Monday, January 13, 2014

Daily Crime Report 13-01-2014

ದೈನಂದಿನ ಅಪರಾದ ವರದಿ.

ದಿನಾಂಕ 13.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ         :

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1 ಕೊಣಾಜೆ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 12.01.2014 ರಂದು ಸಂಜೆ 7:00 ಗಂಟೆ ಸಮಯಕ್ಕೆ ಆರೋಪಿ ಅಬೂಬಕ್ಕರ್ಸಿದ್ದೀಕ್ಎಂಬಾತನು ತನ್ನ ಬಾಬ್ತು ಮೋಟಾರ್ಸೈಕಲ್ಕೆಎ-19ವಿ-3081 ನೇಯದನ್ನು ಕುತ್ತಾರು ಕಡೆಯಿಂದ ನಾಟೆಕಲ್ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು, ಬೆಳ್ಮ ಗ್ರಾಮದ, ದೇರಳಕಟ್ಟೆ ರಿಕ್ಷಾ ಪಾರ್ಕ್ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಾದ ಶ್ರೀ ಕುಬೇರಾ ಗೌಡ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಬಳಿ ತೀವ್ರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಮೋಟಾರ್ಸೈಕಲ್ನಲ್ಲಿ ಸಹಸವಾರನಾಗಿ ಪ್ರಯಾಣಿಸುತ್ತಿದ್ದ ಮಹಮ್ಮದ್ಮುಕ್ತಾರ್ಎಂಬವರ ಕಾಲಿಗೆ ಗಾಯವಾಗಲು ಕಾರಣವಾಗಿರುತ್ತಾರೆ. ಗಾಯಾಳುಗಳು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ.

 

2. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  :  ದಿನಾಂಕ : 12.01.2013 ರಂದು  11.15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಕ್ಷಯ್ ಕೆ., ರವರು ತನ್ನ ಬಾಬ್ತು ಮೋಟಾರು ಸೈಕಲ್ ಕೆಎ.17.ಈಸಿ.4393 ನೇದರಲ್ಲಿ ಸಹಸವಾರರಾಗಿ ಕುಳಿತುಕೊಂಡು  ಪಿರ್ಯಾದಿದಾರರ ಗೆಳೆಯ ಮಂಜುನಾಥರವರು ಮೋಟಾರು ಸೈಕಲನ್ನು ಮಂಗಳೂರು ನಗರದ ಸಾರ್ವಜನಿಕ ಕಾಂಕ್ರೀಟು  ರಸ್ತೆಯಾದ ಲಾಲ್ ಭಾಗ್ಪಿ.ವಿ.ಎಸ್ .ರಸ್ತೆಯಲ್ಲಿ  ಚಲಾಯಿಸಿಕೊಂಡು ಬರುತ್ತಾ  ಕೋರಿ ರೊಟ್ಟಿ ಜಂಕ್ಷನ್ ತಲುಪುತ್ತಿದ್ದಂತ್ತೆ  ಜೈಲು ಕ್ರಾಸ್ ರಸ್ತೆಯಿಂದ  ಕಾರು ನಂಬ್ರ  ಕೆಎ.19.ಎಂಸಿ.8033ನೇಯದನ್ನು  ಅದರ ಚಾಲಕ ನಿರ್ಲಕ್ಷ್ಯ ತನದಿಂದ ಯಾವುದೇ ಸೂಚನೆಯನ್ನು ನೀಡದೇ ಒಮ್ಮಲೆ ಲಾಲ್ ಭಾಗ್ ಪಿ.ವಿ.ಎಸ್  ರಸ್ತೆಗೆ  ಕಾರನ್ನು ಚಲಾಯಿಸಿಕೊಂಡು ಬಂದುದರಿಂದ ಮೋಟಾರು  ಸೈಕಲ್  ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರು  ಸೈಕಲಿನಿಂದ  ಎಸೆಯಲ್ಟಟ್ಟು  ಸವಾರ  ಮಂಜುನಾಥರವರು  ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ.  ಪಿರ್ಯಾದಿದಾರರ ಎಡ ಕಣ್ಣಿನ ಬಳಿ, ಬಾಯಿಗೆ  ರಕ್ತಗಾಯ  ಮತ್ತು ಮಂಜುನಾಥರಿಗೆ ತುಟಿಗೆ, ಮೂಗಿಗೆ, ಕುತ್ತಿಗೆಯ ಎಡ ಭಾಗಕ್ಕೆ ಸಾಮಾನ್ಯ  ತರಹದ ಗಾಯವಾಗಿ ನಗರದ ಯೆನೊಪಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.  

