Thursday, January 31, 2013

Daily Crime Incidents for Jan 31, 2013

ಅಸ್ವಾಭಾವಿಕ ಮರಣ ಪ್ರಕರಣ

  • ಫಿಯರ್ಾದಿದಾರರಾದ ರಮೇಶ್ ಹೆಚ್.ಸಿ.883 ರವರು ದಿನಾಂಕ 29-01-2013 ರಂದು ಮಂಗಳೂರು ನಗರದ ಫೆಲಿಕ್ಸ್ ಪೈ ಬಜಾರಿನ ಶ್ರೇಯಸ್ ಸ್ವೀಟ್ಸ್ ಅಂಗಡಿ ಎದುರಿನ ಜಗುಲಿಯಲ್ಲಿ ಪ್ರಜ್ಙಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಮಹಿಳೆಯನ್ನು 108 ಅಂಬುಲೆನ್ಸ್ ವಾಹನ ತರಿಸಿ ಚಿಕಿತ್ಸೆ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲು ಪಡಿಸಿದ್ದು ಆ ಸಮಯ ಆಕೆಯು ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವುದಾಗಿ ಕೋರಿಕೆ ಪತ್ರದಲ್ಲಿ ವೈದ್ಯರು ನಮೂದಿಸಿರುವುದಾಗಿದೆ. ಸದ್ರಿ ಮಹಿಳೆಯು ದಿನಾಂಕ 29-01-2013 ರಂದು ರಾತ್ರಿ  11:20 ಗಂಟೆಗೆ ಚಿಕಿತ್ಸೆಯಲ್ಲಿರುವಾಗ ಮೃತ ಪಟ್ಟಿದ್ದು ದಿನಾಂಕ 30-01-2013 ರಂದು ಬೆಳ್ಳಿಗ್ಗೆ ಸುಮಾರು 10.40 ಗಂಟೆಗೆ ವೆನ್ಲಾಕ್ ಆಸ್ಪತ್ರೆಯಿಂದ ಮಾಹಿತಿ ಪತ್ರ ಬಂದಿರುತ್ತದೆ. ಆಕೆಯು ಯಾವುದೊ ಕಾಯಿಲೆಯಿಂದ ಮೃತಪಟ್ಟಿರುವಂತೆ ಕಂಡು ಬಂದಿದ್ದು,  ಆಕೆಯು  ಸುಮಾರು 40 ರಿಂದ 45 ಪ್ರಾಯ ದವಳಾಗಿದ್ದು, ಉರುಟು ಮುಖ, ಎಡಬದಿಯ ಮೂಗಿನಲ್ಲಿ ಕಪ್ಪು ಮಚ್ಚೆ,  ಕುತ್ತಿಗೆಯಲ್ಲಿ ಕಪ್ಪು ಮಚ್ಚೆ ಇರುತ್ತದೆ. ಸುಮಾರು 5 ಅಡಿ ಉದ್ದ ಎಣ್ಣೆ ಕಪ್ಪು ಮೈ ಬಣ್ಣ ,  ಬಾಬ್ ಕಟ್ಟು ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ಲೈಟ್ ಹಸಿರು ಕಲರಿನ ರವಿಕೆ ಹಾಗೂ ಕಾಫಿ ಕಲರ್ ಹಾಗೂ ಹಳದಿ ಗೆರೆ ಇರುವ ಸೀರೆ ಧರಿಸಿರುತ್ತಾಳೆ. ಮೃತ ಮಹಿಳೆಯ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಆದ್ದರಿಂದ ಮೃತರ ವಾರಸುದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿಯಾಗಿರುತ್ತದೆ ಮತ್ತು ಉತ್ತರ ಠಾಣೆ ಯುಡಿಆರ್ ನಂಬ್ರ  08/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

ಬರ್ಕೆ ಪೊಲೀಸ್ ಠಾಣೆ

  • ಪಿರ್ಯಾದಿದಾರರಾದ ಗಂಗಾಧರ ಜಿ.ಹೆಚ್. ಪ್ರಾಯ 32 ವರ್ಷ, ತಂದೆ: ರಾಮಣ್ಣ, ವಾಸ: ಅಕ್ಕಟೆ ಮನೆ, ಕೆಲ್ಲೆರಿ ಅಂಚೆ, ಕಲಾಯ ಗ್ರಾಮ, ಬೆಳ್ತಂಗಡಿ ತಾಲ್ಲೂಕು ರವರು ಮಂಗಳೂರು ಎಂ.ಜಿ. ರಸ್ತೆಯ ಎಸ್ಡಿಎಂ ಕಾಲೇಜಿನ ವಿದ್ಯಾಥರ್ಿಯಾಗಿದ್ದು, ಪಿರ್ಯಾದಿದಾರರು ಕಾಲೇಜ್ ಡೇ ಕಾರ್ಯಕ್ರಮದ ನಿಮಿತ್ತ ದಿನಾಂಕ 28-01-2013 ರಂದು 19:30 ಗಂಟೆಗೆ ಪಾಕರ್ಿಂಗ್ ಸ್ಥಳದಲ್ಲಿ ತನ್ನ ಬಾಬ್ತು ಮೋ.ಸೈಕಲ್ ತನ್ನ ಬಾಬ್ತು ಬ್ಯಾಗ್ನ್ನು ಇಟ್ಟು ಕಾರ್ಯಕ್ರಮಕ್ಕೆ ಹೋದವರು ವಾಪಾಸ್ಸು ಬಂದು ನೋಡಿದಾಗ ಮೋ.ಸೈಕಲ್ ಮೇಲಿಟ್ಟಿದ್ದ ಬ್ಯಾಗ್ ಕಾಣೆಯಾಗಿದ್ದು, ಎಲ್ಲಾ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಈ ಬಗ್ಗೆ ಪ್ರಾಂಶುಪಾಲರಲ್ಲಿ ತಿಳಿಸಿದಾಗ ವಿದ್ಯಾಥರ್ಿಗಳು ತೆಗೆದಿದ್ದಲ್ಲಿ ತಂದು ಕೊಡುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿ ನೀಡುವುದು ತಡವಾಗಿದ್ದು, ಸದ್ರಿ ಬ್ಯಾಗ್ನಲ್ಲಿ ಸುಮಾರು 6,600 ರೂ ಬೆಲೆಬಾಳುವ 2 ವರೆ ಗ್ರಾಮದ ಬಂಗಾರದ ಉಂಗುರ, ಪಿರ್ಯಾದಿದಾರರ ಡ್ರೈವಿಂಗ್ ಲೈಸೆನ್ಸ್, ರೂ. 600/- ನಗದು ಇದ್ದು, ಇದನ್ನು ಯಾರೋ ಕಳ್ಳರು ಕಳುವು ಮಾಡಿದ್ದಾಗಿ, ಸದ್ರಿ ಸೊತ್ತುಗಳನ್ನು ಪತ್ತೆ ಮಾಡಿಕೊಡುವಂತೆ ಗಂಗಾಧರ ಜಿ.ಹೆಚ್. ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣಾ ಮೊ. ನಂ. 06/2013 ಕಲಂ 379 ಭಾದಂಸಂ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ನಿರ್ಲಕ್ಯತನದಿಂದ ಸಾವು

