು ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ನಂತರ ರಾಜಿ ಪಂಚಾಯಿತಿಗೆ ನಡೆದು ಆರ್.ಟಿ.ಓ. ಬಳಿ ಇರುವ ಕೋಸ್ಮೋ ಲಾಡ್ಜಿನಲ್ಲಿ ಫಿಯರ್ಾದಿದಾರರು ಹಾಗೂ ಅವರ ಹೆಂಡತಿ ವಾಸವಾಗಿರುತ್ತಾರೆ.  ಹೀಗಿರುವಾಗ ಕುದ್ರೋಳಿ ದೇವಸ್ಥಾನದ ಬಳಿ ಇರುವ ವಿಘ್ನೇಶ್ವರ ಜ್ಯೋತಿಷ್ಯಾಲಯರವರ ಮನೆಯಲ್ಲಿ  ರಾಜಿ ಪಂಚಾಯಿತಿಗೆ ಬಗ್ಗೆ ಸಂಬಂಧಿಕರಾದ ರಘುನಾಥ ವಕೀಲರು ಅವರ ಜೊತೆಯಲ್ಲಿ ಮಾತನಾಡುತ್ತಿರುವಾಗ ಫಿಯರ್ಾದಿದಾರರ ಹೆಂಡತಿಯ ಅಣ್ಣನವರಾದ ಪ್ರೀತಂ, ಪ್ರವೀಣ ಹಾಗೂ ತಾಯಿ ಶಶಿಕಲಾ ಮತ್ತಿತರು ಫಿಯರ್ಾದಿದಾರರನ್ನು ಹಾಗೂ ರಘುನಾಥರನ್ನು ತಡೆದು ನಿಲ್ಲಿಸಿ ಅಕ್ರಮ ಕೂಟ ನಡೆಸಿ ಹಲ್ಲೆ ನಡೆಸಿ ಬೇವಸರ್ಿ ರಂಡೆಮಗ ಎಂದು ಅವಾಚ್ಯ ಶಬ್ಧಗಳಿಂದ ಬೈಯ್ದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ರಘುನಾಥ ರವರ ಮೊಬೈಲನ್ನು ಕಸಿದುಕೊಂಡು ಹೋಗಿದ್ದಲ್ಲದೇ ಫಿಯರ್ಾದಿದಾರರ ಹೆಂಡತಿಯನ್ನು ಅಪಹರಣ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ರಕ್ಷಣೆ ನಿಡಬೇಕೆಂದು ಎಂಬುದಾಗಿ ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ 198/2012 ಕಲಂ 143, 147, 341, 323, 504, 506 ಖ/ಘ 149  ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಉತ್ತರ ಠಾಣೆ;


