Saturday, January 11, 2014

Daily Crime Reports 11-01-2014

ದೈನಂದಿನ ಅಪರಾದ ವರದಿ.
ದಿನಾಂಕ 11.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0

ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
1
ವಂಚನೆ ಪ್ರಕರಣ         :
:
0
ಮನುಷ್ಯ ಕಾಣೆ ಪ್ರಕರಣ
:
0
ಹಲ್ಲೆ ಪ್ರಕರಣ
:
1























1.ಮಂಗಳೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ  ವರದಿ. ದಿನಾಂಕ 09/01/2014 ರಂದು ರಾತ್ರಿ ಸುಮಾರು 22.30 ಗಂಟೆಗೆ ಮೋಟಾರು ಸೈಕಲ್ ನಂಬ್ರ KA19-EA-4761 ನ್ನು ಅದರ ಸವಾರ ಅಭಿ ಎಂಬುವರು ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಕಡೆಯಿಂದ ಕರಂಗಲಪಾಡಿ ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂಟ್ಸ್ ಹಾಸ್ಟೆಲ್ ಬಳಿಯಿರುವ ಕಾಮತ್ ಎಂಡ್ ರಾವ C A ಕಚೇರಿ ಎದುರು ರಸ್ತೆಯ ತೀರಾ ಎಡಭಾಗದಲ್ಲಿ ಚಲಾಯಿಸಿ ಪಾದಚಾರಿ ಉಮೇಶ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಉಮೇಶ ಕುಮಾರರ ಬಲಕಾಲಿಗೆ ಗಂಭಿರ ಸ್ವರೂಪದ ಗಾಯ ಸವಾರ ಅಭಿ ಅವರಿಗೆ ಸಾದಾ ಸ್ವರೂಪದ ಗಾಯಗೊಂಡು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
2.ಕಾವೂರು ಪೊಲೀಸ್‌ ಠಾಣೆಯಲ್ಲಿ  ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಬಂಗ್ರಕೂಳೂರು ಗ್ರಾಮದ ಡೆಲ್ಟ ಇನ್ ಲೋಜಿಸ್ಟಿಕ್ ಪೆಟ್ರೋಲ್ ಬಂಕ್ ನಲ್ಲಿ ದಿನಾಂಕ 10-01-2013ರಂದು ರಾತ್ರಿ 01-10 ಗಂಟೆ ಸಮಯಕ್ಕೆ ಅಪರಿಚಿತನೊಬ್ಬನು ಬಂದು ಪೆಟ್ರೋಲ್ ಬಂಕ್ ನ ಬಾಗಿಲು ಬಡಿದು ದೀಕ್ಷಿತ್‌ ಎಬ್ಬಿಸಿ ಪೆಟ್ರೋಲ್ ಕೇಳಿದಾಗ  'ಸಮಯ ಮೀರಿದೆ' ಎಂದು ಹೇಳಿದಾಗ ಆತನು ವಾಪಾಸು ಹೋಗಿದ್ದು ನಂತರ ಅಲ್ಲಿಗೆ ಒಂದು ಮೋಟಾರ್ ಸೈಕಲ್ ಬಂದಿದ್ದು ಅದರಲ್ಲಿದ್ದ ವ್ಯಕ್ತಿಗಳು ಬಂದು ಕಲ್ಲನ್ನು ಪೆಟ್ರೋಲ್ ಬಂಕ್ ನ ಬಾಗಿಲಿನ ಗ್ಲಾಸ್ ಗೆ ಬಿಸಾಡಿದ ಪರಿಣಾಮ ಗ್ಲಾಸ್ ಹುಡಿಯಾಗಿದ್ದು ಬಿಸಾಡಿದ ಕಲ್ಲು ಎಡಕಾಲಿನ ಕೋಲುಕಾಲಿಗೆ ತಾಗಿ ರಕ್ತಗಾಯವಾಗಿದ್ದು ಅಲ್ಲದೇ ಗ್ಲಾಸ್ ಹುಡಿಯಾಗಿ ನಷ್ಟವಾಗಿರುತ್ತದೆ.

3. ಮಂಗಳೂರು ಉತ್ತರ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ : ಟಿಪ್ಪು ಸುಲ್ತಾನ ನಗರದಲ್ಲಿರುವ ಸಲಫಿ ಜುಮ್ಮಾ ಮಸೀದಿಯ ಆವರಣದ ಗೋಡೆಗೆ ಅಳವಡಿಸಿದ ಜಾಗ್ವಾರ್ ಕಂಪೆನಿಯ ಸುಮಾರು 25 ನೀರಿನ ಟ್ಯಾಪುಗಳನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಸಲಫಿ ಜುಮ್ಮಾ ಮಸೀದಿಯ ಕಾರ್ಯದರ್ಶಿಯಾದ ಮೊಹಮ್ಮದ್‌ ಎಂವವರು ಫಿರ್ಯಾದಿ ನೀಡಿದ್ದು 25 ನೀರಿನ ಟ್ಯಾಪುಗಳ ಮೌಲ್ಯ ರೂ. 20,000/- ಆಗಬಹುದು.

No comments:

Post a Comment