Sunday, January 5, 2014

Daily Crime Reports 05-01-2014

ದೈನಂದಿನ ಅಪರಾದ ವರದಿ.
ದಿನಾಂಕ 05.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು  ಈ  ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
2
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
1
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ         :
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
0






















1 ಮಂಗಳೂರು ಉತ್ತರ ಪೊಲೀಸ್‌  ಠಾಣೆಯಲ್ಲಿ  ವರಿಯಾದ ಪ್ರಕರಣ  : ಗ್ರೀಶ್ಮಾ  ದಿನಾಂಕ 04-01-2014 ರಂದು ಮಂಗಳೂರು ನಗರದ ಸಿಟಿ ಸೆಂಟರಿನ 5 ನೇ ಮಹಡಿಯಲ್ಲಿರುವ ಓಶಾನ್ ಸೂಪರ್ ಮಾರ್ಕೆಟ್‌ಗೆ ಲಾಗೇಜ್ ಬ್ಯಾಗ್ ಖರೀದಿಸಲು ಹೋಗಿ ಖರೀದಿಸಿದ ಇತರ ಸಾಮಾಗ್ರಿಗಳನ್ನು ಮತ್ತು ತನ್ನ ನೆಕ್ಸಸ್ 4 ಮೊಬೈಲನ್ನು ಟ್ರಾಲಿಯಲ್ಲಿ ಹಾಕಿ ಬ್ಯಾಗ್ ಖರೀದಿಸುತ್ತಿರುವ ಸಮಯದಲ್ಲಿ ಸಂಜೆ ಸುಮಾರು 6.00 ಗಂಟೆಗೆ ಟ್ರಾಲಿಯೊಳಗೆ ಇದ್ದ 35000/- ಮೌಲ್ಯದ  ಮೊಬೈಲನ್ನು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ  

 2.ಪಣಂಬೂರು ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 05-01-14 ರಂದು ಬೆಳಿಗ್ಗೆ 05-30 ಗಂಟೆ ಸಮಯಕ್ಕೆ ಪ್ರಶಾಂತ್‌‌ ಪೂಜಾರಿ ಎಂಬವರು ಕೆಎ-02ಎಬಿ-1816ನೇ ಮಾರುತಿ ಓಮ್ನಿ ಕಾರಿನಲ್ಲಿ ಚಾಲಕರಾಗಿ ಲಿಗೋರಿ ರೋಡ್ರಿಗಸ್ ಮತ್ತು ಅವರ ಮಗನನ್ನು ಕುಳ್ಳಿರಿಸಿಕೊಂಡು ಬೈಂದೂರಿನಿಂದ ಮಂಗಳೂರು ಬಜಪೆ ಏರ್ ಪೋರ್ಟ್ ಗೆ ಬರುವಾಗ ಎನ್ ಹೆಚ್-66 ರಲ್ಲಿ ಬೈಕಂಪಾಡಿ ಜಂಕ್ಷನ್ ನಲ್ಲಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಮಂಗಳೂರಿನಿಂದ ಬರುತ್ತಿದ್ದ ಕೆಎ-19ಬಿ-6843ನೇ ಕಾರನ್ನು ಅದರ ಚಾಲಕ ದಯಕರ ಎಂಬವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಶಾಂತ್‌‌ ಪೂಜಾರಿ ಕಾರಿಗೆ ಎದುರಿನಿಂದ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಗೆ ಎರಡೂ ಕಾಲುಗಳಿಗೆ ರಕ್ತಗಾಯವಾಗಿದ್ದುದಲ್ಲದೇ ಪಿರ್ಯಾದಿಯ ಕಾರಿನ ಎಡಬದಿಯಲ್ಲಿ ಮುಂಬದಿ  ಕುಳಿತಿದ್ದ ಲಿಗೋರಿ ರೋಡ್ರಿಗಸ್ ಎಂಬವರ ಎಡಕಾಲು ಮೂಳೆಮುರಿತವಾಗಿ, ಬಲ ಕಾಲು ಮತ್ತು ಎದೆಗೆ ನೋವುಂಟಾಗಿ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
 
3. ಮಂಗಳೂರು ಗ್ರಾಮಾಂತರ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನ ತಾರೀಖು 04.01.2014 ರಂದು ಯುವತಿಯೊಬ್ಬಳು ಕೆಲಸಕ್ಕೆ ಹೋದವರು ಮರಳಿ ಮನೆಗೆ ಹೋಗುವರೇ ನೀರುಮಾರ್ಗದಲ್ಲಿ ಬಸ್ಸಿನಿಂದ ಇಳಿದು ಕಟ್ಟಿಂಜೆ ಸೈಟ್ ಎಂಬಲ್ಲಿರುವ ಅವರ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಸಂಜೆ 6.45 ಗಂಟೆ ವೇಳಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂದಿನಿಂದ ಬಂದು ಅವರನ್ನು ತಡೆದು ನಿಲ್ಲಿಸಿ ಕೈಯಿಂದ ಅವರ ಬಾಯಿಯನ್ನು ಮುಚ್ಚಿ ನೆಲಕ್ಕೆ ದೂಡಿ ಹಾಕಿದಾಗ ಅವರು ನೆಲಕ್ಕೆ ಬಿದ್ದು  ಅವರ ಕೈಗೆ ಮತ್ತು ತಲೆಗೆ ಗಾಯಗಳಾಗಿದ್ದು ಈ ವೇಳೆ ಆ ಇಬ್ಬರು ವ್ಯಕ್ತಿಗಳು  ಅವರ ಕೈಯಲ್ಲಿದ್ದ ಮೊಬ್ಯೆಲನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.
 
4. ಸುರತ್ಕಲ್‌‌ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 02-04-2008 ರಂದು ಆರೋಪಿ ಅಬ್ದುಲ್ ಸಮಿತ್ ರವರನ್ನು ಮುಸ್ಲಿಂ ಸಂಪ್ರದಾಯ ಪ್ರಕಾರ ಮದುವೆ ಆಗಿದ್ದು ಮದುವೆ ಸಮಯ ಪತ್ನಿಯ ತಂದೆ ತಾಯಿಯವರು ವರದಕ್ಷಿಣೆಯಾಗಿ ಚಿನ್ನಾಭರಣಗಳನ್ನು ನೀಡಿದ್ದು ಮದುವೆ ಆದ ನಂತರ. ಅತ್ತೆ ಮತ್ತು ನಾದಿನಿಯವರು ಹಾಗೂ ಮಾವ ಆರೋಪಿ ಅಬ್ದುಲ್ ಸಮಿತ್ ರೊಂದಿಗೆ ಸೇರಿಕೊಂಡು ಮಾನಸಿಕ ಹಿಂಸೆ ನೀಡಲು ಪ್ರಾರಂಬಿಸಿ ಹಲ್ಲೆ ನಡೆಸಿದ್ದು ಅಲ್ಲದೇ ಆರೋಪಿ ಅಬ್ದುಲ್ ಸಮಿತ್ ನು ಪತ್ನಿಯನ್ನು  ಸೌದಿ ಅರೇಬಿಯಾ ಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕೂಡಾ ಮಾನಸಿಕ ಹಿಂಸೆ ನೀಡಿ ದೈಹಿಕವಾಗಿ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿದೆ.  

5. ಕಾವೂರು ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  :  ದಿನಾಂಕ:03-01-2014 ರಂದು ರಾತ್ರಿ ಸುಮಾರು 08-00 ಗಂಟೆಯ ಸಮಯಕ್ಕೆ ಆಪಾದಿತರಾದ  ಕೆಎ-19-ಬಿ-4934 ನೇ ನಂಬ್ರದ ಅಟೋರಿಕ್ಷಾ ಚಾಲಕರು ತನ್ನ ಬಾಬ್ತು ಅಟೋರಿಕ್ಷಾವನ್ನು ಕಾವೂರು ಗ್ರಾಮದ ಕಾವೂರು ಪೇಟೆಲ್ಲಿರುವ ಪ್ರಶಾಂತ್ ವೈನ್ ಶಾಫ್ನ ಬಳಿಯ ಸಾರ್ವಜನಿಕ ಮಣ್ಣು ರಸ್ತೆಯಲ್ಲಿ ತೀವ್ರ ನಿರ್ಲಕ್ಷತನ ಮತ್ತು ದುಡುಕಿನಿಂದ ಒಮ್ಮೆಲೆ ವೇಗವಾಗಿ ಹಿಂದಕ್ಕೆ ಚಲಾಯಿಸಿ ರಿಕ್ಷಾದ ಹಿಂಬದಿಯಲ್ಲಿ ನಿಂತುಕೊಂಡಿದ್ದ ಸುಮಾರು 30 ವರ್ಷ ಪ್ರಾಯ ಲಕ್ಷಣ ಎಂಬವರಿಗೆ ಡಿಕ್ಕಿಹೊಡೆದ ಪರಿಣಾಮ ಲಕ್ಷಣ ಎಂಬವರು  ಮಣ್ಣು ರಸ್ತೆಗೆ ಎಸೆಯಲ್ವಟ್ಟು ಎದೆಗೆ ಗುದ್ದಿದ ನಮೂನೆಯ ತೀವ್ರ ರೀತಿಯ ಒಳಗಾಯಗೊಂಡು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

