Saturday, February 28, 2015

TRAFFIC DIVERSION :

ನಂಬ್ರ: ಸಿ.ಆರ್.ಎಂ(ಸಂಚಾರ)/ 08 /ಸಿಓಪಿ/2015  

                                ಪೊಲೀಸು ಆಯುಕ್ತರ ಕಚೇರಿ

                                                                 ಮಂಗಳೂರು ನಗರ, ಮಂಗಳೂರು

                                ದಿನಾಂಕ:  27 -02-2015.

 

ಅಧಿಸೂಚನೆ

 

 

                ವಿಶ್ವ ಹಿಂದೂ ಪರಿಷತ್ತಿನ ಸ್ವರ್ಣ ಮಹೋತ್ಸವದ ಅಂಗವಾಗಿ ದಿನಾಂಕ: 01-03-2015 ರಂದು ಮಂಗಳೂರು ನಗರದ ನೆಹರು ಮೈದಾನದಲ್ಲಿ 'ಹಿಂದೂ ಸಮಾಜೋತ್ಸವ' ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದ ಸಮಯ ನಗರದಲ್ಲಿ ಜನಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಂಚಾರ ಸುವ್ಯವಸ್ಥೆ ಬಂದೋಬಸ್ತ್ ನಿರ್ವಹಣೆಯ ಬಗ್ಗೆ, ವಾಹನ ಸಂಚಾರದಲ್ಲಿ ಮಾರ್ಪಾಡುಗಳನ್ನು ಮಾಡಬೇಕಾಗಿ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪವಿಭಾಗ ರವರು ಕೋರಿರುತ್ತಾರೆ.

                ಅಂತೆಯೇ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ನೆಹರು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುವ ಸಾಧ್ಯತೆ ಇರುವುದರಿಂದ ವಾಹನಗಳ ಸುಗಮ ಸಂಚಾರದ ಹಿತದೃಷ್ಠಿಯಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಎಸ್. ಮುರುಗನ್, ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್, ಮಂಗಳೂರು ನಗರ ಆದ ನಾನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗೆ ಸೂಚಿಸಿರುವಂತೆ ವಾಹನ ಸಂಚಾರದಲ್ಲಿ ತಾತ್ಕಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶಿಸಿರುತ್ತೇನೆ.

1.            ನೆಹರೂ ಮೈದಾನ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ದಿನಾಂಕ : 01-03-2015 ರಂದು ಬೆಳಿಗ್ಗೆ 10-00 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ ಎಲ್ಲಾ ತರಹದ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.

2.            ಸೆಕ್ಟರ್ -1: ಉಡುಪಿ-ಸುರತ್ಕಲ್ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ತರಹದ ವಾಹನಗಳು ಕೊಟ್ಟಾರ ಚೌಕಿ-ಲೇಡಿಹಿಲ್ – ಲಾಲ್ ಬಾಗ್ - ಪಿ.ವಿ.ಎಸ್ ನಿಂದಾಗಿ ಬಂಟ್ಸ್ ಹಾಸ್ಟೆಲ್ಗೆ ಬಂದು ಜನರನ್ನು ಇಳಿಸಿ ರಾಮಕೃಷ್ಣ ಕಾಲೇಜಿನ ಮೈದಾನದಲ್ಲಿ ಅಥವಾ ಸಿ. ವಿ. ನಾಯಕ್ ಹಾಲ್ನ ಮೈದಾನದಲ್ಲಿ ಪಾರ್ಕ್ ಮಾಡುವುದು. 

3.            ಸೆಕ್ಟರ್ -2 : ಮೂಡುಬಿದಿರೆ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ತರಹದ ವಾಹನಗಳು ನಂತೂರು ವೃತ್ತ - ಮಲ್ಲಿಕಟ್ಟೆ  ಮೂಲಕ ಬಂಟ್ಸ್ ಹಾಸ್ಟೆಲ್ಗೆ ಬಂದು ಜನರನ್ನು ಇಳಿಸಿ, ರಾಮಕೃಷ್ಣ ಕಾಲೇಜಿನ ಮೈದಾನದಲ್ಲಿ ಅಥವಾ ಸಿ. ವಿ. ನಾಯಕ್ ಹಾಲ್ನ ಮೈದಾನದಲ್ಲಿ ಅಥವಾ ಪದುವಾ ಹೈಸ್ಕೂಲ್ ಮೈದಾನದಲ್ಲಿ ಪಾರ್ಕ್ ಮಾಡುವುದು.

4.            ಸೆಕ್ಟರ್-3: ಬಂಟ್ವಾಳ-ಕಾಸರಗೋಡು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ತರಹದ ವಾಹನಗಳು ಪಂಪ್ವೆಲ್ ನಿಂದ ಕಂಕನಾಡಿ-ಕರಾವಳಿ ವೃತ್ತ-ಬೆಂದೂರ್ವೆಲ್-ಹಾರ್ಟಿ ಕಲ್ಚರ್ ಜಂಕ್ಷನ್-ಎಸ್.ಸಿ.ಎಸ್-ಬಲ್ಮಠ ಜಂಕ್ಷನ್ ಗೆ ಬಂದು ಜನರನ್ನು ಇಳಿಸಿ ಬೆಂದೂರುವೆಲ್-ಕರಾವಳಿ ವೃತ್ತ - ಕಂಕನಾಡಿ-ವೆಲೆನ್ಸಿಯಾ -ಕೋಟಿ ಚೆನ್ನಯ್ಯ ವೃತ್ತದ ಮೂಲಕ ಬಂದು ವಾಮನ್ ನಾಯಕ್ ಮೈದಾನದಲ್ಲಿ ಅಥವಾ ಮಂಗಳಾದೇವಿ ಮೂಲಕ ಬಂದು ಎಮ್ಮೆಕೆರೆ ಮೈದಾನದಲ್ಲಿ ಪಾರ್ಕ್ ಮಾಡುವುದು ಅಥವಾ ಮಹಾಕಾಳಿಪಡ್ಪು - ಜೆಪ್ಪಿನಮೊಗೆರು ಮೂಲಕ ನಗರದಿಂದ ಹೊರಗೆ ಹೋಗುವುದು.

5.            ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣಕ್ಕೆ ಪಂಪ್ವೆಲ್ ಕಡೆಯಿಂದ ಬರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ನಂತೂರು-ಕೆಪಿಟಿ-ಕುಂಟಿಕಾನ-ಬಾಳಿಗ ಸ್ಟೋರ್ ಮೂಲಕ ಬಸ್ ನಿಲ್ದಾಣಕ್ಕೆ ಬಂದು, ಅದೇ ಮಾರ್ಗದ ಮೂಲಕ ಹೊರ ಹೋಗುವುದು.

6.            ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಡುಪಿ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಉಳಿದ ಎಲ್ಲಾ ವಾಹನಗಳು ಲೇಡಿಹಿಲ್ - ಗೋಕರ್ಣನಾಥೇಶ್ವರ ದೇವಸ್ಥಾನ ರಸ್ತೆ ಮೂಲಕ ಲೋವರ್ ಕಾರ್ ಸ್ಟ್ರೀಟ್ ಮತ್ತು ಅಜೀಜುದ್ದೀನ್ ರಸ್ತೆಯ ಮೂಲಕ ಬಂದು ಲೇಡಿಗೋಷನ್ - ಹಂಪನಕಟ್ಟೆ -ಕೆ. ಎಸ್. ರಾವ್ ರಸ್ತೆಯ ಮೂಲಕ ಹೊರ ಹೋಗುವುದು.

7.            ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ನಂತೂರು, ಪಂಪ್ವೆಲ್ ಕಡೆಗಳಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಉಳಿದ ಎಲ್ಲಾ ವಾಹನಗಳು ಕಂಕನಾಡಿ-ವೆಲೆನ್ಸಿಯಾ-ಮಂಗಳಾದೇವಿ-ರೋಜಾರಿಯೋ-ಹ್ಯಾಮಿಲ್ಟನ್ ಮೂಲಕ ಬಂದು ಲೇಡಿಗೋಷನ್-ಹಂಪನಕಟ್ಟ-ಕೆ.ಎಸ್. ರಾವ್ ರಸ್ತೆಯ ಮೂಲಕ ಹೊರ ಹೋಗುವುದು.

ನಗರ ಸಾರಿಗೆ, ಸರ್ವಿಸ್ ಬಸ್ಸುಗಳು ಮತ್ತು ಇತರ ವಾಹನಗಳಿಗೆ, ಜನದಟ್ಟಣೆ ಮತ್ತು ವಾಹನದಟ್ಟಣೆ ಅನುಸರಿಸಿ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

 

ಈ ನಿರ್ಬಂಧನೆಗಳು ಪೊಲೀಸ್ ವಾಹನಗಳು ಹಾಗೂ ಇತರೆ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ.

 

ಈ ತಾತ್ಕಾಲಿಕ ಅಧಿಸೂಚನೆಯು ದಿನಾಂಕ : 01-03-2015 ರಂದು ಬೆಳಿಗ್ಗೆ 10-00 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ ಊರ್ಜಿತದಲ್ಲಿರುತ್ತದೆ.

                               

                ಈ ಆದೇಶದನ್ವಯ ಸದ್ರಿ ರಸ್ತೆಯಲ್ಲಿ ಅವಶ್ಯವುಳ್ಳ ಸೂಕ್ತ ಮಾರ್ಕಿಂಗ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸಹಾಯಕ ಪೊಲೀಸು ಆಯುಕ್ತರು, ಮಂಗಳೂರು ಸಂಚಾರ ಉಪ ವಿಭಾಗ, ಮಂಗಳೂರು ನಗರ ಇವರು ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 166 ರ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.

                ಈ ಅಧಿಸೂಚನೆಯನ್ನು ದಿನಾಂಕ: 27- 02-2015 ರಂದು ನನ್ನ ಸ್ವ ಹಸ್ತ ಸಹಿ ಹಾಗೂ ಮುದ್ರೆಯೊಂದಿಗೆ ಹೊರಡಿಸಿರುತ್ತೇನೆ.

 

 

                            ಸಹಿ/-

                                                                                                                                              (ಎಸ್. ಮುರುಗನ್)

                                   ಪೊಲೀಸು ಆಯುಕ್ತರು ಹಾಗೂ

                                                                                                              ಅಡಿಷನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್

                                                                                                                      ಮಂಗಳೂರು ನಗರ

 

Daily Crime Reports : 28-02-2015

ದೈನಂದಿನ ಅಪರಾದ ವರದಿ.
ದಿನಾಂಕ 28.02.201510:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
1
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
2





























1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಶಿವರಾಮ್ ಪೂಜಾರಿ ರವರ ತಮ್ಮನಾದ ತಿಮ್ಮಪ್ಪ ಕೊಟ್ಯಾನ್  ಪ್ರಾಯ 50 ವರ್ಷ ಎಂಬವರು ಟೈಲರ್ ವೃತ್ತಿ ಮಾಡಿಕೊಂಡಿದ್ದು, ತನ್ನ ಹೆಂಡತಿ ಮನೆಯಾದ ಅಳಕೆಯಲ್ಲಿ ಉಳಕೊಳ್ಳುತ್ತಿದ್ದವರು ಅಪರೂಪಕ್ಕೆ ಕುಡಿದಾಗ ಮನೆಗೆ ಹೋಗದೆ ಇರುವ ಅಭ್ಯಾಸ ಹೊಂದಿದ್ದು, ದಿನಾಂಕ 26-02-2015 ರಂದು ರಾತ್ರಿಯಿಂದ ದಿನಾಂಕ 27-02-2015 ರ ಬೆಳಿಗ್ಗೆ 6:00 ಗಂಟೆಯ ಮಧ್ಯೆವಧಿಯಲ್ಲಿ ಮಂಗಳೂರು ನಗರದ ಬಿಜೈಯಲ್ಲಿರುವ ರೈ ಎಸ್ಟೇಟ್ ಕಛೇರಿಯ ಕಟ್ಟಡದ ಎದುರು ಭಾಗದಲ್ಲಿ ಮಲಗಿದ್ದವರನ್ನು ಯಾರೋ ದುಷ್ಕರ್ಮಿಗಳು ಯಾವುದೋ ಆಯುಧದಿಂದ ತಲೆಯ ಹಿಂಬದಿಗೆ ಹೊಡೆದು ಕೊಲೆ ಮಾಡಿರುವುದಾಗಿದೆ.

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2015 ರಂದು ಪಿರ್ಯಾದಿದಾರರಾದ ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷರಾದ ಶ್ರೀ ರಫೀಕ್ ಕೆ.ಎಂ. ರವರು ಸಮವಸ್ತ್ರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ರಾತ್ರಿ ಸುಮಾರು 9.30 ಗಂಟೆಗೆ ನಂತೂರು ಬಳಿ ತಲಪಿದಾಗ ಅಲ್ಲಿ ನಾಲ್ಕು ರಸ್ತೆಗಳು ವಾಹನದಿಂದ ಸಂಧಣಿ ಉಂಟಾಗಿದ್ದು, ಸುಮಾರು 100 ರಿಂದ 150 ಜನರು ಅಕ್ರಮಕೂಟ ಸೇರಿ ರಸ್ತೆಯ ಮಧ್ಯದಲ್ಲಿ ಘೋಷಣೆಗಳನ್ನು ಕೂಗುತ್ತಾ ಕುಳಿತಿದ್ದನ್ನು ನೋಡಿ ಪಿರ್ಯಾದಿದಾರರು ಸದ್ರಿ ಸ್ಧಳಕ್ಕೆ ಹೋಗಿ ತೆರವುಗೊಳಿಸಲು ಹೋದಾಗ ಅವರುಗಳು ಸಂಜೆ ನಡೆದ ಅಪಘಾತಕ್ಕೆ ಸಂಬಂದಿಸಿದಂತೆ ಉತ್ತರ ನೀಡಲು ಜಿಲ್ಲಾಧಿಕಾರಿಗಳು, ಮಂತ್ರಿಗಳು ಸ್ಥಳಕ್ಕೆ ಬರಬೇಕು ಎಂದು ಬೊಬ್ಬೆ ಹಾಕುತ್ತಾ, ಯಾವುದೇ ಸಾರ್ವಜನಿಕ ವಾಹನಗಳನ್ನು ಮುಂದಕ್ಕೆ ಹೋಗದಂತೆ ಬಿಡದೇ ರಸ್ತೆ ತಡೆಯನ್ನು ಮಾಡಿದಾಗ  ಅಲ್ಲಿದ್ದವರಿಗೆ  "ಈ ರೀತಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆ ತಡೆ ಮಾಡುವುದು ಸರಿಯಲ್ಲ" ಎಂದು ಕಾನೂನು ತಿಳುವಳಿಕೆ ನೀಡಿದಾಗಿಯೂ ಕೂಡಾ ಅವರು ರಸ್ತೆ ತಡೆಯ್ನನು ಮುಂದುವರಿಸಿದರು. ಜನಸಂದಣಿಯು ಹೆಚ್ಚಾಗುತ್ತಾ ಸುಮಾರು 300- 400 ಸೇರಿದ್ದು ನಂತರ  ಕೂಡಲೇ  ಮೇಲಾಧಿಕಾರಿಯವರಿಗೆ ನಿಸ್ತಂತು ಮೂಲಕ ಮಾಹಿತಿ ನೀಡಿದ್ದು. ಸ್ವಲ್ಪ ಸಮಯದಲ್ಲಿ ಠಾಣಾ ಪೊಲೀಸ್ ನಿರೀಕ್ಷಕರು  ಕೆ.ಎಸ್.ಆರ್.ಪಿ  ಸಿಬ್ಬಂದಿಯ ವಾಹನದೊಂದಿಗೆ ಸದ್ರಿ ಸ್ಧಳಕ್ಕೆ ಬಂದಾಗ ಅಲ್ಲಿ ರಸ್ತೆ ತಡೆ ಮಾಡುತ್ತಿದ್ದ ಜನರು ಚೆಲ್ಲಪಿಲ್ಲಿಯಾಗಿ ಓಡಿದ್ದು ಅದರಲ್ಲಿ ಕೆಲವರು ಎದ್ದು ಬಿದ್ದು ಓಡಿ ಹೋಗಿರುತ್ತಾರೆ. ಸಾರ್ವಜನಿಕ ರಾಷ್ಠ್ರೀಯ ಹೆದ್ದಾರಿಗೆ ಏಕಾಏಕಿಯಾಗಿ ಸುಮಾರು 30 ನಿಮಿಷಗಳ ಕಾಲ ಆಕ್ರಮ ಕೂಟ ಸೇರಿಕೊಂಡು ರಸ್ತೆಯ್ನನು ತಡೆಯುಂಟುಮಾಡಿ ಸಾರ್ವಜನಿಕ ವಾಹನ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದವರ ವಿರುದ್ದ ಕಾನೂನು ಕ್ರಮಕ್ಕೆ ಪಿರ್ಯಾದಿ ನೀಡಿರುವುದಾಗಿದೆ.

