Friday, December 26, 2014

Daily Crime Report : 25-12-2014

ದಿನಾಂಕ 25.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-12-2014 ರಂದು ಸಂಜೆ 06-40 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿನೋದ್ ರವರು ತನ್ನ ಜೊತೆಯಲ್ಲಿದ್ದ ಕುಂಞ ಕಣ್ಣಣ್ ರವರೊಂದಿಗೆ ಬೈಕಂಪಾಡಿ ರಾ.ಹೆ 66 ರನ್ನು ದಾಟುತ್ತಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ಕೆ - 19 ಸಿ- 3204 ನೇ ನಂಬ್ರದ ಬಸ್ ನ್ನು ಅದರ ಚಾಲಕ ಕಿರಣ ಕುಮಾರ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕುಂಞ ಕಣ್ಣಣ್ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಎಡಗೈಗೆ ಗಂಭೀರ ರೀತಿಯಲ್ಲಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಮಂಗಳೂರು ಕೆ ಎಮ್ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-12-2014 ರಂದು ಬೆಳಿಗ್ಗೆ 10-50 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗಣೇಶ್ ಭಂಡಾರಿ ರವರು ತನ್ನ ಬಾಬ್ತು ಕೆ - 19 ಹೆಚ್- 7734 ನೇಯದರಲ್ಲಿ ಮನೆಯಿಂದ ಹೊರಟು ಕುಳಾಯಿ ತಲುಪಿದಾಗ ತನ್ನ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆ - 19 ಡಿ- 2538 ನೇ ಸಿಟಿ ಬಸ್ 15 ನೇ ನಂಬ್ರದನ್ನು ಅದರ ಚಾಲಕ ಸಂತೋಷ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಹಣೆ, ಮುಖಕ್ಕೆ, ತುಟಿಗೆ ಮತ್ತು ಕೈಕಾಲುಗಳಿಗೆ ಗಂಭೀರ ರೀತಿಯಲ್ಲಿ ಗಾಯವಾಗಿ ಹಲ್ಲುಗಳು ಮುರಿದಿರುತ್ತವೆ. ಚಿಕಿತ್ಸೆಗಾಗಿ ಮಂಗಳೂರು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 23.12.2014 ರಂದು  ಪಿರ್ಯಾದಿದಾರರಾದ ಶ್ರೀಮತಿ ಜಿ.ಇ. ಪಾರ್ವತಿ ರವರು ಸಂಜೆ ಸಾಮಾನು ತರಲೆಂದು ಅಂಗಡಿಗೆ ಮನೆಯಿಂದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ಸಮಯ ಸಂಜೆ 6:45 ಗಂಟೆಗೆ ಅಶೋಕನಗರ-ಶೇಡಿಗುರಿ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆ, ಅಶೋಕ ನಗರದಿಂದ ಶೇಡಿಗುರಿ ಕಡೆಗೆ ಸ್ಕೂಟರ್ನಂಬ್ರ ಕೆ.-19-.ಕೆ-2936 ನೇದನ್ನು ಅದರ ಸವಾರ ಅತೀವೇಗ  ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ಪಿರ್ಯಾದಿದಾರರಿಗೆ  ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು, ಬಲ ಕಣ್ಣಿಗೆ, ಬಲಕಣ್ಣಿನ ಬಳಿ ಹಣೆಗೆ, ಮುಖಕ್ಕೆ, ಬಲಕೈಗೆ ಗಾಯ ಉಂಟಾದವರನ್ನು, ಒಂದು ಆಟೋ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ  ಉಳ್ಳಾಲ ನರ್ಸಿಂಗ್ಹೋಂಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-12-2014 ರಂದು  ಪಿರ್ಯಾದಿದಾರರಾದ ಶ್ರೀ ಸುರೇಶ್ ರವರು ಅಗತ್ಯ ಕೆಲಸದ ನಿಮಿತ್ತ ಕಾರ್ಕಳಕ್ಕೆ ಹೋಗಿ ವಾಪಾಸ್ಸು ಮೂಡಬಿದ್ರೆಗೆ ಬರುವರೇ ತನ್ನ ಬಾಬ್ತು ಕೆಎ-19-ಜೆಡ್-9858 ನೇ ನಂಬ್ರದ ಹೋಂಡಾ ಸಿಟಿ ಕಾರನ್ನು ಚಲಾಯಿಸುತ್ತಾ  ಸುಮಾರು 11.45 ಗಂಟೆಗೆ ಬೆಳುವಾಯಿ ಚರ್ಚ್ತಲುಪುವಾಗ ತನ್ನ ಕಾರಿನ ಮುಂದುಗಡೆ ಹೋಗುತ್ತಿದ್ದ ಬಸ್ ನಂಬ್ರ ಕೆಎ-21-6822 ನಂಬ್ರದ ಬಸ್ಸಿನ ಚಾಲಕನು ಪ್ರಯಾಣಿಕರನ್ನು ಇಳಿಸುವರೇ ಬಸ್ಸನ್ನು ನಿಲ್ಲಿಸಿದಾಗ ಅದರ ಹಿಂದುಗಡೆ ಇದ್ದ ಪಿರ್ಯಾದಿ ತನ್ನ ಕಾರನ್ನು ನಿಲ್ಲಿಸಿದಾಗ ಅದರ ಹಿಂದುಗಡೆಯಿಂದ ಅಂದರೆ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಚಲಾಯಿಸುತ್ತಾ ಕೆಎ-46-2299 ನೇ ಟೆಂಪೋ ಚಾಲಕನು ಅತೀ ವೇಗ ಹಾಗೂ ಅಜಾಗರೂಕತಯಿಂದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದು, ಆರೋಪಿ ಟೆಂಪೋ ಚಾಲಕನ ಹೆಸರು ಮಹಮ್ಮದ್ ಗೌಸ್ ಪಾಷಾ ಆಗಿರುತ್ತದೆ.

 

5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-12-2014 ರಂದು ಬೆಳಿಗ್ಗೆ 08-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ರವಿ ಉಳ್ಳಾಗಡ್ಡಿ ರವರು ಎಂ.ಆರ್.ಪಿ.ಎಲ್ ಒಳಗಡೆ ಕೋಕ್ ಯಾರ್ಡಿನಲ್ಲಿ  TN 47 AF 1446 ನೇ ಲಾರಿಗೆ ಕೋಕ್ ಲೋಡ್ ಮಾಡುವರೇ ಸದ್ರಿ ಲಾರಿಯ ಬಳಿ ನಿಂತು ಕೊಂಡಿರುವ ಸಮಯ ಲಾರಿಯಿಂದ ಡೀಸಲ್ ಸೋರಿಕೆಯಾಗುತ್ತಿರುವುದರಿಂದ ಲಾರಿ ಚಾಲಕರ ಸೂಚನೆಯಂತೆ ಇಂಜಿನ್ ಪರಿಶೀಲಿಸುತ್ತಿರುವಾಗ ಪಿರ್ಯಾದಿ ಇಂಜಿನ್ ಪರಿಶೀಲಿಸುತ್ತಿರುವುದಾಗಿ  ಅರಿತರೂ  ಲಾರಿ ಚಾಲಕರು ನಿರ್ಲಕ್ಷತನದಿಂದ ಇಂಜಿನ್ ಚಾಲನೆ ಮಾಡಿದ ಪರಿಣಾಮ ಪಿರ್ಯಾದಿ ಎಡ ಕೈ ಇಂಜಿನಿನ ಫ್ಯಾನಿಗೆ ಸಿಲುಕಿ ಎಡ ಕೈಯ ಮದ್ಯದ ಮೂರು ಬೆರಳುಗಳಿಗೆ ಗಾಯ ಉಂಟಾಗಿ ಮದ್ಯದ ಬೆರಳು ತುಂಡಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ಘಟನೆಗೆ TN 47 AF 1446 ಲಾರಿ ಮಾಲಿಕರ ಪ್ರೇರಣೆಯಿಂದ ಲಾರಿ ಚಾಲಕರ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-12-2014 ರಿಂದ ಮೊದಲು ಕೆಲವು ದಿನಗಳಲ್ಲಿ ಮೊಬೈಲ್ ದೂರವಾಣಿಯಿಂದ ಅಶ್ರಫ್ ಎಂಬವರು ಫಿರ್ಯಾದುದಾರರಾದ ಶ್ರೀ ಕೆ. ಮಹಮ್ಮದ್ ಅಲ್ತಾಪ್ ಎಂಬವರ ದೂರವಾಣಿಗೆ ಹಾಗೂ  ಅವರ ಮನೆಯ ದೂರವಾಣಿ ನಂಬ್ರಗಳಿಗೆ ಬೆದರಿಕೆ ಕರೆ ಮಾಡಿ ತನಗೆ ಆಗಬೇಕಾದ ದೊಡ್ಡ ಮೊತ್ತದ ಹಣವನ್ನು ಕೂಡಲೇ ನೀಡುವಂತೆ ಪದೇ ಪದೇ ಕರೆ ಮಾಡಿ ಫಿರ್ಯಾದುದಾರರಿಗೆ ಹಾಗೂ ಅವರ ಮನೆಯ ಸದಸ್ಯರುಗಳಿಗೆ ಬೆದರಿಕೆ ಒಡ್ಡಿ, ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಕಿರುಕುಳ ನೀಡಿರುತ್ತಾರೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-12-2014 ರಂದು ಪಿರ್ಯಾದುದಾರರಾದ ಡಾ. ಮುಸ್ತಾಫಾ ರವರು ಕೆಲಸ ಮುಗಿಸಿ ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ತನ್ನ ಬಾಬ್ತು KL 60 E 6525 ನೇ ನಂಬ್ರದ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ 15-15 ಗಂಟೆ ಸಮಯಕ್ಕೆ ಕಾರನ್ನು ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ, ಕಲ್ಲಾಪು ಎಂಬಲ್ಲಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ, ಪಿರ್ಯಾದುದಾರರು ಡ್ಯಾಸ್ಬೋರ್ಡ್ನಲ್ಲಿದ್ದ ಕನ್ನಡಕವನ್ನು ತೆಗೆದುಕೊಳ್ಳುವ ಸಮಯ, KA 19 EB 9313 ನೇ ನಂಬ್ರದ ಬೈಕ್ನ್ನು ಅದರ ಸವಾರ ತೊಕ್ಕೊಟ್ಟು ಕಡೆಯಿಂದ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದನು. ಕಾರಿನ ಹಿಂಬದಿ ಜಖಂಗೊಂಡಿದ್ದು, ಬೈಕ್ಸವಾರನ ತಲೆಗೆ ಮತ್ತು ಮುಖಕ್ಕೆ ರಕ್ತಗಾಯವಾಗಿರುತ್ತದೆ. ಬೈಕ್ಸವಾರನ್ನು ಅಲ್ಲಿ ಸೇರಿದವರು ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಅಥೇನಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24.12.2014 ರಂದು ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ಇಸ್ಮಾಯಿಲ್ ರವರು ಮೊಹಮ್ಮದ್ ಅಲಿ ಎಂಬವರ ಗೆಳೆಯನ ಬಾಬ್ತು KA-19-EJ-7275ನೇ ನಂಬ್ರದ ಹೋಂಡಾ ಆಕ್ಟೀವಾ ಸ್ಕೂಟರಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು, ಮೊಹಮ್ಮದ್ ಆಲಿಯವರು ಸದ್ರಿ ಸ್ಕೂಟರನ್ನು ಜೋಕಟ್ಟೆ ಕಡೆಯಿಂದ ಮೂಡುಶೆಡ್ಡೆಯಲ್ಲಿರುವ ಮೊಹಮ್ಮದ್ ಸೈಫುಲ್ಲಾ ರವರ ಮನೆಗೆ ಕೂಳೂರು ಕಾವೂರು ಪಚ್ಚನಾಡಿ ರಸ್ತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 169 ರಲ್ಲಿ ಸವಾರಿಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ 12:00 ಗಂಟೆ ಸಮಯಕ್ಕೆ ವಾಮಂಜೂರು ಸ್ವಾದ್ ಹೋಟೆಲ್ ಮುಂಭಾಗ ತಲುಪುತ್ತಿದ್ದಂತೆ ಸದ್ರಿ ಸ್ಕೂಟರಿನ ಎದುರುಗಡೆಯಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ KA-19-D-9759ನೇ ನಂಬ್ರದ ಬಸ್ಸನ್ನು ಅದರ ಚಾಲಕ ಚಂದ್ರಶೇಖರ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ರಸ್ತೆಯ ಬಲಬದಿಗೆ ಯಾವುದೋ ಒಂದು ವಾಹನವನ್ನು ಓವರ್ಟೇಕ್ ಮಾಡಿಕೊಂಡು ಬಂದು ಸದ್ರಿ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹಸವಾರರಿಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ತಲೆಯ ಎಡಭಾಗಕ್ಕೆ ರಕ್ತಗಾಯ ಮತ್ತು ಬಲಕಾಲಿನ ಮೊಣಗಂಟಿನ ಬಳಿ ಗುದ್ದಿದ ಗಾಯ ಹಾಗೂ ಸವಾರ ಮೊಹಮ್ಮದ್ ಆಲಿಯವರ ತಲೆಗೆ ಮತ್ತು ಬಲಕಾಲಿನ ತೊಡೆಯ ಎಡಭಾಗಕ್ಕೆ ತೀವ್ರ ಸ್ವರೂಪದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ಸಿಟಿ ಆಸ್ಪತ್ರೆಯಲ್ಲಿ ದಾಖಲುಗೊಂಡಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24.12.2014 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಎ. ವಾಸುದೇವ ಭಟ್ ರವರು ತನ್ನ ಪತ್ನಿ ಮತ್ತು ತಂಗಿಯವರುಗಳಾದ ಸರಸ್ವತಿ. ಎನ್ ಭಟ್, ವಸಂತಿ ಎಸ್.