ದಕ್ಷಿಣ ಠಾಣೆ

  • ಫಿಯರ್ಾದುದಾರರಾದ ಶ್ರೀ ಮಹೇಶ್ ರವರು ಮಂಗಳೂರಿನ ನ್ಯೂ ಇಂಡಿಯಾ ಕನ್ಸ್ಟ್ರಕ್ಷನ್ನಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಇವರು ದಿನಾಂಕ 30-01-2013 ರಂದು ನಗರದ ಮಾರ್ನಮಿಕಟ್ಟೆಯಲ್ಲಿ ಹೊಸದಾಗಿ ನಿಮರ್ಾಣವಾಗುತ್ತಿರುವ ಡೈಮಾಂಡ್ ಸಿಟಿ ಕಟ್ಟಡದ 4 ನೇ ಮಹಡಿಯಲ್ಲಿ ರಾಜೇಶ್ ಪ್ರಾಯ 19 ವರ್ಷ ಎಂಬವರೊಂದಿಗೆ ಪೈಟಿಂಗ್ ಕೆಲಸ ಮಾಡುತ್ತಿರುವಾಗ, ರಾಜೇಶ್ನು ಆಕಸ್ಮಿಕವಾಗಿ ಕೈ ಜಾರಿ ಕಟ್ಟಡದ 4 ನೇ ಮಹಡಿಯಿಂದ ಕೆಳಗೆ ಬಿದ್ದು, ತೀವ್ರ ಗಾಯಗೊಂಡವನನ್ನು ಪೈಟಿಂಗ್ ಕಂಟ್ರಾಕ್ಟರ್ ಪ್ರಶಾಂತ ಮತ್ತು ಇತರರ ಸೇರಿ ಮಂಗಳೂರು ಫಾದರ್ ಮುಲ್ಲರ್ ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಅವರು ಚಿಕಿತ್ಸೆಯಲ್ಲಿರುವಾಗ ಮೃತಪಟ್ಟಿರುತ್ತಾರೆ. ರಾಜೇಶ್ನು ಪೈಟಿಂಗ್ ಕೆಲಸ ಮಾಡುತ್ತಿರುವಾಗ ಯಾವುದೇ ರೀತಿಯ ಸೆಫ್ಟಿ ಬೆಲ್ಟ್ ಧರಿಸಿರಲಿಲ್ಲ. ರಾಜೇಶ್ನು ಕಟ್ಟಡದಿಂದ ಬಿದ್ದು ಮರಣ ಹೊಂದಲು ಕಟ್ಟಡದ ಕಂಟ್ರಾಕ್ಟರ್ ಅಜೀಜ್ ಮತ್ತು ಪೈಟಿಂಗ್ ಕಂಟ್ರಾಕ್ಟರ್ ಆದ ಪ್ರಶಾಂತರವರು  ಕಾರಣರಾಗಿದ್ದು, ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹೇಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ.27/2013 ಕಲಂ 304(ಎ) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

ಉಳ್ಳಾಲ ಪೊಲೀಸ್ ಠಾಣೆ

  • ಪ್ರದೀಪ್ ಹೆಗ್ಡೆ ಎಂಬವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿಯರ್ಾದಿಯ ಸಾರಾಂಶವೇನೆಂದರೆ, ಈ ದಿನ ತಾರೀಕು 30-01-2013 ರಂದು 18-45 ಗಂಟೆಗೆ, ಮಂಗಳೂರು ತಾಲೂಕು, ಕೋಟೆಕಾರು ಬೀರಿ, ಅರಣ್ಯ ಚಕ್ಪೋಸ್ಟ್ ಬಳಿ ರಾ.ಹೆ. 66 ರಲ್ಲಿ ಕೆಎ 20 ಬಿ 4892 ನೇ ಕಾರನ್ನು ಅದರ ಚಾಲಕ ಅಲಿಕುಂಞಿ ಎಂಬವರು ಮಂಗಳೂರು ಕಡೆಯಿಂದ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದವರು ಪಿಯರ್ಾದಿಯ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರನ್ನು ರಸ್ತೆಯ ತೀರಾ ಬಲಬದಿಗೆ ಚಾಲಾಯಿಸಿ ಅವರ ಎದುರುಗಡೆಯಿಂದ ವಿಠಲ ರೈ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ 19 ಎಲ್ 9205 ನೇ ಕೈನೆಟಿಕ್ ಸ್ಟೈಲ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಈ ಅಪಘಾತದಿಂದ ರಸ್ತೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡ ವಿಠಲ ರೈಯವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಿಠಲ ರೈಯವರು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಎಂಬುದಾಗಿ ಪ್ರದೀಪ್ ಹೆಗ್ಡೆ ಪ್ರಾಯ 36 ವರ್ಷ ತಂದೆ: ಎ.ಜಿ. ಹೆಗ್ಡೆ ವಾಸ: 11-71, ಅರ್ಯದುಗರ್ಾ ಸೋಮನಾಥ ದೇವಸ್ಥಾನದ ಬಳಿ, ಕೋಟೆಕಾರು ಅಂಚೆ, ಮಂಗಳೂರು ರವರು ನೀಡಿದ ದುರಿನಂತೆ ಉಳ್ಳಾಲ ಠಾಣಾ ಅ.ಕ್ರ. 29/2013 ಕಲಂ: 279, 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Wednesday, January 30, 2013

Daily Crime Incidents for Jan 30, 2013

ಹಲ್ಲೆ ಪ್ರಕರಣ

ಉರ್ವಾ ಪೊಲೀಸ್ ಠಾಣೆ

  • ದಿನಾಂಕ 28-01-2013 ರಂದು 20:20 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಯೂಸಫ್ ವಾಸ: ಸೈಟ್ ನಂಬ್ರ. 288 2ನೇ ಬ್ಲಾಕ್ ಕಾಟಿಪಳ್ಳ ಸುರತ್ಕಲ್ ಮಂಗಳೂರು ರವರು ಪ್ರಯಾಣಿಸುತ್ತಿದ್ದ 45'ಸಿ' ನಂಬ್ರದ ಆವೆ ಮಾರಿಯಾ ಬಸ್ಸು ಲೇಡಿಹಿಲ್ ಬಸ್ ನಿಲ್ದಾಣ ತಲುಪಿದಾಗ ಯಾರೋ ಇಬ್ಬರು ಅಪರಿಚಿತರು ಕೆಎ 19 ಎಂಸಿ 839ನೇ ನಂಬ್ರದ ಆಲ್ಟೋ ಕಾರಿನಿಂದ ಇಳಿದು ಅದರಲ್ಲಿದ್ದವರ ಪೈಕಿ ಒಬ್ಬಾತನು, ಬಸ್ಸಿನ ಕಿಟಕಿಯ ಬಲಭಾಗದ ಕೊನೆಯ ಸೀಟಿನ ಮುಂಭಾಗದ ಬದಿಯ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದಿದಾರರಿಗೆ ಬಸ್ಸಿನ ಹೊರಗಡೆಯಿಂದ ಕಿಟಕಿಯ ಮೂಲಕ ಕೈಯಲ್ಲಿದ್ದ ಜಲ್ಲಿ ಕಲ್ಲಿನಿಂದ ತಲೆಗೆ ಹೊಡೆದಿದ್ದು ತಲೆಗೆ ಉಂಟಾದ ಗಾಯದಿಂದ ರಕ್ತಸ್ರಾವವಾದ ಪಿರ್ಯಾದಿದಾರರನ್ನು ಸಹಪ್ರಯಾಣಿಕರು ಉಳ್ಳಾಲ ನರ್ಸಿಂಗ್ ಹೋಂಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಯೂಸಫ್ ರವರು ನೀಡಿದ ದೂರಿನಂತೆ ಉರ್ವಾ ಪೊಲೀಸ್ ಠಾಣಾ ಮೊ.ನಂ. 05/2013 ಕಲಂ 324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ

  • ದಿನಾಂಕ: 28-01-2013 ರಂದು ಸಮಯ ಸುಮಾರು 23.30 ಗಂಟೆಗೆ ಕಾರು ನಂಬ್ರ ಏಐ-59 - 9532 ನ್ನು ಅದರ ಚಾಲಕ ಬಾಬುಗುಡ್ಡ ಕಡೆಯಿಂದ ಅತ್ತಾವರ ಕಟ್ಟೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಅತ್ತಾವರದ ಶಾಪಿಂಗ್ ಮಾಲ್ ಬಳಿ ತಲುಪುವಾಗ ರಸ್ತೆಯ ಬಲಕ್ಕೆ ಚಲಾಯಿಸಿದ ಪರಿಣಾಮ, ಅತ್ತಾವರ ಕಟ್ಟೆ ಕಡೆಯಿಂದ ಬಾಬುಗುಡ್ಡ ಕಡೆಗೆ ಭರತ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಿರ್ಯಾದುದಾರರಾದ ವಿವೇಕ್ (21) ತಂದೆ: ಜನಾರ್ದನ ಗೌಡ, ವಾಸ: ಗೊಬ್ಬರ ತಾಂಡ ಹೌಸ್, ರೆಕ್ಯಾ ಅಂಚೆ & ಗ್ರಾಮ, ಬೆಳ್ತಂಗಡಿ ಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ನೊಂದಣಿಯಾಗಿರದ ಹೊಸ ಸ್ಲೆಂಡರ್ ಪ್ರೊ ಮೊ,ಸೈಕಲ್ಗೆ ಡಿಕ್ಕಿ ಮಾಡಿದ್ದರಿಂದ ಭರತ್ ಕಾರಿನ ಮುಂಭಾಗದ ಮೇಲೆ ಬಿದ್ದು ತಲೆಯ ಹಿಂಭಾಗ, ಬಲಕೈಗೆ ರಕ್ತಗಾಯವಾಗಿ ಮತ್ತು ಬಲಕಣ್ಣಿನ ಬಳಿ ಮತ್ತು ಬಲಕೆನ್ನಗೆ ತರಚಿದ ಗಾಯವಾಗಿ ಡಾ|| ಅಂಬೇಡ್ಕರ್ ವೃತ್ತದ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಹಾಗೂ ಪಿರ್ಯಾದುದಾರರು ಮೊ,ಸೈಕಲ್ ಸಮೇತ  ರಸ್ತೆಗೆ ಬಿದ್ದು ಬಲಕೋಲುಕಾಲಿಗೆ ಮತ್ತು ಬಲತೊಡೆಗೆ ಗುದ್ದಿದ ಗಾಯ ಉಂಟಾಗಿ ಅತ್ತಾವರ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ ಎಂಬುದಾಗಿ ವಿವೇಕ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 20/2013 279 ,  337, ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಂಚನೆ ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದುದಾರರಾದ ಲಿಡ್ವಿನ್ ಫೆನರ್ಾಂಡಿಸ್ ರವರ ಅಜ್ಜಿಯಾದ ಶ್ರೀಮತಿ ಹಿಲ್ಡಾ ಫೆನರ್ಾಂಡಿಸ್ ರವರಿಗೆ ಮಂಗಳೂರು ತಾಲೂಕು, ಪದವು ಗ್ರಾಮದಲ್ಲಿ ಜಾಗ ಮತ್ತು ಮನೆ ಇರುತ್ತದೆ. ಇದು ಪದವು ಗ್ರಾಮದ ಸ.ನಂಬ್ರ: 8/2ಎ2ಪಿ ರಲ್ಲಿ 0.20 ಸೆಂಟ್ಸ್ ಜಮೀನು ಆಗಿದ್ದು,  ಫಿಯರ್ಾದುದಾರರು ಸದ್ರಿ ಜಾಗದ ವಿಶೇಷ ಅಧಿಕಾರ ಪತ್ರ ವನ್ನು ಹೊಂದಿರುತ್ತಾರೆ ಈ ಜಾಗದಲ್ಲಿ 0.12 ಸೆಂಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಈ ಜಾಗದ ಖರೀದಿಗಾಗಿ ಆರೋಪಿ ಸಂಪತ್ರಾಜ್ ದಿನಾಂಕ 21-10-2012 ರಂದು ಮಂಗಳೂರಿನ ಗಣೇಶ್ ರವರೊಂದಿಗೆ ಫಿಯರ್ಾದುದಾರರ ಮನೆಗೆ ಬಂದು,  ಈ ಜಾಗ ನಮಗೆ ಬೇಕು, ಬೇರೆ ಯಾರಿಗೂ ಕೊಡಬೇಡಿ ಎಂದು ಹೇಳಿದರಲ್ಲದೇ ಸದ್ರಿ ಜಾಗದ ದಾಖಲೆ ಪತ್ರಗಳನ್ನು ನೋಡಲು ಇದರ ಜೆರಾಕ್ಸ್ ಪ್ರತಿಯನ್ನು ನಮಗೆ ಕೊಡಿ, ಎಂದು ಹೇಳಿದಂತೆ ದಿನಾಂಕ 22-10-2012 ರಂದು ಗಣೇಶ್ ಮತ್ತು ಸಂಪತ್ ರಾಜ್ ರವರು ಫಾದರ್ ಮುಲ್ಲಸರ್್ ಆಸ್ಪತ್ರೆಗೆ ಬಂದು, ಫಿಯರ್ಾದುದಾರರಿಗೆ ಮುಂಗಡವಾಗಿ ರೂ. 51,000/- ಸ್ಟೇಟ್ ಬ್ಯಾಂಕ್ ಪಟಿಯಾಳ ಕಂಕನಾಡಿ ಶಾಖೆ ಚೆಕ್ಕನ್ನು ನೀಡಿ ಜಾಗದ ದಾಖಲೆ ಪತ್ರಗಳ ಜೆರಾಕ್ಸ್ ಪ್ರತಿಯನ್ನು ಪಡೆದುಕೊಂಡು ಹೋಗಿರುತ್ತಾರೆ. ನಂತರ ಆರೋಪಿ ಸಂಪತ್ರಾಜನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಬಂದು ಫಿಯರ್ಾದುದಾರರಿಗೆ ಕಂಕನಾಡಿ ಸ್ಟೇಟ್ ಬ್ಯಾಂಕ್ ಪಟಿಯಾಳ ಬ್ಯಾಂಕ್ನ ರೂ. 1,00,000/- ಮೌಲ್ಯದ 5 ಚೆಕ್ ಗಳನ್ನು (ಅಂದರೆ ರೂ. 5,00,000/- ಮೌಲ್ಯದ ಚೆಕ್)ಗಳನ್ನು ನೀಡಿ, ಜಾಗದ ಮೂಲ ದಾಖಲಾತಿಗಳನ್ನು ವಕೀಲರಿಗೆ ತೋರಿಸಿ ತರುತ್ತೇನೆಂದು ಫಿಯರ್ಾದುದಾರರನ್ನು  ನಂಬಿಸಿಕೊಂಡು ಪಡೆದುಕೊಂಡು ಹೋಗಿರುತ್ತಾರೆ. ನಂತರ ಸಂಪತ್ರಾಜ್ ಮತ್ತು ತೇಜಸ್ವಿರಾಜ್ ರವರು ಫಿಯರ್ಾದುದಾರರಲ್ಲಿಗೆ  ಬಂದು ನಾನು ನಿಮ್ಮ ಜಾಗವನ್ನು ನಾನು ಖರೀದಿಸುವುದಿಲ್ಲ, ಅತ್ತಾವರದ ಶ್ರೀ ತೇಜಸ್ವಿರಾಜ್ ಎಂಬವನು ಖರೀದಿಸುತ್ತಾನೆ. ಎಂದು ಹೇಳಿಕೊಂಡು ಅಲ್ಲದೆ ಆರೋಪಿಯಾದ ತೇಜಸ್ವಿರಾಜ್ ಫಿಯರ್ಾದುದಾರರಲ್ಲಿ ನಿಮ್ಮ ಉಳಿದ ಹಣವನ್ನು ನಾನೇ ಕೊಡುತ್ತೇನೆ ಎಂದು ಹೇಳಿ, ನಂತರ ಸಂಪತ್ರಾಜ್ ಪಡೆದುಕೊಂಡ ಜಾಗದ ಮೂಲ ದಾಖಲೆ ಪತ್ರವನ್ನು ವಾಪಾಸು ಕೊಡದೆ, "ನೀನು ಇನ್ನು ಮುಂದಕ್ಕೆ ಹಣವನ್ನಾಗಲೀ, ಜಾಗದ ದಾಖಲೆ ಪತ್ರಗಳನ್ನಾಗಲಿ ಕೇಳಿದಲ್ಲಿ ನಿನ್ನನ್ನು ಏನು ಮಾಡುತ್ತೇವೆ ನೋಡು"  ಎಂದು ಈ ಮೂವರೂ ಸೇರಿ ಬೆದರಿಕೆಯನ್ನು ಹಾಕಿರುತ್ತಾರೆ. ಆರೋಪಿಗಳು ಜೊತೆಯಾಗಿ ಸೇರಿಕೊಂಡು ಮೋಸ ಮಾಡುವ ಉದ್ದೇಶದಿಂದ ಫಿಯರ್ಾದುದಾರರನ್ನು ನಂಬಿಸಿ,  ಅವರಲ್ಲಿದ್ದ ಜಾಗಕ್ಕೆ ಸಂಬಂಧಪಟ್ಟ ಮೂಲ ದಾಖಲಾತಿ ಪತ್ರಗಳನ್ನು ಪಡೆದುಕೊಂಡು ಹಿಂತಿರುಗಿಸದೇ ನನಗೆ ಬೆದರಿಕೆ ಹಾಕುತ್ತಿರುವುದಾಗಿದೆ ಎಂಬುದಾಗಿ ಲಿಡ್ವಿನ್ ಫೆನರ್ಾಂಡಿಸ್ (23) ವಾಸ: ಪದವಿನಂಗಡಿ ಗ್ರಾಮ ಕೊಂಚಾಡಿ ಪೋಸ್ಟ್ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ. 26/2013 ಕಲಂ: 406, 420, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದುದಾರರಾದ ಶ್ರೀ ಮಂಜುನಾಥ ಹೊನ್ನಳ್ಳಿ ರವರು  ದಿನಾಂಕ 27-01-2013 ರಂದು ಮಧ್ಯಾಹ್ನ 1-00 ಗಂಟೆಗೆ ತನ್ನ ಬಾಬ್ತು ಬಜಾಜ್ ಫ್ಲಾಟಿನಾ ಮೋಟಾರು ಸೈಕಲ್ ನಂಬ್ರ ಕೆ.ಎ 19 ಡಬ್ಲ್ಯೂ 1476 ನ್ನು ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಪಾಕರ್್ ಮಾಡಿ ನಿಲ್ಲಿಸಿ, ಅಲ್ಲಿಯೇ ಸಮೀಪದಲ್ಲಿರುವ ಹೋಟೇಲ್ಗೆ ಹೋಗಿ ಊಟ ಮಾಡಿ ನಂತರ ಮಾಕರ್ೇಟ್ ರಸ್ತೆಯಲ್ಲಿರುವ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸಮಾಗ್ರಿ ಖರೀದಿಸಿ ಮಧ್ಯಾಹ್ನ 3-00 ಗಂಟೆಗೆ ನಗರದ ಕ್ಲಾಕ್ ಟವರ್ ಬಳಿ ಮೋಟಾರು ಸೈಕಲ್ನ್ನು ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ, ಫಿಯರ್ಾದುದಾರರು ಪಾಕರ್್ ಮಾಡಿದ್ದ ಮೋಟಾರು ಸೈಕಲ್ ಅಲ್ಲಿರದೇ ಇದ್ದು, ಸದ್ರಿ ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಮೋಟಾರು ಸೈಕಲ್ನ್ನು ಈವರೆಗೂ ಹುಡುಕಾಡಿದರೂ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ಬಂದು ಫಿಯರ್ಾದು ನೀಡಿರುವುದಾಗಿದೆ.  ಕಳವಾದ ಮೋಟಾರು ಸೈಕಲ್ನ ಅಂದಾಜು ಬೆಲೆ ರೂ 19,000/- ಆಗಬಹುದು ಎಂಬುದಾಗಿ ಮಂಜುನಾಥ ಹೊನ್ನಳ್ಳಿ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಮೊ.ನಂ.25/2013 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tuesday, January 29, 2013

For Kind attention of the Passengers Flying from Mangalore Airport on 3rd Feb-2013

    In view of RSS Samavesh on 03rd Feb 2013 there is likely hood of traffic jam at Kenjaru near Mangalore Airport. Passengers travelling by below mentioned flights are advised to start for airport well in advance (at least 3 Hours) from their places of stay to avoid last minute rush.
SL NO
AIRLINES
DEP. TIME
DESTINATION
1
Jet Airways
12.05 PM
Bangalore
2
Air India
12.55 PM
Mumbai
3
Jet Airways
  2.45 PM
Mumbai
4
Spice Jet
  3.15 PM
Mumbai
5
Spice Jet
  3.15 PM
Hyderabad
6
Air India
  5.15 PM
Bangalore
7
Jet
  7.45 PM
Bangalore
8
Jet
  8.00 PM
Dubai
-->
 
Daily Crime Incidents for Jan 29, 2013

ಕಳವು ಪ್ರಕರಣ

ಕಾವೂರ್ ಠಾಣೆ

  • ಫಿರ್ಯಾಧುದಾರರಾದ ಶ್ರೀ ಉಮೇಶ್ ರವರ ಬಾಬ್ತು ಕೆ.ಎ.-19-ಡಿ-6554 ಮಾರುತಿ ಓಮಿನಿ ಕಾರನ್ನು ಅವರ ಮನೆಯ ಎದುರುಗಡೆ ಇರುವ ರಸ್ತೆಬದಿಯಲ್ಲಿ  ದಿನಾಂಕ 19-01-2013 ರಂದು ರಾತ್ರಿ 09-00 ಗಂಟೆಗೆ ಪಾರ್ಕ್ ಮಾಡಿದ್ದು, ಈ ದಿನ ದಿನಾಂಕ 20-01-2013 ರಂದು ಬೆಳಿಗ್ಗೆ 07-00 ಯ ಮಧ್ಯೆ ಯಾರೋ ಕಳ್ಳರು ಸದ್ರಿ ಕಾರಿನ ಎದುರುಗಡೆಯಿರುವ ಎರಡು ಸೀಟ್, ಸ್ಟೆಪಿನ್ ಟೈಯರ್ ಹಾಗೂ ಬ್ಯಾಟರಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 12,000 ಆಗಬಹುದು ಎಂಬುದಾಗಿ ಉಮೇಶ್ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 22/2013 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅಪಘಾತ ಪ್ರಕರಣ

ಕಾವೂರ್ ಠಾಣೆ

  • ಫಿರ್ಯಾಧುದಾರರಾದ ಶ್ರೀ ಯಶವಂತ ದೇವಾಡಿಗರವರು ದಿನಾಂಕ 28-01-2013 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ತನ್ನ ಬಾಬ್ತು ಕೆ-19-ಇಬಿ-9530 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ಮನೆಯಿಂದ ಕಾವೂರು ಕಡೆಗೆ ಹೋಗುವಾಗ  ಮುಲ್ಲಕಾಡು 4 ನೇ ಮೈಲು ಬಸ್ ಸ್ಟಾಂಡ್ ನ ಬಳಿ ತಲುಪಿದಾಗ ಎದುರುಕಡೆ ಅಂದರೆ ಕಾವೂರು ಕಡೆಯಿಂದ ಕೆಎ-19-ಇಡಿ-7202 ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಮೋಟಾರು ಸೈಕಲ್ ಸವಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈಗೆ ಮೂಳೆಮೂರಿತದ ಗಾಯ, ಡ ಭುಜಕ್ಕೆ ಗುದ್ದಿದ ಮತ್ತು ಚಮಱ ಸುಲಿದ ಗಾಯ ವಾಗಿದ್ದು, ಚಿಕಿತ್ಸೆಯ ಬಗ್ಗೆ ವೆಲ್ ಲ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸೆ ಪಡೆದಿರುವುದಾಗಿದೆ ಎಂಬುದಾಗಿ ಯಶವಂತ ದೇವಾಡಿಗರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 23/2013 ಕಲಂ. 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

  • ಫಿರ್ಯಾಧುದಾರರಾದ ಶ್ರೀ ಅಜರತ್ ಸಾಹೇಬ್ ರವರು ದಿನಾಂಕ 28-01-2013 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ತನ್ನ ಬಾಬ್ತು ಕೆ-19-ಇಡಿ-7202 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ಮನೆಯಿಂದ ಮುಲ್ಲಕಾಡು 4 ನೇ ಮೈಲು ಬಸ್ ಸ್ಟಾಂಡ್ ನ ಬಳಿ ತಲುಪಿದಾಗ ಎದುರುಕಡೆ ಅಂದರೆ ದೇರೆಬೈಲು ಕಡೆಯಿಂದ ಕೆಎ-19-ಇಬಿ-9530 ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದರರುಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಕೈ, ಕಾಲುಗಳ ಬೆರಳುಗಳಿಗೆ ಮುರಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ವೆಲ್ ಲ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ ಎಂಬುದಾಗಿ ಅಜರತ್ ಸಾಹೇಬ್ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 24/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

  • ಫಿರ್ಯಾಧುದಾರರಾದ ಶ್ರೀ ಹ್ಯಾಡ್ಲಿ ಡಿಸೋಜರವರು ಸ್ನೇಹಿತ ನಿತಿನ್ಎಂಬವರಿಂದ MH-04-DY-2628 ನಂಬ್ರದ ಇನ್ನೊವ ಕಾರನ್ನು ಪಡೆದುಕೊಂಡಿದ್ದು, ದಿನಾಂಕ 28-01-2013 ರಂದು ಮೇಲಿನ ಕಾರನ್ನು ಮಂಗಳೂರು ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಾ ಸಂಜೆ ಸುಮಾರು 4-30 ಗಂಟೆಗೆ  ರಾ.ಹೆ 66 , 4 ನೇ ಮೈಲು ತಲುಪಿದಾಗ ಎದುರುಗಡೆಯಿಂದ KA-02-AB-7599 ನಂಬ್ರದ 18 ಚಕ್ರದ ಟಾಟಾ ಟ್ರೈಲರ್ ಮಂಗಳೂರು ಕಡೆಗೆ ಹೋಗುತ್ತಿದ್ದು, ಪಿರ್ಯಾದಿದಾರರು ಕಾರನ್ನು ಸೂಚನೆ ಹಾಗೂ ಹಾರ್ನ ಹಾಕುತ್ತ ಮುಂದಕ್ಕೆ ಚಲಾಯಿಸುವಾಗ ಟಾಟಾ ಟ್ರೈಲರ್ ನ ಚಾಲಕನು ದುಡುಕುತನದಿಂದ ಯಾವುದೇ ಮುಂಜಾಗ್ರತೆ ವಹಿಸದೇ ರಸ್ತೆಯ ಬಲಬದಿಗೆ ಚಲಾಯಿಸಿದ ಪರಿಣಾಮ ಟಾಟಾ ಟ್ರೈಲರ್ ಕಾರಿನ ಎಡ ಬದಿಗೆ ಡಿಕ್ಕಿಯಾಗಿ ಜಖಂ ಉಂಟಾಗಿರುವುದಾಗಿದೆ ಎಂಬುದಾಗಿ ಹ್ಯಾಡ್ಲಿ ಡಿಸೋಜರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 25/2013 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮೂಡಬಿದ್ರೆ ಠಾಣೆ

  • ದಿನಾಂಕ : 28/01/2013 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಪಿರ್ಯಾದಿದಾರರಾದ ಚಂದಪ್ಪ ಎಂಬವರು ಮಂಗಳೂರು ತಾಲೂಕು ಪಡುಕೊಣಾಜೆ ಗ್ರಾಮದ ಹೌದಾಲ್‌ ಅಂಗನವಾಡಿ ಬಳಿ ಮೂಡಬಿದ್ರೆ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದ ಸಮಯ ಮೂಡಬಿದ್ರೆ ಕಡೆಯಿಂದ ಶಿರ್ತಾಡಿ ಕಡೆಗೆ ಮೋಟಾರು ಸೈಕಲ್‌ ಸವಾರನು ತನ್ನ ಬಾಬ್ತು ಮೋಟಾರು ಸೈಕಲ್‌ ನಂಬ್ರ ಕೆಎ 21 ಕ್ಯೂ 7319 ನೇದರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ  ಆತನ ತಲೆಯ ಎಡಭಾಗಕ್ಕೆ ರಕ್ತ ಗಾಯವಾಗಿದ್ದು, ಎಡಕೈ ಮಣಿಗಂಟಿನ ಬಳಿ ತರಚಿದ ಗಾಯ ಹಾಗೂ ಎರಡು ಕಾಲುಗಳು ಮೂಳೆಮುರಿತದ ರಕ್ತಗಾಯವಾಗಿರುತ್ತದೆ. ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಚಂದಪ್ಪ ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ. 22/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಸಂಚಾರ ಪೂರ್ವ ಠಾಣೆ

  • ದಿನಾಂಕ: 28-01-2013 ರಂದು ಸಮಯ ಸುಮಾರು 14.30 ಗಂಟೆಗೆ ಸ್ಕೂಟರ್ ನಂಬ್ರ ಏಂ-19 ಇಇ-5711 ನ್ನು ಅದರ ಸವಾರ ಇರಾಲ್ ಡಿಸೋಜ ಎಂಬವರು ಕಲ್ಪನೆ ಕಡೆಯಿಂದ ನಂತೂರು ಜಂಕ್ಷನ್ ಕಡೆಯಿಂದ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬಿಕರ್ನಕಟ್ಟೆಯ ಇನ್ಫ್ರಂಟ್ ಜೀಸಸ್ ಚಚರ್್ ಬಳಿ ತಲುಪುವಾಗ ರಸ್ತೆ ದಾಟುತ್ತಿದ್ದ ಸುಮಂತ್ ಎಂಬವರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಸುಮಂತ್ ರಸ್ತೆಗೆ ಬಿದ್ದು ಎಡಭುಜಕ್ಕೆ, ಬಲಕೋಲು ಕಾಲಿಗೆ ಮತ್ತು ತಲೆಗೆ ಗುದ್ದಿದ ಗಂಭಿರ ಸ್ವರೂಪದ ಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತದಿಂದ ಅರೋಪಿತರಿಗೆ ಸಾಮಾನ್ಯ ಸ್ವರೂಪದ ಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಭಗವಾನ ದಾಸ್(49) ತಂದೆ-ಭೋಜ ಕರ್ಕರ, ಬಿಕರ್ನಕಟ್ಟೆ ಬಸ್ ನಿಲ್ದಾಣದ ಬಳಿ, ಬಿಕರ್ನಕಟ್ಟೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 19/2013 279 ,  337, 338, ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, January 28, 2013

Daily Crime Incidents for Jan 28, 2013

ಅಪಘಾತ ಪ್ರಕರಣ

ಸುರತ್ಕಲ್ ಪೊಲೀಸ್ ಠಾಣೆ

  • ಫಿರ್ಯಾದಿದಾರರಾದ ನಿರಾವ್ ರವರು ನಿಟ್ಟೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯುತ್ತಿದ್ದು ದಿನಾಂಕ 26-01-2013 ರಂದು ಅವರ ಸ್ನೇಹಿತರಾದ ಅಭಿನಾಶ್  ಮತ್ತು ಕುಶಾಲ್ ರವರೊಂದಿಗೆ ಸುರತ್ಕಲ್ ಗೆ ಪುಸ್ತಕ ತೆಗೆದು ಕೊಂಡು ಹೋಗಲು ಬಂದು ಸುರತ್ಕಲ್ ಪೋಸ್ಟ್ ಆಫೀಸ್ ಹತ್ತಿರ ಬಸ್ ಇಳಿದು ರಸ್ತೆ ದಾಟುವರೇ ರಾ ಹೆ 66 ರ ಡಿವೈಡರ್ ಬಳಿ ಸಂಜೆ 5-00 ಗಂಟೆಗೆ ನಿಂತುಕೊಂಡಿದ್ದು ಆ ವೇಳೆಗೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆ ಎ 19 ಬಿ 5600 ನೇ ರಿಕ್ಷಾವನ್ನು ಅದರ ಚಾಲಕ ಗಣೇಶ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸ್ನೇಹಿತ ಅಭಿನಾಶ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಭಿನಾಶ್ ರಸ್ತೆಗೆ ಬಿದ್ದಿದ್ದು,  ಅಭಿನಾಶ್ ನಿಗೆ ಮುಖಕ್ಕೆಹಲ್ಲಿಗೆಹಾಗೂ ಬಲಕೈ ಬಲ ಕಾಲಿಗೆ ಗಾಯ ಆಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದುರಿಕ್ಷಾ ಕೂಡ ಮಗುಚಿ ಬಿದ್ದ ಪರಿಣಾಮ ರಿಕ್ಷಾದಲ್ಲಿದ್ದವರಿಗೂ ಕೂಡ ಗಾಯ ಆಗಿದ್ದು ರಿಕ್ಷಾ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿರುತ್ತದೆ ಎಂಬುದಾಗಿ ನಿರಾವ್‌‌ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮೂಡಬಿದ್ರೆ ಠಾಣೆ