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/02/2015 ರಂದು ಸಮಯ ಸುಮಾರು 22:30 ಗಂಟೆಗೆ ಮಂಗಳೂರು ನಗರದ ಪಿ ವಿ ಎಸ್ ಬಳಿಯ ಟೂರ್ ಮತ್ತು ಟ್ರಾವೆಲ್ಸ ಬಳಿ ಫಿರ್ಯಾದುದಾರರಾದ ಶ್ರೀ ದಿನೇಶ್ ರವರು ಮತ್ತು ಅವರ ಗೆಳೆಯ ಗಣೇಶ ಅವರು ರಸ್ತೆ ಬದಿಯಲ್ಲಿ ನಡೆದುಕೊಂಢು ಹೊಗುತ್ತಿರುವ ಸಮಯದಲ್ಲಿ ಬಂಟ್ಸ ಹಾಸ್ಟೆಲ್ ಕಡೆಯಿಂದ ಪಿ ವಿ ಎಸ್ ವೃತ್ತದ ಕಡೆಗೆ ಬೈಕ್ ನಂಬ್ರ KA 14 EF 0310 YAMAH R15  ನೇ ದನ್ನು ಅದರ ಸವಾರ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಗೆಳೆಯ ಗಣೇಶ ಅವರಿಗೆ ಡಿಕ್ಕಿ ಮಾಡಿದ ಪರಿಣಾಮ ಗಣೇಶನ ಬಲಕಾಲಿಗೆ ಮೂಳೆ ಮುರಿತದ ಗಾಯ, ಬಲಭುಜಕ್ಕೆ, ಮುಖದ ದವಡೆಗೆ ರಕ್ತ ಗಾಯ ಮತ್ತು ತಲೆಗೆ ಗುದ್ದಿದ ಗಾಯವಾಗಿದ್ದು ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-02-2015 ರಂದು 17:05 ಗಂಟೆಗೆ ಮಂಗಳೂರು ನಗರದ ನಂತೂರು ಜಂಕ್ಷನ್‌‌‌‌ನಲ್ಲಿ ಕೆಎ-20-ಬಿ-8992 ನಂಬ್ರದ ಟಿಪ್ಪರ್ಲಾರಿಯನ್ನು ಅದರ ಚಾಲಕನು ರಾಷ್ಟ್ರೀಯ ಹೆದ್ದಾರಿ 66ನೇ ರಸ್ತೆಯಲ್ಲಿ ಕೆ.ಪಿ.ಟಿ. ಕಡೆಯಿಂದ ನಂತೂರು ಕಡೆಗೆ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂತೂರು ಜಂಕ್ಷನ್‌‌‌ನಿಂದ ಸುಮಾರು 100 ಅಡಿ ದೂರದಲ್ಲಿರುವ ರಸ್ತೆಯ ಎಡಬದಿಯಲ್ಲಿರುವ ವಿದ್ಯುತ್‌‌ ಕಂಬವೊಂದಕ್ಕೆ ಡಿಕ್ಕಿ ಪಡಿಸಿ ಮುಂದಕ್ಕೆ ಬರುತ್ತಾ ಬಲಬದಿಯಲ್ಲಿ ಹೋಗುತ್ತಿದ್ದ ಕೆಎ-20-ಪಿ-3423 ನಂಬ್ರದ ಕ್ರೇನ್‌‌‌ ಗೆ ಡಿಕ್ಕಿ ಪಡಿಸಿ ಮುತ್ತು ಮುಂದಕ್ಕೆ ಬಂದು ಕೆಎ-19-ಎಂಇ-5826 ನಂಬ್ರದ ಸ್ಯಾಂಟ್ರೋ ಕಾರಿನ  ಎಡಬದಿಗೆ ಡಿಕ್ಕಿಪಡಿಸಿ ಮುಂದಕ್ಕೆ ಬಂದು ಎದುರಿನಿಂದ ನಂತೂರು ಜಂಕ್ಷನ್ಗೆ ಕಡೆಗೆ ಬರುತ್ತಿದ್ದ ಕೆಎ-19-ಎಂಎ-2625 ನಂಬ್ರದ ಅಲ್ಟೋ ಕಾರಿಗೆ ಡಿಕ್ಕಿ ಪಡಿಸಿ ಕಾರನ್ನು ಮುಂದಕ್ಕೆ ತಳ್ಳಿಕೊಂಡು ಮುಂದಕ್ಕೆ ಬಂದ ಪರಿಣಾಮ ಕಾರು ಎದುರಿನಿಂದ ಹೋಗುತ್ತಿದ್ದ ಕೆಎಲ್‌‌‌-14-ಎಂ-2582 ನಂಬ್ರದ ಮೋಟಾರು ಸೈಕಲ್ಗೆ ಡಿಕ್ಕಿಯಾಗಿ  ಬೈಕ್ಸವಾರ ಮತ್ತು ಸಹಸವಾರೆಯು ರಸ್ತೆಗೆ ಬಿದ್ದಿದ್ದುತಳ್ಳಿಕೊಂಡು ಬಂದಂತಾದ ಅಲ್ಟೋ ಕಾರು ನಜ್ಜು ಗುಜ್ಜಾಗಿದ್ದು, ಮೋಟಾರು ಸೈಕಲಿನ ಸವಾರ ಪ್ರೀತಮ್ಎಂಬಾತನು ಬಲಕಾಲಿಗೆ ಮೂಳೆ ಮುರಿತದ ರಕ್ತಗಾಯ ಹಾಗೂ ಸೊಂಟದ ಬದಿಯಲ್ಲಿ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಸಹಸವಾರೆ ಶ್ವೇತ ಮರಿಯ ಡಿಸೋಜಾ ರವರು ಕೂಡಾ ಗಾಯಗೊಂಡಿದ್ದು, ಪ್ರೀತಮ್ಮತ್ತು ಶ್ವೇತಾ ಮರಿಯಾ ಡಿಸೋಜಾರವರು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಹಾಗೂ ಅಲ್ಟೋಕಾರಿನಲ್ಲಿದ್ದ ಕೃಷ್ಣ ಮತ್ತು ಅವರ ಮಗಳು ನಿಖಿತರವರು ಗಂಭೀರ ಗಾಯಗೊಂಡು  ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಅಲ್ಟೋ ಕಾರಿನಲ್ಲಿದ್ದ ನಿತೇಶ್‌‌ ಮತ್ತು ವೀಣಾ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮದ್ಯೆ ಮೃತಪಟ್ಟಿರುತ್ತಾರೆ.

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ವಾಸುದೇವ ರವರು ವುಮೆನ್ಸ್ಉಳ್ಳಾಲ ಟಿ.ಸಿ. ರೋಡ್ ಇಸ್ಲಾಮಿಕ್ಕಾಲೇಜ್ಎದುರುಗಡೆಯಲ್ಲಿ ಕಿರಣ್‌‌ ಎಂಬುವವರ ಬಾಬ್ತು ಟೈಲರ್‌‌ ಅಂಗಡಿಯನ್ನು ಬಾಡಿಗೆಗೆ ಪಡೆದುಕೊಂಡು ಟೈಲರಿಂಗ್ಕೆಲಸ ಮಾಡಿಕೊಂಡಿದ್ದು ದಿನಾಂಕ 27/02/2015 ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದು ರಾತ್ರಿ 10-00 ಗಂಟೆಗೆ ಊಟ ಮಾಡಿ ಮಲಗಿದ್ದು ನೆರೆಕೆರೆಯ ಪರಿಚಯದವರು ನಿಮ್ಮ ಅಂಗಡಿಗೆ ಯಾರೋ ಬೆಂಕಿ ಕೊಟ್ಟಿರುತ್ತಾರೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಮತ್ತು ನೆರೆಕೆರೆಯವರು ಕೂಡಲೇ ಹೋಗಿ ನೋಡಿದಾಗ ಸುಮಾರು ರಾತ್ರಿ 10-30 ಗಂಟೆಗೆ ಯಾರೋ ದುಷ್ಕರ್ಮಿಗಳು ಅಂಗಡಿಯ ಎದುರುಗಡೆಯ ಬಾಗಿಲಿಗೆ ಸೀಮಿಎಣ್ಣೆ ಹಾಕಿ ಬೆಂಕಿ ಕೊಟ್ಟು ಬಾಗಿಲು ಸುಟ್ಟುಹೋಗಿದ್ದು ಮತ್ತು ಬೇರೆ ಬೇರೆ ಜನರು ಹೊಲಿಗೆಗೆ ತಂದ ಬಟ್ಟೆಗಳಿಗೆ ಬೆಂಕಿ ತಾಗಿ ಸಂಪೂರ್ಣ  ಸುಟ್ಟು ಹೋಗಿದ್ದು ಇದರ ಪರಿಣಾಮ ಪಿರ್ಯಾದುದಾರರಿಗೆ ಸುಮಾರು 40,000/- ರೂ ನಷ್ಟವುಂಟಾಗಿರುತ್ತದೆ.

6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2015 ರಂದು  ಮಧ್ಯಾಹ್ನ ಸುಮಾರು 3.30 ಗಂಟೆಗೆ ಸಾರ್ವಜನಿಕರ ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ರೀ ಸುಖ್ ಪಾಲ್ ಪೊಳಲಿ ಎಂಬವರು ತನ್ನ ಬಾಬ್ತು ಕಾರಿನಲ್ಲಿ ಚಾಲಕರಾಗಿದ್ದುಕೊಂಡು ರಕ್ಷತ್ ಶೆಟ್ಟಿ, ಕಲಂದರ್, ಹರೀಶ್, ಕಿರಣ್ ತುಂಗ, ಜಗದೀಶ್ ರವರು ಪ್ರಯಾಣಿಕಾಗಿದ್ದುಕೊಂಡು ಬಂಟ್ಸ್ ಹಾಸ್ಟೇಲ್ ಕಡೆಯಿಂದ ಪಿವಿಎಸ್ ಜಂಕ್ಷನ್ ಕಡೆಗೆ ಹೋಗುತ್ತಾ   ಕರಂಗಲ್ಪಾಡಿ ಬಳಿ ಇರುವ ಸೈಂಟ್ ಅಲೋಶಿಯಸ್ ಪ್ರೈಮರಿ ಶಾಲೆಯ ಮೈನ್ ಗೇಟಿನ ಎದುರು ತಲುಪುವಾಗ  ಆರೋಪಿತನಾದ ವಾಚ್ ಮಾನ್ ವೇಣುಗೋಪಾಲ ಎಂಬವನು ಕಾರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರ ಕಾರನ್ನು ಮುಂದಕ್ಕೆ ಚಲಾಯಿಸುವಂತೆ ತಿಳಿಸಿ ಟ್ರಾಫಿಕ್ ಜಾಮ್ ಇದ್ದುದರಿಂದ ಪಿರ್ಯಾದಿದಾರರಿಗೆ ಕಾರನ್ನು ಮುಂದಕ್ಕೆ ಚಲಾಯಿಸಲು ಆಗದೇ ಇದ್ದು  ಕಾರು ಮುಂದೆ ಹೋಗಲಿಲ್ಲ ಎಂಬ ಉದ್ದೇಶದಿಂದ ಪಿರ್ಯಾದಿದಾರರನ್ನು ಮತ್ತು ರಕ್ಷತ್ ಶೆಟ್ಟಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮತ್ತು ಅಲ್ಲೇ ಇದ್ದ ರಿಕ್ಷಾ ಚಾಲಕರೊಬ್ಬರ ಜೊತೆ ಸೇರಿ  ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾಗಿದೆ.

Friday, February 27, 2015

Daily Crime Reports : 27-02-2015

ದೈನಂದಿನ ಅಪರಾದ ವರದಿ.
ದಿನಾಂಕ 27.02.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
0
ವಂಚನೆ ಪ್ರಕರಣ        
:
1
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
4





























1.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಜಶೇಖರ ರವರ ತಮ್ಮ ಅನಂದ ಕುಮಾರ್ ಮನ್ನೆಲ್ಲಿ 18 ವರ್ಷ ಎಂಬಾತನು ಪಿಯುಸಿ 2 ನೇ ವರ್ಷದ PCMB ವಿದ್ಯಾಬ್ಯಾಸ ಕಲಿಯುತ್ತಿದ್ದು, ದಿನಾಂಕ: 24.02.2015 ರಂದು ಸಂಜೆ 5.00 ಗಂಟೆಗೆ ಕಾಲೇಜು ಬಿಟ್ಟವನುಆತನು ವಾಸವಾಗಿರುವ ಪುತ್ತಿಗೆ ರಜತಾದ್ರಿ ಹಾಸ್ಟೆಲ್ ಗೂ ಹೋಗದೇ , ಮನೆಗೂ ಬಾರದೇ ರಾತ್ರಿ Rajshekar 413 @gmail.com ,ಎಂಬುದಾಗಿ ಪಿರ್ಯಾದಿದಾರರ ಮೊಬೈಲ್ ಗೆ ಈಮೇಲ್ ಮಾಡಿದ್ದು, ಮೇಲ್ ನಲ್ಲಿ ತಾನು ಒಬ್ಬಂಟಿಯಾಗಿ ಇರುವುದಾಗಿಯೂ ನಾನು ಮಾಡಿದ ಸಾಲವನ್ನು ವಾಪಾಸ್ಸು ನೀಡಬೇಕಾಗಿಯೂ, ನಾನು 10 ವರ್ಷ ಕಳೆದು ಮರಳಿ ಬರುವುದಾಗಿಯೂ ತಿಳಿಸಿ ಕಾಣೆಯಾಗಿರುವುದಾಗಿದೆ. ಕಾಣೆಯದವರ ಚಹರೆ: 1.ಎತ್ತರ- 3.8" 2.  ಎಣ್ಣೆ ಕಪ್ಪು ಮೈಬಣ್ಣ, 3. ಕೋಲು ಮುಖ , ಸಾಧಾರಣ ಶರೀರ, 4. ಬೂದು ಬಣ್ಣದ ಶರ್ಟ್ , ಕಪ್ಪು ಪ್ಯಾಂಟ್ 5. ಬಲಕೈಯ ತೋಳು ಬೆರಳಿನಲ್ಲಿ  ಉಗುರು ಚಿಕ್ಕದಗಿರುತ್ತದೆ. 6. ಕನ್ನಡ, ಇಂಗ್ಲೀಷ್ ತೆಲುಗು, ಹಿಂದಿ ಮಾತನಾಡುತ್ತಿದ್ದು, anandappu143143@gmail.com ಮತ್ತು anandanjali143143@gmail.com ಎಂಬುದಾಗಿ ಈ -ಮೇಲ್ ID ಯನ್ನು ಹೊಂದಿರುತ್ತಾನೆ.

2.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-02-2015 ರಂದು ಪಿರ್ಯಾದುದಾರರಾದ ಶ್ರೀ ಅಶ್ರಫ್ ರವರು ಡಾ| ಮುಹಮ್ಮದ್ಸಲಿಂ ಎಂಬವರನ್ನು ಅವರ ಬಾಬ್ತು KA 19 MN 8438 ನೇ ನಂಬ್ರದ ಕಾರಿನಲ್ಲಿ ಕುಳ್ಳಿರಿಸಿಕೊಂಡು ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ. 66 ರಲ್ಲಿ ಚಲಾಯಿಸಿಕೊಂಡು ಬರುತ್ತಾ ರಾತ್ರಿ ಸಮಯ ಸುಮಾರು 11-30 ಗಂಟೆಗೆ, ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ತಲಪಾಡಿ ಬ್ರಿಡ್ಜ್ಬಳಿ ತಲುಪುತ್ತಿದ್ದಂತೆ ಒಂದು ಗುಂಪು ರಸ್ತೆಯಲ್ಲಿ ಇರುವುದನ್ನು ಕಂಡ ಪಿರ್ಯಾದುದಾರರ ಕಾರನ್ನು ನಿಧಾನ ಮಾಡುತ್ತಿದ್ದಂತೆ ಆ ಗುಂಪಿನಲ್ಲಿದ್ದ ಮಂದಿ ಕಾರಿನ ಮುಂಭಾಗ, ಎಡ, ಬಲ ಹಾಗೂ ಹಿಂಬಾಗದ ಗಾಜುಗಳಿಗೆ ಕಲ್ಲುಗಳಿಂದ ಹೊಡೆದು ಪುಡಿ ಮಾಡಿರುತ್ತಾರೆ. ಇದರಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸಿರುತ್ತದೆ. 

3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಅಬ್ದುಲ್ ನಝೀರ್ ಯು.ಜಿ. ರವರು ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ಕೆ.ಸಿ. ರೋಡ್‌  ಜಂಕ್ಷನ್‌‌ನಲ್ಲಿ ಎಮ್‌.. ಎಂಟರ್ಪ್ರೈಸಸ್ಹೆಸರಿನ ಅಂಗಡಿ ಹೊಂದಿದ್ದು, ದಿನಾಂಕ 25-02-2015 ರಂದು ರಾತ್ರಿ ಪಿರ್ಯಾದುದಾರರು ಅಂಗಡಿಯ ಗ್ಲಾಸ್ ಡೋರ್ನನ್ನು ಲಾಕ್ಮಾಡಿ ಹೋಗಿದ್ದು, ಆ ನಂತರ ರಾತ್ರಿ ಸಮಯ ಕೆ.ಸಿ. ರೋಡ್ಜಂಕ್ಷನ್ನಲ್ಲಿ ಗುಂಪು ಗಲಾಟೆ ನಡೆದ ಸಮಯ ಯಾರೋ ದುಷ್ಕರ್ಮಿಗಳು ಗ್ಲಾಸ್ ಕ್ಯಾಬಿನ್ಗೆ ಕಲ್ಲು  ಮತ್ತು ಸೋಡಾ ಬಾಟ್ಲಿಗಳಿಂದ ಹೊಡೆದು ಪುಡಿ ಮಾಡಿ ಸುಮಾರು 20,000/- ನಷ್ಟವನ್ನುಂಟು ಮಾಡಿರುತ್ತಾರೆ.

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-02-2015 ರಂದು ರಾತ್ರಿ 07-00 ಗಂಟೆಯ ನಂತರದಿಂದ ದಿನಾಂಕ 26-02-2015 ರಂದು 01-15 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಒಂಭತ್ತುಕೆರೆ ಮೆರಿಡಿಯನ್ಕಾಲೇಜ್ಬಳಿಯಲ್ಲಿ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಶರೀಫ್ ರವರ ಬಾಬ್ತು ತಗಡು ಶೀಟಿನಿಂದ ನಿರ್ಮಿಸಲಾದ ಚಾ, ಕಾಫಿ, ತಿಂಡಿ, ಊಟದ ಕ್ಯಾಂಟಿನ್ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಕೊಟ್ಟು ಸುಟ್ಟು ಇಡುವುದರಿಂದ ಕ್ಯಾಂಟಿನ್ನ ಒಳಗಿದ್ದ ರೇಶನ್‌, ಎಣ್ಣೆ, ಮೇಜು, ಕುರ್ಚಿ ಮತ್ತು ಇತರ ಸಾಮಾಗ್ರಿಗಳು ಬೆಂಕಿಯಿಂದ ಸುಟ್ಟು ಹೋಗಿ ಸುಮಾರು 1 ಲಕ್ಷ ರೂಪಾಯಿಯಷ್ಟು ನಷ್ಟವುಂಟಾಗಿರುವುದಾಗಿದೆ.

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಮುಸ್ತಾಫಾ ರವರು ತೊಕ್ಕೊಟ್ಟು ಒಳಪೇಟೆಯಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ದಿನಾಂಕ 25-02-2015 ರಂದು ರಾತ್ರಿ 20-30 ಗಂಟೆಗೆ ಅಂಗಡಿಯನ್ನು ಬಂದ್ಮಾಡಿ ಮನೆಗೆ ಹೋಗಿದ್ದು, ದಿನಾಂಕ 26-02-2015 ರಂದು ಬೆಳಿಗ್ಗೆ 04-00 ಗಂಟೆಯ ಹೊತ್ತಿಗೆ ಫಿರ್ಯಾದಿದಾರರು ಮನೆಯಲ್ಲಿರುವಾಗ  ಪಕ್ಕದ ಅಂಗಡಿಯವರಾದ ಮನ್ಸೂರ್ಎಂಬವರು ದೂರವಾಣಿ ಮೂಲಕ ಕರೆ ಮಾಡಿ ನಮ್ಮ ಅಂಗಡಿಗಳಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ ಎಂದು ತಿಳಿಸಿದಂತೆ ಫಿರ್ಯಾದಿದಾರರು ಅಂಗಡಿಗೆ ಬಂದು ನೋಡಿದಾಗ ಫಿರ್ಯಾದಿದಾರರ ಇಲೆಕ್ಟ್ರಾನಿಕ್ಸೊತ್ತುಗಳು ಸುಟ್ಟು ಹೋಗಿ ಸುಮಾರು ಎರಡು ಲಕ್ಷ ರೂಪಾಯಿ ನಷ್ಟವುಂಟಾಗಿರುತ್ತದೆಅಲ್ಲದೆ ಫಿರ್ಯಾದಿದಾರರ ಅಂಗಡಿಯ ಸಾಲಿನಲ್ಲಿದ್ದ ಇತರ ಅಂಗಡಿಯವರಾದ ಯು.ಹೆಚ್. ಮಹಮ್ಮದ್, ರಫೀಕ್‌, ಯು.ಕೆ. ಹನೀಫ್‌, ಶ್ರೀಮತಿ ಆಸ್ಮಾ, ಭಗವನ್ದಾಸ್‌, ಶ್ರೀಮತಿ ಐರಿನ್ಡಿ'ಸೋಜ , ಶ್ರೀಮತಿ ಹಿಲ್ಡಾ ಮಾಂತೆರೋ, ಶ್ರೀಮತಿ ಹೈಡಾ ಮಾಂತೆರೋ, ಅಕ್ಬರ್‌, ಶ್ರೀಮತಿ ರುಕ್ಮಿಣಿ, ಯೂಸೂಫ್, ಅಬ್ದುಲ್ ನಜೀರ್, ಮೂಸಾ ಕುಂಞ, ಅಬ್ದುಲ್ಅಜೀಜ್, ಹಮೀದ್, ಮಹಮ್ಮದ್ ಮನ್ಸೂರ್‌, ಅಬ್ದುಲ್ಲತೀಫ್‌, ಇಬ್ರಾಹಿಂ, ಅಬ್ದುಲ್ಲ ಇವರುಗಳ ಅಂಗಡಿಗಳು ಕೂಡಾ ಸುಟ್ಟು ಹೋಗಿದ್ದು, ದಿನಾಂಕ 26-02-2015 ರಂದು ರಾತ್ರಿ 01-30 ಗಂಟೆಯಿಂದ 02-00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ದುಷ್ಕರ್ಮಿಗಳು ಅಂಗಡಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ಸುಮಾರು 21 ಲಕ್ಷ ರೂಪಾಯಿ ನಷ್ಟವುಂಟು ಮಾಡಿರುವುದಾಗಿದೆ.

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  25-02-2015 ರಂದು ರಾತ್ರಿ 22-45 ಗಂಟೆ ಸಮಯಕ್ಕೆ  ತಲಪಾಡಿ ಗ್ರಾಮದ ಕೆ.ಸಿ.ರೋಡ್ಜಂಕ್ಷನ್ನಿಂದ ಸುಮಾರು 100 ಮೀಟರ್ಮುಂದೆ ಕಿನ್ಯಾ ರೋಡ್ನಲ್ಲಿ  ಹಿಂದುಗಳು ಬಂಟಿಂಗ್ಸ್ಹಾಕುವ ವಿಚಾರದಲ್ಲಿ ಮುಸ್ಲಿಮರು ಆಕ್ಷೇಪ ವ್ಯಕ್ತ ಮಾಡಿರುವುದರಿಂದ ಒಂದು ಕಡೆಯಿಂದ ಹಿಂದುಗಳು ಮತ್ತು ಇನ್ನೊಂದು ಕಡೆಯಿಂದ ಮುಸ್ಲಿಮರು ಗುಂಪು ಸೇರಿ  ಕಲ್ಲು ಬಾಟ್ಲಿಗಳನ್ನು ಎಸೆದುಕೊಂಡು ಗಲಾಟೆ ಮಾಡುತ್ತಿರುವುದನ್ನು ಕಂಡು ಫಿರ್ಯಾದಿದಾರರಾದ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಸವೀತ್ರು ತೇಜ್ ಪಿ.ಡಿ. ರವರು ಕೆ.ಎಸ್.ಆರ್.ಪಿ. ಪಡೆಯನ್ನು ಡೀಬರ್ಸ್ಮಾಡಿ ಅಕ್ರಮಕೂಟ ಸೇರಿರುವ ಗುಂಪನ್ನು ಚದುರಿ ಹೋಗುವಂತೆ ಮೆಘಾ ಫೋನ್ನಲ್ಲಿ  ತಿಳಿಸಿದರೂ, ಚದುರದೇ  ಇದ್ದುದರಿಂದ  ಪರಿಸ್ಥಿತಿಯನ್ನು ಹತೋಟಿಗೆ ತರಲು ಕೆಎಸ್ಆರ್‌.ಪಿ ತುಕಡಿಯಿಂದ ಗಾಳಿಯಲ್ಲಿ ಅಶ್ರುವಾಯು ಸಿಡಿಸಿದ್ದು, ನಂತರ  ಉದ್ರೇಕಿತ ಗುಂಪನ್ನು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದ್ದು, ಆರೋಪಿಗಳು ಫಿರ್ಯಾದಿದಾರರ ಮತ್ತು ಸಿಬ್ಬಂದಿಗಳ ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನು ಮಾಡಿದಲ್ಲದೆ ರೊಚ್ಚಿಗೆದ್ದ ಪೊಲೀಸರನ್ನು ಕೊಂದು ಹಾಕುವಾ ಎಂದು ಹೇಳುತ್ತಾ ಫಿರ್ಯಾದಿದಾರರ ಮತ್ತು ಸಿಬ್ಬಂದಿಗಳ ಮೇಲೆ ಕಲ್ಲು ಮತ್ತು ಬಾಟ್ಲಿ ತೂರಾಟ ಮಾಡಿ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಇದರಿಂದ ಸಿಬ್ಬಂದಿಗಳು ಗಾಯಗೊಂಡಿದ್ದು, ಫಿರ್ಯಾದಿದಾರರ ಇಲಾಖಾ ಜೀಪಿನ ಗಾಜು ಪುಡಿ ಮಾಡಿರುವುದರಿಂದ ಸುಮಾರು 3 ಸಾವಿರ ರೂಪಾಯಿ ನಷ್ಟವುಂಟು ಮಾಡಿರುವುದಾಗಿದೆ.

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06.01.2015 ರಂದು ಉದಯವಾಣಿ ಪತ್ರಿಕೆಯಲ್ಲಿ ಬಂದ ಉದ್ಯೋಗದ ಜಾಹಿರಾತಿನ ಮೇರೆಗೆ ಪಿರ್ಯಾದಿದಾರರು ಕಿಸಾನ್ ಕಾಲ್ ಸೆಂಟರ್ಗೆ ಅರ್ಜಿ ಸಲ್ಲಿಸಿದ್ದು ಆ ನಂತರ ಸದ್ರಿ ಜಾಹಿರಾತು ನೀಡಿದವರ ಕಡೆಯಿಂದ ಪಿರ್ಯಾದಿದಾರರು ಉದ್ಯೋಗಕ್ಕೆ ಆಯ್ಕೆಯಾದ ಬಗ್ಗೆ ಪ್ರಮಾಣ ಪತ್ರವನ್ನು ಅಂಚೆ ಮುಖೇನ ಕಳುಹಿಸಿದ್ದಲ್ಲದೇ ಉದ್ಯೋಗದ ಭದ್ರತೆಗಾಗಿ ರೂ. 19550/- ಮತ್ತು ಜೀವ ವಿಮೆಗಾಗಿ 20000/- ಪಾವತಿಸುವಂತೆ ತಿಳಿಸಿದ್ದರಿಂದ ಪಿರ್ಯಾದಿದಾರರು ಸದ್ರಿ ಹಣವನ್ನು ಮಹೇಶ್ ಕುಮಾರ್, ಜನಪುರಿ ಶಾಖೆ, ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 2593101013457ಕ್ಕೆ ಜಮೆ ಮಾಡಿದ್ದು, ಆ ನಂತರ ಪಿರ್ಯಾದಿದಾರಿಗೆ ಯಾವುದೇ ಉದ್ಯೋಗವನ್ನು ನೀಡದೇ ಮೋಸ ಮಾಡಿರುವುದಾಗಿದೆ.