Wednesday, January 8, 2014

ದೈನಂದಿನ ಅಪರಾದ ವರದಿ.

ದಿನಾಂಕ 08.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು  ಈ  ಕೆಳಗನಂತಿದೆ.

 

ಕೊಲೆ  ಪ್ರಕರಣ

:

0

 

ಕೊಲೆ  ಯತ್ನ

 

0

ದರೋಡೆ ಪ್ರಕರಣ

 

1

ಸುಲಿಗೆ ಪ್ರಕರಣ

 

0

ಮನೆ ಕಳವು ಪ್ರಕರಣ

 

0

ಸಾಮಾನ್ಯ ಕಳವು

 

1

ವಾಹನ ಕಳವು

 

0

ಮಹಿಳೆಯ ಮೇಲಿನ ಪ್ರಕರಣ

 

0

ರಸ್ತೆ ಅಪಘಾತ  ಪ್ರಕರಣ

 

1

ವಂಚನೆ ಪ್ರಕರಣ         :

 

0

ಮನುಷ್ಯ ಕಾಣೆ ಪ್ರಕರಣ

 

0

ಹಲ್ಲೆ ಪ್ರಕರಣ

 

2

 

 

1.ಮಂಗಳೂರು ಉತ್ತರ  ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  ನಾಂಕ 07/08-01-2014 ರಂದು ಠಾಣಾ ಸಿಬ್ಬಂದಿಗಳು    ಠಾಣಾ ಸರಹದ್ದಿನಲ್ಲಿ ರಾತ್ರಿ ಲರ್ಕಿಂಗ್ ಬೀಟ್‌ ಕರ್ತವ್ಯದಲ್ಲಿ ಇದ್ದ ಸಮಯ ಓರ್ವ ವ್ಯಕ್ತಿಯು ಸಂಶಯಾಸ್ಪದ ರೀತಿಯಲ್ಲಿ ಇದ್ದುದನ್ನು  ಗಮನಿಸಿ ಆತನನ್ನು  ವಿಚಾರಿಸಿದಾಗ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಲ್ಯಾಪ್ಟಾಪನ್ನು ಇಟ್ಟುಕೊಂಡಿದ್ದು, ಮಾರಾಟಕ್ಕಾಗಿ ಕೆಲವೊಂದು ಜನರ ಬಳಿಗೆ  ಹೋಗಿ ವಿಚಾರಿಸುತ್ತಿದ್ದು, ಹಾಗೂ  ಎರಡು ಬೇರೆ ಬೇರೆ ಕಂಪೆನಿಯ ಲ್ಯಾಪ್ಟಾಪ್ಗಳಿದ್ದುಲ್ಯಾಪ್ಟಾಪ್ ಹಾಗೂ ಕ್ಯಾಮರಾದ ಬಗ್ಗೆ ವಿಚಾರಿಸಿದಾಗ ತನ್ನ ಸ್ನೇಹಿತನೊಬ್ಬ ಮಾರಾಟಕ್ಕಾಗಿ ನೀಡಿದ್ದೆಂತಲೂ, ಸ್ನೇಹಿತನ ಹೆಸರು ವಿಳಾಸ ಕೇಳಲಾಗಿ ಯಾವುದೇ ಸಮರ್ಪಕವಾದ ಮಾಹಿತಿ ನೀಡದೇ ಹಾಗೂ ಯಾವುದೇ ದಾಖಲೆ ಪತ್ರಗಳು ಇಲ್ಲವಾಗಿ  ತಿಳಿಸಿದ್ದು, ಕ್ಯಾಮರಾ ಹಾಗೂ ಲ್ಯಾಪ್ಟಾಪ್ಗಳನ್ನು ಎಲ್ಲಿಂದಲೋ ಕಳವು  ಮಾಡಿಕೊಂಡು  ಬಂದು  ಮಾರಾಟಕ್ಕೆ ಪ್ರಯತ್ನ ಮಾಡಿರುತ್ತಾನೆ.

2.ಕೊಣಾಜೆ  ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಬರುವ ಎಂಬಲ್ಲಿ ಸಲೀಂ ಕೆ ಹೆಚ್ ಇವರ ಗೆಸ್ಟ್ ಹೌಸ್‌ಗೆ 2013 ರ ಆಗಸ್ಟ್ ತಿಂಗಳಲ್ಲಿ ಮಧ್ಯಾಹ್ನ 2:30 ಗಂಟೆಗೆ ಆರೋಪಿಗಳಾದ 1) ಇಲ್ಯಾಸ್, 2) ಸುರ್ಮೊ ಇಮ್ರಾನ್, 3) ಅಲ್ತಾಫ್, 4) ಆಸಿಫ್ ಹಾಗೂ ಇತರ 7-8 ಜನರು ಗೆಸ್ಟ್ ಹೌಸ್‌ಗೆ ಒಮ್ಮೆಲೆ ದಾಳಿ ಮಾಡಿಸಲೀಂ ಕೆ ಹೆಚ್ ರರಲ್ಲಿ ನಮಗೆ ಮೂರು(3) ಕೋಟಿ ರೂಪಾಯಿ ನೀಡಬೇಕು ಎಂದು ದಬ್ಬಾಳಿಕೆ ಮತ್ತು ಕೆಟ್ಟ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿ, ಕೊಲ್ಲುವುದಾಗಿ ರೂ. 20,000/- ವನ್ನು ಕಿತ್ತುಕೊಂಡು ಬೆದರಿಸಿರುತ್ತಾರೆ. 