  • ದಿನಾಂಕ10/12/2012 ರಂದು ಸಂಜೆ 6:30 ಗಂಟೆಗೆ ಫಿಯರ್ಾದಿದಾರರಾದ ಪವಿತ್ರಾ ಶೆಟ್ಟಿ ಗಂಡ: ದಯಾನಂದ ಶೆಟ್ಟಿ ವಾಸ : ಎಮ್ಮಕೆರೆ ಬೋಳಾರ. ಇವರ ಗಂಡನಾದ ದಯಾನಂದ ಶೆಟ್ಟಿ ಹಾಗು ಆತನ ಮನೆಯವರು ಮದುವೆಯಾದ ದಿನದಿಂದ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಅವರ ಮೇಲೆ ಮೊಕದ್ದಮೆ ದಾಕಲಾಗಿ ತನಿಖೆಯಲ್ಲಿರುತ್ತದೆ. ಫಿಯರ್ಾದಿದಾರರು ಅಶೋಕ ನಗರದ ಗಂಡನಮನೆಯಲ್ಲಿ ವಾಸವಾಗಿದ್ದು, ಬಳಿಕ ಫಿಯರ್ಾದಿದಾರರ ಗಂಡ ಹಾಗೂ ಅವರ ಮಿತ್ರ ರಾಘವ ಸೇರಿಕೊಂಡು ಗೂಂಡಾಗಳನ್ನು ಕರೆದುಕೊಂಡು ಬಂದು ಸದ್ರಿ ಮನೆಯಿಂದ ಬಲಾತ್ಕಾರವಾಗಿ ಎಬ್ಬಿಸಿದ್ದು, ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಬಳಿಕ ಫಿಯರ್ಾದಿದಾರರ ಗಂಡ ಹಾಗೂ ಅವರ ಮಿತ್ರ ರಾಘವ ಸೇರಿಕೊಂಡು ಫಿಯರ್ಾದಿದಾರರನ್ನು ಒಳ್ಳೆಯ ರೀತಿಯಲ್ಲಿ ನೋಡುತ್ತೇನೆಂದು ಹೇಳಿ ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಅಪಹರಣ ಮಾಡಿಕೊಂಡು ಹೋಗಿ ಇಟ್ಟಿದ್ದು, ಬಳಿಕ ದಯಾನಂದ ಶೆಟಿ, ಅವರ ಮಿತ್ರ ರಾಘವ, ಅಣ್ಣ ಉಮೇಶ ಶೆಟ್ಟಿ ಹಾಗೂ ಅವರ ಪತ್ನಿ ಶಮರ್ಿಳಾ ಇವರು ಸೇರಿಕೊಂಡು ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ಡೈವಸರ್್  ಪೇಪರಿಗೆ ಸಹಿ ಮಾಡಬೇಕೆಂದು ಬೆದರಿಕೆ ಹಾಕಿರುತ್ತಾರೆ. ಕೋಟರ್ಿನಲ್ಲಿ ಸಾಕ್ಷಿ ನುಡಿದರೆ ಕೊಲ್ಲುವುದಾಗಿ ಜಿವ ಬೆದರಿಕೆ ಹಾಕಿರುತ್ತಾರೆ. ದಿನಾಂಕ 10-12-2012 ರಂದು ಸಂಜೆ ಸುಮಾರು 6:30 ಗಂಟೆ ಸಮಯಕ್ಕೆ ಫಿಯರ್ಾದಿದಾರರನ್ನು ಕುದ್ರೋಳಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಫಿಯರ್ಾದಿದಾರರ ಮನೆಯವರಿಗೆ ಕರೆ ಮಾಡಿ ನಿಮ್ಮ ಮಗಳನ್ನು ನಾನು ಇಲ್ಲೇ ಬಿಟ್ಟು ಹೋಗುತ್ತೇನೆ ಎಂದು ತಿಳಿಸಿದ್ದು, ಅದರಂತೆ ಫಿಯರ್ಾದಿದಾರರ ತಾಯಿ ಸ್ಥಳಕ್ಕೆ ಬಂದಾಗ ಆರೋಪಿತರು ನಿಮ್ಮ ಮಗಳನ್ನು ನೀವೆ ಇಟ್ಟುಕೊಳ್ಳಿ ಎಂದು ಹೇಳಿ ನಮ್ಮ ವಿರುದ್ದ ಸಾಕ್ಷಿ ನುಡಿದರೆ ಕೊಂದು ಹಾಕುವುದಾಗಿ ಜೀವಬೆದರಿಕೆ ಹಾಕಿರುತ್ತಾರೆ. ಫಿಯರ್ಾದಿದಾರರ ತಾಯಿ ನೀವು ಈ ರೀತಿ ಯಾಕೆ ಮಾಡುವುದು ಎಂದು ಕೇಳಿದಾಗ ಆರೋಪಿತರು ಫಿಯರ್ಾದಿದಾರರ ತಾಯಿಯ ಮೇಲೆ ಕೈ ಹಾಕಿ ಬ್ಯಾವಸರ್ಿ ರಂಡೆ ನಿಕ್ಕ್ ಬಾರಿ ಅಹಂಕಾರ ಉಂಡು ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಕೆನ್ನೆಗೆ ಹೊಡೆದಿದ್ದು, ಬಳಿಕ ಅಲ್ಲಿ ಜನ ಸೇರಿದ್ದನ್ನು ಕಂಡು ಆರೋಪಿತರು ಓಡಿಹೋಗಿರುತ್ತಾರೆ.  ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ರಕ್ಷಣೆ ನಿಡಬೇಕೆಂದು ನೀಡಿದ ದೂರಿನಂತೆ ಉತ್ತರ ಠಾಣೆಯ ಅಪರಾದ ಕ್ರಮಾಂಕ 199/2012 ಕಲಂ 143, 147, 342, 364, 498(ಂ), 354, 504, 506 ಖ/ಘ 149 ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ

ಮಂಗಳೂರು ಪೂರ್ವ ಠಾಣೆ;


  • ದಿನಾಂಕ 09-12-2012 ರಂದು 14-30 ಗಂಟೆಯಿಂದ ದಿನಾಂಕ 10-12-2012 ರಂದು ಬೆಳಿಗ್ಗೆ 10-00 ಗಂಟೆಯ ಮದ್ಯೆ ಯಾರೋ ಕಳ್ಳರು ಪಿರ್ಯದಿದಾರರ ಬಾಬ್ತು ಮಂಗಳೂರು ನಗರದ ಲೋವರ್ ಬೆಂದೂರ್ನಲ್ಲಿರುವ ಮಂಜುಶ್ರೀ ಜುವೆಲ್ಲರಿ ಅಂಗಡಿಯ ಗೋಡೆಗೆ ಕನ್ನ ಕೊರೆದು ಆ ಮೂಲಕ ಒಳ ಪ್ರವೇಶಿಸಿ ಒಳಗಡೆ ಶೋಕೆಸ್ನಲ್ಲಿ ಇರಿಸಲಾಗಿದದ ವಿವಿಧ ನಮೂನೆಯ 21 ಗ್ರಾಂ ತೂಕದ ಚಿನ್ನಾಭರಣ, 9 ಕೆಜಿ 610 ಗ್ರಾಂ ತೂಕದ ಬೆಳ್ಳಿಯ ಸಾಮಾಗ್ರಿಗಳು ಹಾಗೂ ಸುಮಾರು 18000/- ಬೆಲೆ ಬಾಳುವ ಪಾಲಿಶ್ಗೆ ಬಂದಿದ್ದ ಹಳೇಯ ಬೆಳ್ಳಿಯ ಒಡವೆಗಳು ಹೀಗೆ ಹೀಗೆ ಒಟ್ಟು 703,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಮಂಜುನಾಥ ಶೇಟ್ (55) ತಂದೆ:ಕೃಷ್ಣ ಶೇಟ್ ವಾಸ: ವಿಮಲೇಶ್ ನಿಲಯ ಬಿ.ಟಿ.ಗಾರ್ಡನ್ ಜೊಜರ್್ಮೆಟ್ರಿಸ್ ರೋಡ್ ಕದ್ರಿ ಮಂಗಳೂರು. ರವರು  ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆಯ ಅಪರಾದ ಕ್ರಮಾಂಕ 176/2012 ಕಲಂ: 454,457,380 ಐ.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅತ್ಮಹತ್ಯೆ ಪ್ರಕರಣ 

ಬಜಪೆ ಠಾಣೆ; 


  • ಪಿಯರ್ಾದಿದಾರರಾದ ಗಣೇಶ್ ಪ್ರಸಾದ್ ಪ್ರಾಯ 37 ವರ್ಷ,ತಂದೆ: ವಾಮನ್ ಭಟ್, ಲಕ್ಷ್ಮಿ ಗಣೇಶ್ , ಹಳೆ ಪೋಸ್ಟ್ ಆಫೀಸ್ ಬಳಿ, ಗಂಜಿಮಠ, ಬಡಗುಳಿಪಾಡಿ  ಗ್ರಾಮ.ಮಂಗಳೂರು ರವರ  ತಾಯಿ ಶ್ರೀಮತಿ ಗೀತಾ (61 ವರ್ಷ)ರವರು ಹೊಟ್ಟೆಯೊಳಗೆ ಗಡ್ಡೆ ಬೆಳೆದಂತ ಕಾಯಿಲೆ ಹೊಂದಿದ್ದು ಶಸé್ರಚಿಕಿತ್ಸೆ ಮಾಡಿದರೂ ಗುಣವಾಗದೇ ನೋವಿನಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09-12-20102 ರಂದು ಬೆಳಿಗ್ಗೆ 6.00 ಗಂಟೆಗೆ ಮನೆಯ ಹೊರಗೆ ಇದ್ದ ಗುಲಾಬಿ ಗಿಡಕ್ಕೆ ಉಪಯೋಗಿಸುವ ಔಷಧಿಯನ್ನು ಕುಡಿದು ಅಸ್ವಸ್ಥರಾದವರನ್ನು ಮಂಗಳೂರು ಅತ್ತಾವರ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು , ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 10-12-2012 ರಂದು ಬೆಳಿಗ್ಗೆ 8.35 ಗಂಟೆಗೆ ಮೃತ ಪಟ್ಟಿರುತ್ತಾರೆ ಎಂಬುದಾಗಿ ಪಿಯರ್ಾದಿದಾರರು ನೀಡಿದ ದೂರಿನಂತೆ ಬಜಪೆ ಠಾಣೆಯ ಅಪರಾದ ಕ್ರಮಾಂಕ 50/2012 ಕಲಂ 174 ಸಿ ಆರ್ ಪಿ ಸಿ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಾಂಜಾ ಮಾರಾಟಗಾರನ ಸೆರೆ:

ಪಣಂಬೂರು ಠಾಣೆ:

  •  ದಿನಾಂಕ 10-12-2012ರಂದು 16-30 ಗಂಟೆಗೆ ಪಣಂಬೂರು ಠಾಣಾ ಸರಹದ್ದಿನ ತಣ್ಣೀರುಬಾವಿ ಬೀಚಿನ ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಪಿರ್ಯಾದಿದಾರರಾದ ಚೆಲುವರಾಜ್.ಬಿ ಪೊಲೀಸ್ ನಿರೀಕ್ಷಕರು ಪಣಂಬೂರು ಪೊಲೀಸ್ ಠಾಣೆ ರವರಿಗೆ ದೊರೆತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ಪಂಚರೊಂದಿಗೆ ದಾಳಿ ನಡೆಸಿ ಆರೋಪಿ ಮೊಹಮ್ಮದ್ ಇಷರ್ಾದ್ 20 ವರ್ಷ ತಂದೆಃ ಇಬ್ರಾಹಿಂ ವಾಸಃ ಮುಳಿಂಜ ಗ್ರಾಮ ಉಪ್ಪಳ, ಕಾಸರಗೋಡು ಕೇರಳ   ಪತ್ತೆ ಮಾಡಿ ಆರೋಪಿತನ ವಶದಿಂದ 900 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಹಾಗೂ ನಗದು ಹಣ 500/-ರೂ ಯನ್ನು ಮಹಜರು ಮುಖೇನಾ ಸ್ವಾದೀನ ಪಡಿಸಿ ಆರೋಪಿತನ ವಿರುದ್ದ ಕ್ರಮ ಜರುಗಿಸಬೇಕಾಗಿ ಪಿರ್ಯಾದಿದಾರರು ನೀಡಿದ ದೂರಿನಂತೆ ಪಣಂಬೂರು ಠಾಣೆಯ ಅಪರಾದ ಕ್ರಮಾಂಕ 217/2012 ಕಲಂ 8(ಸಿ) ಜತೆಗೆ 20(ಬಿ) (2ಎ) ನಾರ್ಕೋಟಿಕ್ಸ್ ಡ್ರಗ್ಸ್ ಆಕ್ಟ್ 1985 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment