Monday, December 22, 2014

Robbery Case Detected by Mangalore South PS

            ದಿನಾಂಕ 18-12-2014 ರಂದು 17-00 ಗಂಟೆಗೆ ಕಾವೂರು ನಿವಾಸಿ ನಾಗೇಶ್ ಇವರು ಮಂಗಳೂರು ನಗರದ ಸರ್ವಿಸ್ ಬಸ್ಸ್ ನಿಲ್ದಾಣ ಹತ್ತಿರ ಇರುವ ಬಾಲಭವನ ಪಾರ್ಕ್ ನಲ್ಲಿ ಬೆಂಚ್ ನಲ್ಲಿ ಕುಳಿತುಕೊಂಡಿರುವಾಗ್ಗೆ ಇಬ್ಬರು ವ್ಯಕ್ತಿಗಳು ಅವರ ಹತ್ತಿರಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಮೊಬೈಲ್ ಸೆಟ್ ಕೊಡುವಂತೆ ಬೆದರಿಸಿದಾಗ ಅವರು ಕೊಡಲು ನಿರಾಕರಿಸಿದ್ದು ಇಬ್ಬರು ವ್ಯಕ್ತಿಗಳು ನಾಗೇಶ್ ರವರಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿ ಅವರ ಸಿಮ್ ಸಹಿತ ಸಾಮ್ ಸಂಗ್ ಕಂಪನಿಯ ಮೊಬೈಲ್ ಸೆಟ್ ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲತ್ಕಾರವಾಗಿ ಕಿತ್ತು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ. ಘಟನೆಯಿಂದ ನಾಗೇಶ್ ರವರಿಗೆ ಗಾಯವಾಗಿದ್ದು ಅವರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
 
       ದಿನಾಂಕ 20-12-2014ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ದಿನಕರ್ ಶೆಟ್ಟಿಯವರಿಗೆ ದೊರೆತ ಖಚಿತ ಮಾಹಿತಿಯಂತೆ  ಮಂಗಳೂರು ನಗರದ ನೆಹರೂ ಮೈದಾನ ಹತ್ತಿರದ ಪುಟ್ ಪಾತ್ ನಲ್ಲಿ 1. ಗಣೇಶ್ ಪೂಜಾರಿ @ ಗಣೇಶ್ (29) ತಂದೆ-ಲೋಕಯ್ಯ ಪೂಜಾರಿ, ವಾಸ- "ದುರ್ಗಾ ನಿವಾಸ್" ಡೋರ್ ನಂಬ್ರ 29, ಅಂಗನವಾಡಿ ಶಾಲೆ ಬಳಿ, ನೆಲಚ್ಚಿಲ್ ಸೈಟ್, ಕುಳವೂರು ಗ್ರಾಮ, ಕುಪ್ಪೆಪದವು, ಮಂಗಳೂರು ತಾಲೂಕು. ಹಾಗೂ 2.  ಶೇಕ್ ಮೊಹಮ್ಮದ್ ಫರಾನ್ @ ಫರಾನ್, ಪ್ರಾಯ 16 ವರ್ಷ, ತಂದೆ-ದಿ| ಖಾಸಿಂ, C/o ನಿಜಾಮುದ್ದೀನ್, ಮೂರ್ತಿ ಡಾಕ್ಟರ್ ಶಾಫ್ ಹತ್ತಿರ, ಕೊಲ್ಯ ಬೈಪಾಸ್, ತೊಕ್ಕೊಟ್ಟು, ಮಂಗಳೂರು. ಇವರುಗಳನ್ನು ದಸ್ತಗಿರಿ ಮಾಡಿ ಕೂಲಂಕುಷವಾಗಿ ವಿಚಾರಿಸಿದಾಗ ಅವರುಗಳು ಸುಲಿಗೆ ಮಾಡಿರುವ ವಿಚಾರವನ್ನು ತಪ್ಪೊಪ್ಪಿಕೊಂಡಿದ್ದು ಸುಲಿಗೆ ಮಾಡಿದ ಸೊತ್ತುಗಳ ಪೈಕಿ ಚಿನ್ನದ ಸರವನ್ನು ಮಂಗಳೂರು ನಗರದ GHS  ರಸ್ತೆಯಲ್ಲಿರುವ ಫೆಲಿಕ್ಸ್ ಪೈ ಬಜಾರ್ ಬಳಿ ಉಳ್ಳಾಲ ಕಡೆಯ ವಾಸಿ ಮೊಹಮ್ಮದ್ ಆಶ್ರಫ್ ಇವರಿಗೆ ಕಡಿಮೆ ಕ್ರಯಕ್ಕೆ ಮಾರಾಟ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡ ಪ್ರಕಾರ ಮೊಹಮ್ಮದ್ ಆಶ್ರಫ್, ಪ್ರಾಯ 30 ವರ್ಷ, ತಂದೆ-ಮೊಹಮ್ಮದ್, ವಾಸ-ಕೊರಗಜ್ಜನ ಗುಡಿ ಬಳಿ, ಕೆರೆಬೈಲ್,ತೊಕ್ಕೊಟ್ಟು, ಉಳ್ಳಾಲ, ಮಂಗಳೂರು. ಈತನನ್ನು ಕೂಡ ದಸ್ತಗಿರಿ ಮಾಡಿ ಸುಲಿಗೆಗೆ ಸಂಬಂಧಪಟ್ಟ ಚಿನ್ನದ ಸರವನ್ನು ವಶಪಡಿಸಲಾಗಿದೆ. ಮೂರು ಜನ ಆರೋಪಿಗಳನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್ ಆಶ್ರಫ್ ಚಿನ್ನದ ಸರವನ್ನು ಸುಲಿಗೆಗೆ ಸಂಬಂಧಪಟ್ಟ ಸೊತ್ತಾಗಿರುವುದರಿಂದ ಕಡಿಮೆ ಕ್ರಯಕ್ಕೆ ಖರೀದಿದ ಆರೋಪಿಯಾಗಿರುತ್ತಾನೆ.
 
