Monday, December 29, 2014

Daily Crime Report : 29-12-2014

ದಿನಾಂಕ 29.12.201417:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.12.2014 ರಂದು  ಪಿರ್ಯಾದಿದಾರರಾದ ಶ್ರೀ ಜೈಸನ್ ಡಿ'ಸೋಜಾ ರವರು ಕಾರು ನಂಬ್ರ  ಎಂ ಹೆಚ್ 12 ಹೆಚ್ ವಿ. 201ನೇದನ್ನು ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಂತೂರು ಕಡೆಯಿಂದ  ಕೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ  ಕೋಡಿಕಲ್ ಕ್ರಾಸ್ ಬಳಿ ತಲುಪಿದ ಸಮಯ ಸಂಜೆ 6.00 ಗಂಟೆಗೆ  ಲಾರಿ ನಂಬ್ರ  ಎಪಿ.16.ಟಿಸಿ.4757 ನೇದನ್ನು ಅದರ ಚಾಲಕ ಬಸವರಾಜ್ ಎಂಬವರು ಪಿರ್ಯಾದಿದಾರರ ಕಾರಿನ ಹಿಂದುಗಡೆಯಿಂದ ಅಂದರೆ  ನಂತೂರು ಕಡೆಯಿಂದ ಕೂಳುರು ಕಡೆಗೆ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ರಭಸಕ್ಕೆ ಕಾರು  ರಸ್ತೆ ಮಧ್ಯದ ಡಿವೈಡರಿಗೆ ಡಿಕ್ಕಿ ಹೊಡೆದು  ಕಾರಿನ ಬಲ ಭಾಗ, ಎಡಭಾಗ, ಮುಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 28-12-2014 ರಂದು ಮಂಗಳೂರು ನಗರದ ಕದ್ರಿ  ಶಿವಭಾಗ್‌‌ ನೀರಿನ ಪಂಪ್ಹೌಸ್ಬಳಿ ಕೆಎ-20-ಡಿ-2944 ನಂಬ್ರದ ವಿನಯದುರ್ಗ ಎಂಬ ಹೆಸರಿನ ಖಾಸಗಿ ಬಸ್ಸನ್ನು ಅದರ ಚಾಲಕ ಆರೋಪಿಯು ನಂತೂರು ಕಡೆಯಿಂದ ಶಿವಭಾಗ್ಕಡೆಗೆ ಹಾದು ಬರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆಎ-19-ಕ್ಯೂ-2780 ನಂಬ್ರದ ಸ್ಕೂಟರ್ಮತ್ತು ಕೆಎ-19-ಹೆಚ್‌‌‌‌-8570 ನಂಬ್ರದ ಸ್ಕೂಟರ್ಗೆ ಡಿಕ್ಕಿ ಪಡಿಸಿ ಮುಂದಕ್ಕೆ ಚಲಿಸಿ ಕೆಎ-19-ಆರ್‌‌‌ 3894 ನಂಬ್ರದ ಬೈಕ್ಗೆ ಡಿಕ್ಕಿಯಾಗಿ ಬಳಿಕ ಎದುರಿನಿಂದ ಹೋಗುತ್ತಿದ್ದ ಒಂದು ಕಾರು ಮತ್ತು ಇನ್ನೊಂದು ಬೈಕ್ಗೆ ಡಿಕ್ಕಿಯಾಗಿ ಹಾಗೇ ಮುಂದಕ್ಕೆ ಚಲಿಸಿ ಪಿರ್ಯಾದಿದಾರರಾದ ಶ್ರೀ ಅಲನ್ ಪವನ್ ಡಿ'ಸೋಜಾ ರವರು ಚಲಾಯಿಸುತ್ತಿದ್ದ ಕೆಎ-19-ಎಂಇ-5779 ನಂಬ್ರದ ಇನ್ನೋವಾ ಕಾರಿಗೆ ಡಿಕ್ಕಿಯಾಗಿ ಮುಂದಕ್ಕೆ ಚಲಿಸಿ ಕೆಎ-19-ಎಂಸಿ-2590 ನಂಬ್ರದ ರಿಟ್ಸ್ಕಾರಿಗೆ ಡಿಕ್ಕಿಯಾಗಿದ್ದು, ಬಸ್ಸು ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರ ಇನ್ನೋವಾ ಕಾರು ಬಲಕ್ಕೆ ತಿರುಗಿ ರಸ್ತೆಯಲ್ಲಿ ಹೋಗುತ್ತಿದ್ದ ಕೆಎ-51-ಎಂ-5552 ನಂಬ್ರದ ಕಾರಿಗೆ ಡಿಕ್ಕಿಯಾಗಿದ್ದಾಗಿದೆ. ಅಪಘಾತದಿಂದ ಮೇಲ್ಕಂಡ ಎಲ್ಲಾ ವಾಹನಗಳು ಜಖಂ ಆಗಿರುವುದಲ್ಲದೇ ಕೆಎ-19-ಕ್ಯೂ-2780 ನಂಬ್ರದ ಸ್ಕೂಟರ್ಸವಾರ ಎರಿಕ್ಪತ್ರಾವೋ ಮತ್ತು ಸಹಸವಾರೆ ಅಶ್ವಿತಾ ಅಯೋರಾ ಪತ್ರಾವೋ ಎಂಬವರು ಮತ್ತು ಕೆಎ-19-ಆರ್‌‌‌-3894 ನಂಬ್ರದ ಯಮಹಾ ಬೈಕ್‌‌ ಸವಾರ ರಾಬರ್ಟ್ರೋಡ್ರಿಗಸ್ಮತ್ತು ಸಹಸವಾರ ಎಡ್ವಿನ್ಮಂತೆರೋ ಎಂಬವರಿಗೆ ಗಾಯಗೊಂಡು ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.12.2014 ರಂದು ಸಂಜೆ ಸುಮಾರು 5.00 ಗಂಟೆ ಸಮಯಕ್ಕೆ ಕೊಯಿಕುಡೆ ಗ್ರಾಮದ ಹರಿಪಾದೆ ಎಂಬಲ್ಲಿರುವ ಭಜನಾ ಮಂದಿರಾದೊಳಗೆ ಆರೋಪಿ ಜಯಚಂದ್ರ ಎಂಬವರು ಅಕ್ರಮ ಪ್ರವೇಶ ಮಾಡಿ ಕುಡಿದು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಪಿರ್ಯಾಧಿದಾರರಾದ ಶ್ರೀ ಆರ್ಮುಗಮ್ ರವರಿಗೆ ಹಾಗೂ ಪ್ರಸಾದ್ ಎಂಬವರಿಗೆ ಅವ್ಯಾಚ್ಚ ಶಬ್ದಗಳಿಂದ  ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ.

 

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28-12-2014ರಂದು ಬೆಳಿಗ್ಗೆ 08-30 ಗಂಟೆಯಿಂದ ಮಧ್ಯಾಹ್ನ 14-30 ಗಂಟೆಯ ಮಧ್ಯೆ ಮಂಗಳೂರು ನಗರದ ಜೈಲ್ ರೋಡ್ ನಲ್ಲಿರುವ ಪವನ್ ಅಪಾರ್ಟಮೆಂಟಿನ 6 ನೇ ಅಂತಸ್ತಿನಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಶಾಲಿನಿ ಎಸ್. ಹೆಗ್ಡೆ ರವರ ವಾಸದ ಫ್ಲಾಟ್.ನಂ. 604ನೇ ಫ್ಲಾಟ್ ಬಾಗಿಲಿಗೆ ಅಳವಡಿಸಿದ ಬೀಗವನ್ನು ಹಾಗೂ ಇನ್ನರ್ ಲಾಕನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಮೂಲಕ ಒಳಪ್ರವೇಶಿಸಿ ಮನೆಯೊಳಗೆ ಬೆಡ್ ರೂಮಿನಲ್ಲಿರುವ ಕಬ್ಬಿಣದ ಕಪಾಟನ್ನು ಕೂಡಾ ಮೀಟಿ ತೆರೆದು ಸದ್ರಿ ಕಪಾಟಿನಲ್ಲಿರಿಸಿದ್ದ ವಿವಿಧ ನಮೂನೆಯ ಸುಮಾರು ಒಟ್ಟು 40 ಗ್ರಾಂ ತೂಕದ ಚಿನ್ನಾಭರಣ ಹಾಗೂ ಬೆಳ್ಳಿಯ ಲೋಟ-1 ಮತ್ತು ನಗದು ಹಣ ರೂ. 7,500/-, ಹೀಗೆ ಒಟ್ಟು ಅಂದಾಜು ಮೌಲ್ಯ ರೂ.1,05,500/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-12-2014ರಂದು ಸಂಜೆ ಸಮಯ ಸುಮಾರು 16-00 ಗಂಟೆಗೆ ಮಂಗಳೂರು ನಗರದ ಜೈಲ್ ರೋಡ್ ನಲ್ಲಿರುವ ಪವನ್ ಅಪಾರ್ಟಮೆಂಟಿನ 3ನೇ ಅಂತಸ್ತಿನಲ್ಲಿರುವ ಪಿರ್ಯಾದಿದಾರರಾದ ಡಾ. ದಿಕ್ಷೀತ್ ಎನ್.