Tuesday, December 30, 2014

Daily Crime Report : 30-12-2014

ದಿನಾಂಕ 30.12.201412:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-10-2014 ರಂದು ಬೆಳಿಗ್ಗೆ 08-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕಾಲಿನ್ ಡಿ'ಸೋಜಾ ರವರು ತನ್ನ ಬಾಬ್ತು ಕೆ - 03  ಡಿ- 5713 ನೇಯದನ್ನು ಕೋಡಿಕಲ್ ಕ್ರಾಸ್ ನಿಂದ ಕೆ ಪಿ ಟಿ ಕಡೆಗೆ ರಾ.ಹೆ 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಕೆ 21 ಎಮ್ 5546 ನೇ ಹುಂಡೈ 10 ಕಾರನ್ನು ಅದರ ಚಾಲಕ ಸ್ಕೂಟರನ ಮುಂದಿನಿಂದ ರಸ್ತೆಯ ಎಡಬದಿಗೆ ಒಮ್ಮೆಲೆ ಚಲಾಯಿಸಿಕೊಂಡು ಯಾವುದೇ ಸೂಚನೆ ನೀಡದೆ ನಿಲ್ಲಿಸಿದ ಪರಿಣಾಮ ಕಾರಿನ ಹಿಂದಿನಿಂದ ಬರುತ್ತಿದ್ದ ಫಿರ್ಯಾದಿದಾರ ಸ್ಕೂಟರ ಸವಾರರು ಹತೋಟಿಗೆ ತರಲು ಪ್ರಯತ್ನಿಸಿದರೂ ಕಾರಿನ ಹಿಂಬದಿ ಭಾಡಿಗೆ ಡಿಕ್ಕಿ ಹೊಡೆದು ಸ್ಕೂಟರ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್ ಸವಾರರಾದ ಪಿರ್ಯಾದಿದಾರರ ಮುಖಕ್ಕೆ ಗಾಯವಾಗಿರುತ್ತದೆ. ಗಾಯಾಳುವನ್ನು ಕಾರು ಚಾಲಕ ಚಿಕಿತ್ಸೆಗಾಗಿ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುದರ್ಶನ್ ಬಿ. ರವರು ಅವರ ತಂದೆ ಬಾಬ್ತು ಕೆ.. 19.ಝಡ್ 4873 ನೇ ಮಾರುತಿ ವ್ಯಾಗನ್ ಆರ್ ಕಾರಿನಲ್ಲಿ ಹರ್ಷ ಸರ್ಪಂಗಳ ಎಂಬವರೊಂದಿಗೆ ದಿನ ದಿನಾಂಕ 29-12-2014 ರಂದು ಅಪರಾಹ್ನ ಸಮಯ ಸುರತ್ಕಲ್ ನಿಂದ ಮಂಗಳೂರಿಗೆ ರಾ.ಹೆ 66 ರಲ್ಲಿ ಹೋಗುತ್ತಾ ರಾ.ಹೆ ಯಲ್ಲಿ ವಾಹನಗಳ ದಟ್ಟನೆಯಿಂದ ರಸ್ತೆ ಬ್ಲಾಕ್ ಆಗಿದ್ದುದರಿಂದ ಕುಡಿಯಲು ನೀರು ತರುವರೇ ಹರ್ಷ ಎಂಬವರು ವಾಹನದಿಂದಿಳಿದು ಬಲಗಡೆ ಇದ್ದ ಅಂಗಡಿಯೊಂದಕ್ಕೆ ಮಂಗಳೂರು-ಉಡುಪಿ ರಾ.ಹೆ 66ನ್ನು ದಾಟಿ ಹೊಗುತ್ತಿದ್ದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಆರೋಪಿ ಕೆ.. 20.ಸಿ 7011ನೇ ಬಸ್ಸು ಚಾಲಕ ಬಾಬು ಎಂಬಾತನು ಅವರ ಬಾಬ್ತು ಸದ್ರಿ ಬಸ್ಸನ್ನು ಮಂಗಳೂರು- ಉಡುಪಿ ರಾ.ಹೆ 66 ರಲ್ಲಿ ವಿರುದ್ದವಾಗಿ ಮಾನವ ಜೀವಕ್ಕೆ ಅಪಾಯಕಾರಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪರಾಹ್ನ 1-15 ಗಂಟೆಗೆ ಡಿಕ್ಕಿ ಮಾಡಿದ ಪರಿಣಾಮ  ಹರ್ಷ ಎಂಬವರು ರಸ್ತೆಗೆ ಬಿದ್ದು ಗಂಬೀರ ಗಾಯವಾಗಿ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳಗರೋಗಿಯಾಗಿ ದಾಖಲಾಗಿರುವುದಾಗಿದೆ.

 

3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-12-2014 ರಂದು ಸಂಜೆ 16-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಭರತ್ ಆಚಾರ್ಯ ರವರು ತನ್ನ ಬಾಬ್ತು ಕೆ - 20 ಸಿ- 3890 ನೇ ಕಾರಿನಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ತನ್ನ ಪತ್ನಿ ನಾಗರತ್ನ ಮತ್ತು ಅತ್ತೆ ಶ್ರೀದೇವಿ ಯವರೊಂದಿಗೆ ತಾನು ಚಲಾಯಿಸಿಕೊಂಡು ಎನ್ ಟಿ ಕೆ ಬಳಿಕ ರಾ.ಹೆ 66 ರಲ್ಲಿ ಪಡ್ರೆ ದೂಮಾವತಿ ದೇವಸ್ಥಾನದ ದ್ವಾರದ ಎದುರಿನಲ್ಲಿ ಹೋಗುತ್ತಿದ್ದಾಗ ಕಾರಿನ ಮುಂದುಗಡೆಯಿಂದ ಕೆ 19 ಸಿ 8331 ನೇ ಟಿಪ್ಪರ ಲಾರಿಯನ್ನು ಅದರ ಚಾಲಕ ಸದಾಶಿವ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಯಾವುದೇ ಸೂಚನೆ ನೀಡದೆ ಬಲಕ್ಕೆ ತಿರುಗಿಸಿದಾಗ ಹಿಂದಿನಿಂದ ಬರುತ್ತಿದ್ದ ಫಿರ್ಯಾದಿದಾರರು ತನ್ನ ಕಾರನ್ನು ನಿಯಂತ್ರಣ ಸಿಗದೆ ಟಿಪ್ಪರಗೆ ಡಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿದ್ದ ಫಿರ್ಯಾದಿದಾರರ ಅತ್ತೆಗೆ ತಲೆಗೆ ಗಾಯವಾಗಿದ್ದು, ಫಿರ್ಯಾದಿದಾರರಿಗೆ ಹಣೆಗೆ ಮತ್ತು ಪತ್ನಿಗೆ ಗಲ್ಲಕ್ಕೆ ಗಾಯವಾಗಿ ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.12.2014 ರಂದು ಪಿರ್ಯಾದಿದಾರರಾದ ಕೆನ್ನೆತ್ ರವರು  ತನ್ನ  ಮೋಟಾರು ಸೈಕಲು ನಂಬ್ರ ಕೆಎ.20.ಆರ್. 786ನೇದನ್ನು  ಮಂಗಳೂರು ನಗರದ ಸಾರ್ವಜನಿಕ ಕಾಂಕ್ರೀಟು  ರಸ್ತೆಯಾದ ಲೇಡಿಹಿಲ್  ಕಡೆಯಿಂದ  - ಉರ್ವಾಸ್ಟೋರ್ ಕಡೆಗೆ ಹೋಗುತ್ತಾ  ಚಿಲಿಂಬಿ ಎಕ್ಸಸ್ ಬ್ಯಾಂಕ್ ಬಳಿ ತಲುಪಿದಾಗ  ಸಮಯ ಸಂಜೆ 18.30 ಗಂಟೆಗೆ  ಉರ್ವಾಸ್ಟೋರ್ಲೇಡಿಹಿಲ್ ರಸ್ತೆಯಿಂದ  ಕಾರು ನಂಬ್ರ ಕೆಎ.04.ಎಂಸಿ.9951ನೇದನ್ನು ಅದರ ಚಾಲಕ  ಅತೀವೇಗ ಮತ್ತು ಅಜಾಗರುಕತೆಯಿಂದ ಒಮ್ಮೆಲೇ ಲೇಡಿಹಿಲ್ಉರ್ವಾಸ್ಟೋರ್ ರಸ್ತೆಗೆ  ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಬಲ ಕೈ ಕೋಲುಕೈಗೆ, ಮೂಳೆ ಮುರಿತದ ಗಾಯವಾಗಿರುವುದಾಗಿದೆ.  ಅಪಘಾತದ ನಂತರ  ಆರೋಪಿ ಕಾರು ಚಾಲಕ  ಕಾರು ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುವುದಾಗಿದೆ ಗಾಯಾಳು ಪಿರ್ಯಾದಿದಾರರು ನಗರದ ಸಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುವುದಾಗಿದೆ.

 

5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.12.2014 ರಂದು ಫಿರ್ಯಾದಿದಾರರಾದ ಶ್ರೀ ಜಲಾಲ್ ರವರು ತನ್ನ ಮನೆಯಿಂದ ಮಂಗಳೂರಿಗೆ ತನ್ನ ಬಾಬ್ತು ಮೋಟಾರ್ಸೈಕಲ್ನಂಬ್ರ ಕೆಎ-19ಇಜೆ--1720 ನೇಯದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 10:15 ಗಂಟೆಗೆ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ, ದೇವಿನಗರ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಬಸ್ನಂಬ್ರ ಕೆಎ-19-8137 ನೇಯದನ್ನು ಓವರ್ಟೇಕ್ಮಾಡಿ ಮುಂದಕ್ಕೆ ಹೋಗುತ್ತಿದ್ದಾಗ ಅದರ ಚಾಲಕ ಜನಾರ್ದನ ಎಂಬಾತನು ಬಸ್ಸನ್ನು ನಿರ್ಲಕ್ಷತನದಿಂದ ಒಮ್ಮೇಲೇ ಬಲಗಡೆಗೆ ಚಲಾಯಿಸಿದ ಪರಿಣಾಮ ಬಸ್ಸಿನ ಬಾಡಿಯು ಮೋಟಾರ್ಸೈಕಲಿಗೆ ತಾಗಿ ಫಿರ್ಯಾದಿದಾರರು ಮೋಟಾರ್ಸೈಕಲ್ಸಮೇತ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ಹಣೆಗೆ ರಕ್ತಗಾಯ ಎಡಕೈ ತಟ್ಟಿಗೆ ತರಚಿದ ಗಾಯ ಮತ್ತು ಎದೆಗೆ ಮೈಕೈಗೆ ಗುದ್ದಿದ ನೋವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-12-2014 ರಂದು ಮಧ್ಯಾಹ್ನ 12-00 ಗಂಟೆಯಿಂದ ದಿನಾಂಕ: 28-12-2014 ರಾತ್ರಿ 21-30 ಗಂಟೆಯ ಮಧ್ಯೆ ಮಂಗಳೂರು ನಗರದ ಕದ್ರಿ ಶಿವಭಾಗ್  ರತ್ನ ಅಪಾರ್ಟಮೆಂಟಿನಲ್ಲಿರುವ ಪಿರ್ಯಾದಿದಾರರಾದ ಶ್ರೀ ಪಿ.ಕೆ. ಶೆಟ್ಟಿ ರವರ ಬಾಬ್ತು ಫ್ಲಾಟ್.ನಂಬ್ರ 205ನೇ ಫ್ಲಾಟ್ ಎದುರಿನ ಬಾಗಿಲಿಗೆ ಹಾಕಿದ್ದ ಬೀಗ ಹಾಗೂ ಕೊಂಡಿಯನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಮೂಲಕ ಒಳಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿರುವ ಕಪಾಟುಗಳನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಸದ್ರಿ ಕಪಾಟಿನಲ್ಲಿದ್ದ ಬಟ್ಟೆ ಬರೆಗಳನ್ನು ಎಳೆದು ಬೆಡ್ ಮೇಲೆ ಹಾಗೂ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು, ಅದರಲ್ಲಿರಿಸಿದ್ದ ಸುಮಾರು 1.5 ಗ್ರಾಂ ತೂಕದ ಚಿನ್ನದ ಮೂಗುತ್ತಿ-1 ಹಾಗೂ ನಗದು ಹಣ ರೂ. 1,500/- ಹೀಗೆ ಒಟ್ಟು ಅಂದಾಜು 5,500/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸೌಮ್ಯ ಲತಾ ರಾವ್ ರವರು ಜೂನ್ 2011 ರಿಂದ ಶ್ರೀನಿವಾಸ ಶಿಕ್ಷಕ-ಶಿಕ್ಷಣ ವಿದ್ಯಾಲಯ ಪಾಂಡೇಶ್ವರ ಮಂಗಳೂರು ಇಲ್ಲಿ ಇಂಗ್ಲಿಷ್ ಸಹ ಪ್ರಾದ್ಯಾಪಕರಾಗಿದ್ದು, ಇದೇ ಸಂಸ್ಥೆಯ ಪ್ರಾಂಶುಪಾಲರಾದ ಆರೋಪಿ ಶ್ರೀಮತಿ ಜಯಶ್ರೀ ಕೆ ರವರು ದಿನಾಂಕ 18-12-2014 ರಂದು ಬೆಳಿಗ್ಗೆ 11.30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರನ್ನು ಅವರ ಕೊಠಡಿಗೆ ಕರೆಯಿಸಿ ಇಲ್ಲ ಸಲ್ಲದ ಆರೋಪ ಹೊರೆಸಿ ನೀನು ಪರಿಶಿಷ್ಠ ಜಾತಿ ಆದಿದ್ರಾವಿಡ ಜಾತಿಗೆ ಸೇರಿದವಳು ನಿನಗೆ ವಿದ್ಯಾಲಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಅರಿವಿಲ್ಲ, ಅಲ್ಲದೇ ನಿನ್ನ ನೈತಿಕ ನಡತೆ ಸರಿಯಿಲ್ಲ, ನಿನ್ನಲ್ಲಿ ನೀತಿ ತತ್ವ ಇಲ್ಲವೇ ಇಲ್ಲ ಎಂಬುದಾಗಿ ಆರೋಪಿಸಿ ಪಿರ್ಯಾದಿದಾರರನ್ನು ಹೊರಗೆ ನಡೆಯುವಂತೆ ಕುಪಿತರಾಗಿ ಹೇಳಿದ್ದು ಅಲ್ಲದೇ ದಿನಾಂಕ 19-12-2014 ರಂದು ಪಿರ್ಯಾದಿದಾರರಿಗೆ 24.00 ಗಂಟೆಯೊಳಗಾಗಿ ಉತ್ತರ ನೀಡುವಂತೆ ಸೂಚನಾ ಪತ್ರವನ್ನು ನೀಡಿದ್ದು, ಪರಿಶಿಷ್ಠ ವಿದ್ಯಾವಂತ ಮಹಿಳೆಯಾದ ಪಿರ್ಯಾದಿದಾರರಿಗೆ ಆರೋಪಿತರು ಜಾತಿನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡಿ ದೌರ್ಜನ್ಯ ಎಸಗಿರುತ್ತಾರೆ.

No comments:

Post a Comment