ಎನ್.ಎಸ್ ರಾವ್ ರವರ ಜೊತೆ ತನ್ನ ತಮ್ಮ ವಿ. ಕೃಷ್ಣ ಮೂರ್ತಿ ಕಪಿತಾನಿಯಾ ವಾಸಿ ರವರ ಮನೆಗೆ ನಾಮಕರಣ ಕಾರ್ಯಕ್ರಮಕ್ಕೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ಮಧ್ಯಾಹ್ನ 01:00 ಗಂಟೆಯವರೆಗೆ ಮನೆಯ ಅಂಗಳದಲ್ಲಿ ತಮ್ಮ ಕಾರಿನ ಚಾಲಕ ಸೀತರಾಮ ಎಂಬಾತನು ಇದ್ದು, ಆತನು ಸಹ ಒಂದು ಗಂಟೆಯ ನಂತರ ನಾಮಕರಣ ಕಾರ್ಯಕ್ರಮಕ್ಕೆ ಬಂದಿದ್ದು ನಂತರ ಮಧ್ಯಾಹ್ನ 3:00 ಗಂಟೆ ಸಮಯಕ್ಕೆ ಪಿರ್ಯಾದುದಾರರು ವಾಪಾಸ್ಸು ಬಂದು ಮನೆಯ ಬೀಗ ತೆರೆದು ನೋಡಿದಾಗ ಮನೆಯೊಳಗೆ ಬೆಡ್ರೂಂ ನಲ್ಲಿ ಬಟ್ಟೆಗಳು ಇತರೇ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ನಂತರ ನೋಡಲಾಗಿ ಯಾರೋ ಕಳ್ಳರು ತಮ್ಮ ಆರ್ಸಿಸಿ ಮನೆಗೆ ಹೊಂದಿಕೊಂಡಿರುವ ಹಂಚಿನ ಮನೆಯ ಹಂಚನ್ನು ತೆಗೆದು ಮನೆಯೊಳಗೆ ನುಗ್ಗಿ ಅಡುಗೆ ಮನೆ ಒಳಗೆ ಛಾವಣಿಯ ರೀಪರ್ ಮತ್ತು ಹಲಗೆಯನ್ನು ಬಿಚ್ಚಿ ಒಳಗೆ ಪ್ರವೇಶಿಸಿ ಹೊಂದಿಕೊಂಡಿರುವ ಆರ್ಸಿಸಿ ಮನೆಯ ಬಾಗಿಲಿನ ಚಿಲಕವನ್ನು ತೆರೆದು ಆರ್ಸಿಸಿ ಮನೆಯ ಒಳಗೆ ಪ್ರವೇಶಿಸಿ ಎರಡೂ ಬೆಡ್ರೂಮಿನ ಕಾಪಾಟಿನಲ್ಲಿದ್ದ ಪಿರ್ಯಾದುದಾರರ ಬಾಬ್ತು 65,000 ರೂ. ನಗದು ಹಣ ಒಂದು ಬೆಳ್ಳಿ ಲೋಟ ಮತ್ತು ಬೆಳ್ಳಿ ಪೂಜಾ ಸಮಾನು ಪಿರ್ಯಾದುದಾರರ ತಂಗಿಯವರ ಬಾಬ್ತು 1) 24 ಇಂಚು ಉದ್ದದ ನವರತ್ನ ಚೈನ್ 2) ಡೈಮಂಡ್ ಸ್ಟಡ್ಡೆಡ್ ಪೆಂಡೆಂಟ್ ಸೇರಿ ಒಂದು ಚೈನ್ ಸುಮಾರು 16 ಇಂಚು ಉದ್ಧ, ಓಂ ಗಾಯತ್ರಿ ಮಂತ್ರದ ಪೆಂಡೆಂಟ್ ಇದೆ, 3) ಒಂದು ಚಿನ್ನದ ಸರ ಸುಮಾರು 24 ಇಂಚು ಮತ್ತು ಸಣ್ಣ ಪೆಂಡೆಂಟ್ ಸುಮಾರು 6 ಪವನ್, 4) ಎರಡು ಚಿನ್ನದ ಬಳೆಗಳು ತಲಾ ಮೂರು ಪವನ್, 5) ಒಂದು ಚಿನ್ನದ ಮುತ್ತಿನ ಸರ ಮತ್ತು ಒಂದು ಚಿನ್ನದ ಮುತ್ತು ಬಳೆ ಒಟ್ಟು ತೂಕ ಐದುವರೆ ಪವನ್ 6) ಒಂದು ಚಿನ್ನದ ನಾಣ್ಯ ಒಂದು ಗ್ರಾಂ ಇವುಗಳ ಎಲ್ಲಾ ಒಟ್ಟು ಬೆಲೆ ಸುಮಾರು 7 ಲಕ್ಷ ರುಪಾಯಿಗಳು ಹಾಗೂ 3 ಮೊಬೈಲ್ ಫೋನ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹಿಂಬಾಗಿಲಿನಿಂದ ಹೋಗಿರುತ್ತಾರೆ.

No comments:

Post a Comment