6. ಮಂಗಳೂರು ಸಂಚಾರ ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ : ದಿನಾಂಕ 04-01-2014 ರಂದು ಆಟೋ ರಿಕ್ಷಾ ನಂಬ್ರ KA19-D-4022 ನ್ನು ಅದರ ಚಾಲಕ ರೈಲ್ವೆ ಸ್ಟೆಷನ್ ಕಡೆಯಿಂದ U.P ಮಲ್ಯ ರಸ್ತೆ ಕಡೆಗೆ  ಅತಿ ವೇಗ ಮತ್ತು ಅಜಾಗರೂಕತೆಯಿಂದ, ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ   ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿ ,ರಸ್ತೆಯ ಬಲಭಾಗದಲ್ಲಿ  ಪಾದಾಚಾರಿ ರಸ್ತೆಯ ಮೇಲೆ ಬೆಳಿಗ್ಗೆ 07.25 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ವಿಜಯ ಎಂಬವರ  ಬಾಯಿಗೆ ಗಂಭೀರ ಸ್ವರೂಪದ ಗಾಯ ಎದೆಯ  ಎಡಭಾಗಕ್ಕೆ ಗುದ್ದಿದ ಗಾಯವಾಗಿದೆ.

7. ಬಜಪೆ ಪೊಲೀಸ್ ಠಾಣೆಯಲ್ಲಿ  ವರದಿಯಾದ ಪ್ರಕರಣ : ಯಮುನಾ ಎಂಬವರು ದಿನಾಂಕ 04/01/2014 ರಂದು ಬೆಳಿಗ್ಗೆ 03.00 ಗಂಟೆಗೆ ಮನೆಯಿಂದ ಎಂದಿನಂತೆ ತರಕಾರಿಯನ್ನು ಮಾರಾಟ ಮಾಡುವರೇ ಮಂಗಳೂರು ಮಾರುಕಟ್ಟೆಗೆ ಕೊಂಡೊಯ್ಯಲು ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಪೆರ್ಮುದೆ ಪೇಟಗೆ ಬಂದು ಸಿಮ್ರಾನ್ ಮೆಡಿಕಲ್ಸ್ ನ ಎದುರು ತನ್ನ ನಾದಿನಿ ಮಚ್ಚಮ್ಮ ಎಂಬವರೊಂದಿಗೆ ನಿಂತಿದ್ದಾಗ ಸಮಯ ಸುಮಾರು 03.30 ಗಂಟೆಗೆ ಒಬ್ಬ ಅಪರಿಚಿತ ವ್ಯಕ್ತಿಯು  ಮೋಟಾರು ಸೈಕಲ್ ನಲ್ಲಿ  ಯಮುನಾರ ಬಳಿ ಬಂದು ನೀವು ಬರುತ್ತೀರಾ? ಎಂದು ಕೇಳಿದಾಗ ಪಿರ್ಯಾದಿದಾರರು ನಾವು ಟೆಂಪೋದಲ್ಲೇ ನಿತ್ಯ ಮಂಗಳೂರಿಗೆ ಹೋಗುವುದೆಂದು ತಿಳಿಸಿ ಭಯಗೊಂಡು ಅಲ್ಲಿಂದ ಓಡಲು ಪ್ರಾರಂಭಿಸಿದಾಗ ಆ ಅಪರಿಚಿತ ವ್ಯಕ್ತಿ ಯಮುನಾರನ್ನು ಹಿಂಬಾಲಿಸಿ ತನ್ನ ಕಾಲಿನಿಂದ ತಡೆದು, ಯಮುನಾರನ್ನು ನೆಲಕ್ಕೆ ಬೀಳಿಸಿ, ತಲೆಯನ್ನು ಗಟ್ಟಿಯಾಗಿ ಹಿಡಿದು ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿ ಬಿಡಸಲು ಪ್ರಯತ್ನಿಸಿದಾಗ ಮುಖವನ್ನು ನೆಲಕ್ಕೆ ಅಪ್ಪಳಿಸಿ, ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ತೂಕದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಕಸಿದುಕೊಂಡು ಪರಾರಿಯಾಗಿರುತ್ತಾನೆ.

No comments:

Post a Comment