ಜಿ. ರವರು ತನ್ನ ಬಾಬ್ತು ಫ್ಲಾಟ್ ನಂಬ್ರ: 304ನೇ ಫ್ಲಾಟ್ ಎದುರಿನ ಬಾಗಿಲಿಗೆ ಬೀಗವನ್ನು ಹಾಕಿ ಸಂಸಾರ ಸಮೇತ ತನ್ನ ಊರಾದ ಕಾಸರಗೋಡಿನ ಬದಿಯಡ್ಕ ಎಂಬಲ್ಲಿಗೆ ತೆರಳಿದ್ದು ವಾಪಾಸು ದಿನಾಂಕ: 28-12-2014ರಂದು ಸಂಜೆ ಸಮಯ ಸುಮಾರು 18-30 ಗಂಟೆಗೆ ವಾಪಾಸು ಬಂದು ಮನೆಯ ಎದುರಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ತೆರೆಯಲೆಂದು ನೋಡಿದಾಗ ಮನೆಯ ಬಾಗಿಲು ತೆರದುಕೊಂಡಿದ್ದು, ಯಾರೋ ಕಳ್ಳರು ಯಾವುದೋ ಅಯುಧವನ್ನು ಉಪಯೋಗಿಸಿ ಬಾಗಿಲಿನ ಚಿಲಕದ ಕೊಂಡಿ ಮುರಿದು ತುಂಡರಿಸಿರುವುದು ಕಂಡು ಬಂದಿದ್ದು,  ಮೂಲಕ ಒಳಪ್ರವೇಶಿಸಿ ನೋಡಲಾಗಿ ಒಳಪ್ರವೇಶಿಸಿದ ಕಳ್ಳರು ಬೆಡ್ ರೂಮಿನಲ್ಲಿರುವ ಕಪಾಟನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಅದರಲ್ಲಿರಿಸಿದ್ದ ಸುಮಾರು 135 ಗ್ರಾಂ ತೂಕದ ವಿವಿಧ ನಮೂನೆಯ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿ ಸಾಮಾಗ್ರಿಗಳನ್ನು, ಹೀಗೆ ಅಂದಾಜು ಮೌಲ್ಯ ರೂ.3,44,000/- ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಫೆಲಿಕ್ಷ ಡಿ'ಸೋಜಾ ರವರು ಬಸ್ನಂಬ್ರ KA-19-AA-286ನೇ ಹೆಚ್ಎನ್ಟ್ರಾವೆಲ್ಸ್ಬಸ್ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 28-12-2014 ರಂದು ಮದ್ಯಾಹ್ನ 02-49 ಕ್ಕೆ ಮಂಗಳೂರಿನ ಸ್ಟೇಟ್ಬ್ಯಾಂಕ್ನಿಂದ ಬಿಟ್ಟಿದ್ದು ಸಾಯಂಕಾಲ ಸುಮಾರು 03-15 ಗಂಟೆಗೆ ಬಸ್ನ್ನು ತೊಕ್ಕೊಟ್ಟು ಜಂಕ್ಷನ್ಕಡೆಗೆ ಚಲಾಯಿಸಿಕೊಂಡು ಉಳ್ಳಾಲಕ್ಕೆ ಬರುತ್ತಿದ್ದಂತೆ ಪಿರ್ಯಾದುದಾರರ ಎದುರುಗಡೆಯಿಂದ ವಿರುದ್ದ ದಿಕ್ಕಿನಲ್ಲಿ ಕಾರೊಂದನ್ನು ಅದರ ಚಾಲಕನು ಅತೀ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಪಿರ್ಯಾದುದಾರರು ಬಸ್ಸನ್ನು ನಿಲ್ಲಿಸಿದ ಸಂದರ್ಭ ಎದುರಿನಿಂದ ಬಂದ ಕಾರು ಚಾಲಕನು ಪಿರ್ಯಾದುದಾರರ ಬಸ್ಸಿಗೆ ಒಮ್ಮೆಲೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಬಂಪರ್ಬಾಡಿ ಬಾನೆಟ್ಜಖಂಗೊಂಡಿದ್ದು ಬಸ್ಸಿಗೆ ಡಿಕ್ಕಿ ಹೊಡೆದ ಕಾರಿನ ನಂಬ್ರ KA-21-MB-213 ಆಗಿದ್ದು ಅದರ ಎದುರಿನ ಗಾಜು ಒಡೆದು ಕಾರಿನ ಚಾಲಕರಿಗೆ ತಲೆಗೆ ರಕ್ತಗಾಯವಾಗಿರುತ್ತದೆ ಗಾಯಗೊಂಡ ಆರೋಪಿ ಕಾರು ಚಾಲಕ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28/12/2014 ರಂದು ಮಂಗಳೂರು ಗ್ರಾಮಾಂತರ  ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಶ್ರೀ ಎಂ.ಡಿ. ಮಡ್ಡಿ ರವರು  ಠಾಣಾ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಜಪ್ಪಿನಮೊಗರು ಗ್ರಾಮದ ದೊಂಪದಬಲಿ ಗದ್ದೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಹುಂಜ ಕೋಳಿಗಳ ಕಾಲುಗಳಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಸದ್ರಿ ಕೋಳಿಗಳನ್ನು ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಪರಸ್ಪರ ಕಾದಾಡಲು ಬಿಟ್ಟು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಎಂಬ ನಶೀಬಿನ ಜುಗಾರಿ ಆಟವನ್ನು ಆಡುತ್ತಿರುವ ಸ್ಥಳಕ್ಕೆ ಸಂಜೆ ಸುಮಾರು 04.00 ಗಂಟೆ ಸಮಯಕ್ಕೆ ಧಾಳಿ ನಡೆಸಲಾಗಿ ಸಂದರ್ಭದಲ್ಲಿ ಸುಮಾರು 100-150 ಜನರು ಸದ್ರಿ ಗದ್ದೆಯಲ್ಲಿ ಜಮಾಯಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದ ಕೂಡಲೇ ಓಡಲು ಪ್ರಾರಂಭಿಸಿದ್ದು, ಅವರನ್ನು ಹಿಂಬಾಲಿಸಿ ಹಿಡಿಯಲು ಸಿಬ್ಬಂದಿಗಳು ಪ್ರಯತ್ನಿಸಿದ್ದು, ಆದರೆ ಅವರು ತಮ್ಮ ಕೈಯಲ್ಲಿದ್ದ ಕೋಳಿಗಳ ಸಮೇತ ಓಡಿ ತಪ್ಪಿಸಿಕೊಂಡಿರುತ್ತಾರೆ. ಓಡಿ ತಪ್ಪಿಸಿಕೊಳ್ಳುವ ಸಮಯ ಕೆಲವರು ಬಿದ್ದು ಗಾಯಗೊಂಡಿರುವ ಸಾಧ್ಯತೆ ಇರುತ್ತದೆ. ಕೋಳಿಗಳನ್ನು ಕಾದಾಡಲು ಬಿಟ್ಟ ಸ್ಥಳದಲ್ಲಿ 1 ರಿಂದ 12 ಜನ ಆರೋಪಿಗಳು ಕೋಳಿ ಅಂಕದ ಆಟಕ್ಕಾಗಿ ಪಣವಾಗಿ ಕಟ್ಟಲು ತಮ್ಮ ಕೈಯಲ್ಲಿ ಇರಿಸಿಕೊಂಡಿದ್ದ ಮತ್ತು ಅವರ ಅಂಗ ಜಪ್ತಿಯ ಸಮಯ ದೊರೆತ ಒಟ್ಟು ನಗದು ಹಣ ರೂ.2,000/-  ಹಾಗೂ ಸ್ಥಳದಲ್ಲಿ ಕೋಳಿ ಅಂಕಕ್ಕಾಗಿ ಕಟ್ಟಿ ಹಾಕಿದ್ದ  08 ಕೋಳಿಗಳನ್ನು  ಮತ್ತು ಕಾಲುಗಳಿಗೆ ಬಾಳುಗಳನ್ನು ಕಟ್ಟಿ ಕಾದಾಡಲು ಬಿಟ್ಟ 2 ಕೋಳಿಗಳನ್ನು ಕೂಡಾ ಪಂಚರ ಸಮಕ್ಷಮದಲ್ಲಿ ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.

No comments:

Post a Comment