 

 3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ ದಿನಾಂಕ 28/12/2013 ರಂದು ಸುಮಾರು 14.00 ಗಂಟೆಗೆ ಮೋಟಾರು ಸೈಕಲ್ ನಂಬ್ರ KA19-EJ-2277ನ್ನು ಅದರ ಸವಾರ ಹಿಂಬದಿ ಸವಾರರಾಗಿ ಓರ್ವರನ್ನು ಕುಳ್ಳಿರಿಸಿಕೊಂಡು ಕಂಕನಾಡಿ ಜಂಕ್ಷನ್ ಕಡೆಯಿಂದ ಯುನಿಟಿ ಆಸ್ಪತ್ರೆ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು IDBI ಬ್ಯಾಂಕು ಎದುರು ರಸ್ತೆ ದಾಟುತ್ತಿದ್ದ ಕಿಶೋರ ಶೆಟ್ಟಿ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು ಎಡಕಾಲಿನ ಪಾದಕ್ಕೆ ಗುದ್ದಿದ ಗಾಯ ಬಲಕಾಲಿನ ಪಾದಕ್ಕೆ ತರಚಿದ ಗಾಯವಾಘಿರುತ್ತದೆ.

 

 4. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ರಹಿಮಾನ್‌ ಅಸಾರ್‌ ಎಂಬವನು ದಿನಾಂಕ 25-12-2013 ರಂದು ಸಿಟಿ ಸೆಂಟರಿಗೆ ಬಂದು ಸಿಟಿ ಸೆಂಟರಿನ 3 ನೇ ಮಹಡಿಯಲ್ಲಿರುವ ಸಿಟಿ ಬಜಾರ್ ಎಂಬ ಅಂಗಡಿಯ ಎದುರು ನಿಂತಿದ್ದಾಗ ರಹಿಮಾನ್‌ ಅಸಾರ್‌ ಪರಿಚಯದ ನವಾಝ್ ಎಂಬವನು ರಹಿಮಾನ್‌ ಅಸಾರ್‌ರನ್ನು ತಡೆದು ನಿಲ್ಲಿಸಿ " ನಿನಗೆ ನಾನು ಇರುವ ಸಿಟಿ ಸೆಂಟರ್ ಗೆ ಬರಲು ಧೈರ್ಯ ಬಂತಾ ಎಂಬುದಾಗಿ ಕೆಟ್ಟ ಬಾಷೆಯಲ್ಲಿ ಬೈಯ್ದು ನಂತರ ಕೈಯಲ್ಲಿ  ಹಲ್ಲೆ ಮಾಡಿರುತ್ತಾರೆ.

 

 5.ಮಂಗಳೂರು ಗ್ರಾಮಾಂತರ ಪೊಲೀಸ್‌  ಠಾಣೆಯಲ್ಲಿ ವರದಿಯಾದ ಪ್ರಕರಣ  : ಈ ದಿನ ದಿನಾಂಕ: 07.01.2014 ರಂದು ಪಿರೋಜ್‌ ಎಂಬವನು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬರುವರೇ ರೂಟ್ ನಂಬ್ರ: 11ನೇ ಸಿಟಿ  ಬಸ್ಸಿನಲ್ಲಿ  ಸ್ಟೇಟ ಬ್ಯಾಂಕಿನಿಂದ ಕಣ್ಣೂರು ಕಡೆಗೆ ಎಂದಿನಂತೆ ಪ್ರಯಾಣಿಸುತ್ತಾ ಪಡೀಲ್‌ನ ಕೊಡಕಲ್ ಎಂಬಲ್ಲಿಗೆ ತಲುಪಿದಾಗ ಬಸ್ಸಿನ ಚಾಲಕನು ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಒಮ್ಮೆಲೇ ಪಿರೋಜ್‌ರ  ಮುಂಬದಿ ನಿಂತಿದ್ದ ಪ್ರಯಾಣಿಕನಿಗೆ ಕೈ ಹಠಾತ್ತನೆ ತಾಗಿದ್ದು  ಆಗ ಅವನು ಹಿಂದೆ ತಿರುಗಿ ಆತ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಬಿಡುವುದಿಲ್ಲವೆಂದು  ಬೆದರಿಕೆ ಒಡ್ಡಿ ಕೈಯಿಂದ ಹಲ್ಲೆ ನಡೆಸಿರುತ್ತಾನೆ.

 

No comments:

Post a Comment