ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ:
- ದಿನಾಂಕ 15-12-2012 ರಂದು ಸಮಯ ಬೆಳಿಗ್ಗೆ ಸುಮಾರು 09.30 ಗಂಟೆಗೆ ಪಿರ್ಯಾದುದಾರರಾದ ಸ್ಟೀವನ್ ವಿಲ್ಸನ್ ಗೋವಿಯಸ್ (22 ವರ್ಷ) ತಂದೆ- ಪೆಟ್ರಿಕ್ ಗೋವಿಯಸ್, ಸ್ಟೀವ್ ರೋಸ್, ಬೊಂದೇಲ್ ಚಚರ್್ ಹಿಂದುಗಡೆ, ಪಚ್ಚನಾಡಿ ಗ್ರಾಮ. ಮಂಗಳೂರು ರವರು ಮೊ,ಸೈಕಲ್ ನಂಬ್ರ ಏಂ-19-ಙ-9383 ರಲ್ಲಿ ತನ್ನ ತಾಯಿ ಶ್ರೀಮತಿ ತೆರೇಸಾ ಗೋವಿಯಸ್ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಲ್ಮಠ ಕಡೆಯಿಂದ ಬೆಂದೂರ್ವೆಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಂಗಳೂರು ನಸರ್ಿಂಗ್ ಹೊಂ ಗೇಟಿನ ಬಳಿ ತಲುಪುವಾಗ ವಾಸ್ಲೇನ್ ಕಡೆಯಿಂದ ನ್ಯಾನೊ ಕಾರು ನಂಬ್ರ ಏಐ-05-ಂಃ-7515 ನ್ನು ಅದರ ಚಾಲಕರು ಮುಖ್ಯ ರಸ್ತೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ವಿಭಾಜಕ ತೆರವು ಇರುವ ಸ್ಥಳದಲ್ಲಿ ಒಮ್ಮೆಲೆ ಬಲಕ್ಕೆ ತಿರುಗಿಸಿ ಬೆಂದೂರ್ವೆಲ್ ಕಡೆಗೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರ ಮೊ,ಸೈಕಲ್ಗೆ ಕಾರು ಡಿಕ್ಕಿಯಾಗಿ ಪಿರ್ಯಾದುದಾರರು ಮತ್ತು ಶ್ರೀಮತಿ ತೆರೇಸಾ ಗೋವಿಯಸ್ರವರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಶ್ರೀಮತಿ ತೆರೇಸಾ ಗೋವಿಯಸ್ರವರ ಕಾಲಿಗೆ ಗುದ್ದಿದ ಗಾಯ ಉಂಟಾಗಿ ಫಾ|| ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸ್ಟೀವನ್ ವಿಲ್ಸನ್ ಗೋವಿಯಸ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆಯಲ್ಲಿ ಅಪರಾಧ ಕ್ರಮಾಂಕ:182/2012 279 , 337 ಐ.ಪಿ.ಸಿ, ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ
ಉಳ್ಳಾಲ ಠಾಣೆ :
- ದಿನಾಂಕ. 01-12-2012 ರಂದು ಮದ್ಯಾಹ್ನ ಸುಮಾರು 2-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ತೊಕ್ಕೊಟು ಎಂಬಲ್ಲಿ ಫಿರ್ಯಾದಿದಾರರಾದ ವಿನಯ ಕುಮಾರ್ ವಾಸ: ಮುನ್ನೂರು ಗ್ರಾಮ ಕುತ್ತಾರ್ ಪದವು ಅಂಚೆ ಮಂಗಳೂರು ತಾಲೂಕು ಇವರು ತರಕಾರಿ ಇತ್ಯಾದಿ ಕೊಂಡು ಹೋಗಲು ಬಂದಿದ್ದಾಗ ಆರೋಪಿ ಉದಯ ಗೌಡ (35) ವಾಸ: ಕಾಯರ್ತಡ್ಕ ಅಂಚೆ, ಕಳಿಂಜೆ ಗ್ರಾಮ, ಬೆಳ್ತಂಗಡಿ ತಾಲೂಕು ಫಿರ್ಯಾದಿದಾರರನ್ನು ಸಂಧಿಸಿ ಫಿರ್ಯಾದಿದಾರರ ಲಗ್ನದ ವಿಚಾರದಲ್ಲಿ ಮುಖಾಮುಖಿಯಾಗಿ ಮಾತಿಗೆ ಮಾತು ಬೆಳೆದು ಅವಾಚ್ಯಶಬ್ದಗಳಿಂದ ಫಿರ್ಯಾದಿದಾರರಿಗೆ ಬೈದು ಅವರನ್ನು ಉದ್ದೇಶಿಸಿ ನೀನು ನಮ್ಮ ಊರಿಗೆ ಬಂದರೆ ನಿನ್ನ ಕೈಕಾಲು ಮುರಿಯುವುದಲ್ಲದೆ ನಿನ್ನನ್ನು ಕೊಂದು ಎಡ್ರೆಸ್ ಇಲ್ಲದಂತೆ ಮಾಡುವುದಲ್ಲದೆ ನಿನ್ನ ಮನೆಯವರನ್ನು ಸಹ ವಿಚಾರಿಸಿಕೊಳ್ಳುವುದಾಗಿ ಫಿರ್ಯಾದಿದಾರರಿಗೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರಾದ ವಿನಯ ಕುಮಾರ್ ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 328/2012 ಕಲಂ 504,506 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment