Monday, December 15, 2014

Daily Crime Report : 15-12-2014

ದಿನಾಂಕ 15.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13/12/2014 ರಂದು ಸಮಯ ಸುಮಾರು  17:30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಸುಮತಿ ಪಿ.ಎಸ್. ರವರು ತಮ್ಮ ಬಾಬ್ತು ಸ್ಕೂಟರ್ ನಂಬ್ರ KA-19-EM-2750 ನೇ ದರಲ್ಲಿ ಸವಾರಳಾಗಿದ್ದುಕೊಂಡು ಸದ್ರಿಯವರ ಮನೆಯಾದ ಕುಂಟಿಕಾನ ಕ್ವಾಟರ್ಸ ಕಡೆಗೆ ಬರುವರೇ ಕುಂಟಿಕಾನ ಸೆಂಟ್ ಆನ್ಸ ಶಾಲೆಯ  ಸ್ವಲ್ಪ ಹಿಂದಕ್ಕೆ ತಲುಪಿದಾಗ ಫಿರ್ಯಾದುದಾರರ ಹಿಂದುಗಡೆಯಿಂದ ಅಂದರೆ ಲ್ಯಾಂಡ್ ಲಿಂಕ್ಸ್ ಕಡೆಯಿಂದ ಪಿಕ್ ಅಪ್ ವಾಹನ ನಂಬ್ರ KA-19-AA-5829 ನೇ ಯದನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಢು ಬಂದು ಫಿರ್ಯಾದುದಾರರು ಸವಾರಿ ಮಾಡುತ್ತಿದ್ದ ಸ್ಕೂಟರನ ಹಿಂಬಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಬಲಕೈಗೆ ಗಂಭಿರ ಸ್ವರೂಪದ ಮೂಳೆ ಮುರಿತದ ರಕ್ತ ಗಾಯ ಮತ್ತು ಎಡಕಾಲಿನ ಮೊಣಗಂಟಿಗೆ ಹಾಗೂ ಎಡಕೈಗೆ ತರಚಿದ ಗಾಯವಾಗಿ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13.12.2014ರಂದು ರಾತ್ರಿ ಸುಮಾರು 11.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಎಸ್ ಕೋಡಿ ಎಂಬಲ್ಲಿರುವ ವೇಣು ಗೋಪಾಲ ಹೆಗ್ಡೆ ಎಂಬವರ ಬಾಬ್ತು ಪೆಟ್ರೋಲ್ ಬಂಕ್ ನಲ್ಲಿ ಪಂಪ್ ಅಪರೇಟರ್ ಆಗಿರುವ ಪಿರ್ಯಾಧಿದಾರರಾದ ಶ್ರೀ ವಿಜಯ ಎಂಬವರು ಮತ್ತು ಇತರರು ಹಾಜರಿದ್ದ ಸಮಯ ಪೆಟ್ರೋಲ್ ಬೇಕು ಎಂದು ಹೇಳಿ ಏಕ್ಟಿವ್ ಸ್ಕೂಟರ್ ನಲ್ಲಿ ಬಂದ ಹರ್ಷಿತ್ ಮತ್ತು ಇನ್ನೊಬ್ಬ ಪೆಟ್ರೋಲ್ ಬಂಕಿನೊಳಗಡೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮುಖ್ಯ ದ್ವಾರದ ಗ್ಲಾಸನ್ನು ಒಡೆದು ನಷ್ಟವನ್ನುಂಟು ಮಾಡಿರುತ್ತಾರೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.12.14 ರಂದು ಮೂಡಬಿದ್ರೆ ವಿಧ್ಯಾಗಿರಿ ಬಳಿ  ಫಾರ್ಚೂನ್ ಮೊಬೈಲ್  ಅಂಗಡಿಗೆ ರಾತ್ರಿ 20.30 ಗಂಟೆಗೆ ಬೀಗ ಹಾಕಿ ಹೋಗಿದ್ದು, ದಿನಾಂಕ: 14.12.14 ರಂದು ಬೆಳಿಗ್ಗೆ 08.30 ಗಂಟೆಗೆ ಅಂಗಡಿಗೆ ಬಂದಾಗ ಬೀಗ ಹಾಕಿದ ಬೀಗವು ಇಲ್ಲದೆ ಇದ್ದು , ಶೆಟರ್ ತೆಗೆದು ನೋಡಿದಾಗ ಶೋಕೇಶ್ ನಲ್ಲಿಟ್ಟಿದ್ದ ಮೊಬೈಲ್ ಬಾಕ್ಸ್ ಗಳು ಅಸ್ತವ್ಯಸ್ತವಾಗಿದ್ದು, ಯಾರೋ ಕಳ್ಳರು ಸುಮಾರು 42,305 ರೂಪಾಯಿ ಬೆಲೆ ಬಾಳುವ 6 ಮೊಬೈಲ್ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಯೂನುಸ್ ಫೈಝಲ್ ರವರು ತನ್ನ ಅಣ್ಣ ಶಾಹುಲ್ ಹಮೀದ್ ಎಂಬವರ ಜೊತೆ ಸೆಂಟ್ರಲ್ ಮಾರ್ಕೆಟಿನಲ್ಲಿ ಬಾಳೆ ಎಲೆ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 13-12-2014 ರಂದು ಶಾಹುಲ್ ಹಮೀದ್ ರವರು ಉಡುಪಿಯಲ್ಲಿರುವ ಆಶ್ರಯ ಟ್ರಸ್ಟ್ ನಿಂದ ಬರಬೇಕಿದ್ದ 2 ಲಕ್ಷ ರೂಪಾಯಿ ಪಡೆದುಕೊಂಡು ಬರಲು ಬಿಲ್ಲಿನೊಂದಿಗೆ ಹೊರಟಿರುತ್ತಾರೆ. ಫಿರ್ಯಾದಿದಾರರು ತನ್ನ ಅಣ್ಣ ಶಾಹುಲ್ ಹಮೀದ್ ರವರ ಮೊಬೈಲ್ ನಂಬ್ರಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಬಳಿಕ ಎಲ್ಲಾ ಕಡೆ ವಿಚಾರಿಸಲಾಗಿ ಫಿರ್ಯಾದಿದಾರರ ಅಣ್ಣ ಶಾಹುಲ್ ಹಮೀದ್ ರವರು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ತಿಳಿಯದೇ ಇದ್ದು ಯಾರ ಸಂಪರ್ಕಕ್ಕೆ ಸಿಗದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಶಾಹುಲ್ ಹಮೀದ್ ರವರ ಚಹರೆ  ಹೆಸರು: ಶಾಹುಲ್ ಹಮೀದ್ (35), ಎತ್ತರ 5 ಅಡಿ, ಬಿಳಿ ಮೈ ಬಣ್ಣ, ಸಾದಾರಣ ಮೈಕಟ್ಟು, ಹಿಂದಿ, ತುಳು, ಬ್ಯಾರಿ, ಕನ್ನಡ ಭಾಷೆ ಬಲ್ಲವರಾಗಿದ್ದು, ಕಪ್ಪು ಬಣ್ಣದ ಪ್ಯಾಂಟು, ಲೈಟ್ ನೇರಳೆ ಬಣ್ಣದ ಪೂರ್ಣ ತೋಳಿನ ಶರ್ಟು ಧರಿಸಿರುತ್ತಾರೆ.

 

5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಅರುಣ ಕೆ ಎಂಬವರು ಮತ್ತು ಗೌತಮ್ಎಂಬಾತನು ಪರಸ್ಪರ ಪ್ರೀತಿಸಿ ದಿನಾಂಕ; 31-10-2012 ರಂದು ತನ್ನ ಮನೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಯಸಂದ್ರ ಅತ್ತಿಬೆಲೆ ಎಂಬಲ್ಲಿಂದ ಪರಾರಿಯಾಗಿ ಮಂಗಳೂರು ಕಡೆಗೆ ಬಂದಿದ್ದು ಮಂಗಳೂರು ನಗರದ ಬೈಕಂಪಾಡಿ ಅಂಗರಗುಂಡಿ ಎಂಬಲ್ಲಿಯ ಜಯಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮಂಗಳೂರಿನ ಯಾವುದೋ ಒಂದು ಚಿಕ್ಕ ದೇವಸ್ಥಾನದಲ್ಲಿ ಗೌತಮನು ಫಿರ್ಯಾದಿ ಅರುಣಳಿಗೆ ತಾಳಿಯನ್ನು ಕಟ್ಟಿ ಗಂಡ ಹೆಂಡತಿಯಂತೆ ವಾಸವಾಗಿ ನಂತರ ಅಂಗರಗುಂಡಿಯ ಮುಸ್ತಾಫ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಫಿರ್ಯಾದುದಾರಳಿಗೆ ಒಂದು ವರ್ಷದ ನಂತರ ಹೆರಿಗೆಯ ಬಗ್ಗೆ ಲೇಡಿಗೋಷನ್ಅಸ್ಪತ್ರೆಯಲ್ಲಿ ದಿನಾಂಕ 30-10-2013 ರಂದು ಗಂಡನು 108 ಅಂಬ್ಯುಲೆನ್ಸ್ನಲ್ಲಿ ತಂದು ದಾಖಲು ಮಾಡಿದ್ದು ಸುಮಾರು ರಾತ್ರಿ 12-00 ಗಂಟೆಗೆ ಫಿರ್ಯಾದುದಾರಳಿಗೆ ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಬೇಕು ಎಂಬುದಾಗಿ ವೈದ್ಯಾಧಿಕಾರಿಯವರು ತಿಳಿಸಿದಾಗ ಗೌತಮನು ಅಲ್ಲಿಂದ ಪರಾರಿಯಾಗಿ ನಂತರ ವೈದ್ಯಾಧಿಕಾರಿಯವರು ಅರುಣಳ ತಂದೆ ದೂರವಾಣಿಯಲ್ಲಿ ಹೆರಿಗೆಯ ವಿಚಾರ ತಿಳಿಸಿ ಅವಳ ತಂದೆಯು ನಂತರ ಆಸ್ಪತ್ರೆಗೆ ಬಂದು ಅವಳ ಆರೈಕೆಯನ್ನು ಮಾಡಿ 5 ದಿನಗಳ ನಂತರ ಊರಿಗೆ ಕರೆದುಕೊಂಡು ಹೋಗಿದ್ದು ನಂತರ ಫಿರ್ಯಾದುದಾರರ ತಂದೆಯ ಜೊತೆ ಗೌತಮನು ಜೊತೆ ಊರಿನಿಂದ ಪರಾರಿಯಾದ ವಿಚಾರವನ್ನು ತಿಳಿಸಿ ನಂತರದ ಎಲ್ಲಾ ವಿಚಾರವನ್ನು ತಿಳಿಸಿದ ನಂತರ ಅರುಣಾ ಹಾಗೂ ಗೌತಮನು ಪರಸ್ಪರ ಪ್ರೀತಿಸಿ ಮನೆಬಿಟ್ಟು ಹೋದ ವಿಚಾರ ಹಿರಿಯರು ತಿಳಿದು ಬೆಂಗಳೂರು ಹಾಗೂ ಇತರ ಎಲ್ಲಾ ಕಡೆ ಹುಡುಕಿದ ನಂತರ ಅವರ ಊರಿನ ಸ್ಥಳೀಯ ಠಾಣೆಗೆ ಕೂಡಾ ವಿಚಾರವನ್ನು ತಿಳಿಸಿ ಪತ್ತೆಯಾಗದ ಕಾರಣ ಮಂಗಳೂರು ಉತ್ತರ ಪೊಲೀಸ್ಠಾಣೆಗೆ ಬಂದು ದೂರನ್ನು ನೀಡಿರುವುದಾಗಿದೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-12-2014 ರಂದು ಪಿರ್ಯಾದುದಾರರಾದ ಶ್ರೀ ಅಬ್ದುಲ್ ಹಮೀದ್ ಪಟೇಲ್ ರವರು ಮನೆಯಿಂದ ತನ್ನ ಬಾಬ್ತು ಆಲ್ಟೋ ಕಾರು ನಂಬ್ರ ಕೆಎ 19 ಎಂ 3843 ನೇದರಲ್ಲಿ  ಮಂಗಳೂರು ಕಡೆಗೆ ಹೋಗುವರೇ ಕೈಕಂಬ ಪೇಟೆಗೆ ತಲಪುತ್ತಿದ್ದಂತೆ ಮದ್ಯಾಹ್ನ ಸುಮಾರು 12-15 ಗಂಟೆಗೆ ಬಸ್ನಂಬ್ರ ಕೆಎ 19 ಡಿ 8000 ನಂಬ್ರದ ಪದ್ಮಾವತಿ ಬಸ್ ಚಾಲಕನು ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರ ಕಾರಿನ ಎಡ ಬದಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನ ಎದುರಿನ ಎಡಬದಿಯ  ಬಾಗಿಲಿಗೆ ಜಖಂ ಆಗಿರುತ್ತದೆ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕೆ.. 19-.ಎಲ್. - 6958 ನೇ ನಂಬ್ರದ  ಆಕ್ಟಿವಾ ಹೊಂಡಾ ಬೈಕಿನಲ್ಲಿ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ರಹಿಮಾನ್ ರವರನ್ನು ಸಹ ಸವಾರರಾಗಿ ಕುಳ್ಳರಿಸಿಕೂಂಡು ಆರೋಪಿ ಇಬ್ರಾಹಿಂ ಎಂಬಾತನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಮಾರ್ಕೆಟ್ ಬಳಿ ಬೆಳಗ್ಗೆ 11-30 ಗಂಟೆಗೆ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಹಾಗಿ ಬಿದ್ದಿರುವುದರಿಂದ ಪಿರ್ಯಾದಿ ಹಾಗೂ ಆರೋಪಿ ಗಾಯಗೂಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-12-2014 ರಂದು 13-45 ಗಂಟೆಯಿಂದ ದಿನಾಂಕ 14-12-2014 ಬೆಳಿಗ್ಗೆ 09-00 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು, ಮುನ್ನೂರು ಗ್ರಾಮದ, ಕುತ್ತಾರ್ಪದವು, ಶ್ರೀ. ವಿಷ್ಣುಮೂರ್ತಿ ನಗರ ಎಂಬಲ್ಲಿರುವ ಪಿರ್ಯಾದುದಾರರಾದ ಶ್ರೀ ದಿಪುಲ್ ಕುಮಾರ್ ರವರ ಬಾಬ್ತು ಮನೆ ನಂಬ್ರ 3-99/4 ನೇಯದರ ಮುಂದಿನ ಮತ್ತು