 

3. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 12/01/14 ರಂದು ಬೆಳಗ್ಗೆ 10.30 ಗಂಟೆಗೆ ಇನ್ನೋವಾ ಕಾರು ನಂಬ್ರ KA-47-M-2525 ಅದರ ಚಾಲಕ ಬಲ್ಮಠ ಜಂಕ್ಷನ್ ಕಡೆಯಿಂದ ಮಂಗಳೂರು ನರಸಿಂಗ್ ಹೋಮ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಮಂಗಳೂರು ನರಸಿಂಗ್ ಹೋಮ ಎದುರು ರಸ್ತೆ ವಿಭಾಜಕ ತೇರವು ಇರುವ ಸ್ಥಳದಲ್ಲಿ ಒಮ್ಮಲೆ ಬಲಕ್ಕೆ ತಿರುಗಿಸಿ ಚಲಾಯಿಸಿದ ಪರಿಣಾಮ ಬೆಂದೂರವೆಲ್ ಸರ್ಕಲ್ ಕಡೆಯಿಂದ ಬಲ್ಮಠ ಜಂಕ್ಷನ್ ಕಡೆಗೆ ಸವಾರಿಮಾಡಿಕೊಂಡು ಬರುತ್ತಿದ್ದ ಸ್ಕೂಟರ್ ನಂಬ್ರ KA-19-EF-2779 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರನಲ್ಲಿ ಸವಾರರಾಗಿದ್ದ ಶ್ರಿಮತಿ ಸಬೀತಾ ಸೆರವೊ ಮತ್ತು ಹಿಂಬದಿ ಸವಾರ ಬಲಕಾಲಿಗೆ ಗಂಭಿರ ಸ್ವರೂಪದ ಗಾಯ ಹಿಂಬದಿ ಸವಾರರ ಬಲಕಾಲಿಗೆ ಸಾದಾ ಸ್ವರೂಪದ ಗಾಯ ಉಂಟಾಗಿ ಮಂಗಳುರು ನರಸಿಂಗ್ ಹೊಮ್ ನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

4. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 12-01-2013 ರಂದು ಪಿರ್ಯಾದಿದಾರರಾದ ಶ್ರೀ ಧನುಷ್ @ ಧನು ಎಂಬವರು ವಿಟ್ಲದ ತನ್ನ ಮನೆಯಿಂದ ಮಂಗಳೂರು ಗೆ ಬಂದು ಮಂಗಳೂರು ಲೇಡಿಗೊಷನ್ ಬಳಿಯ ಕಾಂಚನ ಬಟ್ಟೆ ಅಂಗಡಿಯ ಪುಟ್ ಫಾತ್ ಪಕ್ಕದಲ್ಲಿ ಒಂದು ಅಂಗಡಿಗೆ ಬಂದು ಜೀನ್ಸ್ ಪ್ಯಾಂಟ್ ತೆಗೆಯಲು ಹೋಗಿದ್ದು, ಅಂಗಡಿಯಲ್ಲಿ ಇಬ್ಬರು ವ್ಯಾಪಾರ ಮಾಡುತ್ತಿದ್ದು, ಒಬ್ಬರಲ್ಲಿ ಜೀನ್ಸ್ ಪ್ಯಾಟ್ ದರ ಕೇಳಿದ್ದು, ಅದಕ್ಕೆ ವ್ಯಕ್ತಿಯು 400 ರೂಪಾಯಿ ಎಂದು ಹೇಳಿದ್ದು, ಪಿರ್ಯಾದಿದಾರರು 250 ರೂಪಾಯಿ ದರಕ್ಕೆ ಕೇಳಿದ್ದು, ಅದಕ್ಕೆ ಅವರು ಒಪ್ಪಿ ತೋರಿಸಿದ ಜೀನ್ಸ್ ಪ್ಯಾಂಟ್ ನ್ನು ಪ್ಯಾಕ್ ಮಾಡಿ 275 ರೂಪಾಯಿ ಕೊಡುವಂತೆ ತಿಳಿಸಿದ್ದು, ಅದಕ್ಕೆ ಪಿರ್ಯಾದಿದಾರರು ತಾನು 250 ರೂಪಾಯಿ ಕೊಡುತ್ತೇನೆ ಎಂದು ಹೇಳಿದಾಗ, ಆರೋಪಿಗಳು ಪಿರ್ಯಾದಿದಾರರ ಬಲಕೈ ರಟ್ಟೆಯನ್ನು ಹಿಡಿದು ನಿಲ್ಲಿಸಿ, 275 ರೂಪಾಯಿ ಕೊಡು ಎಂದು ಒತ್ತಾಯ ಮಾಡಿ, ಪಿರ್ಯಾದಿದಾರರು ಬಟ್ಟೆ ಬೇಡ ಎಂದು ಅಲ್ಲಿಂದ ತೆರಳುತ್ತಿದ್ದಂತೆ, ಆರೋಪಿಗಳು ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು, ಒಬ್ಬನು ಬಲಕೈ ರಟ್ಟೆ ಹಿಡಿದು ಎಳೆದುಕೊಂಡು ಕೈಯಿಂದ ರಟ್ಟೆಗೆ ಹೊಡೆದು ಕೈಯಿಂದ ಮುಖಕ್ಕೆ ಮತ್ತು ಬೆನ್ನಿಗೆ ಹೊಡೆದು, ಪಿರ್ಯಾದಿದಾರರ ಟಿ-ಶರ್ಟು ನ್ನು ಎಳೆದು ಹರಿದಿದ್ದು, ಬೆದರಿಕೆ ಹಾಕಿರುವುದು

 

5. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 10-01-2013 ರಂದು 19:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಯತಿಶ್ ಕುಮಾರ್ ರವರು ತನ್ನ ಬಾಬ್ತು ಕೆಎ-19-ಡಬ್ಲ್ಯು-1767 ನೇ  Active Honda ಮೋಟಾರ್‌‌ ಸೈಕಲನ್ನಲ್ಲಿ  ಮಂಗಳೂರು ಕಡೆಯಿಂದ ವಾಮಂಜೂರು ಕಡೆಗೆ ಹೋಗುತ್ತಾ  ವಾಮಂಜೂರು ಚರ್ಚ್ಬಳಿ ತೊಯಿಪೆಕಲ್ಲು 2 ನೇಕ್ರಾಸ್‌‌ ಬಳಿ  ತಲುಪುತ್ತಿದ್ದಂತೆ ಮುಂದುಗಡೆಯಿಂದ ಅಂದರೆ ವಾಮಂಜೂರು ಕಡೆಯಿಂದ  ಕೆಎ-19-ಇಜಿ-9401 ನೇ ಮೋಟಾರ್‌‌ ಸೈಕಲನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಏಕಾ ಏಕಿಯಾಗಿ ಬಲಕ್ಕೆ  ಬಂದು ಪಿರ್ಯಾಧಿದಾರರ  ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ  ಸದ್ರಿಯವರು  ರಸ್ತೆಗೆ ಎಸೆಯಲ್ಪಟ್ಟು  ಅವರ ಹಣೆಗೆ, ಮೂಗಿಗೆ ಮತ್ತು ಬಾಯಿಗೆ ರಕ್ತಗಾಯ ಮತ್ತು  ತಲೆಯ ಹಿಂಬದಿಗೆ ಜಖಂ ಉಂಟಾಗಿರುವುದಾಗಿಯೂ ಹಾಗೂ ಆರೋಪಿ ಮೋಟಾರ್‌‌ ಸೈಕಲ್‌‌ ಸವಾರನಿಗೆ ಹಾಗೂ ಅದರ ಹಿಂಬಂದಿ ಸವಾರಿನಿಗೂ ಗಾಯವಾಗಿರುವುದು.

No comments:

Post a Comment