        ಆರೋಪಿಗಳ ಪೈಕಿ ಗಣೇಶ್ ಪೂಜಾರಿ ಮೇಲೆ ಈ ಮೊದಲು ಮಂಗಳೂರು  ಪೂರ್ವ ಪೊಲೀಸ್ ಠಾಣಾ ಕಳವು ಪ್ರಕರಣದಲ್ಲಿ ಶಿಕ್ಷೆಯನ್ನು ಕೂಡ ಅನುಭವಿಸಿದ ವ್ಯಕ್ತಿಯಾಗಿದ್ದು ಅಲ್ಲದೇ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೂಡ ಕಳವು ಕೇಸ್ ದಾಖಲಾಗಿರುತ್ತದೆ.  
 
DgÉÆæ ºÉ¸ÀgÀÄ «¼Á¸À ºÁUÀÆ ¥sÉÆÃmÉÆ
1.      ಗಣೇಶ್ ಪೂಜಾರಿ @ ಗಣೇಶ್ (29) ತಂದೆ-ಲೋಕಯ್ಯ ಪೂಜಾರಿ, ವಾಸ-"ದುರ್ಗಾ ನಿವಾಸ್" ಡೋರ್ ನಂಬ್ರ 29, ಅಂಗನವಾಡಿ ಶಾಲೆ ಬಳಿ, ನೆಲಚ್ಚಿಲ್ ಸೈಟ್, ಕುಳವೂರು ಗ್ರಾಮ, ಕುಪ್ಪೆಪದವು, ಮಂಗಳೂರು ತಾಲೂಕು.
2.      ಶೇಕ್ ಮೊಹಮ್ಮದ್ ಫರಾನ್ @ ಫರಾನ್, ಪ್ರಾಯ 16 ವರ್ಷ, ತಂದೆ-ದಿ| ಖಾಸಿಂ, C/o ನಿಜಾಮುದ್ದೀನ್, ಮೂರ್ತಿ ಡಾಕ್ಟರ್ ಶಾಫ್ ಹತ್ತಿರ, ಕೊಲ್ಯ ಬೈಪಾಸ್, ತೊಕ್ಕೊಟ್ಟು, ಮಂಗಳೂರು.
 
   -----
 
 
3.     ಮೊಹಮ್ಮದ್ ಆಶ್ರಫ್, ಪ್ರಾಯ 30 ವರ್ಷ,
ತಂದೆ-ಮೊಹಮ್ಮದ್,
ವಾಸ-ಕೊರಗಜ್ಜನ ಗುಡಿಬಳಿ, ಕೆರೆಬೈಲ್,ತೊಕ್ಕೊಟ್ಟು,
ಉಳ್ಳಾಲ, ಮಂಗಳೂರು.  
 
¸Áé¢üãÀ¥Àr¸À¯ÁzÀ ¸ÉÆvÀÄÛUÀ¼ÀÄ.
ಚಿನ್ನದ ಸರ-1, ಮೊಬೈಲ್ ಸೆಟ್-1 ಹಾಗೂ ನಗದು ಹಣ
       ಪತ್ತೆ ಕಾರ್ಯಾಚಾರಣೆ :-
ಮಾನ್ಯ ಆರ್. ಹಿತೇಂದ್ರ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ಹಾಗೂ ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ರವರು ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದು ಪಾಂಡೇಶ್ವರ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ, ಹಾಗೂ ಸಿಬ್ಬಂದಿಗಳಾದ ಕೇಶವ, ವಿಶ್ವನಾಥ, ಗಂಗಾಧರ, ದಾಮೋದರ, ಶಾಜು ಕೆ ನಾಯರ್, ಪ್ರಕಾಶ್ ನಾಯ್ಕ ಕೂಚಪ್ಪಾಡಿ ಇವರುಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು

No comments:

Post a Comment