ಹಿಂದಿನ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ, ಮನೆಯ ಒಳಗಡೆಯ ಬೆಡ್ರೂಮ್ನಲ್ಲಿದ್ದ ಕಬ್ಬಿಣದ ಕಪಾಟನ್ನು ತೆರೆದು ಅದಲ್ಲಿದ್ದ (1) ಸುಮಾರು 3 ಪವನ್ತೂಕದ ಬಂಗಾರದ ಎರಡು ಬಳೆಗಳು, (2) ನಗದು ಹಣ 14,500/- ರೂಪಾಯಿ, (3) ಸೋನಿ ಕಂಪೆನಿಯ ಲ್ಯಾಪ್ಟಾಪ್ನ್ನು ಕಳವು ಮಾಡಿರುತ್ತಾರೆ. ಕಳವಾದ ಎಲ್ಲಾ ಸ್ವತ್ತುಗಳ ಅಂದಾಜು ಮೌಲ್ಯ ರೂಪಾಯಿ ಒಂದು ಲಕ್ಷ ಆಗಬಹುದು.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 14.12.2014 ರಂದು ಮದ್ಯಾನ್ಹ ಸುಮಾರು 1.30 ಗಂಟೆಗೆ ವಾಮಂಜೂರು ಸೈಂಟ್ ಜೋಸೆಫ್  ಕಾಲೇಜಿನ ಹತ್ತಿರ ಇರುವ ಬಸ್ಸ ಸ್ಟಾಪ್ ಬಳಿ ಪಿರ್ಯಾದಿದಾರರಾದ ಶ್ರೀ ಮಂಜುನಾಥ್ ಬಿ. ಸಿಂದಲ್ ರವರು,  ಅವರ ಗೆಳೆಯರಾದ ಹ್ಯಾರಿಸ್ ಮತ್ತು ಚೀರಂಜೀವಿ ಎಂಬವರೊಂದಿಗೆ ನಡೆದುಕೊಂಡು ಹೋಗುತ್ತಿರುವ ಸಮಯ ವಾಮಂಜೂರು ಸೈಂಟ್ ಜೋಸೆಫ್ ಕಾಲೇಜಿನ 4 ನೇ ವರ್ಷದ ಇಂಜಿನಿಯರ ವಿದ್ಯಾರ್ಥಿಗಳಾದ ದಿಕ್ಷೀತ, ಪ್ರದೀಪ ಮತ್ತು ಇತರ ಕೆಲವು ವಿದ್ಯಾರ್ಥಿಗಳು, ಫಿರ್ಯಾದಿದಾರರು, ಹ್ಯಾರಿಸ್ ಮತ್ತು ಚೀರಂಜೀವಿಯವರನ್ನು  ತಡೆದು ನಿಲ್ಲಿಸಿ ಫಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ನಮ್ಮ ಎದುರಿಗೆ ಬಹಳ ಎದೆ ಎತ್ತಿ ನಡೆಯುತ್ತಿಯಾ, ಶೋ ಮಾಡುತ್ತೀಯಾ ಎಂದು ಹೇಳಿ ಆರೋಪಿತರ ಪೈಕಿ ದಿಕ್ಷೀತ ಮತ್ತು ಪ್ರದೀಪನು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದಿದ್ದು ಆಗ ಫಿರ್ಯಾದಿದಾರರ ಜೊತೆಯಲ್ಲಿದ್ದ ಹ್ಯಾರಿಸ್ ಮತ್ತು ಚೀರಂಜಿವಿಯವರು ಪಿರ್ಯಾದಿದಾರರನ್ನು ಆರೋಪಿಗಳ ಕೈಯಿಂದ ಬಿಡಿಸಿಕೊಂಡು  ಹಾಸ್ಟೆಲ್‌‌ ನಲ್ಲಿರುವ ಅವರ ಬಾಬ್ತು ರೂಂ ನಂಬ್ರ: 417 ಕ್ಕೆ ಕರೆದುಕೊಂಡು ಹೊಗಿದ್ದು, ಆರೋಪಿತರುಗಳಾದ ದಿಕ್ಷೀತ, ಪ್ರದೀಪ ಮತ್ತು ಇತರರು ಫಿರ್ಯಾದುದಾರರ ರೂಮಿನ ಒಳಗಡೆಯೂ  ಹೋಗಿ ಫಿರ್ಯಾದಿದಾರರಿಗೆ ಕೈಯಿಂದ ಹೊಡೆದಿರುತ್ತಾರೆ.

No comments:

Post a Comment