  • ನಿನ್ನೆ ದಿನ ತಾರೀಕು 26-01-2013 ರಂದು  16-30 ಗಂಟೆಗೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ನಾಗರಕಟ್ಟೆ ತಿರುವು ಎಂಬಲ್ಲಿಗೆ ಪಿರ್ಯಾದಿದಾರರಾದ ಆನಂದ ಸುವರ್ಣ 36) ತಂದೆ: ಲಕ್ಷಣ ಕೋಟ್ಯಾನ್‌, ವಾಸ : ಜೋನ್‌ ಡಿಸೋಜಾ ಕಂಪೌಂಡ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಬಳಿ , ಮಾರ್ಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ಮತ್ತು ಭೋಜ ಕೋಟ್ಯಾನ್, ಸಂಪತ್‌ ಯಾನೆ ಸಂಪು ಎಂಬವರು ಕೆಎ 19 ಡಿ 7916 ನಂಬ್ರದ ಆಟೋರಿಕ್ಷಾದಲ್ಲಿ ಮೂಡಬಿದ್ರೆ ಕಡೆಯಿಂದ ಒಂಟಿಕಟ್ಟೆ ಕಡೆಗೆ ಹೋಗುತ್ತಿದ್ದಂತಹ ಸಮಯದಲ್ಲಿ ಸದ್ರಿ ಆಟೋರಿಕ್ಷಾ ಚಾಲಕ ಮನೋಹರ ಎಂಬವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಸದ್ರಿ ರಿಕ್ಷಾವು ಬಲ ಮಗ್ಗುಲಿಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿ ಆನಂದ ಸುವರ್ಣರವರ ಎಡ ಕೈ ತಟ್ಟಿಗೆ, ಮಣಿಗಂಟಿಗೆ ಮತ್ತು ತಲೆಯ ಬಲಭಾಗದಲ್ಲಿ ರಕ್ತಗಾಯ ಆಗಿರುವುದಲ್ಲದೇ ಸದ್ರಿ ಭೋಜ ಕೋಟ್ಯಾನ್‌ ರವರ ಬಲಕೈ ತಟ್ಟಿಗೆ ರಕ್ತಗಾಯವಾಗಿದ್ದು ಬಲ ಪಕ್ಕೆಲುಬು, ಬೆನ್ನಿಗೆ ಕುತ್ತಿಗೆಗೆ ಬಾರಿ ಗುದ್ದಿದ ನೋವು ಆಗಿರುವುದಲ್ಲದೇ ಸದ್ರಿ ಚಾಲಕ ಮನೋಹರನ ಬಲಭುಜ ಮತ್ತು ಬಲಕಾಲಿನ ತೊಡೆಗೆ ಗುದ್ದಿದ ನೋವು ಆಗಿದ್ದು ಪಿರ್ಯಾದಿ ಆನಂದ ಸುವರ್ಣ ಎಂಬವರು ಮತ್ತು ಆಟೋ ಚಾಲಕ ಮನೋಹರ ಇವರು ಮೂಡಬಿದ್ರೆ ವಿದ್ಯಾಗಿರಿಯ ಆಳ್ವಾಸ್‌ ಆಯುರ್ವೇದ ಮೆಡಿಕಲ್‌ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಮತ್ತು ಗಾಯಾಳು ಭೋಜ ಕೋಟ್ಯಾನ್‌ರವರು ಮಂಗಳೂರು ಎ. ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಆನಂದ ಸುವರ್ಣ ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 21/2013 ಕಲಂ : 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮಂಗಳೂರು ಗ್ರಾಮಾಂತರ ಠಾಣೆ

  • ದಿನಾಂಕ  :27.01.2013 ರಂದು ಬೆಳಿಗ್ಗೆ ಸುಮಾರು 08.15 ಗಂಟೆ ಸಮಯಕ್ಕೆ ಆಟೋ ರಿಕ್ಷಾ ಕೆಎ-19-ಎ-3813 ನ್ನು ಅದರ ಚಾಲಕ ಫೆಡ್ರಿಕ್‌ ಲೋಬೋ ಎಂಬವರು ತನ್ನ ಬಾಬ್ತು ಆಟೋ ರಿಕ್ಷಾವನ್ನು ಮಂಗಳೂರು ನಗರದ ಸಾರ್ವಜನಿಕ ರಸ್ತೆಯಾದ ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯಿಂದ ಅತೀವೇಗ ಯಾ ನಿರ್ಲಕ್ಷ್ಯತನದಿಂದ ಚಲಾಯಿಸಿ  ರಾ.ಹೆ 75 ನೇ ರಸ್ತೆಯಾದ ಪಡೀಲ್‌ ಕಡೆಯಿಂದ ಪಂಪ್‌ವೆಲ್‌ ಕಡೆಗೆ ಬರುತ್ತಿದ್ದ ಮೋಟಾರ್‌ ಬೈಕ್‌ ಕೆಎ-19-ಇಎ-1168 ನೇ ಯದಕ್ಕೆ ಕಂಕನಾಡಿ ಗ್ರಾಮದ ಕಪಿತಾನಿಯಾ ಶಾಲೆ ಬಳಿ ಡಿಕ್ಕಿ ಹೊಡೆದು ಸವಾರ ಹಾಗೂ ಸಹಸವಾರರು ಮೋಟಾರು ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದು ಸವಾರ ಮನೋಜ್‌ ಎಂಬವರ ಎಡ ಕೈ ಯ ಭುಜಕ್ಕೆ, ಎಡ ಕೈಗೆ ಮತ್ತು ಎಡ ಕಾಲಿಗೆ ತರಚಿದ ಮತ್ತು ಗುದ್ದಿದ ಗಾಯ ಉಂಟಾಗಿರುವುದಲ್ಲದೆ, ಸಹಸವಾರರಾದ ಲೋಕೇಶ್‌ ಎಂಬವರ ಹೊಟ್ಟೆಯ ಎಡಭಾಗಕ್ಕೆ ತೀವ್ರ ಸ್ವರೂಪದ ಗುದ್ದಿದ ನೋವುಂಟಾಗಿರುವುದು ಎಂಬುದಾಗಿ ಮನೋಜ್ ತಂದೆ: ಸತ್ಯವಾನ್  ಅಡ್ಯಾರ್ ಪದವು ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 17/2013 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ

  • ದಿನಾಂಕ 27/01/2013 ರಂದು ಮದ್ಯಾಹ್ನದ ಸಮಯ ಪಿರ್ಯಾದಿದಾರರಾದ ಮನೋಜ್ ತಂದೆ: ಕರುಣಾಕರ ಸಫಲ್ಯ @ ವಾಮನ ಕಲಶೇಖರ ಚ್ವೌಕಿ ಪದವು ಮಂಗಳೂರು ತಂದೆ ಕರುಣಾಕರ ಯಾನೆ ವಾಮನ ಎಂಬುವರು ವಿಪರಿತ ಶರಾಬು ಸೇವಿಸುವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳೂರು ನಗರದ ಪದವು ಗ್ರಾಮದ ಕುಲಶೇಖರ ಚೌಕಿ ಎಂಬಲ್ಲಿ ಬಸ್ ಸ್ಟ್ಯಾಂಡ್‌ ಬಳಿ ಇರುವ ವಾಸ್ತವ್ಯವಿಲ್ಲದ ಮನೆ ಜಾಗದಲ್ಲಿನ ಬಾವಿಗೆ ಹಾರಿ ಆತ್ಮಹತ್ಯ ಮಾಡಿದ್ದು  ಅಗ್ನಿಶಾಮಕದಳದವರು ಮೃತಶರೀರವನ್ನು ತೆಗೆದು ಶವಾಗಾರಕ್ಕೆ ಸಾಗಿಸಿದ್ದಾಗಿ ಮನೋಜ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಯುಡಿಆರ್ ನಂಬ್ರ. 9/2013 ಕಲಂ.174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

ಮುಲ್ಕಿ ಠಾಣೆ

  • ಬೆಂಗಳೂರು ಬನ್ನೇರುಘಟ್ಟ  ರಸ್ತೆ  ವಿವರ್ಸ ಕಾಲೋನಿ ನಾಗರಾಜರವರ ಮಗ ಪಿರ್ಯಾದಿದಾರರಾದ ಬಾಲಾಜಿ  ಎನ್  ಎಂಬವರು  ಠಾಣೆಗೆ  ಬಂದು ನೀಡಿದ  ಹೇಳಿಕೆಯ  ಸಾರಾಂಶವೇನೆಂದರೆ  ಫಿರ್ಯಾದಿದಾರರು  ಕೆಎ 05  ಎಸಿ 1757 ನೇ ಟೆಂಪೋದ ಚಾಲಕರಾಗಿದ್ದು  ಈ ದಿನ ದಿನಾಂಕ  27.01.2013  ರಂದು ಟೆಂಪೋದಲ್ಲಿ ಬೆಂಗಳೂರು  ಯಾತ್ರಿಕರನ್ನು   ತುಂಬಿಸಿಕೊಂಡು ಉಡುಪಿ ಮಾರ್ಗವಾಗಿ ಮುಲ್ಕಿ ಕಡೆಯಿಂದ  ಕಿನ್ನಿಗೋಳಿ ಕಡೆಗೆ  ಚಲಾಯಿಸಿಕೊಂಡು ಹೋಗುವಾಗ  ಬೆಳಿಗ್ಗೆ  10.15 ರ ವೇಳೆಗೆ  ಕುಬೆವೂರು  ಎಂಬಲ್ಲಿ ಕಿನ್ನಿಗೋಳಿ ಕಡೆಯಿಂದ  ಬಸ್ಸು ಕೆಎ 20 ಬಿ  1978 ನ್ನು ಅದರ ಚಾಲಕ  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ  ಟೆಂಫೋಗೆ  ಢಿಕ್ಕಿ ಮಾಡಿದ  ಕಾರಣ  ಟೆಂಪೋದ  ಬಲಬದಿಯಲ್ಲಿ ಕುಳಿತಿದ್ದ  ವರಲಕ್ಷ್ಮೀ ರವರ  ಬಲಕೈ ಭುಜದಿಂದ  ಕೆಳಗೆ  ಗಂಭೀರ  ಸ್ವರೂಪದ  ಜಖಂ  ಆಗಿ ರಕ್ತಗಾಯವಾಗಿದ್ದವರನ್ನು  ಮಂಗಳೂರು  ಎ.ಜೆ  ಆಸ್ಪತ್ರೆಗೆ  ದಾಖಲಿಸಲಾಗಿರುತ್ತದೆ ಎಂಬುದಾಗಿ ಬಾಲಾಜಿ ಎನ್  ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ  08/2013 ಕಲಂ :279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಾಹನ ಕಳವು ಪ್ರಕರಣ

ದಕ್ಷಿಣ ಠಾಣೆ

  • ಫಿಯರ್ಾದುದಾರರು ದಿನಾಂಕ 24-01-2013 ರಂದು ರಾತ್ರಿ 10-00 ಗಂಟೆಗೆ ತನ್ನ ಬಾಬ್ತು ಬಜಾಜ್ ಪಲ್ಸರ್ ಮೋಟಾರು ಸೈಕಲ್ನ್ನು ತನ್ನ ಮನೆ ಇರುವ ಮಂಗಳೂರು ಅತ್ತಾವರದಲ್ಲಿನ ಝಾಫಿರ್ ಹೈಟ್ಸ್ ಅಪಾಟರ್್ಮೆಂಟ್ನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿದ್ದು, ದಿನಾಂಕ 25-01-2013 ರಂದು ಬೆಳಿಗ್ಗೆ 07-30 ಗಂಟೆಗೆ ಮೋಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ, ಫಿಯರ್ಾದುದಾರರು ಪಾಕರ್್ ಮಾಡಿದ್ದ ಮೋಟಾರು ಸೈಕಲ್ ಅಲ್ಲಿರದೇ ಇದ್ದು, ಸದ್ರಿ ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಮೋಟಾರು ಸೈಕಲ್ನ್ನು ಈವರೆಗೂ ಹುಡುಕಾಡಿದರೂ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ಬಂದು ಫಿಯರ್ಾದು ನೀಡಿರುವುದಾಗಿದೆ.  ಕಳವಾದ ಮೋಟಾರು ಸೈಕಲ್ನ ಅಂದಾಜು ಬೆಲೆ ರೂ 45,000/- ಆಗಬಹುದು. ಈ ಬಗ್ಗೆ  ಕಾನೂನು ಕ್ರಮ ಕೈಗೊಳ್ಳುವಂತೆ ದಕ್ಷಿಣ ಠಾಣಾ ಮೊ.ನಂ.23/2013 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.