ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 28-12-2012 ರಂದು ಸಮಯ ಬೆಳಿಗ್ಗೆ ಸುಮಾರು 08.30 ಗಂಟೆಗೆ ಪಿರ್ಯಾದುದಾರರು ಸ್ಕೂಟರ್ ನಂಬ್ರ ಏಂ-14 ಐ-1085 ನ್ನು ಬಿಕರ್ನಕಟ್ಟೆ ಕಡೆಯಿಂದ ಸಿಟಿ ಆಸ್ಪತ್ರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ನಂತೂರು ಸರ್ಕಲ್ ದಾಟಿ ಕದ್ರಿ ಶಿವಭಾಗ್ ಕಡೆಗೆ ಹೋಗುವ ರಸ್ತೆ ತಲುಪುವಾಗ ಸ್ಕೂಟರ್ನ ಹಿಂದಿನಿಂದ ಬಸ್ಸು ನಂಬ್ರ ಏಂ-19 ಅ- 8933 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಎರಡೂ ಕಾಲುಗಳಿಗೆ ಮತ್ತು ತಲೆಯ ಹಿಂಭಾಗಕ್ಕೆ ರಕ್ತಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರ ಕಿಶನ್ ಎಂ ಸಾಲಿಯಾನ್(70) ತಂದೆ- ಎಂ. ಮಂಜಪ್ಪ. ಸುಭಿಕ್ಷಾ ಪಟೇಲ್ ರಸ್ತೆ, ಕಾನಡ್ಕ, ಶಕ್ತಿನಗರ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 189/2012 279 , 337 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ;
- ದಿನಾಂಕ: 28-12-2012 ರಂದು ಸಮಯ ಬೆಳಿಗ್ಗೆ ಸುಮಾರು 08.45 ಗಂಟೆಗೆ ಮೊ,ಸೈಕಲ್ ನಂಬ್ರ ಏಂ-19 ಇಈ-0132ನ್ನು ಅದರ ಸವಾರ ಸಹಸವಾರೊಬ್ಬರನ್ನು ಕುಳ್ಳಿರಿಸಿಕೊಂಡು ಕುಲಶೇಖರ ಚೌಕಿ ಕಡೆಯಿಂದ ಕಲ್ಪನೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕುಲಶೇಖರದ ಕೊಡರ್ೆಲ್ ಚಚರ್್ಹಾಲ್ನ ಬಸ್ಸು ನಿಲ್ದಾಣದ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜೀವನ್ ಎಂಬವರಿಗೆ ಡಿಕ್ಕಿ ಮಾಡಿದ ಪರಿಣಾಮ ಜೀವನ್ರವರು ರಸ್ತೆಗೆ ಬಿದ್ದು ಬಲಕಣ್ಣಿನ ಮೇಲ್ಬಾಗ ರಕ್ತಗಾಯವಾಗಿ ಮತ್ತು ಬಲಸೊಂಟಕ್ಕೆ ತೀವೃ ಸ್ವರೂಪದ ಗಾಯ ಉಂಟಾದವರನ್ನು ಪಿರ್ಯಾದುದಾರರು ಅಲ್ಲಿ ಸೇರಿದ ಜನರ ಸಹಾಯದಿಂದ ಉಪಚರಿಸಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬುದಾಗಿ ಕರುಣಾಕರ ಶೆಟ್ಟಿ(39) ತಂದೆ- ನಾರಾಯಣ ಶೆಟ್ಟಿ ಭಕ್ತರ ಕೋಡಿ, ನೀರ್ ಮಾರ್ಗ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 190/2012 279 , 338 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಹಿಳ ದೌರ್ಜನ್ಯ ಪ್ರಕರಣ:
ಮಹಿಳಾ ಠಾಣೆ;
- ದಿನಾಂಕ 28-12-2012 ರಂದು ಸಮಯ ಸುಮಾರು 13-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರಿಗೆ ಆರೋಪಿ 1 ನೆರವರೊಂದಿಗೆ ದಿನಾಂಕ 19-08-2006 ರಂದು ಮಿಲಾಗ್ರೀಸ್ ಚಚರ್್ ಹಾಲಿನಲ್ಲಿ ಮದುವೆಯಾಗಿದ್ದು ಮದುವೆಯ ನಂತರ ಗಂಡನ ಜೊತೆ ವಿದೇಶದಲ್ಲಿ ವಾಸವಾಗಿದ್ದು ಸದ್ರಿಯವರಿಗೆ ಒಂದು ಹೆಣ್ಣು ಮಗುವಿರುತ್ತದೆ. ಆಸಮಯದಲ್ಲಿ ಆರೋಪಿ ದೀಪಕ್ ಜೋಸೆಪ್ ಪಿರೇರಾ ರವರು ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ. ದಿನಾಂಕ 5-10-2012 ರಂದು ಪಿರ್ಯಾದಿದಾರರು ದುಬೈನಿಂದ ಮಗಳೊಂದಿಗೆ ಮಂಗಳೂರಿಗೆ ಬಂದು ತಂದೆ ತಾಯಿ ಜೊತೆ ವಾಸವಾಗಿರುತ್ತಾರೆ. ದಿನಾಂಕ 13-11-2012 ರಂದು ತನ್ನ ಮಗಳೊಂದಿಗೆ ಪಿರ್ಯಾದಿದಾರರು ದೀಪಕ್ ಜೋಸೆಪ್ ಪಿರೇರಾ ರವರ ಮನೆಗೆ ಹೋದಾಗ ನನಗೂ ನಿನಗೂ ಏನೂ ಸಂಬಂಧ ವಿಲ್ಲ ಸೂಳೆ ಮೆಂಟಲ್ ಎಂದು ಬೈದು ಮನೆಯಿಂದ ಹೊರ ಹಾಕಿರುತ್ತಾರೆ ಅಲ್ಲದೇ ದಿನಾಂಕ 25-12-2012 ರಂದು ಆರೋಪಿ ದೀಪಕ್ ಜೋಸೆಪ್ ಪಿರೇರಾ ಹಾಗೂ ಮೋನಿಕಾ ಪಿರೇರಾ ರವರು ಪಿರ್ಯಾದಿದಾರರ ಮನೆಗೆ ಹೋಗಿ ಮಗುವನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ. ಹಾಗೂ ನಿನ್ನನ್ನು ರೌಡಿಗಳ ಕೈಯಿಂದ ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾರೆ. ಎಂಬುದಾಗಿ ಫಿರ್ಯಾದಿದಾರರಾದ ಶ್ರೀಮತಿ ಶರೋನ್ ಜಾನ್ ಪೆನರ್ಾಂಡೀಸ್ (29) ತಂದೆ: ಡೇವಿಡ್ ಪ್ರಾಂಕ್ ಪೆನರ್ಾಂಡೀಸ್ ವಾಸ: ಪ್ಲಾಟ್ ನಂಬ್ರ. 504, 5ನೇ ಮಹಡಿ, ಸ್ಕೈ ಲೈನ್ ಎಕ್ಲೇವ್, ಸೋಜಾ ಆಕರ್ೆಡ್, ಬಲ್ಮಠ ರವರು ನೀಡಿದ ದೂರಿನಂತೆ ಮಹಿಳಾ ಠಾಣೆ ಅಪರಾದ ಕ್ರಮಾಂಕ 24/12 ಕಲಂ: 498(ಎ), 504, 506 ಜೊತೆಗೆ 34 ಐ.ಪಿ.ಸಿ.ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ಮಂಗಳೂರು ಪೂರ್ವಠಾಣೆ;
- ದಿನಾಂಕ: 27-12-2012 ರಂದು ಪಿರ್ಯಾದಿದಾರರ ಅಣ್ಣ ಕೆವಿನ್ ಮೆನೇಜಸ್ ರವರು ಕೆಲಸ ಮುಗಿಸಿ ತನ್ನ ಮನೆಗೆ ಬಂದು ಬಾತ್ರೂಮ್ಗೆ ಹೋದವರು ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ಸ್ ಆಸ್ಫತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುತ್ತಾರಾಗಿ ವೈದ್ಯರು ತಿಳಿಸಿದ್ದು ಮೃತರು ಚಿಕ್ಕಂದಿನಿಂದಲೇ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಹಾಗೂ ಇತ್ತೀಚೆಗೆ ಕೆಲವು ದಿನಗಖಿಂದ ಎದೆನೋವು ಹಾಗೂ ಆಯಾಸದಿಂದ ಬಳಲುತ್ತಿದ್ದವರು ಬಾತ್ ರೂಂನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ. ಎಂಬುದಾಗಿ ಪಿರ್ಯಾದಿದಾರರಾದ ಮೈಕಲ್ ಮೆನ್ಭೆಜಸ್ (46) ತಂದೆ: ಅಲೆನ್ ಮೇನೆಜಸ್ ವಾಸ: ಸೆರೊನ್ಸ್ಸೋ ಲೋಬೋ ಲೇನ್ ಕದ್ರಿ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವಠಾಣೆ ಯು.ಡಿಆರ್.ನಂ: 40/2012 ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ;
- ದಿನಾಂಕ: 24-12-2012 ರಂದು ಪಿರ್ಯಾದಿದಾರರ ತಮ್ಮ ಉಮೇಶ್ ಗೌಡ ತಂದೆ: ಶಿವಪ್ಪ ಗೌಡ ವಾಸ: ಮಂಡಮೆ ಮನೆ ಕುಕ್ಕಿಪಾಡಿ ಗ್ರಾಮ ಮಾವಿನಕಟ್ಟೆ ಅಂಚೆ ಬಂಟ್ವಾಳ ತಾಲೂಕು ರವರು ಉಳಕೊಳ್ಳುತ್ತಿದ್ದ ಜಯಶ್ರೀಗೇಟಿನ ರೂಮಿಗೆ ಬಂದು ವಿಚಾರಿಸಲಾಗಿ ಸದ್ರಿಯವರು ಸುಮಾರು ದಿನಗಳಿಂದ ಕಾಣುತ್ತಿಲ್ಲವೆಂದು ರೂಮಿನವರು ತಿಳಿಸಿದಂತೆ ಸದ್ರಿಯವರಿಗಾಗಿ ಸುತ್ತಮುತ್ತಲೂ ಎಲ್ಲಾಕಡೆಗಳಲ್ಲಿ ಹುಡುಕಾಡಿ, ಸಂಬಂಧಿಕರ ಮನೆಗೂ ಹಾಗೂ ಆತನ ಗೆಳೆಯರಿಗೂ ಕರೆ ಮಾಡಿ ವಿಚಾರಿಸಲಾಗಿ ನನ್ನ ತಮ್ಮನ ಪತ್ತೆಯಾಗಿರುವುದಿಲ್ಲ. ಸುಮಾರು ದಿನಗಳಿಂದ ತನಗೆ ಹಣಕಾಸಿನ ತೊಂದರೆ ಇರುವುದಾಗಿ ಆಗಾಗ ನನ್ನಲ್ಲಿ ಹೇಳುತ್ತಿದ್ದವನು. ನಂತರ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಆದುದರಿಂದ ಕಾಣೆಯಾದ ನನ್ನ ತಮ್ಮ ಉಮೇಶ್ ಗೌಡನನ್ನು ತಾವು ಪತ್ತೆಮಾಡಿಕೊಡಬೇಕಾಗಿ ಕೋರಿಕೆ ಎಂಬುದಾಗಿ ಪುರಂದರ (42) ತಂದೆ: ಶಿವಪ್ಪ ಗೌಡ ವಾಸ: ಮಂಡಮೆ ಮನೆ ಕುಕ್ಕಿಪಾಡಿ ಗ್ರಾಮ ಮಾವಿನಕಟ್ಟೆ ಅಂಚೆ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ, ಅಪರಾದ ಕ್ರಮಾಂಕ 186/2012 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
ಮೂಡಬಿದ್ರೆ ಠಾಣೆ :
- ದಿನಾಂಕ : 28-12-2012 ರಂದು ಸಂಜೆ ಸುಮಾರು 4-10 ಗಂಟೆಗೆ ಪಿರ್ಯಾದಿಯವರಾದ ಪ್ರಪುಲ್ಲ ಸೋನಿಯಾ ಸೆರಾವೋ, ಗಂಡ :ಕ್ಲೆರೆನ್ಸ್ ಜೋಯಲ್ ಡಿಕ್ರೂಜ್, ವಾಸ : ಸೆರಾವೋ ಮೆನ್ಸನ್ ಮಾಸ್ತಿಕಟ್ಟೆ ರೋಡ್, ಪೊನ್ನೆಚೇರಿ ಪ್ರಾಂತ್ಯ ಗ್ರಾಮ, ಮಂಗಳೂರು ತಾಲೂಕು ರವರು ತನ್ನ ತಾಯಿಯ ಜೊತೆಯಲ್ಲಿ ಮೂಡಬಿದ್ರೆಯ ನಿಶ್ಮಿತಾ ಸರ್ಕಲ್ ಬಳಿ ನಿಂತು ಕೊಂಡಿರುವಾಗ ಪಿರ್ಯಾದಿಯ ಗಂಡ ಕ್ಲೆರೆನ್ಸ್ ಜೋಯಲ್ ಡಿಕ್ರೂಜ್ ರವರು ಪಿರ್ಯಾದಿಯ ಬಳಿ ಬಂದು ಪಿರ್ಯಾದಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ “ನೀನು ನಾನು ಹಾಕಿದ ಡೈವರ್ಸ್ ಕೇಸಿನಲ್ಲಿ ಯಾವುದೇ ತಕರಾರು ಹಾಕದೇ ಆ ಕೇಸಿನಲ್ಲಿ ಡೈವರ್ಸ್ ಕೊಡಬೇಕು” ಎಂದು ಹೇಳಿದಾಗ ಪಿರ್ಯಾದಿದಾರರು ಅದಕ್ಕೆ ಒಪ್ಪದೇ ಇದ್ದಾಗ ಆರೋಪಿ 1 ನೇಯವರು (ಕ್ಲೆರೆನ್ಸ್ ಜೋಯಲ್ ಡಿಕ್ರೂಜ್) ಅವಾಚ್ಯ ಶಬ್ದದಿಂದ ಬೈದು, ಕೈಯಿಂದ ಕೆನ್ನೆಗೆ ಹೊಡೆದು ಆ ಸಮಯ ಆರೋಪಿ 2(ಜಾರ್ಜ್ ಡಿಕ್ರೂಜ್), 3(ಸೆಲಿನ್ ಡಿಕ್ರೂಜ್,), 4 (ಕ್ಲೈವ್ ನೇವಿಲ್ ಡಿಕ್ರೂಜ್) ನೇಯವರು ಪಿರ್ಯಾದಿಯ ಬಳಿಗೆ ಬಂದು ಈ ಕೇಸಿನಲ್ಲಿ ಡೈವರ್ಸ್ ಕೊಡದೇ ಇದ್ದಲ್ಲಿ ಎಷ್ಟು ಖರ್ಚಾದರೂ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಪ್ರಪುಲ್ಲ ಸೋನಿಯಾ ಸೆರಾವೋ, ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ. 251/2012, ಕಲಂ : 341, 323, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment